ಗಾಳಿಯಿಂದ ಶುದ್ದ ಜಲ; ಇದು ಶಮ್ಸ್ ವಿದ್ಯಾರ್ಥಿಗಳು ಸಿದ್ದಪಡಿಸಿದ ಮಾದರಿ

Source: S O News service | By Staff Correspondent | Published on 2nd December 2016, 6:19 PM | Coastal News | Editorial | Special Report | Technology | Don't Miss |


ನೀರಿಗಾಗಿ ಇಡೀ ಊರಿಗೆ ಊರೇ ಬವಣೆ ಪಡುತ್ತಿರುವ ಈ ದಿನಮಾನಗಳಲ್ಲಿ ಎಲ್ಲಿಯಾದರೂ ಒಂದು ತೊಟ್ಟು ಕುಡಿಯಲು ಶುದ್ಧ ಜಲ ಸಿಗುವುದೇ ಎಂದು ಹುಡುಕುವ ಕಾಲವಿನ್ನು ದೂರವಿಲ್ಲ. ಏಕೆಂದರೆ ಅಂತಹ ಪರಿಸ್ಥಿತಿಯನ್ನು ನಾವೇ ನಮ್ಮ ಕೈಯ್ಯಾರೆ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಮುಂದೊಂದು ದಿನ ಶುದ್ಧ ಕುಡಿಯುವ ನೀರಿಗಾಗಿ ಏನೆಲ್ಲ ಮಾಡಬೇಕಾಗುವುದೋ ದೇವರೆ ಬಲ್ಲ.

ಶುದ್ಧ ಜಲಕ್ಕಿಂತ ಹಾಲು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಸಧ್ಯದ ಮಾರುಕಟ್ಟೆಯಲ್ಲಿ ವಿವಿಧ ಹೆಸರುಗಳಿಂದ ಜನರನ್ನು ಮೋಸ ಮಾಡುತ್ತಿರುವ ಬಾಟಲಿ ನೀರು ನಮ್ಮ ಬದುಕಿಗೆ ಎಷ್ಟು ಸುರಕ್ಷಿತ ಎನ್ನುವದರ ಕುರಿತು ಪತ್ರಿಕೆಗಳು ಪುಟಗಟ್ಟಲೆ ಬರೆದಿವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ನಡೆದಿದೆ. 
ಹಾಗಾದರೆ ಕಡಿಮೆ ಬೆಲೆಯಲ್ಲಿ ಕಲ್ಮಷರಹಿತ ಶುದ್ಧ ಜಲ ನಮಗೆಲ್ಲಿ ಸಿಗುವುದು ಎನ್ನುವ ಜಿಜ್ಞಾಸೆ ಹುಟ್ಟಿಕೊಳ್ಳುವುದು ಸಹಜ. ಭಟ್ಕಳ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಾಶಾಲಾ ವಿದ್ಯಾರ್ಥಿಗಳಾದ ಮುಹಮ್ಮದ್ ಬಿಲಾಲ್ ಹಾಗೂ ಅಮಾನುಲ್ಲಾ ತಮ್ಮ ವಿಜ್ಞಾನ ಶಿಕ್ಷಕ ಪ್ರಶಾಂತ್ ಭಟ್ ಮಾರ್ಗದರ್ಶನದಲ್ಲಿ ಇಂತಹದ್ದೊಂದು ಸಾಧ್ಯತೆಗಳನ್ನು ಹುಟ್ಟುಹಾಕಿದ್ದಾರೆ. ಅದುವೆ ಗಾಳಿಯ ಮೂಲಕ ಶುದ್ಧ ಜಲ ಪಡೆಯುವುದು. ಭಾರತದಂತಹ ರಾಷ್ಟ್ರಗಳಲ್ಲಿ ಇದರ ಸಾಧ್ಯತೆಗಳು ಹೆಚ್ಚೆಚ್ಚಾಗಿ ಗೋಚರಿಸುತ್ತಿವೆ. ಪರಿಸರದಲ್ಲಿನ ಗಾಳಿಯನ್ನು ಹೀರಿಕೊಂಡು ಗಾಳಿಯಲ್ಲಿನ ನೀರಿನ ಅಂಶವನ್ನು ಕ್ರೂಢಿಕರಿಸಿ ಅತ್ಯಂತ ಶುದ್ಧವಾಗಿರುವ ಮತ್ತು ಆರೋಗ್ಯಕರವಾಗಿರುವ ನೀರನ್ನು ಪಡೆಯಬಹುದು ಎಂಬ ಮಾದರಿಯನ್ನು ಸಿದ್ದಪಡಿಸಿದ ವಿದ್ಯಾರ್ಥಿಗಳು ಅದನ್ನು ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಾರ್ಯಗತ ಮಾಡಿ ತೋರಿಸಿದ್ದಾರೆ. ಇಂತಹ ಅನ್ವೇಷಣೆಗಳಿಂದಾಗಿ ನಮ್ಮಲ್ಲಿ ಉತ್ತಮ ಆರೋಗ್ಯಯುತವಾಗಿರುವ ಕುಡಿಯವ ನೀರನ್ನು ಪಡೆಯಬಹುದಾಗಿದೆ ಎಂದು ಪ್ರಶಾಂತ್ ಭಟ್ ಅಭಿಪ್ರಾಯಪಡುತ್ತಾರೆ. 

ನಮ್ಮ ಭೂಮಂಡಲವು ಶೇ.೭೫ರಷ್ಟು ನೀರಿನಿಂದಾವೃತ್ತಗೊಂಡಿದೆ. ಆದರೆ ಇದು ಕುಡಿಯಲು ಯೋಗ್ಯವಲ್ಲ. ಕೇವಲ ಶೇ.೧ರಷ್ಟು ಮಾತ್ರ ನೀರು ಯೋಗ್ಯವಾಗಿದ್ದು ಇದರಲ್ಲಿ ಶೇ.೨.೫% ನೀರು ಮಾತ್ರ ಆರೋಗ್ಯಕರವಾಗಿದೆ ಎಂದು ಹೇಳಲಾಗುತ್ತಿದೆ. 

ಕೆರೆ,ಕೊಳ್ಳ, ನದಿ ಹಳ್ಳಗಳಿಂದ ಜನರು ಕುಡಿಯಲು ನೀರನ್ನು ಉಪಯೋಗಿಸುತ್ತಾರೆ. ಅದು ಬೇಸಿಗೆಯಲ್ಲಿ ಐದಾರು ಕಿ.ಮೀ ದೂರ ನಡೆದರೂ ಜನರಿಗೆ ಕುಡಿಯಲು ನೀರು ಸಿಗದು. ಶುದ್ಧ ಕುಡಿಯುವ ನೀರಿನ ಅಭಾವದಿಂದಾಗಿ ನಾನಾ ರೀತಿಯ ಮಾರಕ ರೋಗಗಳಿಂದ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ನಮ್ಮ ದೇಶದ ಸ್ಥಿತಿಗತಿಯಾಗಿದೆ. ಒಂದು ಲೀ.ನೀರಿಗೆ ೨೫ ರಿಂದ ೩೦ ರೂ ಕೊಟ್ಟರೂ ಅದರ ಸುರಕ್ಷತೆಯ ಕುರಿತಂತೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. 
ಈ ನೀಟ್ಟಿನಲ್ಲಿ ನೀರಿನ ಘನೀಕರಣ ತತ್ವವನ್ನಾಧರಿಸಿ ವಿದ್ಯಾರ್ಥಿಗಳು ಸಿದ್ದಗೊಳಿಸಿದ ಮಾದರಿಯು ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಇಂತಹ ಯೋಜನೆಗಳು ನಮ್ಮ ದೇಶದಲ್ಲಿ ಕಾರ್ಯರೂಪಕ್ಕೆ ತಂದರೆ ನಾವು ಆರೋಗ್ಯಕರ ಭಾರತ ನಿರ್ಮಾಣ ಮಾಡಲು ಸಾಧ್ಯ ಎನ್ನುತ್ತಾರೆ ಮಾರ್ಗದರ್ಶಕ ಶಿಕ್ಷಕ ಪ್ರಶಾಂತ್ ಭಟ್. 

ಇದು ಹೇಗೆ ಸಾಧ್ಯ?: ಹೌದು ಗಾಳಿಯಿಂದ ನೀರು? ಇದು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಳ್ಳುವುದು ಸಹಜ. ನೀವು ಗಾಳಿಯಲ್ಲಿ ನೀರಿನ ಅಂಶಗಳಿರುವುದನ್ನು ಕೇಳಿರಬಹುದಲ್ಲವೇ? ಇದೇ ನೀರಿನ ಅಂಶಗಳನ್ನು  ವಿಂಡ್ ಟರ್ಬೈನ್ ಮೂಲಕ ಒಂದು ಚೇಂಬರಿಗೆ ಶೇಖರಿಸಿ ಅದು ಅಲ್ಲಿ ಆದು ಅವಿಯಾಗಿ ನೀರಿನ ರೂಪ ಪಡೆದುಕೊಳ್ಳುತ್ತದೆ. ನಂತರ ಅದನ್ನು ಪಂಪ್ ನ ಮೂಲಕ ಮೇಲಕ್ಕೆ ಬರುವಂತೆ ಮಾಡಲಾಗುತ್ತದೆ. ಇದು ಸಧ್ಯ ಲಭ್ಯವಿರುವ ಎಲ್ಲ ಶುದ್ಧ ನೀರಿಗಿಂತಲೂ ಹೆಚ್ಚು ಶುದ್ಧ ನೀರು ಎಂಬುದಾಗಿ ವಿಜ್ಞಾನ ಹೇಳುತ್ತದೆ. 
ಬೇಕಾಗುವ ಸಾಧನಗಳು: ವಿಂಡ್ ಟರ್ಬೈನ್(ಗಾಳಿಯ ಸಹಾಯದಿಂದ ತಿರುಗು ಚಕ್ರ), ನೆಲದಡಿ ನಿರ್ಮಿಸಲ್ಪಟ್ಟ ಚೆಂಬರ್(ಗಾಳಿ ಶೇಖರಿಸಲು), ನೀರಿನ ಘನಿಕರಣದ ಚೇಂಬರ್ ಹಾಗೂ ಚಿಕ್ಕ ಹ್ಯಾಂಡ್ ಪಂಪ್ (ನೀರನ್ನು ಮೇಲಕ್ಕೆ ಎತ್ತಲು)
ಇದು ಯಾವು ರೀತಿ ಕಾರ್ಯನಿರ್ವಹಿಸುತ್ತದೆ?: ಭೂಮಿಯಲ್ಲಿ ಆರು ಅಡಿ ಒಳಗೆ ಕಂಡನ್ಸೇಷನ್ ಚೇಂಬರ್(ಘನಿಕರಣ ಚೇಂಬರ್) ನಿರ್ಮಿಸಿ ಮೇಲ್ಭಾಗದಲ್ಲಿ ಗಾಳಿಯ ಸಹಾಯದಿಂದ ತಿರುಗುವ ಚಕ್ರ(ವಿಂಡ್ ಟರ್ಬೈನ್) ಅಳವಡಿಲಾಗುವುದು. ಇದು ಗಾಳಿಯ ಸಹಾಯದಿಂದ ತಿರುಗುತ್ತಿರುತ್ತದೆ ಇದರೊಂದಿಗೆ ಒಳಗಡೆ ಜೋಡಿಸಲ್ಪಿಟ್ಟುರುವ ಬ್ಲೇಡ್ ಗಳು ಸಹ ತಿರುಗುತ್ತವೆ. ಇದು ತಿರುಗುವಾಗ ಹೊರಗಡೆಯಿಂದ ಬಂದ ಗಾಳಿಯನ್ನು ಒಳಗಡೆ ತೆಗೆದುಕೊಂಡು ಭೂಮಿಯಲ್ಲಿ ಆಳವಡಿಸಿರುವ ಚೇಂಬರ್ ಕಳಿಸುತ್ತದೆ.( ಇದು ಒಂದು ರೀತಿಯಲ್ಲಿ ಎಕ್ಸಾಸ್ಟ್ ಫ್ಯಾನ್‌ನಂತೆ ಕಾರ್ಯನಿರ್ವಹಿಸುತ್ತದೆ)
ಭೂಮಿಯ ಒಳಗಿನ ಭಾಗ ಹೊರಗಿನ ಭಾಗಕ್ಕಿಂತ ತಂಪಾಗಿರುವುದರಿಂದ ವಿಂಡ್ ಟರ್ಬೈನ್ ಮೂಲಕ ಒಳ ಸೇರಿದ ಗಾಳಿಯು ತಂಪಾಗಿ ಚಿಕ್ಕ ಚಿಕ್ಕ ನೀರಿನ ಹನಿಗಳನ್ನು ಸೃಷ್ಟಿಸುತ್ತದೆ. ಇದು ಭೂಮಿಯ ಒಳಗಿರುವ ಕಂಡನ್ಸೇಷನ್ ಚೇಂಬರ್ ನಲ್ಲಿ ಶೇಖರಣೆಗೊಳ್ಳುತ್ತದೆ. ಹೀಗೆ ಶೇಖರಣೆಗೊಂಡ ನೀರನ್ನು ಹ್ಯಾಂಡ್ ಪಂಪ್ ಮೂಲಕ ಮೇಲಕ್ಕೆ ಎತ್ತಲಾಗುತ್ತದೆ. ಹೀಗೆ ಹೊರಕ್ಕೆ ಬಂದ ನೀರು ಮಳೆಯ ನೀರಿಗಿಂತಲೂ ಶುದ್ಧವಾಗಿರುತ್ತದೆ. ಏಕೆಂದು ಮಳೆಯ ನೀರು ಗ್ರೀನ್ ಹೌಸ್ ಗ್ಯಾಸ್ ಗಳಾದ ಕಾರ್ಬನ್ ಡೈ‌ಆಕ್ಸೈಡ್, ಸೋಡಿಯಮ್ ಗಳಿಂದ ಕೂಡಿರುವುದರಿಂದ ಇದು ಕೂಡ ಶುದ್ಧತೆಯಿಂದ ಕೂಡಿರುವುದಿಲ್ಲ. ಆದರೆ ಈ ಮಾದರಿಯ ಮೂಲಕ ಹೊರತೆಗೆದ ನೀರು ಮಳೆಯ ನೀರಿಗಿಂತಲೂ ಪರಿಶುದ್ಧವಾಗಿರುತ್ತದೆ. ಅಲ್ಲದೆ ಭೂಮಿಯಡಿದ ಚೇಂಬರ್ ನಲ್ಲಿ ಫಿಲ್ಟರ್ ಪೇಪರ್ ಆಳವಡಿಸಿದ್ದರಿಂದ ಇದು ಧೂಳು, ಕ್ರಿಮಿ ಕೀಟಗಳಿಂದ ನೀರು ಕಲುಷಿತವಾಗುವುದನ್ನು ತಡೆಯುತ್ತದೆ. ಆದ್ದರಿಂದ ಗಾಳಿಮೂಲಕ ಅವಿಷ್ಕರಿಸಿದ ಈ ನೀರು ಎಲ್ಲ ನೀರಿಗಿಂತಲೂ ಅತ್ಯಂತ ಶುದ್ಧ ಹಾಗೂ ಆರೋಗ್ಯಕಾರಿ ಎನ್ನಬಹುದಾಗಿದೆ. 
ಇದು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಯೋಜನೆಯಾಗಿದ್ದು ಪ್ರಧಾನಿ ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿದೆ. ಇದು ಸ್ವಚ್ಚ ಭಾರತ ಕನಸನ್ನು ನನಸಾಗಿಸುವ ಮಾದರಿಯಾಗಿದ್ದು ಇದನ್ನು ಯಾವ ರೀತಿ ಬಳಸಿಕೊಳ್ಳಬಹುದಾಗಿದೆ ಎನ್ನುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಹುದಾಗಿದೆ. 

·    ಎಂ.ಆರ್.ಮಾನ್ವಿ

Read These Next

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ...

ಮತ್ತೆ ಶರಣರ ತಲೆದಂಡವಾಗದಿರಲಿ

‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕುಯ್ಯುವೆ, ನೋಡಯ್ಯ ಮಹಾದಾನಿ ...

ಕಡಲತಡಿಯಲ್ಲಿ ಕಣ್ಮನ ಸೆಳೆಯುತ್ತಿರುವ ಸೀ ವಾಕ್ ಶೃಂಗಾರ; ಭಟ್ಕಳದಲ್ಲಿ ಮಂತ್ರಿಗಳೇ, ಓಡುವುದು ಬೇಡ ನಡೆದಾಡಿ ಬನ್ನಿ

ಕರ್ನಾಟಕಕ್ಕೆ ಕರಾವಳಿ ತೀರ ಎನ್ನುವುದು ಶೃಂಗಾರ ಕಾವ್ಯದಂತಿದೆ. ಕಡಲ ತಡಿಯುದ್ಧಕ್ಕೂ ಸದಾ ಬಣ್ಣ ಬಣ್ಣದ ಕನಸುಗಳು ಚಿಗುರೊಡೆದು ...

ಭಟ್ಕಳ ವಿಧಾನಸಭಾ ಕ್ಷೇತ್ರ; ಜಾತಿ, ಪಕ್ಷಸಿದ್ಧಾಂತ ಬದಿಗಿಟ್ಟು “ಅಭ್ಯರ್ಥಿ” ಗಳ ಬಗ್ಗೆ ಆಸಕ್ತಿ ತೋರುತ್ತಿರುವ ಮತದಾರ

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ವಿಭಿನ್ನವಾಗಿ ಗೋಚರಿಸುತ್ತಿದೆ. ...

ಆನ್‌ಲೈನ್ ಹಣ ವಂಚನೆ, ಅಶ್ಲೀಲ ಜಾಲತಾಣಗಳ ವಿರುದ್ಧ 3 ವರ್ಷಗಳಲ್ಲಿ 32,746 ಪ್ರಕರಣ ದಾಖಲು

ಹಣ, ಅಶ್ಲೀಲ ಮತ್ತಿತರ ವಿಷಯಗಳ ಜಾಲತಾಣಗಳ ಕುರಿತಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 32,746 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇದೇ ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ...

ಜಿಲ್ಲೆಯನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ನೆರವು ; ಸಚಿವ ಮಂಕಾಳ ವೈದ್ಯ

ಕಾರವಾರ : ಜಿಲ್ಲೆಯನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮುಂದೆ ಬರುವ ಹೂಡಿಕೆದಾರರಿಗೆ ಎಲ್ಲಾ ...

ಭಟ್ಕಳ: ವಿಶ್ವ ಕುರಾನ್‌ ಪಠಣ ಸ್ಪರ್ಧೆಯಲ್ಲಿ ವಿಜೇತ ಇಬ್ರಾಹಿಂಗೆ ತಂಜೀಮ್ ಮತ್ತು ಫೆಡರೇಷನ್ ಮುಖಂಡರಿಂದ ಸ್ವಾಗತ

ಇತ್ತೀಚಿಗೆ ಸೌದಿಅರೇಬಿಯಾದಲ್ಲಿ ನಡೆದ ವಿಶ್ವ ಕುರಾನ್ ಪಠಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಇಲ್ಲಿನ ಕಾರಗದ್ದೆ ನಿವಾಸಿ ...