ಮೋದಿ ಶಿಲಾನ್ಯಾಸ ಮಾಡಿದ್ದು ಮೊದಲ ದೇವಾಲಯವಲ್ಲ!

Source: sonews | By Sub Editor | Published on 11th February 2018, 11:56 PM | National News | Gulf News | Special Report | Don't Miss |

                                      ದುಬೈ ದೇವಸ್ಥಾನಕ್ಕೆ 60 ವರ್ಷಗಳ ಇತಿಹಾಸವಿದೆ 
*ರಷೀದ್ ವಿಟ್ಲ
ಪ್ರದಾನಿ ಮೋದಿಯವರು ದುಬೈ ಒಪೆರಾ ಹೌಸ್ ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಅಬುದಾಬಿಯಲ್ಲಿ ನಿರ್ಮಿಸಲಾಗುವ ಹಿಂದೂ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿದ್ದೇ ತಡ ಪ್ರಮುಖ ಮಾಧ್ಯಮಗಳಲ್ಲಿ ಪ್ರಥಮ ದೇವಸ್ಥಾನಕ್ಕೆ ದುಬೈಯಲ್ಲಿ ಮೋದಿ ಶಿಲಾನ್ಯಾಸ ಎಂಬ ತಲೆಬರಹ ಬರುತ್ತಿದೆ. ಅದುವೇ ದೊಡ್ಡ ಸುದ್ದಿಯಾಗಿದೆ. ಆದರೆ ಇದು ನಿಜಾನಾ? ದೇವಾಲಯ ಇದೇ ಪ್ರಥಮವಾ? ಈ ಹಿಂದೆ ಅಲ್ಲಿ ದೇವಸ್ಥಾನ ಇರಲಿಲ್ಲವೇ? ಮೊದಲಾದ ಪ್ರಶ್ನೆಗಳಿಗೆ ಅಲ್ಲಿನ ಇತಿಹಾಸವನ್ನೊಮ್ಮೆ ನೋಡಿ ಬರೋಣ.

ದುಬೈ, ಅಬುದಾಬಿ, ಶಾರ್ಜಾ, ಅಲ್ ಐನ್, ಫುಜೈರಾ ಪ್ರಾಂತ್ಯಗಳನ್ನೊಳಗೊಂಡ ಯುಎಇ ರಾಷ್ಟ್ರದಲ್ಲಿ ಹಿಂದೂ ಬಾಂಧವರ ದೇವಸ್ಥಾನವು 60 ವರ್ಷಗಳ ಹಿಂದೆಯೇ ನಿರ್ಮಾಣ ಕಂಡಿದೆ ಎಂದು ಇತಿಹಾಸ ಹೇಳುತ್ತದೆ. ಹಾಗಿರುವಾಗ ಮೋದಿ ಶಿಲಾನ್ಯಾಸ ನೆರವೇರಿಸಿರುವ ದೇವಾಲಯವೇ ಪ್ರಥಮ ದೇವಸ್ಥಾನ ಹೇಗಾಗುತ್ತದೆ ಎಂಬ ಸಂಶಯ ಮೂಡಿದೆ. ದೇವರಲ್ಲಿ ಸುಳ್ಳು ಹೇಳಬಾರದು. ಜನರನ್ನು ಸುಳ್ಳು ಹೇಳಿ ಮಂಗ ಮಾಡುವುದು ಬಿಡಿ ದೇವರ ಹೆಸರಲ್ಲಿ ಸ್ಥಾಪಿಸುವ ದೇವಸ್ಥಾನದ ವಿಚಾರದಲ್ಲೂ ಕೂಡಾ ಇದೇ ಸುಳ್ಳನ್ನು ಮುಂದುವರೆಸುವುದು ಎಷ್ಟು ಸರಿ?

1958 ರಲ್ಲಿ ಶೈಖ್ ರಾಶಿದ್ ಬಿನ್ ಸಯೀದ್ ಅಲ್ ಮಖ್ತೂಮ್ ಅವರು ಯುಎಇಯ ದೇರಾ ದುಬೈ ಹಾಗೂ ಬರ್ ದುಬೈ ಯನ್ನು ಸಂಧಿಸುವ ಪ್ರದೇಶವಾದ ದುಬೈ ಕ್ರೀಕ್ ನಲ್ಲಿ (ಬರ್ ದುಬೈ ಓಲ್ಡ್ ಸೂಕ್ ಪ್ರದೇಶ) ಶಿವ ಮತ್ತು ಕೃಷ್ಣ ದೇವಸ್ಥಾನ ನಿರ್ಮಾಣಕ್ಕೆ ಅಂಕಿತ ಹಾಕಿದ್ದರು. ನಾನು 2002 ರಲ್ಲಿ ಪ್ರಥಮ ಬಾರಿ ಯುಎಇ ಪ್ರವಾಸ ಕೈಗೊಂಡಾಗ ಅರಬ್ ಪ್ರಾಂತ್ಯದ ಈ ಐತಿಹಾಸಿಕ ದೇವಸ್ಥಾನವನ್ನು ಸಂದರ್ಶಿಸಿದ ನೆನಪು ಈಗಲೂ ಮಾಸಿಲ್ಲ.

ಈ ಹಿಂದೂ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳಲ್ಲದೆ ಹಿಂದೂ ಬಾಂಧವರ ಮದುವೆ ಕೈಂಕರ್ಯಗಳು ಕೂಡಾ ಶುದ್ಧ ಹಿಂದೂ ಸಂಪ್ರದಾಯದಂತೆ ಇಲ್ಲಿ ನಡೆಯುತ್ತದೆ. ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವಾದ ಯುಎಇಯ ಕಟ್ಟರ್ ಮುಸ್ಲಿಮರಾದ ಅರಬ್ಬಿಗಳು ಕೂಡಾ ತಮ್ಮ ನೆಲದಲ್ಲಿ ಭಾರತೀಯ ಹಿಂದೂಗಳನ್ನು ಆದರಪೂರ್ವಕವಾಗಿ ಗೌರವಿಸುತ್ತಾರೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.

2010 ರ ಗಣತಿ ಪ್ರಕಾರ ಯುಎಇ ರಾಷ್ಟ್ರದಲ್ಲಿ ಭಾರತದಿಂದ ಉದ್ಯೋಗ ನಿಮಿತ್ತ ತೆರಳಿದ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡ ಸುಮಾರು 4,90,000 ಹಿಂದೂಗಳಿದ್ದಾರೆ. 50,000 ಸಿಖ್ಖರೂ ಇದ್ದಾರೆ. ಈಗ ಆ ಸಂಖ್ಯೆ ಹೆಚ್ಚಾಗಿದೆ. ದುಬೈಯ ಜಬಲ್ ಅಲಿ ಯಲ್ಲಿ ಸಿಖ್ಖರ ಬೃಹತ್ ಗುರುದ್ವಾರ ಕೂಡಾ ತಲೆಎತ್ತಿದೆ. ಸೌಹಾರ್ದತೆಗೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಯುಎಇಯು ಮಲಯಾಳಿ ಸಿರಿಯನ್ ಕ್ರೈಸ್ತರಿಗೆ ಕ್ರೈಸ್ತ ಚರ್ಚ್ ಕೂಡಾ ನಿರ್ಮಿಸಿ ಕೊಟ್ಟಿದೆ.

ದುಬೈ-ಅಬುದಾಬಿ ಶೈಖ್ ಝಾಯೆದ್ ಹೈವೇ ಹಾದು ಹೋಗುವ ಅಲ್ ರಹಬ ಸಮೀಪ ಅಬುದಾಬಿಯ ಯುವರಾಜ ಹಾಗೂ ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೈಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಹಿಂದೂ ದೇವಾಲಯಕ್ಕಾಗಿ 2013 ಜುಲೈ ತಿಂಗಳಲ್ಲಿ 55,000 ಚದರಡಿ ಸ್ಥಳದಾನ ಮಾಡಿದ್ದರು. ಈ ಸ್ಥಳ ನೀಡಿ ಎರಡು ವರ್ಷದ ಬಳಿಕ 2015 ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಇಯ ಭೇಟಿ ಸಂದರ್ಭ ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಾಣದ ಬಗ್ಗೆ ಅಬುಧಾಬಿ ಸರಕಾರ ಘೋಷಣೆ ಮಾಡಿತ್ತು. ಮೋದಿ ಅಲ್ಲದೆ ಆ ಸ್ಥಾನದಲ್ಲಿ ಬೇರೆ ಒಬ್ಬರು ಪ್ರದಾನಿ ಇರುತ್ತಿದ್ದರೂ ಯುಎಇ ಸರಕಾರ ಇದೇ ಹಾದಿಯನ್ನು ಅನುಸರಿಸುತ್ತಿತ್ತು. ಯುಎಇ ಪ್ರಪಂಚದ ಎಲ್ಲ ವರ್ಗವನ್ನೂ ಆಕರ್ಷಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದರ ಒಂದು ಭಾಗವಾಗಿದೆ ಈ ದೇವಾಲಯ. ಇಲ್ಲಿ ಹಿಂದೂಗಳಿಗಲ್ಲದೆ ಎಲ್ಲರಿಗೂ ಮುಕ್ತ ಅವಕಾಶವಿದೆ.

ಯುಎಇ ರಾಷ್ಟ್ರಕ್ಕೆ ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭೇಟಿ ನೀಡಿದ್ದರು. ಆ ನಂತರದ ಪ್ರಧಾನಿಗಳು ಯಾರೂ ಸಂದರ್ಶಿಸಿರಲಿಲ್ಲ. 34 ವರ್ಷಗಳ ಸುದೀರ್ಘ ಅವಧಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು 2015 ರಲ್ಲಿ ಭೇಟಿ ನೀಡಿದ್ದರು.</p>

ಇದೀಗ ಮೋದಿ 2 ನೇ ಬಾರಿಗೆ ಭೇಟಿ ನೀಡಿದ್ದಾರೆ. ಯುಎಇ ಸರಕಾರದಿಂದ ಅದ್ದೂರಿಯ ಸ್ವಾಗತ ದೊರಕಿದೆ. ಈ ಐತಿಹಾಸಿಕ ಭೇಟಿ ಯುಎಇ ಮತ್ತು ಭಾರತ ದೇಶದ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಹಾಗೂ ಯುಎಇಯ ಸೌಹಾರ್ದ, ಸಾಮರಸ್ಯದ ಸಂದೇಶವನ್ನು ಭಾರತದಲ್ಲೂ ಬಿತ್ತಲು ಸಹಕಾರಿಯಾದರೆ ಪ್ರದಾನಿ ಸಂದರ್ಶನ ಸಾರ್ಥಕ್ಯ ಪಡೆಯಬಹುದು. ಇಸ್ಲಾಮಿಕ್ ರಾಷ್ಟ್ರವಾದ ಯುಎಇಯ ಕಾರ್ಯವೈಖರಿ, ಐಕ್ಯತೆ ಸರ್ವಧರ್ಮೀಯರ ದೇಶವಾದ ಭಾರತಕ್ಕೆ ಉತ್ತಮ ಸಂದೇಶ ನೀಡಿದೆ.

ಕೃಪೆ:ವಾರ್ತಾಭಾರತಿ

Read These Next

ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್

ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ...

ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ, 62ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ

2017ನೇ ಸಾಲಿನ ಪ್ರತಿಷ್ಠಿತ "ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ" ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರದಾನ

ಅಲ್ ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ, ಜುಬೈಲ್ ಘಟಕದಿಂದ ಉಚಿತ ವೈದ್ಯಕೀಯ ಶಿಬಿರ

ಅಪಘಾತ, ಜೈಲು ಶಿಕ್ಷೆ ಪ್ರಕರಣ, ಕಾರ್ಮಿಕ ಸಮಸ್ಯೆ, ಸಾವು ಪ್ರಕರಣ ಮತ್ತು ರಕ್ತದಾನ ಸೇರಿದಂತೆ ಅನಿವಾಸಿ ಭಾರತೀಯರು ಎದುರಿಸುವ ...

ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ!

ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ...

ರಾಜ್ಯದ ಮತದಾರರೇ ಎಚ್ಚರ!: ಅಲ್ಪಸಂಖ್ಯಾತರ ಮತಗಳನ್ನು ಈ ರೀತಿ ಒಡೆಯುತ್ತಿದೆ ‘ಮೋಸದ ಗುಂಪು’

ರಾಜ್ಯವು ವಿಧಾನಸಭಾ ಚುನಾವಣೆಯನ್ನು ಎದುರು ನೋಡುತ್ತಿದ್ದು, ರಾಜ್ಯದ ಜನರು ತಮ್ಮ ಹಕ್ಕು ಚಲಾಯಿಸಲು ಎರಡೇ ದಿನಗಳು ಬಾಕಿಯುಳಿದಿವೆ. ...

ಕರ್ನಾಟಕದಲ್ಲಿ ಕುಮಾರಪರ್ವ ಆರಂಭ; ೨೫ನೇ ಮುಖ್ಯಮಂತ್ರಿಯಾಗಿ ಎಚ್ಡಿಕೆ; ಉ ಮು.ಮಂ ಡಾ.ಜಿ.ಪರಮೇಶ್ವರ ಪ್ರಮಾಣವಚನ

ಬೆಂಗಳೂರು:ಕಾಂಗ್ರೇಸ್ ಮತ್ತು ಜೆ.ಡಿಎಸ್ ಮೈತ್ರಿಕೋಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಎಚ್.ಡಿ.ಕುಮಾರ್ ಸ್ವಾಮಿ ರಾಜ್ಯದ ೨೫ನೇ ...

ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಕೆಲಸ ಮಾಡುವೆ-ನೂತನ ಶಾಸಕ ಸುನಿಲ್ ನಾಯ್ಕ

ಭಟ್ಕಳ: ಬಿ.ಜೆ.ಪಿ. ಮಂಡಳದ ವತಿಯಿಂದ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಂಡಳದ ...