ಎನ್.ಆರ್.ಸಿ ಎನ್.ಪಿ.ಆರ್ ಹಾಗೂ ಸಿಎಎ ವಿರುದ್ಧ ದೇಶದ ಶೇ50ಕ್ಕೂ ಹೆಚ್ಚು ಜನ ಬೀದಿಗಿಳಿದಿದ್ದಾರೆ-ಪ್ರತಿಭಾ ಉಭಾಲೆ

Source: sonews | By Staff Correspondent | Published on 6th February 2020, 8:27 PM | Coastal News | Special Report | Don't Miss |

ಭಟ್ಕಳ: ಪ್ರಸ್ತಾವಿತ ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.50%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ಪ್ರತಿಭಟನೆ ಹೋರಾಟ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಹೋರಾಟಗಳು ಇನ್ನಷ್ಟು ಪ್ರಭಲವಾಗಲಿವೆ ಎಂದು ಮಹಾರಾಷ್ಟ್ರದ ಬಹುಜನ ಕ್ರಾಂತಿ ಮೋರ್ಚಾ ಮಹಿಳಾ ಸಂಯೋಜಕಿ ಪ್ರತಿಭಾ ಉಭಾಲೆ ಹೇಳಿದರು. 

ಅವರು ಗುರುವಾರ ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಾಲಾ ಮೈದಾನದಲ್ಲಿ ನಡೆದ ವಿ ದಿ ಪೀಪಲ್ ಆಫ್ ಇಂಡಿಯಾ ದ ಭಾರತದ ಸಂವಿಧಾನ ರಕ್ಷಣೆ ಮಹಿಳಾ ಜನಾಂದೋಲನ ಸಮಾವೇಶದಲ್ಲಿ ಕಕ್ಕಿರಿದು ಸೇರಿದ ಮಹೀಳೆಯರನ್ನುದ್ದೇಶಿಸಿ ಮಾತನಾಡಿದರು. 

ಸಿಎಎ ಯನ್ನು ಸಮರ್ಥನೆ ಮಾಡಿಕೊಳ್ಳಲು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ಸಿಕ್ಕಿದ್ದು ದೇಶದ ಸೌಹಾರ್ಧತೆಯನ್ನು ಕೆಡಿಸುವುದರ ಮೂಲಕ ಅರಾಜಕತೆಯನ್ನು ಸೃಷ್ಟಿಸಲು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು,  ಈ ಕರಾಳ ಕಾನೂನಿಂದಾಗಿ ದೇಶದ ಅಲ್ಪಸಂಖ್ಯಾತರು, ಎಸ್ಸಿ,ಎಸ್ಟಿ,ಒಬಿಸಿ, ಆದಿವಾಸಿ ಸಮುದಾಯ, ಅನುಸೂಚಿತ ಪಂಗಡದವರು ಒಂದಾಗಲು ಅವಕಾಶ ಸಿಕ್ಕಂತಾಗಿದೆ ಎಂದ ಅವರು ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಯನ್ನು ಅರ್ಪಿಸಿದರು. ದೇಶದಲ್ಲಿ ವಿರೋಧ ಪಕ್ಷ ಸತ್ತುಹೋಗಿದ್ದು ವಿರೋಧ ಪಕ್ಷ ಮಾಡುವಂತಹ ಕಾರ್ಯವನ್ನು ಮಹಿಳೆಯರು ಮಾಡುತ್ತಿದ್ದಾರೆ. ಮಹಿಳೆಯರ ಹೋರಾಟಗಳಿಗೆ ಹೆದರಿಕೊಂಡ ಅಮಿತ್ ಶಾ ಸಂಸತ್ತಿನಲ್ಲಿ ಎನ್.ಆರ್.ಸಿ ಸಧ್ಯಕ್ಕೆ ಇಲ್ಲ ಎನ್ನುವ ಮಾತನ್ನು ಆಡಿದ್ದಾರೆ ನಮ್ಮ ಹೋರಾಟಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಹೋರಾಟಗಳು ಇನ್ನಷ್ಟು ಪ್ರಭಲವಾಗಲಿವೆ ಎಂದರು. ಭಾರತ ದೇಶವನ್ನು ಹಿಂದೂಸ್ಥಾನ ಎಂದು ಕರೆಯುವುದು ಸರಿಯಲ್ಲ. ಇದು ಹಿಂದೂಸ್ಥಾನವಲ್ಲ ಇದು ಭಾರತ ಅಥವಾ ಇಂಡಿಯಾ ಆಗಿದೆ. ನೀವು ಹಿಂದೂಸ್ಥಾನ ಎಂದು ಕರೆಯುವುದರ ಮೂಲಕ ಆರ್.ಎಸ್.ಎಸ್ ನ ಅಜೆಂಡಾಗಳಿಗೆ ನೀರೆರೆಯುತ್ತಿದ್ದೀರಿ ಇಂದಿನಿಂದ ಯಾರೂ ಕೂಡ ಹಿಂದೂಸ್ಥಾನ ಎನ್ನದೆ ಭಾರತವೆನ್ನಬೇಕು ಎಂದು ಕರೆ ನೀಡಿದರು. 

ಮುಸ್ಲಿಮ್ ಪರ್ಸನಲ್ ಲಾ ಬೋರ್ಡ ಸದಸ್ಯ ಆಸೀಫಾ ನಿಸಾರ್ ಬೆಂಗಳುರು ಮಾತನಾಡಿ ಜಗತ್ತಿನಲ್ಲೆಡೆ ಇಸ್ಲಾಮೋಫೋಬಿಯ ಸೃಷ್ಟಿಸಿ ಜನರನ್ನು ಹೆದರಿಸಲಾಗುತ್ತಿದೆ.  ಭಾರತೀಯರನ್ನು ಹಿಂದೂ-ಮುಸ್ಲಿ ಎಂದು ವಿಂಗಡಣೆ ಮಾಡುವುದರ ಮೂಲಕ ವಿಭಜಿಸಲಾಗುತ್ತಿದೆ ಎಂದ ಅವರು ನಾವು ಯಾರು ಸಿಎಎ ಮತ್ತು ಎನ್.ಆರ್.ಸಿ ಎನ್.ಪಿ.ಆರ್ ಗಳ ವಿರುದ್ಧ ಹೋರಾಡುತ್ತಾರೋ ಅವರೊಂದಿಗೆ ನಾವಿದ್ದೇವೆ ಎಂದರು. ಶಾಹೀನ್ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಹಾಗೂ ಮಹಿಳಾ ಪಾಲಕರೊಬ್ಬರ ವಿರುದ್ಧ ಸುಳ್ಳು ಮೊಕದ್ದೆ ದಾಖಲಿಸಿದ್ದ ನಾಚಿಕೆಗೇಡು ಎಂದ ಅವರು ಕಲ್ಲಡ್ಕ ಪ್ರಭಾಕರ್ ಭಟ್ಟರ ಶಾಲೆಯ ವಿರುದ್ಧವೇಕೆ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು. 

ಮಂಗಳೂರಿನ ಸುಮಯ್ಯ ಹಮಿದುಲ್ಲಾ ಮಾತನಾಡಿ, ನಾನು ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂಬ ಪಣವನ್ನು ಇಲ್ಲಿನ ಪ್ರತಿಯೊಬ್ಬ ಮಹೀಳೆ ಮಾಡಬೇಕು, ನಮಗೆ ಅನ್ನ, ಆಹಾರ, ಜೀವದ ಭಯವಿಲ್ಲ ಅದು ನಮಗೆ ನಮ್ಮ ಪ್ರಭು ದಯಪಾಲಿಸುತ್ತಾನೆ ಅನ್ಯಾಯದ ವಿರುದ್ಧ ಮಹಿಳೆ ತನ್ನ ಶಕ್ತಿ ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದರು. 

ಸಾಜೀದ್ ಅಂಜುಮ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ರುಫೇದಾ ಅಝೀಝುರ್ರಹ್ಮಾನ್ ರುಕ್ನುದ್ದೀನ್ ಅತಿಥಿಗಳನ್ನು ಪರಿಚಯಿಸಿದರು. ಬರೀರ ಮೊಹತೆಶಮ್ ಕಾರ್ಯಕ್ರಮ ನಿರೂಪಿಸಿದರು. ನಬೀರಾ ಹಬೀಬ್ ಮೊಹತೆಶಮ್ ಧನ್ಯವಾದ ಅರ್ಪಿಸಿದರು. ಝೊಹರಾ ಬತೂಲ್, ಸಬಿಹಾ ಫಾರೂಖ್ ಕೌಡಾ, ಫರ್ಹತ್ ಕಾಝೀಯಾ, ನುಸ್ರತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಎಲ್ಲರೂ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...