ಪೌರಕಾರ್ಮಿಕರ ಮೊಗದಲ್ಲಿ ಸಂತೃಪ್ತಿಯ ಭಾವ ಮೂಡಿಸಿದ ಖಾಯಂ ನೇಮಕಾತಿ ಆದೇಶ

Source: Vartha Ilake | By I.G. Bhatkali | Published on 14th March 2024, 6:37 PM | Coastal News | Special Report |

(ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ)

ಕಾರವಾರ: ಅಲ್ಲಿ ನೆರದಿದ್ದವರು ಎಂದಿನಂತಿನ ಸಾಮಾನ್ಯ ದಿನಗಳಂತೆ ಬೇಸರದ ಮನಸ್ಥಿತಿಯಲ್ಲಿರಲಿಲ್ಲ, ಶುಭ್ರ ವಸ್ತçದಾರಿಗಳಾಗಿದ್ದ ಅವರ ಮೊಗದಲ್ಲಿ ವರ್ಣಸಲಾಗದ ಆನಂದ, ಪದಗಳಿಗೆ ನಿಲುಕದ ಭಾವನೆಗಳು ತುಂಬಿದ್ದವು, ದಶಕಗಳ ಕಾಲದ ಅವರ ಕನಸು ನನಸಾಗುವ ಕ್ಷಣಗಳಿಗೆ ಹಾತೊರೆಯುತ್ತಿದ್ದರು.. ಸಂಭ್ರಮ, ಸಂತಸ ಸಡಗರಗಳು ಅವರ ಮತ್ತು ಅವರ ಕುಟುಂಬದವರ ಪ್ರತಿ ನಡೆ ನುಡಿಗಳಲ್ಲಿ ಎದ್ದು ಕಾಣುತ್ತಿದ್ದವು.

ಇದೆಲ್ಲಾ ಕಂಡು ಬಂದದ್ದು ಯಾವುದೋ ಜಾತ್ರೆ ಅಥವಾ ಉತ್ಸವದಲ್ಲಿ ಅಲ್ಲ, ಸೋಮವಾರ ಕಾರವಾರದ ರವೀಂದ್ರನಾಥ ಟಾಗೂರ್ ಬೀಚ್ ನಲ್ಲಿ ನಡೆದ ಸ್ವಚ್ಚತಾ ಕಾರ್ಮಿಕರ ಅರಿವು ಸಮಾಗಮ ಕಾರ್ಯಕ್ರಮದಲ್ಲಿ.. ಅಲ್ಲಿ ಸಂಭ್ರಮಿಸುತ್ತಿದ್ದವರು ವಿದ್ಯಾವಂತ ಮತ್ತು ಪ್ರಜ್ಞಾವಂತ ನಾಗರೀಕರಿಂದ ಮಲಿನಗೊಳ್ಳುವ, ಇಡೀ ಜಿಲ್ಲೆಯ ನಗರಗಳ ಬೀದಿ ಬೀದಿಗಳನ್ನು ಪ್ರತಿ ದಿನ ನಿರ್ಮಲ ಮನಸ್ಸಿನಿಂದ ಸ್ವಚ್ಛಗೊಳಿಸುವ ಜಿಲ್ಲೆಯ ಪೌರ ಕಾರ್ಮಿಕರು. 

ಸುಮಾರು 15-20 ವರ್ಷಗಳಿಂದ ನಗರಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿಯಾಗಿ, ಗುತ್ತಿಗೆ ಕಾರ್ಮಿಕರಾಗಿ ಕಡಿಮೆ ವೇತನ ಪಡೆದು, ಗುತ್ತಿಗೆದಾರರ ವಿಳಂಬದಿAದ ಹಲವು ತಿಂಗಳು ವೇತನವಿಲ್ಲದೇ ಪರಿತಪಿಸಿ, ಕುಟುಂಬ ನಿರ್ವಹಣೆಗೆ ಹೇಳತೀರದ ಕಷ್ಟವಾದರೂ ಎಂದೂ ಯಾವುದೇ ಪ್ರತಿಭಟನೆ, ಮುಷ್ಕರ ನಡೆಸದೇ, ಅಧಿಕಾರಿಗಳು ಸೂಚಿಸುವ ಕೆಲಸಗಳಿಗೆ ಅಸಹಕಾರ ನೀಡದೇ, ಕಾಯಕವೇ ಕೈಲಾಸ ಎಂಬAತೆ ಮಳೆ, ಬಿಸಿಲೆನ್ನದೇ ಪ್ರತಿದಿನ ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ತಮ್ಮ ಕೆಲಸ ಖಾಯಂ ಆಗುವ, ತಾವು ಕೂಡಾ ಸರ್ಕಾರಿ ನೌಕರರು ಎಂದು ಹೆಮ್ಮೆ ಪಡುವ ಕ್ಷಣಗಳಿಗೆ ಕಾಯುತ್ತಿದ್ದರು..
ಸರ್ಕಾರದ 2022 ರ ಪೌರ ಕಾರ್ಮಿಕರ ನೇಮಕಾತಿ ಅಧಿಸೂಚನೆ ಯಡಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಟ 2 ವರ್ಷ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವ ಆದೇಶದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಹರಿದ್ದ 127 ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ನೇಮಿಸಲಾಗಿದೆ.

 ಈ ಎಲ್ಲಾ ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ವಿತರಣೆ ನೀಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಸರ್ಕಾರಿ ಹುದ್ದೆ ಪಡೆಯಲು ವಿವಿಧ ಮಾನದಂಡಗಳ ಪಾಲನೆ ಅನಿವಾರ್ಯವಾಗಿದ್ದು, ಈ ಕುರಿತಂತೆ ಇವರಲ್ಲಿ ಬಹುತೇಕ ಮಂದಿಯ ಬಳಿ ಅಗತ್ಯ ದಾಖಲೆಗಳೇ ಇರಲಿಲ್ಲ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳ ಬಳಿ ತಮ್ಮ ಜಾತಿಯ ಬಗ್ಗೆ ತಿಳಿಸಿದ್ದ ಇವರಿಗೆ ತಾವು ಯಾವ ಪ್ರವರ್ಗದಲ್ಲಿ ಇದ್ದೇವೆ ಎಂಬ ಮಾಹಿತಿಯೂ ಗೊತ್ತಿರಲಿಲ್ಲ. ಅವರು ಹೇಳಿದ ಜಾತಿಯ ಬಗ್ಗೆ ಅಧಿಕಾರಿಗಳೇ ಯಾವ ಪ್ರವರ್ಗದಲ್ಲಿ ಬರುತ್ತಾರೆ ಎಂಬ ಬಗ್ಗೆ ಪರಿಶೀಲಿಸಿ, ಸಿಂಧುತ್ವ ನೀಡುವ ಸಂದರ್ಭದಲ್ಲಿ ಮನೆಗಳಿಗೆ ಭೇಟಿ ನೀಡಿ ದೃಢಪಡಿಸಿದ್ದು ಮಾತ್ರವಲ್ಲದೇ, ಕೆಲವರು ತಿಳಿಸಿದ ಜಾತಿ ಯಾವುದೇ ಪ್ರವರ್ಗದಲ್ಲಿ ಇಲ್ಲದಿರುವುದನ್ನು ಗಮನಿಸಿ ಅವರಿಗೆ ಸಾಮಾನ್ಯ ವರ್ಗದಲ್ಲಿ ನೇಮಕಾತಿ ಆದೇಶ ವಿತರಣೆಗೆ ಕ್ರಮ ಕೈಗೊಂಡಿದ್ದು, ಆಯ್ಕೆಗೊಂಡಿದ್ದ ಯಾವುದೇ ಅಭ್ಯರ್ಥಿಯನ್ನು ದಾಖಲಾತಿಗಳ ಕೊರತೆಯಿಂದ ಹುದ್ದೆ ಕಳೆದುಕೊಳ್ಳದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಪೌರಕಾರ್ಮಿಕರ ಬಗ್ಗೆ ಇರುವ ವಿಶೇಷ ಕಾಳಜಿಯನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಖಾಲಿ ಹುದ್ದೆಗಳಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದಲ್ಲಿ, ಆ ಹೆಚ್ಚುವರಿ ಅರ್ಜಿಗಳನ್ನು ತಿರಸ್ಕೃತಗೊಳಿಸದೆ, ಅವುಗಳನ್ನು ಕಡಿಮೆ ಅರ್ಜಿ ಸಲ್ಲಿಕೆಯಾಗಿದ್ದ ಜಿಲ್ಲೆಯ ಇತರೇ ನಗರ ಸ್ಥಳೀಯ ಸಂಸ್ಥೆಗೆ ವರ್ಗಾಯಿಸುವ ಮೂಲಕ ಅರ್ಹರು ನೌಕರಿಯಿಂದ ವಂಚಿತರಾಗದಂತೆ  ಎಚ್ಚರವಹಿಸಲಾಗಿದೆ.

ನಾನು 22 ವರ್ಷದಿಂದ ದಿನಗೂಲಿಯಾಗಿ ಕೆಲಸ ನಿರ್ವಹಿಸುತ್ತಿದ್ದೆ, ಜಿಲ್ಲಾಡಳಿತ ಆಶೀರ್ವಾದದಿಂದ ಈಗ ನನಗೆ ಖಾಯಂ ಆದೇಶ ದೊರೆತಿದೆ. ಚಳಿ ಗಾಳಿ ಮಳೆಯನ್ನು ಲೆಕ್ಕಿಸದೇ ನಾವು ಕೆಲಸ ನಿರ್ವಹಿಸುತ್ತಿದ್ದೆವು, ಈ ಆದೇಶದಿಂದ ನಮಗೆ ತುಂಬಾ ಸಂತೋ಼ಷವಾಗಿದೆ, ಆದೇಶ ಪತ್ರ ನಿಡುವ ಕಾರ್ಯಕ್ರಮದಲ್ಲಿ ಕೂಡಾ ನಮ್ಮನ್ನು ಸಂತೋಷಪಡಿಸಲು ನಮಗಾಗಿ ಡ್ಯಾನ್ಸ್, ಡೊಳ್ಳು ಕುಣಿತ ಆಯೋಜಿಸಿದ್ದಾರೆ. ಬೀಚ್ ನಲ್ಲಿ ನಮ್ಮೆಲ್ಲರೂ ಪೋಟೋ ತೆಗೆದಿದ್ದಾರೆ, ಈ ಎಲ್ಲದರಿಂದ ನನಗೆ ತುಂಬಾ ಖುಷಿಯಾಗಿದೆ. ನಮ್ಮ ಸಂತೋಷವನ್ನು ಹೇಗೆ ಹೇಳಬೇಕು ಗೊತ್ತಾಗುತ್ತಿಲ್ಲ ; ವಿನೋದ್ ಹುಲಸ್ವಾರ್, ಅಂಕೋಲ ಪುರಸಭೆಯಲ್ಲಿ ಖಾಯಂಗೊAಡ ಪೌರ ಕಾರ್ಮಿಕ.. 
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವರ್ಷದ 365 ದಿನವೂ ಯಾವುದೇ ಬೇಸರವಿಲ್ಲದೇ, ನಗರವನ್ನು ಸ್ವಚ್ಚ ಮತ್ತು ಸುಂದರಗೊಳಿಸಿ ನೈರ್ಮಲ್ಯ ಕಾಪಾಡುವ ಮೂಲಕ ಆರೋಗ್ಯವಂತ ವಾತಾವರಣ ನಿರ್ಮಾಣ ಮಾಡುವ ಮುಗ್ಧ ಮನಸ್ಸಿನ ಪೌರ ಕಾರ್ಮಿಕರ ಸೇವೆ ಅತ್ಯಂತ ಶ್ರೇಷ್ಠವಾದುದು.

ಇಂತಹ ಶ್ರಮಜೀವಿಗಳ ಸೇವೆಗೆ ಸರ್ಕಾರದಿಂದ ಖಾಯಂ ನೇಮಕಾತಿ ಆದೇಶ ಪತ್ರ ವಿತರಿಸುವ ಅವಕಾಶ ದೊರೆತಿದ್ದು, ನನ್ನ ಸೇವಾವಧಿಯಲ್ಲಿನ ಅತ್ಯಂತ ತೃಪ್ತಿ ನೀಡುವ ಕಾರ್ಯಗಳಿಲ್ಲಿ ಒಂದು. ಖಾಯಂ ಆದೇಶ ಪತ್ರ ಪಡೆದ ಪೌರ ಕಾರ್ಮಿಕರು ಮತ್ತು ಅವರ ಕುಟುಂಬದವರ ಸಂತೋಷದ ಭಾವನೆಗಳನ್ನು ವರ್ಣಸಲು ಶಬ್ದಕೋಶದಲ್ಲಿನ ಪದಗಳಿಂದ ಸಾಧ್ಯವಿಲ್ಲ.

ಈ ಸಂಭ್ರಮದ ಕಾರ್ಯಕ್ರಮವನ್ನು ಪೌರಕಾರ್ಮಿಕರು ಆನಂದಿಸುವ ನಿಟ್ಟಿನಲ್ಲಿ ಕೊರಿಯಾಗ್ರಾಫರ್ ಮೂಲಕ ನೃತ್ಯ ತರಬೇತಿ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಡೊಳ್ಳು ಬಾರಿಸಲು ಹಾಗೂ ನರ್ತಿಸಿ ಸಂಭ್ರಮಿಸಲು ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಈ ನೆನಪುಗಳನ್ನು ಶಾಶ್ವತವಾಗಿಡಲು ಪೋಟೋ ಶೂಟ್ ಸಹ ಮಾಡಿಸಲಾಗಿದೆ. ಪೌರ ಕಾರ್ಮಿಕರ ಯಾವುದೇ ಸಮಸ್ಯೆಗಳನ್ನು ಪ್ರಥಮಾದ್ಯತೆಯಲ್ಲಿ ಪರಿಗಣಿಸಿ, ಸೂಕ್ತ ರೀತಿಯಲ್ಲಿ ಅವುಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

Read These Next

ಉದ್ಯಮಿ ಬಿ.ಎಂ. ಮುಮ್ತಾಝ್ ಅಲಿ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ, ನದಿಯಲ್ಲಿ ಶೋಧ ಕಾರ್ಯ

ಪಣಂಬೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ, ಉದ್ಯಮಿ ಹಾಗೂ ಸಾಮಾಜಿಕ ಧಾರ್ಮಿಕ ನಾಯಕ ಬಿ.ಎಂ. ಮುಮ್ತಾಝ್ ಅಲಿ ರವಿವಾರ ಬೆಳಗ್ಗಿನ ...

ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ "ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ" ಅಭಿಯಾನ : ಈಶ್ವರ ಕಾಂದೂ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಎಲ್ಲ ಗ್ರಾಮ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...