ಉಮ್ರಾಕ್ಕೆ ತೆರಳಿದ್ದ ಮುಂಡಗೋಡದ ಮೂವರು ಮದೀನಾ ಅಪಘಾತದಲ್ಲಿ ಮೃತ್ಯು

Source: S O News | By I.G. Bhatkali | Published on 8th April 2024, 2:14 AM | Coastal News | Gulf News |

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಸೌದಿ ಅರೇಬಿಯದ ಮದೀನಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.

ಮೃತಪಟ್ಟವರನ್ನು ಮುಂಡಗೋಡ ಪಟ್ಟಣದ ರೋಣ ಮೆಡಿಕಲ್‌ನ ಮಾಲಕ ಫಯಾಝ್ ರೋಣ (45), ಪತ್ನಿ ಅಫ್ರೀನ್ (42) ಹಾಗೂ ಸಹೋದರನ ಮಗ ಐವಾನ್ (16) ಎಂದು ಗುರುತಿಸಲಾಗಿದೆ.

ಫಯಾಜ್ ಅಹ್ಮದ ಪಟ್ಟಣದ ಯಲ್ಲಾಪುರ ರಸ್ತೆಯ ನಿವಾಸಿ. ಅತ್ಯಂತ ಸರಳ ಸಹೃದಯಿ, ಗರ್ವವನ್ನು ತಿಳಿಯದ ಸಮಾಜಕ್ಕೆ ಬೇಕಾಗುವಂತ ವ್ಯಕ್ತಿಯಾಗಿದ್ದರು. ಮೃತ ಫಯಾಜ್ ತನ್ನ ಕುಟುಂಬದೊಂದಿಗೆ ಮಾರ್ಚ್ 26 ರಂದು ದಮಾಮನಲ್ಲಿರುವ ತನ್ನ ಅಣ್ಣ ತಮ್ಮಿಂದರ ಜತೆ ರಮ್ಜಾನ್ ಹಬ್ಬ ಆಚರಣೆ  ಮಾಡಿಕೊಂಡು ನಂತರ ಉಮ್ರಾ ಯಾತ್ರೆಯನ್ನು ಪೂರೈಸಲು ಮುಂಡಗೋಡದಿಂದ ದಮಾಮಗೆ ತೆರಳಿದ್ದರು. ಶನಿವಾರ ಫಯಾಜ್ ರೋಣ ತನ್ನ ಧರ್ಮಪತ್ನಿ ಆಫ್ರೀನ್, ತನ್ನ ಎರಡು ಗಂಡು ಮಕ್ಕಳು, ಅಣ್ಣ ಇಮ್ತಿಯಾಜ್, ಇಮ್ತಿಯಾಜ ರ ಧರ್ಮಪತ್ನಿ, ಇಮ್ತಿಯಾಜರ ಹಿರಿಯ ಮಗ ಐವಾನ ಹಾಗೂ ಅವರ ಮೂರು ಮಕ್ಕಳು ವಾಹನದಲ್ಲಿ  ಮದಿನಾಕ್ಕೆ ತೆರಳುತ್ತಿದ್ದಾಗ ಮದಿನಾ ಕೇವಲ 70 ಕಿಮಿ ದೂರವಿದ್ದಾಗ ವಾಹನದ ಟ್ಯಾಯರ್ ಸ್ಪೋಟ್‍ಗೊಂಡ ಕಾರಣದಿಂದ ಸ್ಥಳದಲ್ಲಿಯೇ ಫಯಾಜ, ಆಫ್ರೀನ್ ಹಾಗೂ ಐವಾನ್ ಮೃತಪಟ್ಟಿದ್ದಾರೆ.

ವಾಹನ ಚಾಲನೆ ಮಾಡುತ್ತಿದ್ದ ಇಮ್ತಿಯಾಜ್ ಹಾಗೂ ಇಮ್ತಿಯಾಜರ ಧರ್ಮಪತ್ನಿ ಹಾಗೂ ನಾಲ್ಕು ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮೃತರ ಅಂತಿಮಕ್ರಿಯೆಯನ್ನು ಮದೀನಾದಲ್ಲಿ ನೆರವೇರಿಸಲಾಗುವುದು ಎಂದು ಮೃತ ಫಯಾಝ್ರ ಸಹೋದರ ಇಜಾಝ್ ಅಹ್ಮದ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Tragic Saudi Arabia road accident claims three lives of Karnataka family from Mundgod

 

Read These Next

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ...