ಜಿದ್ದಾ: ಐಎಫ್ಎಫ್  ಕುಟುಂಬ ಸಮ್ಮಿಲನ “ ಸಂಭ್ರಮ-2019”  ವಿಜೃಂಭಣೆಯಿಂದ ಸಂಭ್ರಮಿಸಿದ ಅನಿವಾಸಿ ಕನ್ನಡಿಗರು

Source: so news | By Manju Naik | Published on 14th March 2019, 1:11 AM | Guest Editorial | Don't Miss |

ಜಿದ್ದಾ:  ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಚಾಪ್ಟರ್ ಜಿದ್ದಾ ಇದರ ವತಿಯಿಂದ ಫ್ರೆಟರ್ನಿಟಿ ಫೆಸ್ಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ  ಬೃಹತ್ ಕುಟುಂಬ ಸಮ್ಮಿಲನ “ ಸಂಭ್ರಮ 2019” ಇತ್ತೀಚಿಗೆ ಜಿದ್ದಾದ ಮದ್ಹಲ ಸಭಾಂಗಣದಲ್ಲಿ ನಡೆಯಿತು. 
ಇಂಡಿಯಾ ಫ್ರೆಟರ್ನಿಟಿ ಫಾರಂ ರೀಜನಲ್ ಅಧ್ಯಕ್ಷ  ಫಯಾಝುದ್ದೀನ್ ಚೆನ್ನೈ  ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಐ ಎಫ್ ಎಫ್ ಜಿಲ್ಲಾ ಸಮಿತಿ ಸದಸ್ಯ  ಅಬ್ದುಲ್ ಮಜೀದ್ ವಿಟ್ಲ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ ಪ್ರಸಕ್ತ ಭಾರತದ ಸ್ಥಿತಿಗತಿಗಳನ್ನು ವಿವರಿಸಿದರು,ಮತ್ತು ಕುಟುಂಬ ಸಮ್ಮಿಲನದ ಮಹತ್ವವನ್ನು ತಿಳಿಸಿದರು.
ಐ ಎಫ್ ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ  ಹಾರಿಸ್ ಗೂಡಿನಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ    ಪತ್ರಕರ್ತ ಆರೀಫ್ ಕಲ್ಕಟ್ಟ ರನ್ನು ಐ ಎಫ್ ಎಫ್ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅಥಿತಿಗಳಾಗಿ ಲುಲು ಹೈಪರ್ ಮಾರ್ಕೆಟ್ ಜನರಲ್ ಮ್ಯಾನೇಜರ್ ಮುಹಮ್ಮದ್ ಅಶ್ರಫ್ ಕೆ ಸಿ ರೋಡ್, ಇಂಡಿಯನ್ ಸೋಶಿಯಲ್  ಫಾರಂ ಪಶ್ಚಿಮ ವಲಯ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್, ಐ ಎಫ್ ಎಫ್ ಕಾರ್ಯದರ್ಶಿ ಆರಿಫ್ ಬಜ್ಪೆ,ಉದ್ಯಮಿ ಲಿಯಾಖತ್ ಮಾಸ್ಟರ್ ಟ್ರೇಡರ್ಸ್ ಅಂಡ್ ಟ್ರಾನ್ಸ್ಪೋರ್ಟ್,
ಎನ್ ಸಿ ಎಂ ಎಸ್ ನ ಜನರಲ್ ಮ್ಯಾನೇಜರ್ ರಹೀಂ ಬಜ್ಪೆ ಸಾದಾ ಜನರಲ್ ಸೆಕ್ರೆಟರಿ ಐ ಪಿ ಡಬ್ಲ್ಯೂ ಎಫ್ 
ಕಮರ್, ಹಿದಾಯ ಫೌಂಡೇಶನ್ ಅಧ್ಯಕ್ಷ ಜಾವೇದ್ ಕಲ್ಲಡ್ಕ, ಐ ಎಫ್ ಎಫ್ ಜಿದ್ದಾ ವಲಯ ಅಧ್ಯಕ್ಷ ಮುದ್ದಸ್ಸರ್  ಅಬ್ದುಲ್,
ಐ ಎಫ್ ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಹಾರಿಸ್ ಗೂಡಿನಬಳಿ,. ಫಿರೋಜ್ ಕಲ್ಲಡ್ಕ,ಮುತ್ತಲಿಬ್ ಪಡುಬಿದ್ರೆ , ಶಾಕಿರ್ ಹಕ್ ನೆಲ್ಯಾಡಿ‌ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳು ನಡೆಸಲಾಯಿತು.ವಿಶೇಷವಾಗಿ ಲುಲು ಹೈಪರ್ ಮಾರ್ಕೆಟ್ ಪ್ರಾಯೋಜಕತ್ವದಲ್ಲಿ ನಡೆದ ಮಹಿಳೆಯ ಡೆಸರ್ಟ್ ಫುಡ್ ಸ್ಪರ್ಧೆ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.ಡೆಸರ್ಟ್ ಫುಡ್ ತೀರ್ಪುಗಾರರಾಗಿ ಲುಲು ಹೈಪರ್ ಮಾರ್ಕೆಟ್ ನ ಚೀಫ್ ಚೆಫ್ ಹನೀಫ್ ಕೆ ಎಂ ಹಾಗು ಸಹ ತೀರ್ಪುಗಾರರಾಗಿ ಬಾಸ್ಕಿನ್ ರಾಬಿನ್ಸ್ ನ ಡ್ಯಾನಿಷ್ ಸಹಕರಿಸಿದರು.ಹನೀಫ್ ಮತ್ತು ಡ್ಯಾನಿಷ್ ರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

    

Read These Next

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಭಟ್ಕಳ; ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕೋವಿಡ್-19 ‘ಮರಳಿ ಸೃಷ್ಟಿಕರ್ತನ ಕಡೆಗೆ ಆಬಿಯಾನ’ಕ್ಕೆ ಚಾಲನೆ

ಭಟ್ಕಳ: ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮಾನವನನ್ನು ಎಚ್ಚರಿಸುತ್ತಿದ್ದು, ಮನುಷ್ಯರನ್ನು ಸರಿದಾರಿಗೆ ತರಲು ದೈವಿಕ ...

ಭಟ್ಕಳ: 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಬಿಸ್ಕತ್ ವಶ; ಪೊಲೀಸರ ಬಲೆಗೆ ಬಿದ್ದ ಶೈಲೇಶ್ ಮತ್ತು ವಿಫುಲ್

ಭಟ್ಕಳ: ಇಲ್ಲಿನ ಹೂವಿನ ಚೌಕ್ ಕ್ರಾಸ್ ಬಳಿ 60 ಲಕ್ಷ ಮೌಲ್ಯದ 1.5ಕೆಜಿ ಬಂಗಾರದ ನಮೂನೆಯ ಬಿಸ್ಕಿಟ್ ಮತ್ತು ಎಂಟು ಚಿನ್ನದ ಗಟ್ಟಿಗಳನ್ನು ...