ಮುಹಮ್ಮದ್: ಮಹಾನ್ ಪ್ರವಾದಿ

Source: sonews | By Staff Correspondent | Published on 30th November 2017, 11:56 PM | Coastal News | Global News | Special Report | Islam | Don't Miss |

ಪ್ರವಾದಿ ಮುಹಮ್ಮದ್(ಸ) ರ  ಮಿಲಾದುನ್ನಬಿ ನಿಮಿತ್ತ ಈ ವಿಶೇಷ ಲೇಖನ (ಸಂ.)

* ನಿತಿನ್ ಇ.ಎ. ಅರೇಹಳ್ಳಿ

ಅರೇಬಿಯಾದ ಮರಳುಗಾಡಿನಲ್ಲಿ ಮುಹಮ್ಮದರ ಜನನ. ಅತ್ಯಂತ `ಪ್ರಶಂಶಿಸ ಲ್ಪಡುವವನು' ಎಂಬುದು ಮುಹಮ್ಮದ್ ಎಂಬ ಪದದ ಅರ್ಥ.
ಅವರು ಜನಿಸಿದಾಗ ಅದು ಕೇವಲ ಒಂದು ಮರುಭೂಮಿಯಾಗಿತ್ತು. ಕೇವಲ ಶೂನ್ಯ. ಆ ಶೂನ್ಯದಿಂದ ಒಂದು ಹೊಸ ಲೋಕವು ರೂಪು ತಾಳಿತು. ಒಂದು ಹೊಸ ಜೀವನ, ಒಂದು ಹೊಸ ಸಂಸ್ಕøತಿ, ಒಂದು ಹೊಸ ನಾಗರಿಕತೆ, ಒಂದು ಹೊಸ ಸಾಮ್ರಾಜ್ಯ, ಮೊರೊಕ್ಕೊ ದಿಂದ ಇಂಡೀಸ್‍ವರೆಗೆ ವಿಸ್ತರಿಸಿದ ಒಂದು ಸಾಮ್ರಾಜ್ಯ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಎಂಬ ಮೂರು ಬೃಹತ್ ಖಂಡಗಳ ಜೀವನ ಮತ್ತು ವಿಚಾರಧಾರೆ ಗಳಲ್ಲಿ ಪ್ರಭಾವ ಬೀರಿದ ಸಾಮ್ರಾಜ್ಯ. ಮುಹಮ್ಮದರೇ ಅದರ ಶಿಲ್ಪಿ.

ಪರಸ್ಪರ ತಿಳುವಳಿಕೆ
ಪ್ರವಾದಿಯಾದ ಮುಹಮ್ಮದರ ಕುರಿತು ಬರೆಯಲು ಹೊರಟಾಗ ಒಂದು ಸಂದೇಹ. ನಾನು ಬರೆಯುತ್ತಿರುವುದು ನಾನು ಸ್ವೀಕರಿಸಿಲ್ಲದ ಒಂದು ಧರ್ಮದ ಕುರಿತು. ಆ ಧರ್ಮದಲ್ಲಿಯೇ ವಿವಿಧ ವಿಚಾರಧಾರೆ ಗಳ ವಿಭಿನ್ನ ವರ್ಗಗಳಿರುವ ಹಿನ್ನೆಲೆಯಲ್ಲಿ ಅದು ಇನ್ನೂ ತ್ರಾಸದಾಯಕ. ಪ್ರತ್ಯಕ್ಷದಲ್ಲಿ ತೋರುವಂತೆ ನಮ್ಮ ಚಿಂತನೆಗಳು ಅಷ್ಟೊಂದು ಶಿಥಿಲವಾಗಿಲ್ಲ. ಭೂತಕಾಲದ ಲಕ್ಷೋಪಲಕ್ಷ ಹೃದಯಗಳಿಗೆ ಕರ್ತವ್ಯ, ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವ ಸಚೇತನ ಮತದರ್ಶನ ಮತ್ತು ವಿಶ್ವಾಸ ಸಿದ್ಧಾಂತಗಳ ಕೇಂದ್ರ ಬಿಂದುವಿನಲ್ಲಿ ಅವು ಏಕೀಕೃತವಾಗಿವೆ. ನಾವು ಜೀವಿಸುವ ಈ ಲೋಕದ ಪ್ರಜೆಯಾಗಬೇಕೆಂಬ ಹಂಬಲ ನಮಗಿದ್ದರೆ ಮಾನವ ಜೀವನದ ಮೇಲೆ ಪ್ರಭಾವ ಬೀರಿದ ತತ್ವ ಸಿದ್ಧಾಂತ ಮತ್ತು ಧರ್ಮ ದರ್ಶನಗಳನ್ನು ತಿಳಿ ಯುವ ಚಿಕ್ಕ ಪ್ರಯತ್ನ ಮಾಡಬೇಕು.

ಪ್ರವಾದಿವರ್ಯರ(ಸ) ಐತಿಹಾಸಿಕ ವ್ಯಕ್ತಿತ್ವ
ನನ್ನ ಈ ಅಭಿಪ್ರಾಯವು ಸೂಕ್ತವೇ ಆಗಿದ್ದರೂ ಈ ಸಮಸ್ಯೆಯ ಇನ್ನೊಂದು ಮುಖವಿದೆ. ಧರ್ಮಗಳ ಈ ರಂಗವು ವಿವೇಕ ಮತ್ತು ಭಾವನೆಗಳ ಪರಸ್ಪರ ಸಂಘ ರ್ಷದ ನಿಮಿತ್ತ ದೃಢವಾಗಿ ನಿಲ್ಲಲಸಾಧ್ಯ ವಾದ ಒಂದು ಪರ್ವವನ್ನು ತಲುಪಿದೆ. ಆದ್ದರಿಂದ ಅಲ್ಲಿ ಪ್ರವೇಶಿಸುವವನು ದೇವ ಚರರು ಹೋಗದಂತಹ ಸ್ಥಳಗಳಿಗೆ ಓಡಿ ಹೋಗುವ ಮೂರ್ಖರನ್ನು ನೆನಪಿಗೆ ತರು ತ್ತಾನೆ. ಇಸ್ಲಾಮಿನ ಕಟು ವಿಮರ್ಶಕನಾದ ವಿಲಿಯಮ್ ಮೂರ್‍ನಿಗೂ ಕೂಡಾ ಕುರ್‍ಆನಿನ ಕುರಿತು, "ಹನ್ನೆರಡು ಶತಮಾನ ಗಳಿಂದ ಯಾವುದೇ ಕಲಬೆರಕೆಯಿಲ್ಲದೇ ಉಳಿದ ಬೇರೆ ಗ್ರಂಥ ಲೋಕದಲ್ಲಿಲ್ಲ"ವೆಂದು ಹೇಳಬೇಕಾಯಿತು. ಇತಿಹಾಸ ಪುರುಷರೇ ಪ್ರವಾದಿ ಮುಹಮ್ಮದ್ ಎಂಬುದನ್ನು ಅದರ ಅನುಬಂಧವಾಗಿ ನಾನು ಸೇರಿಸುತ್ತೇನೆ.

ಯುದ್ಧ ರಂಗದಲ್ಲಿ
ಒಂದು ಗೋತ್ರದ ಓರ್ವ ಅತಿಥಿಯ ಒಂಟೆಯು ಇನ್ನೊಂದು ಗೋತ್ರದ ಹುಲ್ಲು ಗಾವಲಿಗೆ ಪ್ರವೇಶಿಸಿತೆಂಬ ಕ್ಷುಲ್ಲಕ ಕಾರಣ ಕ್ಕಾಗಿ 40 ವರ್ಷ ಯುದ್ಧ ನಡೆಸಿ 70 ಸಾವಿರ ಅಮೂಲ್ಯ ಮಾನವ ಜೀವಗಳನ್ನು ಕಗ್ಗೊಲೆಗೈದು ಎರಡು ಗೋತ್ರಗಳ ಅಸ್ತಿತ್ವಕ್ಕೆ ಬೆದರಿಕೆಯೊಡ್ಡುತ್ತಿದ್ದಂತಹ ಆ ಅರಬರಿಗೆ ಶಿಸ್ತು ಮತ್ತು ಆತ್ಮಸಂಯಮವನ್ನು ಕಲಿಸಿ, ಯುದ್ಧರಂಗದಲ್ಲಿ ಕೂಡ ಪ್ರಾರ್ಥಿಸುವವರ ನ್ನಾಗಿ ಪ್ರವಾದಿ ಬದಲಾಯಿಸಿದರು. ಮಾನವಕುಲವನ್ನು ಒಂದಾಗಿಸಲಿಕ್ಕಾಗಿ ಅವರು ಆತ್ಮ ರಕ್ಷಣೆಯ ಯುದ್ಧಕ್ಕೆ ಒಪ್ಪಿಗೆ ನೀಡಿದ್ದರು. ಈ ಧ್ಯೇಯವು ಸಾಧಿಸಲ್ಪಟ್ಟಾಗ ಅವರ ಕಡು ವೈರಿಗಳಿಗೂ ಕ್ಷಮೆ ನೀಡಿ ದರು. ತಮ್ಮ ಪ್ರೀತಿಯ ಚಿಕ್ಕಪ್ಪ ಹಂಝ ರನ್ನು ವಧಿಸಿ ದೇಹವನ್ನು ಸಿಗಿದು, ಕರು ಳನ್ನು ಜಗಿದು ಉಗುಳಿದವರಿಗೂ ಕೂಡಾ!

ಲೋಕನಾಯಕ
ಮುಸ್ಲಿಮರು ಪ್ರವಾದಿ ಮುಹಮ್ಮದ್(ಸ) ರನ್ನು `ಲೋಕ ನಾಯಕ' ಎನ್ನುತ್ತಾರೆ. ಹಿಂದಿ ಭಾಷೆಯಲ್ಲಿ ಅದನ್ನು `ಜಗತ್ ಗುರು' ಎಂದೂ ಇಂಗ್ಲಿಷ್‍ನಲ್ಲಿ ಲೀಡರ್ ಆಫ್ ದಿ ವಲ್ರ್ಡ್ ಎಂದೂ ಅರ್ಥೈಸ ಬಹುದು. ಮೇಲ್ನೋಟಕ್ಕೆ ಇದೊಂದು ಮಹಾ ಬಿರುದೆಂದು ತೋರುತ್ತದೆ. ಆದರೆ ಈ ಬಿರುದನ್ನು ಯಾವ ಅತ್ಯುನ್ನತ ವ್ಯಕ್ತಿಗೆ ನೀಡಲಾಗಿದೆಯೋ ಆ ವ್ಯಕ್ತಿಯ ಸಾಧನೆಗಳನ್ನು ನೋಡುವಾಗ ಅವರನ್ನು ಲೋಕನಾಯಕನೆಂದು ಸಂಬೋಧಿಸಿದರೆ ಅದೇನೂ ಅತಿಶಯೋಕ್ತಿ ಯಾಗಲಾರದು. ಬದಲಾಗಿ ಅವರು ನಿಜವಾಗಿಯೂ ಅದಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಯುತ್ತದೆ.
ಒಬ್ಬ ವ್ಯಕ್ತಿಯನ್ನು ಲೋಕದ ನಾಯಕ ಎನ್ನಬೇಕಾದರೆ ನಾಲ್ಕು ಶರತ್ತುಗಳಿವೆ
1. ಅವನು ಒಂದು ವಿಶಿಷ್ಟ ದೇಶ, ಜನಾಂಗ ಅಥವಾ ವರ್ಗದ ಒಳಿತಿಗಾಗಿರದೆ, ಸಮಸ್ತ ಲೋಕದ ಜನರ ಒಳಿತಿಗಾಗಿ ಕೆಲಸ ಮಾಡಿರಬೇಕು. ಒಬ್ಬ ವ್ಯಕ್ತಿಯ ದೇಶಭಕ್ತಿ, ಸಹಾನುಭೂತಿ ಮತ್ತು ಸಾಧನೆಗಳೆಲ್ಲವೂ ಚೀನಾ ಅಥವಾ ಸ್ಪೆಯಿನ್‍ಗೆ ಮಾತ್ರ ಸೀಮಿತವಾಗಿದ್ದರೆ ಭಾರತೀಯನಾದ ನಾನೇಕೆ ಅವನನ್ನು ನನ್ನ ನಾಯಕನೆಂದು ಒಪ್ಪಬೇಕು? ತದ್ವಿರುದ್ಧವಾಗಿ ಅವನು ತನ್ನ ಜನಾಂಗಕ್ಕೆ ಇತರ ಜನಾಂಗಗಳಿಗಿಂತ ಮೇಲ್ಮೆ ನೀಡಹೊರಟರೆ ಮತ್ತು ಇತರರನ್ನು ಅಧೋಗತಿಗೆ ತಳ್ಳಿ ತನ್ನ ಜನಾಂಗವನ್ನೇ ಮೇಲೆತ್ತಲು ಬಯಸಿದರೆ ನಾನು ಅವನನ್ನು ದ್ವೇಷಿಸಲೇ ಬೇಕಾ ಗುತ್ತದೆ. ಲೋಕದ ಎಲ್ಲ ಜನರು ಕೇವಲ ಒಂದು ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳಬಹುದು.
2. ಒಬ್ಬನನ್ನು ಲೋಕದ ನಾಯಕನೆನ್ನಬೇಕಾದರೆ ಅವನು ಸಮಸ್ತ ಲೋಕದ ಜನರ ಮಾರ್ಗದರ್ಶನಕ್ಕೆ ಬೇಕಾದಂತಹ ತತ್ವಗಳನ್ನು ಲೋಕಕ್ಕೆ ನೀಡಿರಬೇಕು ಮತ್ತು ಮಾನವ ಜೀವ ನದ ಎಲ್ಲ ಪ್ರಮುಖ ಸಮಸ್ಯೆಗಳಿಗೆ ಬೇಕಾದ ಪರಿಹಾರ ಆ ತತ್ವಗಳಲ್ಲಿರಬೇಕು. ನಾಯಕ ಎಂದರೆ ಮಾರ್ಗದರ್ಶಕ. ಒಳಿತು ಮತ್ತು ಯಶಸ್ಸಿನ ಮಾರ್ಗ ತೋರಿಸಲಿಕ್ಕಾಗಿಯೇ ನಾಯಕನ ಮಹತ್ವವಿರುತ್ತದೆ. ಆದುದರಿಂದ ಸಮಸ್ತ ಲೋಕದ ಜನರ ಯಶಸ್ವಿಗೆ ಬೇಕಾದ ಮಾರ್ಗವನ್ನು ತೋರಿಸಬಲ್ಲವನು ಲೋಕದ 
ನಾಯಕನಾಗಲು ಆರ್ಹನಾಗಬಲ್ಲನು.
3. ಅವನ ಮಾರ್ಗದರ್ಶನವು ಯಾವುದೇ ವಿಶಿಷ್ಟ ಕಾಲಾವಧಿಗಾಗಿರದೆ ಎಲ್ಲ ಕಾಲಗಳಿಗೆ ಎಲ್ಲ ಪರಿಸ್ಥಿತಿಗಳಿಗೆ ಸಮಾನ ಉಪಯುಕ್ತವೂ ಸೂಕ್ತವೂ ಅನುಸರಣೆಗೆ ಯೋಗ್ಯವೂ ಆಗಿರ ಬೇಕು. ಒಬ್ಬನ ಮಾರ್ಗದರ್ಶನವು ಒಂದು ಕಾಲಕ್ಕೆ ಯೋಗ್ಯವೂ ಇನ್ನೊಂದು ಕಾಲಕ್ಕೆ ಅಯೋಗ್ಯವೂ ಆಗಿದ್ದರೆ ಅವನನ್ನು ಲೋಕದ ನಾಯಕನೆನ್ನುವಂತಿಲ್ಲ. ಈ ಲೋಕವು ಉಳಿದಿರುವ ತನಕ ಯಾರ ಮಾರ್ಗದರ್ಶನವು ಯೋಗ್ಯವಾಗಿರು ವುದೋ ಅವನೇ ಲೋಕದ ನಾಯಕನಾಗಬಲ್ಲ.
4. ಈ ನಾಯಕನು ಕೇವಲ ಜೀವನ ತತ್ವಗಳನ್ನು ಲೋಕಕ್ಕೆ ಕೊಟ್ಟು ಸಮ್ಮನಾಗಿರದೆ ತಾನು ಪ್ರತಿಪಾದಿಸಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ತೋರಿಸುವುದರ ಜೊತೆಗೆ ಅದರ ಆಧಾರದಲ್ಲಿ ಒಂದು ಜೀವಂತ ಸಮಾಜವನ್ನು ಕಟ್ಟಿ ತೋರಿಸ ಬೇಕು. ಕೇವಲ ತತ್ವಗಳನ್ನು ಪ್ರತಿಪಾದಿಸುವವನು ಹೆಚ್ಚೆಂದರೆ ಒಬ್ಬ ಚಿಂತಕನಾಗಬಲ್ಲ. ಆದರೆ ಅವನು ನಾಯಕನಾಗಬೇಕಾದರೆ ಆತನು ತನ್ನ ತತ್ವಗಳನ್ನು ಕಾರ್ಯತಃ ಮಾಡಿ ತೋರಿಸಿರಬೇಕು.

ಮುಹಮ್ಮದ್(ಸ) ಮಹಾನ್ ಪ್ರವಾದಿ
ಅಜ್ಞಾನ ಮತ್ತು ಅನೈತಿಕತೆಯ ಅಗಾಧ ತಳದಲ್ಲಿ ಸಿಲುಕಿದ್ದ ಒಂದು ಜನತೆಯ ಸುಧಾರಣೆಯೇ ಶ್ರೇಷ್ಠತೆಯೆಂದಾದರೆ, ಅರಬ ರಂತಹ ಒಂದು ಜನತೆಯನ್ನು ಬದಲಾಯಿಸಿ, ಸುಧಾರಿಸಿ, ನಾಗ ರಿಕತೆ ಮತ್ತು ಜ್ಞಾನ ವಾಹಕ ಸಮುದಾಯವನ್ನು ಮಾರ್ಪಡಿಸಿದ ಮುಹಮ್ಮದರಿಗೆ ಆ ಶ್ರೇಷ್ಠತೆಯನ್ನು ಪ್ರತಿಪಾದಿ ಸುವ ಹಕ್ಕಿದೆ. ಪರಸ್ಪರ ಕಾದಾಡಿ ಸಾಯು ವಂತಹ ಒಂದು ಜನಸಮೂಹವನ್ನು ಸೌಹಾರ್ದ ಮತ್ತು ಸಹೋದರತೆಯ ಎಳೆ ಯಿಂದ ಜೋಡಿಸು ವುದೇ ಶ್ರೇಷ್ಠತೆಯೆಂದಾದರೆ ಮರುಭೂಮಿಯ ಆ ಪ್ರವಾದಿಗೆ ಅರ್ಹತೆಯಿದೆ.
ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ಮುಳುಗಿದ್ದ ಒಂದು ಜನತೆಯನ್ನು ಸಂಸ್ಕರಿಸು ವುದೇ ಶ್ರೇಷ್ಠತೆಯೆಂದಾದರೆ, ಲಕ್ಷಗಟ್ಟಲೆ ಜನರ ಹೃದಯಗಳಿಂದ ಅನಗತ್ಯ ಭೀತಿ ಮತ್ತು ಮೂಢನಂಬಿಕೆಗಳನ್ನು ಉಚ್ಛಾಟಿಸಿದ ಇಸ್ಲಾಮಿನ ಪ್ರವಾದಿಯು ಅದನ್ನು ಸಾಧಿಸಿ ದ್ದಾರೆ. ಓರ್ವ ದಿಗ್ವಿಜಯಿಯೇ ಶ್ರೇಷ್ಠನೆಂದಾ ದರೆ, ಓರ್ವ ಅನಾಥ ಬಾಲಕನು ನಿರ್ಗತಿಕನಾಗಿ ಬೆಳೆದು ಅರೇಬಿಯಾದ ಆಡಳಿತಗಾರನಾಗಿ ಮೇಲೇರಿ, ಹದಿನಾಲ್ಕು ಶತಮಾನಗಳವರೆಗೂ ಉಳಿದು ಬಂದಿರುವ ಒಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಓರ್ವ ಮಾನವ ಪುರುಷನನ್ನು ಇಲ್ಲಿ ಕಾಣಬಹುದು.

ಪ್ರವಾದಿ ಮುಹಮ್ಮದ್(ಸ) ಲೋಕನಾಯಕ
ಒಬ್ಬನನ್ನು ಲೋಕದ ನಾಯಕನೆನ್ನಬೇಕಾ ದರೆ ಅವನು ಸಮಸ್ತ ಲೋಕದ ಜನರ ಮಾರ್ಗದರ್ಶನಕ್ಕೆ ಬೇಕಾದಂತಹ ತತ್ವಗಳನ್ನು ಲೋಕಕ್ಕೆ ನೀಡಿರಬೇಕು ಮತ್ತು ಮಾನವ ಜೀವನದ ಎಲ್ಲ ಪ್ರಮುಖ ಸಮಸ್ಯೆಗಳಿಗೆ ಬೇಕಾದ ಪರಿಹಾರ ಆ ತತ್ವಗಳಲ್ಲಿರಬೇಕು.

ಪ್ರವಾದಿ ಜೀವನ ಸಂದೇಶ
ಯಾವ ಆಧ್ಯಾತ್ಮಿಕ ಮತ್ತು ನೈತಿಕ ಮೇಲ್ಮೈ ಯನ್ನು ಜಗತ್ತು ಸಾಧು ಸಂತರಲ್ಲಿ ಶೋಧಿಸು ತ್ತದೋ ಅದನ್ನು ಪ್ರವಾದಿವರ್ಯರು(ಸ) ಅಧಿಕಾರದ ಗದ್ದುಗೆ ಮತ್ತು ನ್ಯಾಯಾಲಯದ ಪೀಠಕ್ಕೆ ಎಳೆದು ತಂದರು. ವ್ಯಾಪಾರ ವಹಿ ವಾಟಿನಲ್ಲಿ ದೇವ ಭಯ ಮತ್ತು ಪ್ರಾಮಾಣಿಕತೆ ಪಾಲಿಸುವುದನ್ನು ಅವರು ಕಲಿಸಿದರು. ಪೆಲೀಸ ರಿಗೂ ಸೈನಿಕರಿಗೂ ದೇವಭಯ ಮತ್ತು ಸತ್ಯ ಸಂಧತೆಯನ್ನು ಬೋಧಿಸಿದರು. ಲೋಕದಿಂದ ವಿರಕ್ತನಾದ ದೇವಮಾನವನನ್ನು ಅವರು ದೂರೀಕರಿಸಿದರು. ಒಬ್ಬ ವ್ಯಕ್ತಿ ಅಧಿಕಾರಿ, ನ್ಯಾಯಾಧೀಶ, ಸೇನಾನಿ, ಆರಕ್ಷಕ, ವ್ಯಾಪಾರಿ, ಉದ್ಯಮಿಯೇ ಮುಂತಾದ ನೆಲೆಗಳಲ್ಲಿ ಲೌಕಿಕ ವ್ಯವಹಾರಗಳಲ್ಲಿ ಸಂಪೂರ್ಣ ನಿರತನಾಗಿದ್ದು ಕೊಂಡೇ ತನ್ನ ವಿಶ್ವಾಸ ಪರೀಕ್ಷೆಗೊಳಪಟ್ಟಾಗ ಲೆಲ್ಲಾ ತನ್ನನ್ನು ಸತ್ಯಸಂಧ ಮತ್ತು ಪ್ರಾಮಾಣಿಕ ಎಂದು ಸಾಬೀತುಪಡಿಸುವುದೇ ದೇವನೊಂದಿಗಿ ರುವ ಆ ಆಪ್ತತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
 

Read These Next

ಮಂಜುಸುತ ವಿರಚಿತ ಬಸವನಬಾಯಿ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ.

ಭಟ್ಕಳ : ತಾಲೂಕಿನ ಕುರುಂದೂರು ಗ್ರಾಮದ ಬಸವನಬಾಯಿ ಮಹಾಗಣಪತಿ ಕುರಿತು ಮಂಜುಸುತ ಜಲವಳ್ಳಿ ರಚಿಸಿ ಭಕ್ತಿಗೀತೆಗಳ ಕೃತಿ ಜಲಧಾರೆ ದೇವರ ...

ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು

ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ...

ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !

ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ...

ಭಟ್ಕಳ: ಉತ್ತರಕನ್ನಡಕ್ಕೆ ದಂಡೆತ್ತಿ ಬಂದವರು ಇನ್ನೂ ದಡ ಸೇರಲೇ ಇಲ್ಲ; ದುಡಿದುಡಿದು ದಣಿವಾದರೂ ದುಂಡಗಾಗಲೇ ಇಲ್ಲ !

ಇದು ಕಾಡಿನ ನಡುವಿನ ಮನುಷ್ಯರ ರೋಧನ ! ರಾಜರ ದಂಡಿನೊಂದಿಗೆ ದಂಡೆತ್ತಿ ಬಂದ ಮರಾಠಿಗರು ಕಾಡಿನಲ್ಲಿಯೇ ತಲೆ ಮರೆಸಿಕೊಂಡು ಶತಮಾನಗಳೇ ...

ಉತ್ತರಕನ್ನಡ ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿದ ಡಿಕೆಶಿ ನಡೆ; ಕುಮಟಾ, ಶಿರಸಿಗೆ ಹೊಸ ಅಭ್ಯರ್ಥಿ ಸಾಧ್ಯತೆ ; ದೇಶಪಾಂಡೆ ನಿಗೂಢ ಹೆಜ್ಜೆ

ನಿವಾರ್, ಬುರೆವಿಯಂತಹ ಚಂಡಮಾರುತಗಳು ದೇಶದ ವಿವಿಧ ರಾಜ್ಯಗಳಲ್ಲಿ ಸದ್ದು ಮಾಡುತ್ತಿದ್ದರೂ ಉತ್ತರಕನ್ನಡ ಜಿಲ್ಲೆಗೆ ಅಂತಹ ಹಾನಿಯೇನೂ ...

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ

ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ...

ಮಂಜುಸುತ ವಿರಚಿತ ಬಸವನಬಾಯಿ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ.

ಭಟ್ಕಳ : ತಾಲೂಕಿನ ಕುರುಂದೂರು ಗ್ರಾಮದ ಬಸವನಬಾಯಿ ಮಹಾಗಣಪತಿ ಕುರಿತು ಮಂಜುಸುತ ಜಲವಳ್ಳಿ ರಚಿಸಿ ಭಕ್ತಿಗೀತೆಗಳ ಕೃತಿ ಜಲಧಾರೆ ದೇವರ ...