ದಿನಂಪ್ರತಿ ೨೦ಯುನಿಟ್ ಉತ್ಪಾದಿಸುತ್ತಿರುವ ಸೋಲಾರ್ ವಿದ್ಯುತ್ ಘಟಕ

Source: S O News service | By sub editor | Published on 18th February 2017, 6:42 PM | Coastal News | State News | Special Report | Technology | Don't Miss |

ಇನ್ನೇನು ಬೇಸಿಗೆ ಬಂದೇ ಬಿಟ್ಟಿತು. ಎಲ್ಲೆಡೆ ಹಹಾಕಾರ, ವಿದ್ಯುತ್ ಕಣ್ಣಾಮುಚ್ಚಾಲೆ, ಹೆಸ್ಕಾಂ ಹಿಡಿ ಶಾಪ ಹಾಕುವ ಮಂದಿ, ಪರೀಕ್ಷಾ ಸಮಯ ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ, ಪದೇ ಪದೇ ಪವರ್ ಕಟ್. ಇವೆಲ್ಲದಕ್ಕೂ ಪರಿಹಾರ ಎಂಬಂತೆ ಇಲ್ಲಿನ ವೈದ್ಯರೊಬ್ಬರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಶಕ್ತಿಯಿಂದ ದಿನಪ್ರಂತಿ ೨೦ ಯುನಿಟ್ ನೈಸರ್ಗಿಕ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಪವರ್ ಕಟ್ ಸಮಸ್ಯೆಗೆ ತಮ್ಮ ಮನೆಯ ಮೇಲ್ಛಾವಣಿ ಮೇಲೆ ಪರಿಹಾರ ಕಂಡುಕೊಂಡಿದ್ದಾರೆ ಅಷ್ಟೆ ಅಲ್ಲದೆ ಹೆಸ್ಕಾಂ ಗೂ ವಿದ್ಯುತ್ ನೀಡುವುದರ ಮೂಲಕ ಇಲಾಖೆಯಿಂದಲೂ ಪ್ರತಿ ತಿಂಗಳೂ ಆದಾಯವನ್ನು ಪಡೆಯುತ್ತಿದ್ದಾರೆ. 

ಒಂದೆಡೆ ಬಿಸಿಲಿನ ತಾಪ. ಇನ್ನೊಂದೆಡೆ ವಿದ್ಯುತ್ ಅಭಾವ. ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಇಳಿಕೆ ವಿದ್ಯುತ್ ಉತ್ಪಾದನೆಗೆ ಸಂಚಕಾರ. ಸರ್ಕಾರ ಹಲವಾರು ಪರ್ಯಾಯ ಯೋಜನೆಗಳನ್ನು ರೂಪಿಸಿದರು ಜ್ಞಾನದ ಕೊರತೆಯಿಂದ ಅನುಷ್ಟಾನಕ್ಕೆ ಬರುತ್ತಿಲ್ಲ.

ವೃತ್ತಿಯಲ್ಲಿ ವೈದ್ಯರಾಗಿರುವ ಭಟ್ಕಳ ತಾಲೂಕಿನ ಮಾರುತಿ ನಗರದ ನಿವಾಸಿ ಗಣೇಶ ಸುಬ್ರಾಯ ಪ್ರಭು ವಿದ್ಯುತ್ ಅಭಾವ ನಿಗಿಸಲು ಪರ್ಯಾಯ ಯೋಜನೆ ಅನುಸರಿದ್ದಾರೆ. ಈ ಮೂಲಕ ಪ್ರತಿದಿನ ೨೦ಯುನಿಟ್ ವಿದ್ಯುತ್‌ನ್ನು ಉತ್ಪಾದಿಸಿ ಇಲಾಖೆಗೆ ನೀಡುವ ಹೊಸ ಪ್ರಯತ್ನ ಮಾಡಿದ್ದಾರೆ. ಹೇರಳವಾಗಿ ಸಿಗುವ ನೈಸರ್ಗಿಕವಾದ ಸೌರಶಕ್ತಿಯ ಬಳಸಿ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಮನೆಯ ಮಹಡಿಯ ಅನುಪಯುಕ್ತ ಸ್ಥಳವನ್ನು ಬಳಸಿ ಪ್ಲಾಂಟ ತಯಾರಿಸಿ ವಿದ್ಯುತ್ ಉತ್ಪಾದನೆ ಆರಂಬಿಸಿದ್ದಾರೆ. ಯಶಸ್ವಿಯಾಗಿ ಪ್ರತಿದಿನ ಸರಾಸರಿ ೨೦ಯೂನಿಟ್ ಉತ್ಪಾದನೆ  ಮಾಡಿ ಹೆಸ್ಕಾಂಗೆ ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸೇವೆ ಸಲ್ಲಿಸುವದರ ಜೊತೆಗೆ ವಿದ್ಯುತ್ ಇಲಾಖೆಯಿಂದಲೂ ಪ್ರತಿತಿಂಗಳು ವರಮಾನ ಪಡೆಯುತ್ತಿದ್ದಾರೆ.

ಹೆಚ್ಚುತ್ತಿರುವ ವಿದ್ಯುತ್ ಅಭಾವ, ಮಿತಿಮೀರಿದ ಬಳಕೆ : ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು, ಉತ್ಪಾದನೆ ಕುಂಠಿತವಾಗುತ್ತಿದೆ. ಸೌರಶಕ್ತಿಯ ಬಳಸಿ ವಿದ್ಯುತ್ ಉತ್ಪಾದನೆಗೆ ಅವಕಾಶವಿದ್ದರೂ ಮಾಹಿತಿಕೊರತೆಯಿಂದ ಗುರಿತಲುಪುತ್ತಿಲ್ಲ. ಗೇಟ್ ತೆರೆಯುವದರಿಂದ ಹಿಡಿದು ಪ್ರತಿಯೊಂದಕ್ಕೂ ವಿದ್ಯುತ್ ಅವಲಂಬನೆ ಹೆಚ್ಚಾಗುತ್ತಿರುವದು ವಿದ್ಯುತ್ ಇಲಾಖೆಯ ಕಳವಳಕ್ಕೆ ಕಾರಣವಾಗಿದೆ. ೨೦೧೪ರಲ್ಲಿ ತಾಲೂಕಿನಲ್ಲಿ ದಿನವೊಂದರಲ್ಲಿ ೧೨ರಿಂದ ೧೩ ಮೇಘಾವ್ಯಾಟ್ ವಿದ್ಯುತ್ ಬಳಕೆಯಾದರೆ ೨೦೧೭ರಲ್ಲಿ ೧೬ರಿಂದ ೧೭ಮೆ.ವ್ಯಾಟಗೆ ಹೆಚ್ಚಿದೆ. ಬಳಕೆಯ ಪ್ರಮಾಣದಲ್ಲಿ ಉತ್ಪಾದನೆಯಾಗದೆ ಇರುವದು ವಿದ್ಯುತ್ ಅಭಾವ ಹೆಚ್ಚುತ್ತಿದ್ದು ಸೌರಶಕ್ತಿಯ ಬಳಸಿ ವಿದ್ಯುತ್ ಉತ್ಪಾದನೆಯಾದರೆ ಅಭಾವವನ್ನು ತಕ್ಕಮಟ್ಟಿಗಾದರೂ ನಿಗಿಸಬಹುದು ಎನ್ನುತ್ತದೆ ಹೆಸ್ಕಾಂ. 

ಸರ್ಕಾರದಿಂದ ಸಬ್ಸಿಡಿ ಪಡೆಯದೆ ವಿದ್ಯುತ್ ಉತ್ಪಾದಿಸಿ ಹೆಸ್ಕಾಂಗೆ ನೀಡಿದರೆ ಒಂದು ಯುನಿಟ್‌ಗೆ  ಇಲಾಖೆಯಿಂದ ೭ರೂ ೮ಪೈಸೆ ಪಡೆಯಬಹುದು. ಸರ್ಕಾರದಿಂದ ರಿಯಾಯಿತಿ ಪಡೆದು ಪ್ಲಾಂಟ ಅಳವಡಿಸಿದರೆ ಇಲಾಖೆ ನೀಡುವ ದರಗಳಲ್ಲಿ ಬದಲಾವಣೆಯಾಗುತ್ತದೆ. ಉತ್ಪಾದಿಸಿದ ವಿದ್ಯುತ್ ಇಲಾಖೆ ನೇರವಾಗಿ ಖರೀದಿಸಿ ಉತ್ಪಾದಕರಿಗೆ ಹಣಪಾವತಿಸುತ್ತದೆ.  ಇಂದು ಮನೆ ಬಳಕೆಗೆ ಉತ್ಪಾದಿಸುವ ವಿದ್ಯುತ್‌ಗೆ ೩.ರೂಗಳಂತೆ ಪಾವತಿಸಿದರೆ ಇಲಾಖೆ ಖರಿದಿಸುವ ವಿದ್ಯುತ್ಗೆ ೭ರೂ ೮ಪೈಸೆ ನೀಡುತಿರುವದು ಲಾಭದಾಯಕ. ಪ್ರಸ್ತುತ ವೈದ್ಯ ಗಣೇಶ ಪ್ರಭು ತಮ್ಮ ಮನೆಯ ಮಹಡಿಯಲ್ಲಿ ೧೮ಸೆಲ್ ಅಳವಡಿಸಿದ್ದಾರೆ. ಒಂದು ಸೆಲ್‌ನಲ್ಲಿ ೨೬೭ವ್ಯಾಟ್ ಉತ್ಪಾದನೆಯಾಗುತ್ತದೆ. 

ದಿನನವೊಂದರಲ್ಲಿ ೫೦೦೦ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಬಿಸಿಲಿನ ಪ್ರಮಾಣದಲ್ಲಿ ಈ ಪ್ರಮಾಣ ಸ್ವಲ್ಪ ಹೆಚ್ಚುಕಡಿಮೆಯಾದರೂ ಸರಾಸರಿ ಉತ್ಪಾದನೆಗೆ ಕೊರತೆ ಇಲ್ಲ. ಇದಕ್ಕೆ ಮನೆಯ ಮಾಳಿಗೆಯ ೨೦೦ ಸ್ಕ್ಯಾರ್ ಪೀಟ್ ಜಾಗವಿದ್ದರೆ ಸಾಕು. ಸೌರಶಕ್ತಿ ಅಳವಡಿಸಿದ ಸಂಸ್ಥೆ ೨೫ವರ್ಷಗಳ ವಿರ್ವಹಣೆ ನೀಡುವದರಿಂದ ಸಮಸ್ಯೆ ಇಲ್ಲ.

ಈ ಕುರಿತು ಭಟ್ಕಳದ ಹೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ್ ಕೆ.ಜಿ “ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಇದೊಂದು ಸರಳ, ಸುರಕ್ಷಿತ, ಸುಲಭ ವಿಧಾನವಾಗಿದ್ದು ತಮ್ಮ ಮನೆಯ ಮಹಡಿಯಲ್ಲೆ ಉತ್ಪಾದಿಸಬಹುದು. ಇದರಿಂದ ಹಣಗಳಿಕೆಯೊಂದಿಗೆ ಸಾಮಾಜಿಕ ಸೇವೆ ಮಾಡಿದ ತೃಪ್ತಿಯೂ ದೊರಕುತ್ತದೆ. ಸಲಕರಣೆ ಕೊಳ್ಳಲು ಬ್ಯಾಂಕಗಳು ಸಹಾಯ ಮಾಡುತ್ತಿದ್ದು ಸೌರಶಕ್ತಿಯ ಸಂಸ್ಥೆಯವರು ದೀರ್ಘಕಾಲದ ನಿರ್ವಹಣೆಯು ನೀಡುತ್ತಿದೆ. ಈ ಕುರಿತು ಹೆಚ್ಚನ ಮಾಹಿತಿ ಬೇಕಾದಲ್ಲಿ ತಮ್ಮ ಕಚೇರಿಯನ್ನು ಸಂಪರ್ಕಿಸಬಹುದು” ಎಂದು ಹೇಳುತ್ತಾರೆ.

 

 


 

Read These Next

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಕೊಳವೆಬಾವಿ ಲೋಕಾರ್ಪಣೆ ನೀರಿನ ಸದ್ಬಳಕೆಗೆ ಶಾಸಕ ಕೆ.ಶ್ರೀನಿವಾಸಗೌಡರ ಕರೆ 

ಕೋಲಾರ: ಕೋಲಾರ ನಗರದ 26ನೇ ವಾರ್ಡಿಗೆ ಸೇರಿದ ಸಂತೇ ಮೈದಾನ ಶಿವಗಿರಿ ನಗರದಲ್ಲಿ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ನಿರ್ಮಿಸಿರುವ ...

ಉಪಚುನಾವಣೆ; ಸಮಬಲದಲ್ಲಿ ಸಮ್ಮಿಶ್ರ ಸರ್ಕಾರ.ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಬಿಜೆಪಿ

ಬೆಂಗಳೂರು: ನ.೩ ರಂದು ನಡೆದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಪೂರ್ಣಗೊಂಡಿದ್ದು ಆಡಳಿತರೂಢ ...

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...