ನಾಡಿನ ಹಿರಿಯ ಪತ್ರಕರ್ತ, ಸಾಹಿತಿ ನಾಡೋಜ ಡಾ.ಪಾಪು ಇನ್ನಿಲ್ಲ

Source: sonews | By Staff Correspondent | Published on 17th March 2020, 12:25 AM | State News | Don't Miss | Technology |

ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ, ಡಾ.ಪಾಟೀಲ್ ಪುಟ್ಟಪ್ಪ (101) ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. 

ಪಾಪು ಎಂದೆ ಖ್ಯಾತಿ ಹೊಂದಿದ್ದ ಇವರು ಕಳೆದ ಕೆಲದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. 

ಫೈಲ್ ಫೋಟೊ: ಪತ್ರಕರ್ತ ಎಂ.ಆರ್. ಮಾನ್ವಿ ಡಾ.ಪಾಟೀಲ್ ಪುಟ್ಟಪ್ಪರನ್ನು ಹುಬ್ಬಳ್ಳಿಯ ಅವರ ಸ್ವಗ್ರಹದಲ್ಲಿ ಭೇಟಿಯಾದ ಕ್ಷಣ

ಪಾಟೀಲ ಪುಟ್ಟಪ್ಪನವರ  ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. (ಕೃಪೆ: ವಾಟ್ಸಪ್)

ಜನನ: 14-1-1921 ರಂದು ಹಾವೇರಿ ಜಿಲ್ಲೆಯ ಕುರಬಗೊಂಡ ಗ್ರಾಮ.

ತಂದೆ: ಶ್ರೀ ಸಿದ್ಧಲಿಂಗಪ್ಪ

ತಾಯಿ: ಶ್ರೀಮತಿ ಮಲ್ಲಮ್ಮ.

ವಿದ್ಯಾಭ್ಯಾಸ: ಪ್ರಾಥಮಿಕ ಶಿಕ್ಷಣ, ಹಲಗೇರಿ.

ಇಂಗ್ಲೀಷ ವಿದ್ಯಾಭ್ಯಾಸ : ಬ್ಯಾಡಗಿ, ಹಾವೇರಿ ಹಾಗೂ ಧಾರವಾಡ.

ರಾಷ್ಟ್ರೀಯ ಪ್ರಭಾವ: 1930 ರಲ್ಲಿ `ನಹಿ ರಖನಾ ನಹಿ ರಖನಾ ಅಂಗ್ರೇಜ ಸರಕಾರಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮಾ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ.

ಕಾಲೇಜು: ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939. ಅದೇ ವರ್ಷ ಉಡುಪಿಯ `ಅಂತರಂಗಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ. 1941 ರಲ್ಲಿ `ನಾನು ಮಾಸ್ತಿಯವರನ್ನು ಕಂಡೆಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ `ಅಬ್ರಾಹಂ ಲಿಂಕನ್ಕುರಿತು `ಜೀವನಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು. ಬೇಂದ್ರೆಯವರ ನಿಸರ್ಗ ಕವಿತೆಗಳು -ಜೀವನದಲ್ಲಿ ಸುದಿರ್ಘ ಲೇಖನ. ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿ 1942.

ಚಲೇಜಾವ್ ಚಳುವಳಿ: 1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ `ಆಪಾದನೆಗಾಗಿಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಿದರು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ.

ಕಾನೂನು ಕಾಲೇಜು: 1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆ. 1945 ರಲ್ಲಿ ಕಾನೂನು ಪದವೀಧರ.

ಮದುವೆ: 1945 ರಲ್ಲಿ ನವೆಂಬರ್ 11 ರಂದು ವಿಜಾಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ.

ಮಕ್ಕಳು: ಮುಂಜುಳಾ, ಶೈಲಜಾ, ಅಶೋಕ.

ಮುಂಬಯಿ ವಾಸ್ತವ್ಯ: 1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ. ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟ್ಟಿ ಮಾಡಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಹೇಳಿದರು. ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ. ಕೆ. ಸದಾನಂದರು `ಫ್ರೀ ಪ್ರೆಸ್ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕನಾಗಬೇಕೆಂದು ಹೇಳಿದರು.

ಕನ್ನಡಿಗರ ಮಹಾಧಿವೇಶನ: ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ. ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದುದು, 1946 ಅಗಸ್ಟ್ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು.

ಪತ್ರಿಕೋದ್ಯಮ: ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡುಕೈ ಬರಹದ ಪತ್ರಿಕೆಯ ಪ್ರಕಟಣೆ 1936. ವಾರ ಪತ್ರಿಕೆ `ವಿಶಾಲ ಕರ್ನಾಟಕದ ಸಂಪಾದಕತ್ವ ಅನಂತರ ಅದು ಅಗಸ್ಟ್ 9, 1947 ರಂದು ದಿನಪತ್ರಿಕೆಯಾಯಿತು.

ಏಕೀಕರಣ: 1949 ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಮೈಸೂರು ಸಹಿತಿ ಕರ್ನಾಟಕವಾಗಬೇಕೆನ್ನುವ ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು.

ಸರದಾರ ಪಟೇಲ ಪುಟ್ಟಪ್ಪ: ಬಿ. ಎನ್. ದಾತಾರ ನೇತೃತ್ವದಲ್ಲಿ ಮಂಗಳವೀಡು ಶ್ರೀನಿವಾಸರಾವ್, ಕೃಷ್ಣಕುಮಾರ ಕಲ್ಲೂರ, ವೆಂಕಟೇಶ ಮಾಗಡಿ, ವಿನೀತ ರಾಮಚಂದ್ರರಾವ್, ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಕ್ಕೋಸುಗ ಒತ್ತಾಯಿಸಲು ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟ್ಟಿ ಮಾಡಿದರು.

ಅಮೇರಿಕೆಗೆ ಪ್ರಯಾಣ: 1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ. ಅಮೇರಿಕೆಯಲ್ಲಿ ವಿಲ್ ಡುರ್ಯಾಂಟ್, ರಾಬರ್ಟ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರ ಭೇಟ್ಟಿ. ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ.

ನವಯುಗ ಪತ್ರಿಕೆ ಸಂಪಾದಕತ್ವ: 1953 ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ `ನವಯುಗದಿನಪತ್ರಿಕೆಯ ಸಂಪಾದಕತ್ವ. ಸಂಪಾದಕತ್ವ. ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ ಸುದ್ದಿ ಅಮೇರಿಕೆಯ ನ್ಯೂಯಾರ್ಕ್ ಟೈಮ್ಸ್‍ದಲ್ಲಿ ಬಂದಿತು.

ಪ್ರಪಂಚದ ಆರಂಭ: 1954 ಮಾರ್ಚ 10 ರಂದು ಬಂಡವಾಳ ಯಾವುದೂ ಇಲ್ಲದೆ ಕೇವಲ ಲೆಕ್ಕಣಿಕೆಯಿಂದ `ಪ್ರಪಂಚವಾರ ಪತ್ರಿಕೆಯ ಆರಂಭ. ಡಿವಿಜಿ. ಆಗ ಕಳಿಸಿದ ಸಂದೇಶದಲ್ಲಿ ಹೇಳಿದರು `ನೀವು ಜೀವಂತ ತಂತಿ ಯಾವುದನ್ನಾದರೂ ಆಕರ್ಷಕವಾಗಿ ಬರೆಯಬಲ್ಲಿರಿ

ಪ್ರಥಮ ಕನ್ನಡ ಡೈಜಿಸ್ಟ್: 1956 ಅಗಸ್ಟ್ ನೂತನ ಪ್ರಥಮ ಡೈಜಿಸ್ಟ್ `ಸಂಗಮಪ್ರಕಟಿಸಿದರು. ಜನರಲ್ ಕಾರಿಯಪ್ಪ ಡೈಜಿಸ್ಟ್ ಅವರಿಂದ ಬಿಡುಗಡೆ ಕರ್ನಾಟಕ

ಮೆಡಿಕಲ್: ಹುಬ್ಬಳ್ಳಿ ಸರಕಾರಿ ವೈದ್ಯಕೀಯ ಕಾಲೇಜಿಗೆ `ಕರ್ನಾಟಕ ಮೆಡಿಕಲ್ ಕಾಲೇಜುಎಂದು ಕಾಲೇಜು ಹೆಸರು ಕೊಡಿಸಿದುದು 1958. ವಿಶ್ವವಾಣಿ ದಿನಪತ್ರಿಕೆ : `ವಿಶ್ವವಾಣಿಪತ್ರಿಕೆಯನ್ನು ಅಗಸ್ಟ್ 31, 1959 ರಲ್ಲಿ ಆರಂಭಿಸಿದರು.

ಕ.ವಿ.ವಿ. ಸಿಂಡಿಕೇಟ್ ಸದಸ್ಯರು: 1961 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ.

ರಾಜ್ಯಸಭೆಯ ಸದಸ್ಯತ್ವ: 1962 ಮಾರ್ಚನಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ಸದಸ್ಯತ್ವ 1974ರವರೆಗೆ ಇತ್ತು.

ಕ.ವಿ.ವ.ಸಂಘದ ಅಧ್ಯಕ್ಷ: ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ಅಧ್ಯಕ್ಷತೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967 ರಲ್ಲಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಅಧ್ಯಕ್ಷರಾಗಿದ್ದಾರೆ.

ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಶ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ. 1988 ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಶ್ಯಾಕ್ಕೆ ಭೇಟಿ.

ಗೋಕಾಕ ವರದಿ: 1982 ರಲ್ಲಿ ಗೋಕಾಕ ವರದಿಯ ಬಗೆಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ. ಆಂದೋಲನ, ಸಂಘಟನೆ, ಸರಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು.

ಕನ್ನಡ ಕಾವಲು: 1985 ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತಿ. ರಚಿಸಿ, ಅಧ್ಯಕ್ಷರನ್ನಾಗಿ ಮಾಡಿದರು. ಕಛೇರಿಗಳಲ್ಲಿ ಕನ್ನಡ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು.

ಬರೆದ ಪುಸ್ತಕಗಳು ಪುಸ್ತಕಗಳು: `ನನ್ನದು ಈ ಕನ್ನಡ ನಾಡು’ `ನಮ್ಮದು ಈ ಭರತ ಭೂಮಿ’ `ಕರ್ನಾಟಕದ ಕಥೆ’ `ಸೋವಿಯತ್ ದೇಶ ಕಂಡೆ’ `ಸಾವಿನ ಮೇಜವಾನಿ’ ` ಗವಾಕ್ಷ ತೆರೆಯಿತು’ ` ಶಿಲಾಬಾಲಿಕೆ ನುಡಿದಳು’ `ಕಲಾ ಸಂಗಮ’ `ಬೆಳೆದ ಬದುಕು’ ` ಭಾರತದ ಬೆಳಕು’ `ನೆಲದ ನಕ್ಷತ್ರಗಳು’ `ಸರ್ ಸಾಹೇಬರು’ `ಹೊಸಮನಿ ಸಿದ್ದಪ್ಪ’ `ಪ್ರಪಂಚ ಪಟುಗಳು’ `ನಮ್ಮ ಜನ ನಮ್ಮ ದೇಶ’ `ಈಗ ಹೊಸದನ್ನು ಕಟ್ಟೋಣ’ `ಪಾಪು ಪ್ರಪಂಚ’ `ಬದುಕುವ ಮಾತು’ `ಅಮೃತವಾಹಿನಿ’ `ವ್ಯಕ್ತಿ ಪ್ರಪಂಚ’ `ಸುವರ್ಣ ಕರ್ನಾಟಕಮುಂತಾದ 50 ಕ್ಕಿಂತ ಹೆಚ್ಚು ಕೃತಿಗಳು.

ಸಂದ ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ 1976, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ, ಹಂಪಿ ವಿಶ್ವವಿದ್ಯಾಲಯದ `ನಾಡೋಜಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿ ಪುರಸ್ಕೃತರು.

ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪುಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. ೧೯೪೯ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.

ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ನವಯುಗ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ ೧೯೫೪ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. ೧೯೫೭ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟನ್ನು ಪ್ರಾರಂಭಿಸಿದರು. ೧೯೫೯ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಮಿಂಚಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದರು. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ರಾಜ್ಯ ಸಭೆಯ ಸದಸ್ಯರಾಗಿ (೧೯೬೨-೭೧) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೯೬೭ ರಿಂದ ಅಧ್ಯಕ್ಷರಾಗಿದ್ದಾರೆ. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳುವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಶ್ರಮಿಸಿದರು. ೧೯೯೨ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು  ಸಂದಿವೆ.

ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೯೪ರಲ್ಲಿ ಡಿಲಿಟ್ಪದವಿ ಕೊಟ್ಟಿದೆ. ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ ಇವರಿಗೆ ೧೯೯೪ರಲ್ಲಿ ಲಭಿಸಿದೆ. ೧೯೭೬ರಲ್ಲಿ ರಾಜ್ಯ ಪ್ರಶಸ್ತಿ, ೧೯೯0 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, ೧೯೯೯ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲದ ನಾಡೋಜ ಗೌರವ, 00೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, 00೨ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ  ಸಾಹಿತ್ಯ ಪರಿಷತ್ತಿನ  ನೃಪತುಂಗಪ್ರಶಸ್ತಿ ಇತ್ಯಾದಿ ಲಭಿಸಿವೆ. ಬೆಳಗಾವಿಯಲ್ಲಿ ನಡೆದ ೭0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ೨00೩ರಲ್ಲಿ ದೊರೆಕಿತು.

ಪಾಟೀಲ ಪುಟ್ಟಪ್ಪನವರು ಕೇವಲ ಪತ್ರಕರ್ತರಲ್ಲ ಗ್ರಂಥಕರ್ತರೂ ಹೌದು. ಅವರು ಬರೆದ ಗ್ರಂಥಗಳಲ್ಲಿ ಕೆಲವು ಹೀಗಿವೆ:

ನನ್ನದು ಈ ಕನ್ನಡ ನಾಡು(೧೯೭೫), ನಮ್ಮದು ಈ ಭರತಭೂಮಿ(೧೯೭೭), ಕರ್ನಾಟಕ ಕಥೆ(೧೯೯೧), ಸೋವಿಯತ್ ದೇಶ ಕಂಡೆ(೧೯೪೪), ಗವಾಕ್ಷಿ ತೆರೆಯಿತು(೧೯೭೪), ಶಿಲಾಬಾಲಿಕೆ ನುಡಿದಳು(೧೯೭೪), ನಮ್ಮ ದೇಶ ನಮ್ಮ ಜನ(೧೯೭೩), ಈಗ ಹೊಸದನ್ನು ಕಟ್ಟೋಣ(೧೯೭೫), ಪಾಪು ಪ್ರಪಂಚ(೨000).

Read These Next

ಫೆಂಗಲ್ ಪ್ರಭಾವ: ರಾಜ್ಯದ ವಿವಿಧೆಡೆ ವ್ಯಾಪಕ ಮಳೆ; ಇನ್ನೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆ

ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಮುಂದಿನ ಎರಡು ದಿನ ಕಾಲ ನಿರಂತರ ಮಳೆ ...

ಸಿಎಂ ಸಿದ್ದರಾಮಯ್ಯರಿಂದ ಪ್ರಧಾನಿ ಮೋದಿ ಭೇಟಿ; ನೀರಾವರಿ ಯೋಜನೆಗಳಿಗೆ ನೆರವು ಕೋರಿ ಮನವಿ; ನಬಾರ್ಡ್ ಸಾಲದ ಪ್ರಮಾಣ ಕಡಿತಕ್ಕೆ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಭದ್ರಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ನೀರಾವರಿ ...

ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ

ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಭಟ್ಕಳ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ ಮುರುಡೇಶ್ವರ ದಲ್ಲಿ ಅದ್ದೂರಿ ಸ್ವಾಗತ

20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ  ವಿವಿಧ ಸಂಘಟನೆ ಹಾಗೂ ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...