ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

Source: SO News | By Laxmi Tanaya | Published on 24th April 2024, 9:45 PM | State News | Don't Miss |

ಬೀದರ್  : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ  ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವುದು ಮೋದಿಯವರ ಬೋಗಸ್ ಘೋಷಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಸಮಾನತೆಯ ಅಂತರ ಹೋಗದಿದ್ದರೆ ಅಸಮಾನತೆಗೆ ಒಳಗಾದವರು ಈ ಸ್ವಾತಂತ್ರ್ಯದ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದಾರೆ.

ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿ ಜಾರಿ ಮಾಡಿದ ಎಲ್ಲಾ ಭಾಗ್ಯಗಳೂ ಕೂಡ ದುಡಿಯುವ ವರ್ಗಗಳು, ಬಡವರು, ಹಿಂದುಳಿದವರು, ದಲಿತರ ಪ್ರಗತಿಗಾಗಿ ಆಗಿದ್ದವು. ಬಡವರೂ ಹೊಟ್ಟೆ ತುಂಬ ಊಟ ಮಾಡಬೇಕು ಎನ್ನುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ತೆರೆದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿತ್ತು.‌ ಈಗ ಮತ್ತೆ ನಾವು ಇಂದಿರಾ ಕ್ಯಾಂಟೀನ್ ಗಳ ಸಂಖ್ಯೆ ಹೆಚ್ಚಿಸಿದ್ದೇವೆ ಎಂದರು.

*ಭಾಷಣದ ಇತರೆ ಹೈಲೈಟ್ಸ್**
  *ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವುದು ಮೋದಿಯ ಭೋಗಸ್ ಘೋಷಣೆ*

*2023 ರಲ್ಲಿ ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. ನಾವು ಐದು ಗ್ಯಾರಂಟಿಗಳ ಜತೆಗೆ 82 ಭರವಸೆಗಳನ್ನು ನಾವು ಈಡೇರಿಸಿ ನಿಮ್ಮ ಮತಕ್ಕೆ ಗೌರವ ತಂದುಕೊಟ್ಟಿದ್ದೇವೆ*

*195 ಕೋಟಿ ಮಹಿಳೆಯರು ಇಲ್ಲಿಯವರೆಗೂ ರಾಜ್ಯದಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡಿದ್ದಾರೆ*

*ಉಚಿತವಾಗಿ ಪ್ರಯಾಣಿಸಿದ ಫ್ರೀ ಟಿಕೆಟ್ ಗಳ ಹಾರವನ್ನು ಅರಸೀಕೆರೆಯಲ್ಲಿ ವಿದ್ಯಾರ್ಥಿನಿತೊಬ್ಬರು ನನಗೆ ಹಾಕಿದರು*

*ರಾಜ್ಯದ ಬಡವರಿಗೆ ಅಕ್ಕಿ ಕೊಡದಂತೆ ಅಧಿಕಾರಿಗಳಿಗೆ ಮೇಲಿನವರು ಆದೇಶಿಸಿದರಂತೆ. ಆ ಮೇಲಿನವರು ಬೇರೆ ಯಾರೂ ಅಲ್ಲ, ಮಿಸ್ಟರ್ ನರೇಂದ್ರ ಮೋದಿ*

*ಒಂದು ಕೋಟಿ 21 ಲಕ್ಷ ಮಹಿಳೆಯರಿಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಕೊಡುತ್ತಿದ್ದೇವೆ*

*ಆದರೆ ಬಿಜೆಪಿ, ಜೆಡಿಎಸ್ ನವರು ಗ್ಯಾರಂಟಿ ಯೋಜನೆಗಳ ಕೋಟಿ ಕೋಟಿ ಫಲಾನುಭವಿಗಳನ್ನು ಅಪಹಾಸ್ಯ ಮಾಡಿದರು, ಅವಮಾನ ಮಾಡಿದರು. ಈಗ ಅದೇ ಗ್ಯಾರಂಟಿಗಳನ್ನು ಕದ್ದು ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ*

*ಗ್ಯಾರಂಟಿಗೆ ಕೊಟ್ಟ ಹಣದ ಹೊರತಾಗಿ ಒಂದು ಲಕ್ಷದ 20 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಇತರೆ ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟಿದ್ದೇವೆ*

*2028 ರ ನಂತರವೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗಲೂ, ಹತ್ತು ವರ್ಷಗಳಾದರೂ ಗ್ಯಾರಂಟಿಗಳು ಮುಂದುವರೆಯಲಿವೆ*

*ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಹೆಸರಿಟ್ಟಿದ್ದು ಈ ಸಿದ್ದರಾಮಯ್ಯ. ಬೊಮ್ಮಾಯಿಯವರಾಗಲೀ, ಯಡಿಯೂರಪ್ಪ ಅವರಾಗಲೀ ಏಕೆ ಮಾಡಲಿಲ್ಲ?*

*ಮೋದಿಯವರು ತಮ್ಮನ್ನು ನಂಬಿದ್ದವರಿಗೆಲ್ಕಾ ಮೂರು ನಾಮ ತಿಕ್ಕಿದರು*

*ದೇಶದ ವಿದ್ಯಾವಂತ ಯುವ ಸಮೂಹ ಕೆಲಸ ಕೇಳಿದರೆ, ಹೋಗಿ ಪಕೋಡಾ ಮಾರಿ ಎಂದರು*

*ಖೂಬಾ ಹತ್ತು ವರ್ಷಗಳಿಂದ ರಾಜ್ಯಕ್ಕೆ ಆದ ಅನ್ಯಾಯವನ್ನು ಒಮ್ಮೆಯೂ ಪ್ರಶ್ನಿಸಿಲ್ಲ*

*ಕೇಂದ್ರ ಮಂತ್ರಿಯಾದರೂ ಕೆಲಸ ಮಾಡದ ಖೂಬಾ ಅವರನ್ನು ಮನೆಗೆ ಕಳುಹಿಸಿ ಸಾಗರ್ ಖಂಡ್ರೆ ಗೆಲ್ಲಿಸಿ*

*ಭೀಕರ ಬರಗಾಲ ಬಂದರೂ ರಾಜ್ಯಕ್ಕೆ ನಮ್ಮ ಪಾಲಿನ ಒಂದೇ ಒಂದು ರೂಪಾಯಿಯನ್ನೂ ಕೊಡಲಿಲ್ಕವಲ್ಲಾ? ಆ ಮುಖಕ್ಕೆ ಮತ ಹಾಕ್ತೀರಾ?*

*ಈಗ ನಿಮಗೊಂದು ಅವಕಾಶ ಸಿಕ್ಕಿದೆ. ನಿಮ್ಮ ಮತಕ್ಕೆ ದ್ರೋಹ ಬಗೆದವರಿಗೆ ತಕ್ಕ ಶಾಸ್ತಿ ಮಾಡಿ*

AICC ಅಧ್ಯಕ್ಷರಾದ ಮಲ್ಲಿಕಾರ್ಜುನ  ಖರ್ಗೆ, ಸಚಿವರಾದ ರಹೀಂಖಾನ್, ಈಶ್ವರ್ ಖಂಡ್ರೆ ಸೇರಿ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರುಗಳು ಸೇರಿ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...