ಕಾರು ಮತ್ತು ಬಸ್ ನಡುವೆ ಅಪಘಾತ; ಮೂವರು ಯುವಕರ ಸಾವು; ಓರ್ವ ಗಂಭೀರ

Source: sonews | By Staff Correspondent | Published on 25th August 2019, 11:49 PM | Coastal News | Don't Miss |

ಸಿರಸಿ: ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಓಮ್ನಿ ಕಾರು ನಡುವೆ ಭಾನುವಾರ ಸಂಜೆ ನಡೆದ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿದ್ದು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸಿರ್ಸಿ ತಾಲ್ಲೂಕಿನ ಗಡಿಹಳ್ಳಿ ಕ್ರಾಸ್‍ನಲ್ಲಿ ವರದಿಯಾಗಿದೆ.

ಮೃತರನ್ನು ತನ್ವೀರ್ (17), ಮುಸ್ತಫಾ (19) ಮತ್ತು ಫಿರೋಜ್ ಖಾನ್ (19) ಎಂದು ಗುರುತಿಸಲಾಗಿದೆ. ಗಾಯಗೊಂಡವರು ಮಕ್ಬೂಲ್ (19) ಎಂದು ತಿಳಿದು ಬಂದಿದೆ. ಇವರೆಲ್ಲರೂ ಸಿರ್ಸಿಯ ಕಸ್ತೂರ್ಬಾ ನಗರದ ನಿವಾಸಿಗಳು ಎಂದು ಹೇಳಲಾಗುತ್ತಿದೆ.

ತನ್ವೀರ್ ಮತ್ತು ಮುಸ್ತಫಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರ ಗಾಯಗೊಂಡ ಫಿರೋಜ್ ಅವರನ್ನು ಆಂಬ್ಯುಲೆನ್ಸ್‍ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್, ಅವರು ದಾರಿಯಲ್ಲಿ ಕೊನೆಯುಸಿಳೆದಿದ್ದಾರೆ. ಗಾಯಗೊಂಡ ಮತ್ತೊಬ್ಬ ಮಕ್ಬೂಲ್ ಎನ್ನವುವವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಬನವಾಸಿಯಿಂದ ಕಾರು ಸಿರ್ಸಿ ಕಡೆಗೆ ಹೋಗುತ್ತಿತ್ತು ಎನ್ನಲಾಗಿದ್ದು ವಿರುದ್ಧ ದಿಕ್ಕಿನಿಂದ ಬಂದ ಬಸ್ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 

ಘಟನಾ ಸ್ಥಳಕ್ಕೆ ಸಿರ್ಸಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಧಾವಿಸಿದ್ದ ಅಗತ್ಯ ತನಿಖೆ ನಡೆಸಿದರು. ಈ ನಿಟ್ಟಿನಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
 

Read These Next