ಜನಪರ ಕಾಳಜಿಯ ಹೋರಾಟಗಾರ ಮಹೇಂದ್ರಕುಮಾರ್  ಈಗ ಒಂದು ನೆನಪು ಮಾತ್ರ

Source: sonews | By Staff Correspondent | Published on 25th April 2020, 6:12 PM | Public Voice | Don't Miss |

ಎಂ.ಆರ್.ಮಾನ್ವಿ

ಬಲಪಂಥೀಯ ವಿಚಾರಧಾರೆ ಅದರಲ್ಲೂ ಭಜರಂಗದಳ ಎಂದರೆ ಒಂದು ಕಾಲದಲ್ಲಿ ಮಹೇಂದ್ರ ಕುಮಾರ್ ಎಂಬಷ್ಟರ ಮಟ್ಟಿಗೆ ಭಜರಂಗದಳವನ್ನು ಬೆಳೆಸಿದ್ದ ಹುಟ್ಟು ಹೋರಾಟಗಾರ, ಅದು ಎಡ ಬಲ ಹೋರಾಟಗಳಿರಬಹುದು ಅಥವಾ ಮಾನವ ಪರ, ಜನಪರ ಹೋರಾಟಗಳಾಗಿರಬಹುದು. ಒಂದು ವಿಚಾರಧಾರೆಯ ಹೋರಾಟದಿಂದ ಹೊರಬಂದು ಮಾನವಪರ, ಜನಪರ ಹೋರಾಟಗಳಲ್ಲಿ ತೊಡಿಸಿಕೊಂಡಿದ್ದ ಮಹೇಂದ್ರ ಕುಮಾರ್ ನಮ್ಮನ್ನು ಅಗಲಿದ್ದಾರೆ ಎಂದು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ನಂಬದೆ ವಿಧಿ ಇಲ್ಲ. ಏಕೆಂದರೆ ಇದು ಸತ್ಯ.

ಮರಣ ಯಾರನ್ನೂ ಬಿಟ್ಟಿಲ್ಲ. ಎಂತೆಂತಹ ಕ್ರೂರಿಗಳನ್ನೂ ಅಥವಾ ಮಾನವ ಪ್ರೇಮಿಗಳನ್ನು ಅದು ಬಿಡದೆ ಎಲ್ಲರನ್ನೂ ಒಂದು ದಿನ ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತದೆ. ಹುಟ್ಟು ನನಗೆ ಗೊತ್ತಿರಲಿಲ್ಲ. ಆದರೆ ಮರಣ ಮಾತ್ರ ನಿಶ್ಚಿತ. ಮಹೇಂದ್ರಕುಮಾರ್ ಕೂಡ ಮರಣಿಸಿದ್ದಾರೆ. ಇಹಲೋಕದಿಂದ ಅಗಲುವುದು  ನಿಶ್ಚಿತವಾಗಿದ್ದರೂ ಇಷ್ಟು ಬೇಗ ಅಗಲಿರುವುದು ಮಾತ್ರ ರಾಜ್ಯ ಮತ್ತು ರಾಷ್ಟ್ರಕ್ಕೆ ಅಗಾಧ ನಷ್ಟವನ್ನುಂಟು ಮಾಡಿದಂತಾಗಿದೆ.

ಸಂಘದ ವಿಚಾರಧಾರೆಗಳಿಂದ ಹೊರಬಂದು ಜನಪರ  ಹೋರಾಟಗಳ ಮೂಲಕ ಎಲ್ಲ ತುಳಿತಕ್ಕೊಳಗಾದ, ಶೋಷಿತ, ಅಲ್ಪಸಂಖ್ಯಾತ, ಬಡವರ್ಗದ ಪರವಾಗಿ ತಮ್ಮ ದ್ವನಿಯನ್ನು ಎತ್ತುವುದರ ಮೂಲಕ ಸಂಘೀಗಳ ಹಾಗೂ ರಾಜಕಾರಣಿಗಳ ಮತ್ತು ಅಧಿಕಾರಿ ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದ ಇವರ ದ್ವನಿಯನ್ನು ಸೃಷ್ವಿಕರ್ತನ ಇಷ್ಟು ಬೇಗನೆ ಅಡಗಿಸಿದ್ದು ಮಾತ್ರ ವಿಧಿ ಎನ್ನದೇ ಬೇರೇನು ಹೇಳಲು ಸಾಧ್ಯ.

ಮಹೇಂದ್ರ ಕುಮಾರ್ ತೋರಿದ ದಿಟ್ಟತನ ಇತರರಿಗೆ ಮಾದರಿಯಾಗಿದ್ದು ಅವರು ಯಾವತ್ತೂ ರಾಜಕೀಯ ದಾಳಕ್ಕೆ ಬಲಿಯಾಗದೆ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಸಿಎಎ,ಎನ್.ಆರ್.ಪಿ ಮತ್ತು ಎನ್.ಆರ್.ಸಿ ವಿರುದ್ಧ ಹೋರಾಟಗಳಲ್ಲಿ ರಾಜ್ಯದ ತುಂಬೆಲ್ಲ ಓಡಾಡಿ ಜನರನ್ನು ಜಾಗೃತಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದ ಅವರು, ಅಧಿಕಾರ ಹಿಡಿಯ ಎಲ್ಲ ಮಾರ್ಗಗಳನ್ನು ತೆರೆದುಕೊಂಡುದ್ದರೂ ಕೂಡ  ಆ ಕುರಿತು ವಿಚಲಿತರಾಗದೆ ಜನರಿಗಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಜನದ್ವನಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಕ್ತ ದೇಶದಲ್ಲಿ ಆಗುತ್ತಿರುವ ಬೆಳವಣೆಗೆ ಕುರಿತು ಅತ್ಯಂತ ಖಾರವಾಗಿ ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದರು. ಅಲ್ಲದೆ ಸದ್ಯದ ರಾಜ್ಯದಲ್ಲಿನ ಪತ್ರಿಕೋದ್ಯಮದ ಕುರಿತಂತೆ ಅವರಿಗೆ ಬಹಳ ಬೇಸರವಿತ್ತು. ಬಾಲಬುಡುಕ ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಅವರು ಜನದ್ವನಿಯನ್ನು ಹುಟ್ಟುಹಾಕಿದ್ದರು. ಆ ಜನದ್ವನಿ ಇನ್ನು ಶೈಶಾವಸ್ಥೆಯಲ್ಲಿರುವಾಗಲೆ ಅಡಗಿರುವುದು ಮಾತ್ರ ಕಾಲದ ಅತ್ಯಂತ ದುರಂತ ಸಂಗತಿಯಾಗಿದೆ. ಸೃಷ್ಟಿಕರ್ತನು ಅವರ ನಿಸ್ವಾರ್ಥ ಸೇವೆಯನ್ನು ಸ್ವೀಕರಿಸಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ.

 

 

Read These Next

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಭಟ್ಕಳ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ ಮುರುಡೇಶ್ವರ ದಲ್ಲಿ ಅದ್ದೂರಿ ಸ್ವಾಗತ

20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ  ವಿವಿಧ ಸಂಘಟನೆ ಹಾಗೂ ...