ರಮಝಾನ್ ವಿಶೇಷ ಲೇಖನ; ಮಾನವ ಕಳಕಳಿಯ  ಹಬ್ಬ “ಈದುಲ್ ಫಿತ್ರ್”

Source: sonews | By Staff Correspondent | Published on 23rd May 2020, 9:12 PM | Coastal News | Special Report | Islam | Public Voice | Don't Miss |

•    ಎಂ.ಆರ್.ಮಾನ್ವಿ

ಇಸ್ಲಾಮಿನಲ್ಲಿ ಕೇವಲ ಎರಡು ಹಬ್ಬಗಳು ಮಾತ್ರ ಇರುವುದು. ಒಂದನೆಯದು 30ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತು ಎರಡನೆಯದು ಈದುಲ್ ಅಝ್ಹಾ ಅಥವಾ ಬಕ್ರೀದ್ ಎಂಬುದಾಗಿದೆ. 

ಸಾಮಾನ್ಯವಾಗಿ ರಮಝಾನ್ ಹಬ್ಬ ಎಂದೇ ಕರೆಯಲ್ಪಡುವ ಈದುಲ್ ಫೀತ್ರ್ ಹಬ್ಬವು ಮನುಷ್ಯ ಪ್ರೇಮ, ಮಾನವ ಸಮಾನತೆಯ ಪ್ರತೀಕವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ಹಬ್ಬದ ದಿನವನ್ನು ಅತ್ಯಂತ ಸಂತಸ ಸಡಗರದೊಂದಿಗೆ ಆಚರಿಸುವಂತಾಗಲು ಝಕಾತುಲ್ ಫಿತ್ರ್ ಎಂಬ ವ್ಯವಸ್ಥೆಯಿದ್ದು ಇದನ್ನು ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಲಾಗಿದೆ. ತನ್ನ ನೆರೆಹೊರೆಯಲ್ಲಿ ವಾಸಿಸುತ್ತಿರುವ ಯಾರೊಬ್ಬರು ಕೂಡ ಹಬ್ಬದ ಸಂತಸದಿಂದ ವಂಚಿತನಾಗಕೂಡದೆಂಬ ಉದ್ದೇಶದೊಂದಿಗೆ ಫಿತ್ರ್ ಝಕಾತ್ ಎಂಬ ಕಡ್ಡಾಯದಾನ ನೀಡಲಾಗುತ್ತದೆ.

ಪ್ರವಾದಿ(ಸ) ಹೇಳಿರುವರು “ರಮಝಾನ್ ಭೂಮಿ ಆಕಾಶದ ನಡುವೆ ಇರುತ್ತದೆ ಫಿತ್ರ್ ಝಕಾತ್ ಮೂಲಕ ಅದು ಆರೋಹಣಗೊಳ್ಳುತ್ತದೆ (ಸ್ವೀಕರಿಸಲ್ಪಡುತ್ತದೆ). ಒಂದು ಕುಟುಂಬದ ಯಜಮಾನನು ತನಗೆ ಮತ್ತು ತನ್ನ ಹೆಂಡತಿಗೆ, ದುಡಿಯಲು ಯೋಗ್ಯವಲ್ಲದ ಮಕ್ಕಳಿಗೆ, ಖರ್ಚು ಕೊಡಲು ಕಡ್ಡಾಯವಿರುವ ತನ್ನ ತಂದೆತಾಯಿಗೆ ಮತ್ತು ವೇತನ ರಹಿತವಾಗಿ ತನ್ನ ಅಧೀನದಲ್ಲಿ ದುಡಿಯುವ ದಾಸನಿಗೆ ಫಿತ್ರ್ ಝಕಾತ್ ಕೊಡುವುದು ಕಡ್ಡಾಯವಾಗಿದೆ. ಈ ಝಕಾತನ್ನು ಕೊಡಲು ದೊಡ್ಡ ಶ್ರೀಮಂತನಾಗಬೇಕಿಲ್ಲ. ಈದ್‍ನ ಹಗಲು ಮತ್ತು ರಾತ್ರಿಗೆ ತನ್ನ ಮತ್ತು ಆಶ್ರಿತರ ಅಹಾರ, ವಸ್ತ್ರ, ವಸತಿಯ ಖರ್ಚಿಗೆ ಬೇಕಾದುದ್ದನ್ನು ಕಳೆದು ಏನಾದರೂ ಉಳಿದರೆ ಅಂತವರಿಗೆ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ‘ಝಕಾತುಲ್ ಫಿತ್ರ್’ ಎಂದರೆ ಹಬ್ಬದ ದಿನ ಬೆಳಗಿನ ಪ್ರಾರ್ಥನೆಗೆ ಹೊರಡುವ ಮುನ್ನ ಕೊಡಬೇಕಾದ ಕಡ್ಡಾಯವಾದ ದಾನ. 

ಇಸ್ಲಾಮ್ ಮಾನವೀಯ ನೆಲೆಯಲ್ಲಿ ಬಡವರ, ನಿರ್ಗತಿಕರ ಹಕ್ಕುಗಳಿಗಾಗಿ ಹೋರಾಡುವ ಧರ್ಮವಾಗಿದ್ದು ತನ್ನೆಲ್ಲ ಆರಾಧನಕರ್ಮಗಳ ಹಿಂದೆ ಬಡವರ ಹಿತವನ್ನು ಕಾಪಾಡಿಕೊಂಡು ಬಂದಿದೆ. ಹಬ್ಬಕ್ಕೆ ಮುಂಚೆ ಈ ಫೀತ್ರ್ ಝಕಾತ್ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ನಾವು ತಿನ್ನುವ ಆಹಾರವನ್ನು ಉದಾ: ಅಕ್ಕಿ, ಗೋದಿ, ಜೋಳ ಇತ್ಯಾದಿ ಧಾನ್ಯಗಳನ್ನು ದಾನದ ರೂಪದಲ್ಲಿ ನೀಡಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿ ಯ ಮೇಲೆ ಎರಡುವರೆ ಕೆ.ಜಿ ಯಷ್ಟು ಆಹಾರ ಧಾನ್ಯಗಳನ್ನು ಬಡವರ ಮನೆಗೆ ತಲುಪಿಸಬೇಕು.  ಆ ಬಳಿಕವಷ್ಟೆ ಆತನು ಈದ್ ನಮಾಝ್ ನಿರ್ವಹಿಸಲು ಈದ್ಗಾ ಅಥಾವ ಮಸಿದಿಗೆ ಹೋಗಬೇಕಾಗುತ್ತದೆ. ಇದರ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ಹಬ್ಬದ ಸಂತೋಷದಲ್ಲಿ ಪಾಲ್ಗೊಂಡು ಎಲ್ಲರೊಂದಿಗೆ ತಾನು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಬೇಕು ಎಂಬುದಾಗಿದೆ. 

ರಮಝಾನ್ ತಿಂಗಳಲ್ಲಿ ಮಾಡುವ ದಾನ ಧರ್ಮ ಮತ್ತು ಎಲ್ಲಾ ಸತ್ಕಾರ್ಯಗಳಿಗೆ ಎಪ್ಪತ್ತರಿಂದ ಏಳುನೂರು ಪಟ್ಟು ಹೆಚ್ಚು ಪುಣ್ಯ ಕೊಡಲಾಗುತ್ತದೆ ಎಂದು ಪ್ರವಾದಿವಚನದಲ್ಲಿ ಹೇಳಲಾಗಿದೆ. ಇದು ಜಗತ್ತಿನಲ್ಲಿರುವ ಎಲ್ಲ ಮುಸ್ಲಿಮರನ್ನು ದಾನ, ಧರ್ಮ, ಸದಕಾ ಗಳನ್ನು ಮಾಡಲು ಪ್ರೇರೇಪಿಸುತ್ತದೆ. ಆದ್ದರಿಂದಲೇ ವಿಶ್ವದಾದ್ಯಂತ ಮುಸ್ಲಿಮರು ರಮಝಾನ್ ತಿಂಗಳಲ್ಲಿ ಅತಿ ಹೆಚ್ಚು ದಾನಧರ್ಮವನ್ನು ಮಾಡುತ್ತಾರೆ. ಏಕೆಂದರೆ ಇಲ್ಲಿ ಒಂದು ರೂಪಾಯಿ ದಾನ ಮಾಡಿದರೆ ಅದು 70 ಅಥವಾ 700 ಪಟ್ಟು ಅಧಿಕ ದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ವಿಶ್ವದ ಶೇ. 22ರಷ್ಟಿರುವ ಮತ್ತು ಭಾರತದಲ್ಲಿ ಸುಮಾರು ಶೇ. 15ರಷ್ಟಿರುವ ಮುಸ್ಲಿಮರು ರಮಝಾನ್ ತಿಂಗಳಿನಲ್ಲಿ ಹಲವು ಶತಕೋಟಿ ರೂಪಾಯಿ ಮೌಲ್ಯದ ದಾನಧರ್ಮ ಮಾಡುತ್ತಾರೆ. ಹಲವಾರು ಸತ್ಕಾರ್ಯಗಳನ್ನು ಮಾಡುತ್ತಾರೆ. ಇದು ಮಾನವ ಸಮಾಜದ ಸಂತಸವನ್ನು ಬಹಳಷ್ಟು ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸಾಧನೆ ಮಾಡಿದ ತಿಂಗಳಾಂತ್ಯದಲ್ಲಿ ಹಬ್ಬದ ಸಂತೋಷಾಚರಣೆ ಮಾಡುವುದು ನಿಜವಾಗಿಯೂ ಅರ್ಥಪೂರ್ಣವಾಗಿದೆ.

ಶುಭ್ರ ವಸ್ತ್ರಗಳು ಮತ್ತು ಸುಗಂಧ ದ್ರವ್ಯ: ಹಬ್ಬದ ದಿನದಂದು ಪ್ರತಿಯೊಬ್ಬ ಮುಸ್ಲಿಮನು ತನ್ನ ಸಾಮಥ್ರ್ಯಕನುಗುಣವಾಗಿ ತನ್ನಲ್ಲಿರುವ ಉತ್ತಮವಾದ ಬಟ್ಟೆಗಳನ್ನು ಧರಿಸುತ್ತಾನೆ ಮತ್ತು ಸುಗಂಧಪೋಷಿತನಾಗಿ ಅಲ್ಲಾಹ ಗುಣಗಾನವನ್ನು ಮಾಡುತ್ತ ಈದ್ಗಾ ಮೈದಾನ ಅಥವಾ ಮಸೀದಿಗೆ ತೆರಳುತ್ತಾನೆ. ಅಲ್ಲಿ ಅಲ್ಲಾಹ ಮುಂದೆ ಮೂವತ್ತು ದಿನಗಳ ಉಪವಾಸಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುವುದರ ಮೂಲಕ ತನ್ನ ಹಾಗೂ ತನ್ನ ಕುಟುಂಬ ಮತ್ತು ತನ್ನ ದೇಶದ ಒಳಿತು ಮತ್ತು ಹಿತಕ್ಕಾಗಿ ಪ್ರಾರ್ಥಿಸುತ್ತಾನೆ. ಈದ್ಗಾಕ್ಕೆ ಹೋಗುವಾಗ ಒಂದು ಕಡೆಯಿಂದ ಹೋಗಿ ಮತ್ತೊಂದು ಕಡೆಯಿಂದ ಮರಳಿ ಮನೆ ಸೇರುತ್ತಾನೆ. ಏಕೆಂದರೆ ಹೋಗುವಾಗ ಯಾರೆಲ್ಲ ರಸ್ತೆಯಲ್ಲಿ ಸಿಗುತ್ತಾರೆ ಅವರಿಗೆ ಈದ್ ಶುಭಾಶಯಗಳನ್ನು ಹೇಳುತ್ತಾ ಮತ್ತೇ ಬೇರೆ ರಸ್ತೆಯಿಂದ ಬರುವಾಗಲೂ ಕೂಡ ಅಲ್ಲಿದ್ದವರಿಗೆ ಶುಭವನ್ನು ಕೋರುತ್ತಾ ಬರುತ್ತಾನೆ ಹೀಗೆ ಒಬ್ಬರು ಇನ್ನೊಬ್ಬರಿಗೆ ಶುಭವನ್ನು ಕೋರಿ ಎಲ್ಲರೊಂದಿಗೆ ಈದ್ ನ ಸಂತಸವನ್ನು ಹಂಚಿಕೊಳ್ಳುತ್ತಾನೆ. ಇದು ಪ್ರವಾದಿ ಮುಹಮ್ಮದ್(ಸ) ರು ಕಲಿಸಿಕೊಟ್ಟಿರುವ ಬೋಧನೆಯಾಗಿದೆ.

ರಮಝಾನ್ ತಿಂಗಳಲ್ಲಿ ಮಾಡುವ ದಾನ ಧರ್ಮ ಮತ್ತು ಎಲ್ಲಾ ಸತ್ಕಾರ್ಯಗಳಿಗೆ ಎಪ್ಪತ್ತರಿಂದ ಏಳುನೂರು ಪಟ್ಟು ಹೆಚ್ಚು ಪುಣ್ಯ ಕೊಡಲಾಗುತ್ತದೆ ಎಂದು ಪ್ರವಾದಿವಚನದಲ್ಲಿ ಹೇಳಲಾಗಿದೆ. ಇದು ಜಗತ್ತಿನಲ್ಲಿರುವ ಎಲ್ಲ ಮುಸ್ಲಿಮರನ್ನು ದಾನ, ಧರ್ಮ, ಸದಕಾ ಗಳನ್ನು ಮಾಡಲು ಪ್ರೇರೇಪಿಸುತ್ತದೆ.

 

ಕೂಲಿಪಡೆಯುವ ದಿನ: ಕೂಲಿ ಕಾರ್ಮಿಕನು ತನ್ನ ಇಡೀ ದಿನದ ಶಮ್ರಕ್ಕೆ ಪ್ರತಿಫಲವಾಗಿ ಸಂಜೆಯಾಗುತ್ತಲೆ ತನ್ನ ಮಾಲಿಕನಿಂದ ಕೂಲಿಯನ್ನು ಪಡೆಯುಲು ಬಯಸುತ್ತಾನೆ. ಮಾಲಿಕನು ಆತನ ಶಮ್ರಕ್ಕನುವಾಗಿ ಕೂಲಿ ಕೊಟ್ಟು ಕಳುಹಿಸುತ್ತಾನೆ. ಆ ಸಂದರ್ಭದಲ್ಲಿ ಕಾರ್ಮಿಕನ ಮುಖದಲ್ಲಿನ ಆನಂದವನ್ನು ಮತ್ತು ಆತನ ಮನಸ್ಸಿನಲ್ಲಾಗುವ ಸಂತೋಷವನ್ನು ವರ್ಣಿಸಲಾಸಾಧ್ಯ. ಒಂದು ಆತನು ಮಾಡಿದ ಕೂಲಿಗೆ ತುಸು ಹೆಚ್ಚೇ ಪ್ರತಿಫಲ ಸಿಕ್ಕಿತು ಎಂದಾದರೆ ಆತನ ಸಂತೋಷಕ್ಕೆ ಪಾರವೇ ಇರಲ್ಲ. ಆಲ್ಲಾಹನು ಓರ್ವ ಮುಸ್ಲಿಮನಿಗೆ ಆತನು ಮಾಡಿದ 30 ದಿನಗಳ ಉಪವಾಸದ ಬದಲಿಗೆ ಈದುಲ್ ಫಿತ್ರ್ ದಿನದಂದು ಕೂಲಿ ಕೊಡುತ್ತಾನೆ ತನ್ನ ದಾಸ ಬೇಡಿದ ಪ್ರಾರ್ಥನೆಗಳೆಲ್ಲವನ್ನೂ ಭಗವಂತನೂ ಈಡೇರಿಸಲಿದ್ದಾನೆ ಎಂಬುದನ್ನು ಅರಿತು ಅಂದು ಮುಸ್ಲಿಮರ ಸಂತೋಷಕ್ಕೆ ಕೊನೆಯೇ ಇರದು. ರೈತನು ತನ್ನ ಹೊಲವನ್ನು ಉಳಿದ ನಂತರ ಫಸಲನ್ನು ಕೊಯ್ಲು ಮಾಡುತ್ತಾನೆ. ಆ ಫಸಲು ದೊರೆಯುವ ದಿನವೇ ಈದುಲ್ ಫಿತ್ರ್ ಹಬ್ಬ. ಅದಕ್ಕಾಗಿ 30 ದಿನಗಳ ವರೆಗೆ ತನ್ನ ದೇಹಕಾಂಕ್ಷೆಗಳನ್ನು ಹಿಡಿತದಲ್ಲಿಟ್ಟುಕೊಂಡು ಉತ್ತಮವಾಗಿ ಬದುಕಿ ತೋರಿಸಿದಾತನು ಅಂದು ತಾನು ಬೆಳೆದ ಬೆಳೆ ಉತ್ತಮ ಫಸಲು ನೀಡುತ್ತದೆ ಎಂದಾದರೆ ಅತನಿಗಿಂತ ಪುಣ್ಯವಂತನು ಯಾರಿರಬಹುದು? ಈದುಲ್ ಪೀತ್ರ್ ನಮ್ಮೆಲ್ಲರ ಬದುಕಿನಲ್ಲಿ ಉತ್ತಮ ಫಸಲನ್ನು ಕೊಯ್ಲು ಮಾಡುವ ದಿನವಾಗಲಿ ಎಂಬುದೇ ಪ್ರತಿಯೋರ್ವ ಮುಸ್ಲಿಮನ ಹಾರೈಕೆ. 

 

Read These Next

ಫೆಂಗಲ್ ಚಂಡಮಾರುತದ ಪರಿಣಾಮ ಮೀನುಗಾರರಿಗೆ ಎಚ್ಚರಿಕೆ; ಕರಾವಳಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ ಪರಿಣಾಮ ದ.ಕ.ಜಿಲ್ಲೆಯ ಮೇಲಾಗಿದೆ. ಸೋಮವಾರ ...

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...