ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

Source: sonews | By Staff Correspondent | Published on 23rd April 2018, 7:00 PM | Coastal News | State News | Incidents | Don't Miss |

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.ಕೋಟೇಶ್ವರ ಕಾಗೇರಿ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ, ಸೇನಾಪುರ ನಿವಾಸಿ ರಾಜು ಮರಕಾಲ ಎಂಬವರ ಪುತ್ರ ಕೀರ್ತನ್(19) ಹಾಗೂ ಕಾಳಾವರ ನಿವಾಸಿ ಬಿಕಾಂ ವಿದ್ಯಾರ್ಥಿ ಸಚಿನ್(19)ಪರೀಕ್ಷೆ ತಯಾರಿಗಾಗಿ ಕಳೆದ ಕೆಲ ದಿನಗಳಿಂದ ಕಾಲೇಜಿಗೆ ರಜೆ ಸಾರಲಾಗಿತ್ತು. ಇಂದು ಅಂತಿಮ ಪರೀಕ್ಷೆಗಾಗಿ ಹಾಲ್ ಟಿಕೆಟ್ ತರಲು ಕಾಲೇಜಿಗೆ ಆಗಮಿಸಿದ್ದರು.

ಬೆಳಗ್ಗೆ ಹಾಲ್ ಟಿಕೆಟ್ ಪಡೆದು ವಾಪಾಸು ಮನೆಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಸಮೀಪದ ದೇವಸ್ಥಾನದಲ್ಲಿ ಕೆಲ ಹೊತ್ತು ಕಳೆಯಲು ಬಂದಿದ್ದರು. ನೀರುಪಾಲಾದ ವಿದ್ಯಾರ್ಥಿಗಳು.
     
ಸಚಿನ್, ಕೀರ್ತನ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ದೇವಸ್ಥಾನದ ಕೆರೆಯ ಸಮೀಪ ಬಂದಿದ್ದು, ಈ ವೇಳೆಯಲ್ಲಿ ಸಚಿನ್ ಹಾಗೂ ಕೀರ್ತನ್ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದರು.

ಓರ್ವ ವಿದ್ಯಾರ್ಥಿ ಕೆರೆಯ ದಡದಲ್ಲೇ ಕೂತಿದ್ದನು. ನೀರಿಗೆ ಇಳಿದ ಈರ್ವರು ವಿದ್ಯಾರ್ಥಿಗಳು ಮೇಲೆ ಬಾರದಿದ್ದನ್ನು ಗಮನಿಸಿದ ಇನ್ನೋರ್ವ ವಿದ್ಯಾರ್ಥಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಾನೆ.ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ವಿದ್ಯಾರ್ಥಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದು, ಕೀರ್ತನ್ ಮೃತದೇಹ ಪತ್ತೆಯಾಗಿದೆ. ಸಚಿನ್‌ಗಾಗಿ ಶೋಧ ಕಾರ್ಯ ಮುಂದವರಿಸಲಾಗಿದೆ. ವಿದ್ಯಾರ್ಥಿ ಸಚಿನ್ ವಾಲಿಬಾಲ್ ಹಾಗೂ ಕಬಡ್ಡಿ ಕ್ರೀಡಾಪಟುವಾಗಿ ಕಾಲೇಜಿನಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...