ಕಾಮನ್ ಸಿವಿಲ್ ಕೋಡ್: ಸುಪ್ರಿಮ್‌ಕೋರ್ಟ್ ನಿರ್ಣಯಕ್ಕೆ ಬದ್ದ-ವಲಿ ರಹ್ಮಾನಿ

Source: S O News service | By Staff Correspondent | Published on 22nd December 2016, 6:32 PM | Coastal News | State News | National News | Islam | Don't Miss |

ಭಟ್ಕಳ: ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ದೇಶದ ಉಚ್ಚನ್ಯಾಯಾಲಯದ ನಿರ್ಣಯಕ್ಕೆ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಬದ್ದವಾಗಿರುತ್ತದೆ ಎಂದು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ವಲಿ ರಹ್ಮಾನಿ ಹೇಳಿದರು. 
ಅವರು ಗುರುವಾರ ಇಲ್ಲಿನ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. 
ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ಉಂಟಾಗಿರುವ ಈ ಸಂದರ್ಭದಲ್ಲಿ ಬೋರ್ಡ್‌ನ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. 
ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿ ಅಸಾಧ್ಯವಾಗಿದ್ದು ಸರ್ಕಾರ ಯಾವ ಅದರ ಸ್ವರೂಪವನ್ನು ಸ್ಪಷ್ಟಪಡಿಸಬೇಕು. ಭಾರತೀಯ ಸಂವಿಧಾನ ಇಲ್ಲಿನ ಪ್ರತಿಯೊಬ್ಬರಿಗೆ ತಮ್ಮ ಧರ್ಮದಂತೆ ಜೀವಿಸುವ ಹಕ್ಕನ್ನು ನೀಡುತ್ತದೆ. ಸರ್ಕಾರ ಸಮಾನ ನಾಗರೀಕ ಸಂಹಿತೆ ಜಾರಿಗೊಳಿಸಲು ಮುಂದಾಗಿರುವುದು ಸಂವಿಧಾನ ತನ್ನ ದೇಶದ ನಾಗರಿಕರಿಗೆ ನೀಡಿರುವ ಹಕ್ಕುಗಳ ದಮನ ಮಾಡಿದಂತಾಗುತ್ತದೆ ಎಂದ ಅವರು ಸುಪ್ರಿಮ್ ಕೋರ್ಟ್ ನಿರ್ಣಯ ನಾವು ಗೌರವಿಸುತ್ತೇವೆ. ಕೆಲವರು ಮನಸ್ಸಿಗೆ ಬಂದಂತೆ ಮುಸ್ಲಿಮ್ ಪರ್ಸನಲ್ ಲಾ ವನ್ನು ವ್ಯಾಖ್ಯಾನಿಸುತ್ತಿದ್ದಾರೆ. ಇದು ಇಸ್ಲಾಮ್ ಧರ್ಮದ ಕುರಿತ ಅಲ್ಪಜ್ಞಾನದ ಪರಿಣಾವಾಗಿದೆ ಎಂದ ಅವರು ಯಾವುದೇ ಕಾರಣಕ್ಕೂ ಮುಸ್ಲಿಮರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಇತರರು ಮೂಗು ತೂರಿಸುವುದನ್ನು ಸಹಿಸುವುದಿಲ್ಲ ತಲಾಖ್ ಎಂಬ ಪದ ಮಕ್ಕಳ ಆಟಿಕೆಯಲ್ಲಿ ಅದನ್ನು ಎಲ್ಲಿ, ಯಾವಾಗ ಬೇಕಾದರು ಬಳಸಿಕೊಳ್ಳುವಂತಿಲ್ಲ. ಇದರ ಸ್ವರೂಪವನ್ನು ಅರಿತುಕೊಂಡು ಈ ಪದವನ್ನು ಬಳಸಬೇಗಾತ್ತದೆ ಅಜ್ಞಾನ ಹಾಗೂ ಕೋಪದಲ್ಲಿ ಈ ಬದವನ್ನು ಬಳಸಿದರೆ ಅದರ ಪ್ರತಿಫಲ ಖಂಡಿತವಾಗಿ ಅವನು ಅನುಭವಿಸಲೇಬೆಕು. ತಪ್ಪು ಪತಿ ಪತ್ನಿ ಯಾರೇ ಮಾಡಲಿ ಅದು ತಪ್ಪೇ ಆಗಿದೆ. ಯಾವುದೆ ತಪ್ಪು ಮಾಡದೆ ಕೆಲವೊಮ್ಮೆ ಗಂಡ ಅಥವಾ ಹೆಂಡತಿಗೆ ಅನ್ಯಾಯವಾಗಬಹುದು. ಆದರೆ ತಲಾಖ್ ಪದ ಉಚ್ಚಾರವೆ ಬಹಳ ಜಾಗರೂಕತೆಯಿಂದ ಉಪಯೋಗಿಸುವಂತಹದ್ದು, ಕೊಲೆ ಮಾಡಿದ ನಂತರ ವ್ಯಕ್ತಿ ಪಶ್ಚತ್ತಾಪಪಟ್ಟರೆ ಕೊಲ್ಲಲ್ಲಪಟ್ಟ ವ್ಯಕ್ತಿ ಮರಳಿ ಜೀವಂತವಾಗಲು ಹೇಗೆ ಸಾಧ್ಯವಿಲ್ಲೂ ಹಾಗೆ ಒಮ್ಮೆ ತಲಾಖ್ ನೀಡಿದರೆ ಅದು ಮತ್ತೆ ಮರಳಿ ಪಡೆಯುವಹಾಗಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು ತಲಾಖ್ ಪತಿಪತ್ನಿ ಬೇರ್ಪಡುವ ಕಟ್ಟಕಡೆಯ ಅಸ್ತ್ರವಾಗಿದೆ. ಇದನ್ನು ಬಳಸುವಾಗ ಯೋಚನೆ ಮಾಡಬೇಕಷ್ಟೆ. ತಿಳಿವಳಿಕೆಯಿಲ್ಲದೆ ಜನರು ಇದನ್ನು ದುರೂಪಯೋಗ ಮಾಡಿಕೊಳ್ಳುತ್ತಿದ್ದು ಮುಸ್ಲಿಮ್ ಪರ್ನಲ್ ಲಾ ಬೋರ್ಡ್ ಈ ಕುರಿತಂತೆ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವ ಯೋಜನೆಯನ್ನು ರೂಪಿಸಿದೆ. 
ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಕಾನೂನು ಜಾರಿಗೊಳಿಸುವುದು ಸುಲಭವಲ್ಲ. ಇಲ್ಲಿ ಪ್ರತಿಯೊಂದು ಸಮುದಾಯಕ್ಕೆ ತನ್ನದೇ ಆದ ವ್ಯಯಕ್ತಿಕ ಕಾನೂನುಗಳಿವೆ. ಮದುವೆ, ವಿವಾಹ, ಕುಟಂಬ ವ್ಯವಸ್ಥೆ ಎಲ್ಲ ರೀತಿಯಿಂದ ಭಿನ್ನವಾಗಿವೆ. ಆದ್ದರಿಂದ ಏಕ ರೂಪ ನಾಗರಿಕ ಸಂಹಿತೆಯನ್ನು ಕೇವಲ ಮುಸ್ಲಿಮರು ಮಾತ್ರ ವಿರೋಧಿಸುವುದಿಲ್ಲ. ಬದಲಾಗಿ ಇಲ್ಲಿನ ಹಲವು ಸಮುದಾಯದವರು ಈಗಾಗಲೆ ಇದನ್ನು ವಿರೋಧಿಸಿ ಸುಪ್ರಿಮ್ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿದ್ದಾರೆ ಎಂದರು. ಸರ್ಕಾರ ಈ ಕುರಿತಂತೆ ಬೋರ್ಡನೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಿದರೆ ಇದಕ್ಕೆ ಬೋರ್ಡ್ ಸಿದ್ದವಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತ ಈ ಕುರಿತು ಬೋರ್ಡ್ ಸರ್ಕಾರದೊಂದಿಗಿನ ಮಾತುಕತೆಗೆ ಸಿದ್ದವಿದೆ ಎಂದರು. ಸುಪ್ರಿಮ್ ಕೋರ್ಟ್ ತೀರ್ಮಾನ ಒಪ್ಪಲು ಸಿದ್ದರಿರುವ ತಾವು ನಾಗರೀಕ ಸಂಹಿತೆಯನ್ನು ವಿರೋಧಿಸುತ್ತಿರುವುದು ಸೂಕ್ತವೇ ಎಂಬ ಪ್ರಶ್ನೆಗೆ, ಹೌದು ನಮಗೆ ನಮ್ಮ ಸಂವಿಧಾನ ಈ ಹಕ್ಕನ್ನು ನೀಡಿದೆ. ನಮಗೆ ಸರಿಕಾಣದ ಎಲ್ಲ ವಿಷಯಗಳನ್ನು ವಿರೋಧಿಸುವ ಹಕ್ಕು ನಮಗಿದೆ ಎಂದರು. ಯಾವುದೇ ಕಾರಣಕ್ಕೂ ಶರಿಯತ್ ನಲ್ಲಿ ಹಸ್ತಕ್ಷೇಪ ಸಲ್ಲದು ಇದಕ್ಕಾಗಿ ಮುಸ್ಲಿಮರು ಬೋರ್ಡ್‌ನ ಬ್ಯಾನರ್ ನಡಿ ದೇಶದದ್ಯಾಂತ ಕಾನೂನು ಹೋರಾಟಕ್ಕೆ ಸಿದ್ದ ಎಂದೂ ಅವರು ಹೇಳಿದರು. 
ಈ ಸಂದರ್ಭದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಂ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ಮಾಧ್ಯಮ ಸಂಚಾಲಕ ಡಾ.ಮುಹಮ್ಮದ್ ಹನೀಫ್ ಶಬಾಬ್, ಎಂ.ಜೆ.ಅಬ್ದುಲ್ ರಖೀಬ್ ಮತ್ತಿತರರು ಉಪಸ್ಥಿತಿತರಿದ್ದರು.  

Read These Next

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಸಿದ್ದಾಪುರದಲ್ಲಿ 203.2 ಮಿ.ಮೀ ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 43.6 ಮಿ.ಮೀ, ಭಟ್ಕಳ 12.0 ಮಿ.ಮೀ, ...

ಪ.ವರ್ಗದ ಫಲಾನುಭವಿಗಳಿಂದ ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ      

ಕಾರವಾರ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಠ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಆಸಕ್ತಿ ...

‘ಕಾನೂನುಬಾಹಿರವಾಗಿ ಇಟ್ಟ ವಿಗ್ರಹ ಹೇಗೆ ದೇವರಾಯಿತು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಉತ್ತರಿಸಿಲ್ಲ’

ಹೊಸದಿಲ್ಲಿ: ಬಾಬರಿ ಮಸೀದಿಯನ್ನು ಕಾನೂನು ಬಾಹಿರವಾಗಿ ಕೆಡವಲಾಯಿತು ಹಾಗೂ ಅದು ಯಾವಾಗಲೂ ಮಸೀದಿಯಾಗಿಯೇ ಉಳಿಯಲಿದೆ ಎಂದು ಅಖಿಲ ಭಾರತ ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ

ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ...

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಭಟ್ಕಳ; ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕೋವಿಡ್-19 ‘ಮರಳಿ ಸೃಷ್ಟಿಕರ್ತನ ಕಡೆಗೆ ಆಬಿಯಾನ’ಕ್ಕೆ ಚಾಲನೆ

ಭಟ್ಕಳ: ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮಾನವನನ್ನು ಎಚ್ಚರಿಸುತ್ತಿದ್ದು, ಮನುಷ್ಯರನ್ನು ಸರಿದಾರಿಗೆ ತರಲು ದೈವಿಕ ...

ಭಟ್ಕಳ: 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಬಿಸ್ಕತ್ ವಶ; ಪೊಲೀಸರ ಬಲೆಗೆ ಬಿದ್ದ ಶೈಲೇಶ್ ಮತ್ತು ವಿಫುಲ್

ಭಟ್ಕಳ: ಇಲ್ಲಿನ ಹೂವಿನ ಚೌಕ್ ಕ್ರಾಸ್ ಬಳಿ 60 ಲಕ್ಷ ಮೌಲ್ಯದ 1.5ಕೆಜಿ ಬಂಗಾರದ ನಮೂನೆಯ ಬಿಸ್ಕಿಟ್ ಮತ್ತು ಎಂಟು ಚಿನ್ನದ ಗಟ್ಟಿಗಳನ್ನು ...