ಸಂವಿಧಾನ ತಳಹದಿಯನ್ನು ಗಟ್ಟಿಗೊಳಿಸೋಣ ನಮ್ಮ ಸಂವಿಧಾನ ಅರಿಯೋಣ

Source: S O News service | By Staff Correspondent | Published on 25th November 2016, 6:35 PM | Coastal News | Special Report | Public Voice | Don't Miss |



ಭಾರತೀಯ ಸಂವಿಧಾನ ಜಗತ್ತಿಗೆ ಮಾದರಿಯನ್ನಬಹುದಾದದ ಸಂವಿಧಾನ. ಇದು ಮಾನವೀಯ ನೆಲೆಗಟ್ಟಿನಲ್ಲಿ ನೆಲೆನಿಂತಿದೆ. ಇಂತಹ ಸಂವಿಧಾನವನ್ನು ಅರಿಯುವುದು, ಅದರಂತೆ ನಡೆದುಕೊಳ್ಳುವುದು ಭಾರತೀಯ ಪ್ರಜೆಯಾಗಿರುವ ಪ್ರತಿಯೊಬ್ಬನ ಕರ್ತವ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ.೨೬ ರಂದು ‘ಸಂವಿಧಾನ ದಿನ’ ಆಚರಿಸುವ ನಿರ್ಧಾರ ಕಳೆದ ಮೂರು ವರ್ಷಗಳ ಹಿಂದೆ ೨೦೧೪ರಲ್ಲಿ ಕೈಗೊಂಡಿತ್ತು. ಇದರ ಉದ್ದೇಶ ಸ್ಪಷ್ಠವಾಗಿದ್ದು ನಮ್ಮ ಯುವ ವಿದ್ಯಾರ್ಥಿಗಳು ಸಂವಿಧಾನವನ್ನು ಅರಿತುಕೊಳ್ಳಬೇಕು. ಅದರ ಪ್ರಸ್ತಾವನೆಯಲ್ಲಿ ತಿಳಿಸಿದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ. 
ವಿಪರ್ಯಾಸವೆಂದರೆ, ವಿದ್ಯಾರ್ಥಿಗಳು, ಯುವಕರು, ಈ ದೇಶದ ಸಂವಿಧಾನ ಬದ್ದವಾಗಿ ಆಯ್ಕೆಗೊಂಡ ಪ್ರಜಾಪ್ರತಿನಿಧಿಗಳು ಎಷ್ಟರಮಟ್ಟಿಗೆ ನಮ್ಮ ಸಂವಿಧಾನ ಅರಿತುಕೊಂಡಿದ್ದಾರೆ ಮತ್ತು ಅದನ್ನು ಯಾವ ಯಾವ ಹಂತದಲ್ಲಿ ಪಾಲಿಸಿಕೊಂಡು ಬರುತ್ತಿದ್ದಾರೆ ಎನ್ನುವುದೇ ಒಂದು ದೊಡ್ಡ ಸವಾಲಾಗಿ ನಮ್ಮ ಮುಂದೆ ನಿಲ್ಲುತ್ತಿದೆ. ಸರ್ಕಾರದ ಉದ್ದೇಶ ಸರ್ವರಿಗೂ ಸಂವಿಧಾನದ ಆಶಯವನ್ನು ತಿಳಿಸುವುದಾಗಿದೆ. ಆದರೆ ಇದು ಎಷ್ಟರಮಟ್ಟಿಗೆ ಕಾರ್ಯಗತವಾಗುತ್ತಿದೆ ಎನ್ನುವುದೇ ನಮ್ಮಲ್ಲಿರುವ ಸಮಸ್ಯೆ. 
ಪ್ರತಿವರ್ಷ ಸರ್ಕಾರವು ನವೆಂಬರ್ ೨೬ ರಂದು ಸಂವಿಧಾನ ದಿನ ಆಚರಿಸಿ ಎಂದು ಶಿಕ್ಷಣ ಇಲಾಖೆಗೆ ಸುತ್ತೋಲೆ ಕಳುಹಿಸಿ ಕೈತೊಳೆದುಕೊಂಡರೆ ಸಾಲದು, ಬೇರೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾಪಿಸಿದಂತೆ ಈ ಕಾರ್ಯಕ್ರಮವನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳ್ಳಬೇಕಾಗಿದೆ. ಕಾಟಾಚಾರಕ್ಕೆ ಒಂದೆರಡು ಶಾಲಾ ಕಾಲೇಜುಗಳು ಕಾರ್ಯಕ್ರಮವನ್ನು ಆಯೋಜಿಸಿ ಇಲಾಖೆಗೆ ವರದಿಸುವುದರಿಂದ ‘ಸಂವಿಧಾನ ದಿನ’ ಆಶಯಗಳು ಈಡೇರಿದಂತಾಗುತ್ತದೆಯೆ? ಎನ್ನುವುದು ಒಂದು ಪ್ರಶ್ನೆಯಾಗಿಯೆ ಉಳಿದುಬಿಡುತ್ತದೆ. 
ದೇಶ ಬ್ರಿಟಿಷರ ಕಪಿಮುಷ್ಟಿಯಿಂದ ಕಸಿದುಕೊಂಡ ಬಳಿಕ ಭಾರತ, ಪಾಕಿಸ್ತಾನ ಎಂಬ ಎರಡು ದೇಶಗಳಾಗಿ ವಿಭಜನೆಗೊಂಡಿತು. ನಂತರ ಇದಕ್ಕೊಂದು ಸಂವಿಧಾನದ ಅಗತ್ಯತೆ ಮನಗಂಡ ಸರ್ಕಾರಕ್ಕೆ ಸಂವಿಧಾನ ರಚನೆಗೆ ಮುಂದಾದಾಗ ಅದೊಂದು ಭಾರಿ ಸವಾಲು ಎಂಬಂತೆ ಸ್ವೀಕರಿಸಿದ ಸಂವಿಧಾನ ರಚನಕಾರರ ಸಮಿತಿಯು ನಮ್ಮ ದೇಶಕ್ಕೊಂದು ಮಾದರಿ ಸಂವಿಧಾನ ವನ್ನು ಕೇವಲ ೩ ಮೂರು ವರ್ಷಗಳ ಅವಧಿಯಲ್ಲಿ ರಚಿಸಿ ಕರಡು ರಚನಾ ಸಭೆಯ ಮುಂದಿಡಲಾಯಿತು. ಅದು ೧೯೪೯ರ ನವೆಂಬರ್ ೨೬ ರಂದು ಅಂಗಿಕಾರಗೊಂಡಿತು.  ಅಂತೆಯೆ ಇಂದು ನಾವು ಪ್ರತಿ ವರ್ಷ ನ.೨೬ ನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದ್ದೇವೆ.  


ನಮ್ಮ ಸಂವಿಧಾನದ ಪ್ರಸ್ತಾವನೆ ಈ ರೀತಿ ಬರೆಯಲ್ಪಟ್ಟಿದೆ. 
“ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ:
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;
ಗಳನ್ನು ದೊರಕಿಸಿ, ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ನಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.”    

ಇಂತಹ ಅಮೂಲ್ಯ ಹಾಗೂ ಉದಾತ್ತವಾದ ಸರ್ವಕಾಲಿ, ಸರ್ವಜನಾಂಗದ ಒಳಿತನ್ನೇ ಸಾರುವ ಒಂದು ಪ್ರಬುದ್ಧ ಸಂವಿಧಾನ ನೀಡಿದ ಬಾಬಾ ಸಾಹೇಬ್ ಆಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರಿಗೂ ಭಾರತೀಯರಾದ ಚಿರ ಋಣಿಯಾಗಿರಬೇಕು. ದುರಾಷ್ಟವಶಾತ್ ಇಂದಿನ ಪೀಳಿಗೆ ಸಂವಿಧಾನವನ್ನು ಅರಿತುಕೊಳ್ಳುವಲ್ಲಿ ವಿಫಲವಾದಂತೆ ಕಂಡು ಬರುತ್ತಿದೆ. 
ನಮ್ಮ ವಿದ್ಯಾರ್ಥಿ ಸಮೋಹ ರಾಜ್ಯ ಶಾಸ್ತ್ರದಲ್ಲಿ ಭಾರತ ಸಂವಿಧಾನ, ಲಕ್ಷಣ, ವೈಶಿಷ್ಠ್ಯತೆ, ಮೂಲಭೂತ ಹಕ್ಕು, ಕರ್ತವ್ಯಗಳನ್ನು ಅಭ್ಯಾಸಿಸುತ್ತಾರೆ. ಆದರೆ ಅದು ಕೇವಲ ಪರೀಕ್ಷೆಯಲ್ಲಿ ೧೦-೧೫ ಅಂಕಗಳನ್ನು ಗಳಿಸುವುದಕ್ಕಾಗಿ ಮಾತ್ರ. ಓರ್ವ ವಿದ್ಯಾರ್ಥಿ ಸಂವಿಧಾನದ ಮೂಲಭೂತ ಹಕ್ಕಗಳನ್ನು ರಾತ್ರಿ ಇಡಿ ನಿದ್ದೆಗಟ್ಟು ಕುಳಿತು ಓದುತ್ತಾನೆ. ಆ ಪ್ರಶ್ನೆ ಪರೀಕ್ಷೆಯಲ್ಲಿ ಬಂದರೆ ಸರಿ ಇಲ್ಲವಾದರೆ ತಾನು ಓದಿದ್ದು ವೇಷ್ಠಾಯಿತು ಎಂದು ಭಾವಿಸುತ್ತಾನೆ. ಕೇವಲ ಪರೀಕ್ಷೆಗಾಗಿ ಓದಿದ ಓದು ವೈರ್ಥವೇ ಹೊರತು ಅದು ಜೀವನದಲ್ಲಿ ಎಂದಿಗೂ ಸಹಕಾರಿಯಾಗಲಾರದು. 
ರಾಜ್ಯದ ದಿನಪತ್ರಿಕೆಯೊಂದು ೨೦೧೪ರಲ್ಲಿ  ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆಸಿದ ಸಮೀಕ್ಷೆಯೊಂದು ಆಘಾತಕಾರಿ ಅಂಕಿ‌ಅಂಶಗಳನ್ನು ಹೊರಗೆಡಹಿದೆ. ಸಮೀಕ್ಷೆಯಂತೆ ರಾಜ್ಯದ ೧೦೦೦ ವಿದ್ಯಾರ್ಥಿಗಳಲ್ಲಿ ಶೇ.೪೫ ವಿದ್ಯಾರ್ಥಿಗಳಿಗೆ ಸಂವಿಧಾನ ಎಂದರೆ ಏನು ಎನ್ನುವುದೆ ಗೊತ್ತಿಲ್ಲವಂತೆ. ‘ಸಂವಿಧಾನದ ಬಗ್ಗೆ ನಿಮೆಗೆಷ್ಟು ಗೊತ್ತು? ಎನ್ನು ಪ್ರಶ್ನೆಗೆ ಶೇ೪೫% ಮಂದಿ ಗೊತ್ತಿಲ್ಲ ಎಂದು ಉತ್ತರ ಕೊಟ್ಟರೆ, ಶೇ೧೦ ರಷ್ಟು ಮಂದಿ ಅಸ್ಪಷ್ಟವಾಗಿ ಉತ್ತರಿಸಿದ್ದಾರೆ. ಶೇ.೨೦ ವಿದ್ಯಾರ್ಥಿಗಳು ಅಲ್ಪ ಸ್ವಲ್ಪ ಗೊತ್ತು ಎಂದು ಹೇಳಿದರ, ಶೇ.೨೫ ವಿದ್ಯಾರ್ಥಿಗಳು ಮಾತ್ರ ಸಂವಿಧಾನ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದಾರೆ.
ಇದು ನಮ್ಮ ರಾಜ್ಯದ ವಿದ್ಯಾರ್ಥಿಗಳ ಸ್ಥಿತಿಗತಿಯಾಗಿದ್ದು ರಾಜ್ಯ ಸರ್ಕಾರ ನ.೨೬ರನ್ನು “ಸಂವಿಧಾನ ದಿನ” ವನ್ನಾಗಿ ಆಚರಿಸಲು ನಿರ್ಧರಿಸಿರುವುದೇ ಸೂಕ್ತವೇ ಆಗಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಂವಿಧಾನ ದಿನ ವನ್ನು ಸಮರ್ಪಕವಾಗಿ ಆಚರಿಸುವಂತಾಗಬೇಕು ಎನ್ನುವುದು ನಮ್ಮೆಲ್ಲರ ಅಭಿಲಾಶೆಯಾಗಿದೆ. 
ನಮ್ಮ ಸಂವಿಧಾನದ ಕುರಿತ ಕೆಲವು ಮಹತ್ವದ ಮಾಹಿತಿಗಳು: ಭಾರತೀಯ ಸಂವಿಧಾನ ಹಲವು ವಿಶೇಷತೆಗಳನ್ನು ಹೊಂದಿದ್ದು ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಾಯನ ಮಾಡುವುದರ ಮೂಲಕ ರಚಿಸಲಾಗಿದೆ. ಇದೊಂದು ಲಿಖಿತ ಸಂವಿಧನವಾಗಿದ್ದು ಜಗತ್ತಿಗೆ ಮಾದರಿಯಾಗಿದೆ. 
·    ಸಂವಿಧಾನದ ಕರಡು ರಚನೆ ಡಿ.೯,೧೯೪೭ರಲ್ಲಿ ಆರಂಭಗೊಂಡಿದ್ದು ನ.೨೬, ೧೯೪೯ರಲ್ಲಿ ಮುಕ್ತಾಯಗೊಂಡಿತು. (೨ವರ್ಷ ೧೧ ತಿಂಗಳು ೧೮ ದಿನಗಳು)
·    ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕರಡು ಸಮಿತಿ ಅಧ್ಯಕ್ಷರಾಗಿದ್ದರೆ, ಕೆ.ಎಂ. ಮುನ್ಷಿ, ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್, ಎನ್. ಗೋಪಾಲ್ ಸ್ವಾಮಿ ಅಯ್ಯಂಗಾರ್, ಬಿ.ಎಲ್. ಮಿತ್ತಲ್, ಮುಹಮ್ಮದ್ ಸದಾವುಲ್ಲಾ, ಡಿ.ಪಿ.ಖೈತಾನ್ ಸದಸ್ಯರಾಗಿದ್ದರು.
·    ಸಂವಿಧಾನ ರಚನಾ ಸಭೆಯಲ್ಲಿ ಅಮ್ಮು ಸ್ವಾಮಿನಾಥನ್, ದಾಕ್ಷಾಯಿಣಿ, ವೇಲಾಯುಧನ್, ಬೇಗಂ ಎಜಾಝ್ ರಸೂಲ್, ವಿಜಯಲಕ್ಷ್ಮಿ ಪಂಡಿತ್, ಸರೋಜನಿ ನಾಯ್ಡು ಸೇರಿದಂತೆ ೧೫ ಮಂದಿ ಮಹಿಳಾ ಸದಸ್ಯರು.
·    ಅತಿ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆ, ೧೦೧ ತಿದ್ದುಪಡಿಗಳ ಬಳಿಕ, ಭಾರತದ ಸ೦ವಿಧಾನದಲ್ಲಿ ಇದೀಗ ಒಟ್ಟು ೫ ಸ೦ಪುಟ, ೧೨ ಅನುಸೂಚಿ, ೨೫ ಭಾಗಗಳಲ್ಲಿ ೪೪೮ ಪರಿಚ್ಚೇದಗಳನ್ನು ಹೊ೦ದಿದೆ.
·    ಸ೦ವಿಧಾನದ ಮೊದಲ ಎರಡು ಪ್ರತಿ ಸಿದ್ಧಪಡಿಸುವುದಕ್ಕೆ ಐದು ವಷ೯ ಬೇಕಾಯಿತು. ಅವುಗಳನ್ನು ಹೀಲಿಯ೦ ತು೦ಬಿದ ಪೆಟ್ಟಿಗೆಯಲ್ಲಿರಿಸಿ ಸ೦ಸತ್ತಿನ ಗ್ರ೦ಥಾಲಯದಲ್ಲಿ ಇರಿಸಲಾಗಿದೆ
·    ಸ೦ವಿಧಾನವನ್ನು ಇ೦ಗ್ಲಿಷ್ ಹಾಗೂ ಹಿ೦ದಿ ಕೈಬರಹದ ಮೂಲಕ ದಾಖಲಿಸಲಾಗಿತ್ತು. ಪ್ರೇಮ್ ಬಿಹಾರಿ ನಾರಾಯಣ ರಾಯ್‌ಜ್ದಾ ಅವರ ಕೈಬರಹ ಹಾಗೂ ನ೦ದಲಾಲ್ ಬೋಸ್ ಮತ್ತು ಇತರೆ ಕಲಾವಿದರು ಬಿಡಿಸಿದ ಚಿತ್ರಗಳು ಸ೦ವಿಧಾನದಲ್ಲಿವೆ.
·    ಅಮೇರಿಕಾ ಸಂವಿಧಾನದಿಂದ ‘ಮೂಲಭೂತ ಹಕ್ಕುಗಳನ್ನು, ಪ್ರಾನ್ಸ್ ದೇಶದಿಂದ ಸಮಾನತೆ ಮತ್ತು ಭ್ರಾತೃತ್ವ, ಐರಿಷ್ ನಿಂದ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು, ಜರ್ಮನಿ ಸಂವಿಧಾನದಿಂದ ತುರ್ತು ಸಂದರ್ಭದ ವಿಷಯಗಳನ್ನು ಅಳವಡಿಸಿಕೊಳ್ಳಲಾಗಿದೆ. 
·    ಇತ್ತಿಚಿನ ಸಂವಿಧಾನದ ೧೦೧ ನೇ ತಿದ್ದುಪಡೆ: ಸೆ.೮ ೨೦೧೬ ವಸ್ತು ಮತ್ತು ಸೇವಾ ತೆರಿಗೆ Goods and Services Tax Bill
ಸಂವಿಧಾನ ಕುರಿತಂತೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಮಾತುಗಳಲ್ಲಿ ಹೇಳುವುದಾದರೆ “ನಮ್ಮ ಸ೦ವಿಧಾನ ಕಾಯ೯ಸಾಧ್ಯವಾದುದು ಮತ್ತು ಸ೦ದಭ೯ಕ್ಕೆ ಅನುಗುಣವಾಗಿ ಹೊ೦ದಾಣಿಕೆ ಗುಣವುಳ್ಳದ್ದು. ಶಾ೦ತಿ ನೆಮ್ಮದಿ ಸಮಯದಲ್ಲೂ ಯುದ್ಧ ಸಮಯದಲ್ಲೂ ದೇಶವನ್ನು ಏಕತ್ರವಾಗಿ ಹಿಡಿದಿರಿಸಬಲ್ಲ ಸಾಮಥ್ಯ೯ ಅದಕ್ಕಿದೆ. ಒ೦ದೊಮ್ಮೆ ಹೊಸ ಸ೦ವಿಧಾನದ ಅಡಿಯಲ್ಲಿ ವ್ಯವಸ್ಥೆ ತಪ್ಪುದಾರಿಯಲ್ಲಿ ಹೋಯಿತು ಎ೦ದಾದರೆ ಅದಕ್ಕೆ ವ್ಯಕ್ತಿಗಳು ಕಾರಣರೇ ವಿನಾ ನಾವು ಕೆಟ್ಟ ಸ೦ವಿಧಾನವನ್ನು ಹೊ೦ದಿದ್ದೇವೆ ಎ೦ದಲ್ಲ”

·    ಎಂ.ಆರ್.ಮಾನ್ವಿ

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...