ರಸ್ತೆ ಅಪಘಾತ; ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

Source: sonews | By Staff Correspondent | Published on 5th March 2020, 11:20 PM | State News | Incidents |

ಶ್ರೀನಿವಾಸಪುರ: ತಾಲ್ಲೂಕಿನ ಶ್ರೀನಿವಾಸಪುರ ಹೊಗಳಗೆರೆ ರಸ್ತೆಯ ಸಮೀಪ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ತೀತ್ರವಾಗಿ ಗಾಯಗೊಂಡಿದ್ದಾನೆ.

ಮೃತರನ್ನು ತಾಲ್ಲೂಕಿನ ಗಾಂಧಿನಗರ ಗ್ರಾಮದ ಯಶ್ವಂತ್‌ (20), ದೊಡ್ಡವೆಂಕಟೇಶಪ್ಪ (50), ಯಲ್ಲಪ್ಪ (18) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ  ಗಾಯಹೊಂಡಿರುವ ಮೋನಹ್‌ ಕುಮಾರ್‌ (23) ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಈ ನಾಲ್ವರು ಗುರುವಾರ ಬೆಳಿಗ್ಗೆ ಸುಮಾರು 5 ಗಂಟೆಯಲ್ಲಿ ಕಾರ್ಯನಿಮಿತ್ತ ಕೋಲಾರಕ್ಕೆ ಪಲ್ಸರ್‌ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಹೆಚ್ಚುವರಿ ವರಿಷ್ಠಾಧಿಕಾರಿ ಜಾಹ್ನವಿ, ಡಿವೈಎಸ್‌ಪಿ ನಾರಾಯಣಸ್ವಾಮಿ, ಪೊಲೀಸ್ ಸರ್ಕಲ್‌ ಇನ್ಸ್‌ಪೆಕ್ಟರ್‌ ಎನ್‌.ಕೆ.ರಾಘವೇಂದ್ರ ಪ್ರಕಾಶ್, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ವಿಠಲ್‌ ತಳವಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಹೆಲಿಕಾಪ್ಟರ್ ಜಾಲಿರೈಡ್

ಶ್ರೀನಿವಾಸಪುರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಹೆಲಿಕಾಪ್ಟರ್ ಜಾಲಿರೈಡ್ ಈಡಿಎಸ್ ಅವಿಯೇಶನ್ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...