ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು; ನಗದು ಹಣ ದೋಚಿ ಪರಾರಿ

Source: sonews | By Staff Correspondent | Published on 17th October 2019, 5:44 PM | Coastal News | Incidents | Don't Miss |

ಭಟ್ಕಳ: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ 15ಸಾವಿರು ರೂ ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಪುರವರ್ಗ ಪಂಚಾಯತ್ ವ್ಯಾಪ್ತಿಯ ಮುಗುಳಿ ಹೊಂಡಾ ಚರ್ಚ್ ಬಳಿ ನಡೆದಿದೆ.

ಮುಹಮ್ಮದ್ ನಾಸಿರ್ ಬ್ಯಾರಿ ಎಂಬುವವರ ಮನೆಯೆ ಕಳ್ಳರು ಕನ್ನಹಾಕಿದ್ದು ಎನ್ನಲಾಗಿದ್ದು ಕಳೆದ ಎರಡು ದಿನಗಳಿಂದ ಮನೆಗೆ ಬೀಗ ಹಾಕಲಾಗಿದ್ದು ಇದನ್ನೆ ಬಳಸಿಕೊಂಡ ಕಳ್ಳರು ಮನೆಯ ಹಿಂಬದಿ ಬಾಗಿಲು ಬೀಗ ಮುರಿದು ಒಳ ನುಗ್ಗಿ ಹಣದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ನಸಿರ್ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.   

ನಾಸಿರ್ ಕುಟುಂಬವು ಬುಧವಾರದಂದು ಮನೆಗೆ ಮರಳಿದಾಗ ಮನೆಯ ಹಿಂಬದಿಯ ಬಾಗಿಲು ತೆರದುಕೊಂಡಿದ್ದನ್ನು ನೋಡಿದ್ದಾರೆ. ಅಲ್ಲದೆ ವಸ್ತುಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದನ್ನು ಗಮನಸಿ ತನ್ನ ಮನೆಯು ಕಳ್ಳತನಗೊಂಡಿದೆ ಎಂಬ ಖಾತ್ರಿಯಾದ ನಂತರ ಭಟ್ಕಳ ನಗರ ಠಾಣೆಗೆ ದೂರನ್ನು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...