ಶ್ರೀನಿವಾಸಪುರ: ಮಾರುತಿನಗರ-ಎಸ್.ಎಫ್.ಸಿ. ನಿಧಿಯಡಿಯಲ್ಲಿ ಸಿಮೆಂಟ್ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ 

Source: shabbir | By Arshad Koppa | Published on 27th July 2017, 8:01 AM | State News | Guest Editorial |

ಶ್ರೀನಿವಾಸಪುರ, - ಜು - 26:ಮಾರುತಿನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‍ಕುಮಾರ್ ಎಸ್.ಸಿ.ಪಿ, ಟಿ.ಎಸ್.ಪಿ. ಮತ್ತು ನಗರೋತ್ಥಾನ ಫೇಸ್-3 ನಿಧಿ ಅಡಿಯಲ್ಲಿ ಸುಮಾರು 1.5ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಪುರ ಸಭೆ ಒಂದನೇ ವಾರ್ಡ್ ಸದಸ್ಯ ಶಂಕರ್ ರವರು ತಿಳಿಸಿದರು.
  ಮಂಗಳವಾರ ಮಾರುತಿನಗರದಲ್ಲಿ 4ರೂಗಳ ವೆಚ್ಚದಲ್ಲಿ ಎಸ್.ಎಫ್.ಸಿ. ನಿಧಿಯಡಿಯಲ್ಲಿ ಸಿಮೆಂಟ್ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿ ಸಚಿವರ ಶ್ರಮದಿಂದ ಶ್ರೀನಿವಾಸಪುರ ಪಟ್ಟವಣವನ್ನು ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಕೋಲಾರ ಜಿಲ್ಲೆಯಲ್ಲಿಯೇ ಉತ್ತಮ ಪಟ್ಟಣವಾಗಿ ರೂಪುಗೊಳ್ಳುತ್ತಿದೆ. ಎಂ.ಜಿ.ರಸ್ತೆ ಅಗಲೀಕರಣ ಸೇರಿದಂತೆ ಹೈಟೆಕ್ ಸೌಲಭ್ಯಗಳುಳ್ಳ ನೂತನ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣವನ್ನು ನಿರ್ಮಿಸಿ ಅದಕ್ಕೆ ತಕ್ಕಂತೆ ಸುಂದರವಾದ ಜೋಡಿ ರಸ್ತೆಗಳನ್ನು ನಿರ್ಮಿಸಿ ಸುಸಜ್ಜಿತ ನಗರವನ್ನಾಗಿಸಿದ್ದಾರೆ ಎಂÀದರು.
    ಯಾವುದೇ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು ಮತ್ತು ಯಾವುದೇ ಕಳಪೆ ಕಾಮಗಾರಿಗೆ ಆಸ್ಪದವಿಲ್ಲದಂತೆ ಜಾಗರೂಕತೆಯಿಂದ ಆಗಿಂದಾಗ್ಗೆ ಕಾಮಗಾರಿಗಳ ಗುಣಮಟ್ಟವನ್ನು ವೀಕ್ಷಿಸಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡುವಲ್ಲಿ ಪುರಸಭೆ ಅಧಿಕಾರಿಗಳ ಮತ್ತು ಸದಸ್ಯರ ಜವಾಬ್ದಾರಿಯನ್ನು ವಹಿಸಿಕೊಳ್ಳ ಬೇಕೆಂದು ಸಚಿವರು ನಿರ್ಧೇಶನ ನೀಡಿದ್ದಾರೆ. ಮಾರುತಿನಗರದಲ್ಲಿ ಸಾರ್ವಜನಿಕರ ಅಹವಾಲು ಪಡೆದುಕೊಂಡ ಸಚಿವರು ನನ್ನ ಜೊತೆಯಲ್ಲಿ ಚರ್ಚೆ ಮಾಡಿ ಒಂದನೇ ವಾರ್ಡಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಅಧಿಕಾರಿಗಳಿಗೆ ಆಕ್ಷನ್ ಪ್ಲಾನ್ ತಯಾರಿಸಲು ಆದೇಶಿಸಿ ಅದರಂತೆ ಸುಮಾರು 1.5ಕೋಟಿ ರೂಗಳ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
  ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷಣ  ಅರುಣಾಜಗಧೀಶ್, ಮುಖ್ಯಾಧಿಕಾರಿ ಶ್ರೀಧರ್, ಉಪಾಧ್ಯಕ್ಷ ಟಿಎಂಬಿ ಮುಕ್ತಿಯಾರ್, ಪುರಸಭೆ ಸದಸ್ಯರಾದ ಬಿ.ಎಂ.ಪ್ರಕಾಶ್, ಸರ್ದಾರ್, ಯಮ್ಮನೂರ್‍ನಾಗರಾಜ್, ಕಾಂಗ್ರೆಸ್ ಮುಖಂಡರಾದ ಜಾಮಚೆಟ್ಲ ಶ್ರೀನಿವಾಸ್, ಗಂಗಾಧರ್, ಶಿವರಾಜ್, ಜೆಡಿಎಸ್ ಮುಖಂಡರಾದÀ ಪೂಲು ಶಿವಾರೆಡ್ಡಿ, ಗೋವಿಂದರೆಡ್ಡಿ ಇತರರು ಹಾಜರಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...