ಅಪ್ರಾಪ್ತ ವಿದ್ಯಾರ್ಥಿನೀಯರಿಗೆ ಹಣದ ಆಮಿಷ ಒಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಾಲಾ ಮುಖ್ಯಾಧ್ಯಾಪಕ ಶ್ರೀಧರ್ ನಾಯ್ಕ ಅರೆಸ್ಟ್

Source: SOnews | By Staff Correspondent | Published on 18th November 2023, 9:30 PM | Coastal News | Incidents |

 

ಭಟ್ಕಳ: ತಾಲೂಕಿನ ಜಾಲಿಪಟ್ಟಣ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ನಾಯ್ಕ (57) ಎಂಬಾತನನ್ನು ನಗರಠಾಣೆ  ಪೊಲೀಸರು ಬಂಧಿಸಿರುವ ಘಟನೆ ಶನಿವಾರ ನಡೆದಿದೆ.

ಏಳನೇ ತರಗತಿಯ ವಿದ್ಯಾರ್ಥಿನಿಗೆ ಹಣದ ಆಮಿಷವೊಡ್ಡಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ವಿದ್ಯಾರ್ಥಿನೀಯರ ಖಾಸಗಿ ಅಂಗಗಳನ್ನು ಸ್ಪರ್ಷಿಸುತ್ತಿದ್ದ ಎಂದು ತಿಳಿದುಬಂದಿದೆ.  ವಿಷಯ ಬೆಳಕಿಗೆ ಬಂದ ತಕ್ಷಣ ಕುಟುಂಬಸ್ಥರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದು ಆತ ಪಾಲಕರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಗಿ ವರದಿಯಾಗಿದೆ.

ಸಂತೃಸ್ತ ವಿದ್ಯಾರ್ಥಿನೀಯ ಪಾಲಕರು ಕೂಡಲೇ ಭಟ್ಕಳ ನಗರ ಪೊಲೀಸ್ ಠಾಣೆಗೆ ಆಗಮಿಸಿ ಸಂಬಂಧಪಟ್ಟ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ ಇತ್ಯಾದಿಗಳ ನಂತರ ಟೌನ್ ಪಿಎಸ್ಐ ಶಿವಾನಂದ ಅವರು ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಕನನ್ನು ಬಂಧಿಸಿ ನೇರವಾಗಿ ಕಾರವಾರ ಪೋಕ್ಸೋ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.

ಆರೋಪಿ ಶ್ರೀಧರ್ ನಾಯ್ಕ ಕಳೆದ ಮೂರು ತಿಂಗಳ ಹಿಂದೆ ಕುಮಟಾ ತಾಲೂಕಿನಿಂದ ಹೆಚ್ಚುವರಿ ಶಿಕ್ಷಕನಾಗಿ ಭಟ್ಕಳ ತಾಲೂಕಿಗೆ ವರ್ಗಾವಣೆಯಾಗಿ ಬಂದಿದ್ದು ಶಾಲೆಯಲ್ಲಿ ಪಾಠ ಮಾಡುವುದನ್ನು ಬಿಟ್ಟು  ತನ್ನ ಕಾಮುಕತನವನ್ನು ಪ್ರದರ್ಶಿಸಿದ್ದಾನೆ. ಈತನ ವಿರುದ್ಧ ತಾಲೂಕಿನ ಶಿಕ್ಷಕ ಸಮುದಾಯ ವ್ಯಾಪಕ ಅಸಮಧಾನ ವ್ಯಕ್ತಪಡಿಸಿದ್ದು ಇಂತಹ ಶಿಕ್ಷಕರು ನಮ್ಮ ತಾಲೂಕಿಗೆ ಬೇಡ ಇಂತಹ ಕಾಮುಕಿಗೆ ತಕ್ಕ ಶಿಕ್ಷೆಯಾಗಬೇಕು, ಈತನನ್ನು ಇಲ್ಲಿಂದ ಕೂಡಲೆ ಕಳುಹಿಸುವ ವ್ಯವಸ್ಥೆಯಾಗಬೇಕೆಂದು ಮಾಧ್ಯಮಗಳೆದುರು ತಮ್ಮ ಆಕ್ರೋಶವನ್ನು  ವ್ಯಕ್ತಪಡಿಸಿದ್ದಾರೆ.

 

Read These Next

ಮುಂಡಗೋಡ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಕಾರವಾರ: ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ನಿಂದನಾತ್ಮಕವಾಗಿ ಅವಾಚ್ಯ, ಅಪಮಾನಕರ ಮತ್ತು ಏಕವಚನದಿಂದ ...

ಲೋಕಸಭೆಯಲ್ಲಿ ಅರಣ್ಯವಾಸಿಗಳ ಪರ ಧ್ವನಿ;  ರವೀಂದ್ರ ನಾಯ್ಕರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಕಾಗೋಡ ತಿಮ್ಮಪ್ಪ ಸೂಚನೆ

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಗೆ, ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಿ, ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ...

ಕದಂಬೋತ್ಸವದಲ್ಲಿ ಮೇಳೈಸಲಿದೆ ಸ್ಥಳೀಯ ಕಲಾ ವೈಭವ ; ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ :ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ...