ಮಂಗಳೂರು: ಗುಜರಾತ್ ಚುನಾವಣೆ ಘೋಷಣೆ ವಿಳಂಬ ಎಸ್.ಡಿ.ಪಿ.ಐ ಆಕ್ರೋಶ

Source: sdpi | By Arshad Koppa | Published on 20th October 2017, 12:46 PM | Coastal News | State News | Special Report |

ಮಂಗಳೂರು: ಕೇಂದ್ರ ಚುನಾವಣಾ ಆಯೋಗ ಗುಜರಾತ್ ವಿಧಾನ ಸಭೆಯ ಚುನಾವಣೆ ಘೋಷಣೆಗೆ ವಿಳಂಬ ಮಾಡುತ್ತಿರುವಕಾರ್ಯವೈಖರಿಯನ್ನು ಎಸ್.ಡಿ.ಪಿ.ಐ ಖಂಡಿಸುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿ.ಜೆ.ಪಿ ಹಾಗೂ ಚುನಾವಣಾ ಆಯೋಗ ಮಧ್ಯೆ ಏನೂ ಅಸಹಜ ಪ್ರಕ್ರಿಯೆ ನಡೆಯುತಿದ್ದಂತೆ ಸಂಶಯ ಮೂಡುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್ ರವರು ತಿಳಿಸಿದ್ದಾರೆ. ಚುನಾವಣಾ ಆಯೋಗ ಪ್ರಧಾನ ಮಂತ್ರಿಯನ್ನು ಖುಷಿ ಪಡಿಸಲು ಹೊರಟಿರುವ ಪರಿಣಾಮ ದೇಶದ ಪ್ರಜಾ ಪ್ರಭುತ್ವ ವ್ಯವಸ್ತೆಗೆ ಅಪಾಯಕಾರಿಯಾಗಿದೆ.

 

ದೇಶವು ಸರ್ವಾಧಿಕಾರಿ ವ್ಯವಸ್ತೆಯತ್ತ ವಾಲುತ್ತಿದ್ದು, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳು ಸರಕಾರದ ಒತ್ತಡಗಳಿಗೆ ಮಣಿಯುತ್ತಿದೆ. ಬಿಜೆಪಿಯ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ. ಈಗಿನ ಚುನಾವಣಾ ಆಯೋಗದ ಮುಖ್ಯಸ್ಥರು ಹಿಂದೆ ಗುಜಾರಾತ್ ಸರಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಗುಜರಾತ್ ಚುನಾವಣಾ ಘೋಷಣೆಯನ್ನು ವಿಳಂಬ ಮಾಡಿ ತನಗೆ ನೀಡಲ್ಪಟ್ಟ ಹೊಸ ಹುದ್ದೆಯ ಋಣ ತೀರಿಸುತ್ತಿರುವಂತೆ ಭಾಸವಾಗುತ್ತಿದೆ.ಗುಜರಾತ್-ಹಿಮಾಚಲ ಚುನಾವಣಾ ಘೋಷಣೆಯಲ್ಲಿ ಆಯೋಗ ಮತ್ತು ಪ್ರಧಾನ ಮಂತ್ರಿ ಮೋದಿ ಪಾಲುದಾರಿಕೆಯಲ್ಲಿ ಬಿಜೆಪಿಗೆ ಏಕ ಪಕ್ಷೀಯವಾಗಿ ಪರೋಕ್ಷ ಬೆಂಬಲ ಕೊಡುತ್ತಿದೆ. ನಿರಂತರ 66 ದಿನಗಳ ನೀತಿ ಸಂಹಿತೆಯನ್ನು ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶಕ್ಕೆ ಘೋಷಣೆಯಾಗಿದೆ. 2014 ಡಿಸಂಬರ್‍ನಲ್ಲಿ ಜಮ್ಮು ಕಾಶ್ಮೀರದ ಕಾಂಗ್ರೆಸ್ £ಶನಲ್ ಕಾನ್ಫರೆನ್ಸ್ ಮೈತ್ರಿ ಸರಕಾರ ಅಂದು ಚುನಾವಣೆಯನ್ನು ಮುಂದೂಡಲು ವಿನಂತಿಸಿತ್ತು. ಅಂದು ರಾಜಧಾನಿ ಶ್ರೀ ನಗರವು ಸೇರಿದಂತೆ ರಾಜ್ಯದ ಹಲವೆಡೆ ನೆರೆ ಬಂದಿತ್ತು. ಅಂದು ಚುನಾವಣಾ ಆಯೋಗ ಅವರ ವಿನಂತಿಯನ್ನು ತಳ್ಳಿಹಾಕಿತ್ತು. ಆದರೆ ಗುಜರಾತಿನಲ್ಲಿ ನೆರೆ ಸಾಮಾನ್ಯವಾಗಿರುತ್ತದೆ. ಈಗ ಅಲ್ಲಿ ನೆರೆಯ ಸಬೂಬುಹೇಳಿ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಮಯಾವಕಾಶ ಬೇಕು ಎಂಬ ಗುಜರಾತ್ ಸರಕಾರದ ಮನವಿಯನ್ನು ಆಯೋಗ ಪರಿಗಣಿಸಿರುವುದು ಆಶ್ಚರ್ಯಕರ ಎಂದು ಎ.ಸಯೀದ್‍ರವರು ತಿಳಿಸಿದ್ದಾರೆ. 

ಆಯೋಗದ ಮುಖ್ಯಸ್ಥರು ಸರಕಾರಗಳ ಮನವಿಗಳನ್ನು ಪರಿಗಣಿಸಬೇಕೆಂದಿಲ್ಲ. ಗುಜರಾತ್ ಚುನಾವಣೆಯ ದಿನಾಂಕ ಘೋಷಣೆ ಮಾಡದೆ ಆಯೋಗ ತನ್ನ ಜವಾಬ್ದಾರಿಯಿಂದ ಜಾರುತ್ತಿದೆ. ಆಯೋಗ ಕೇವಲ ರಾಷ್ಟ್ರಪತಿ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಮಾತ್ರ ಉತ್ತರದಾಯಿತ್ವ ಹೊಂದಿದೆ. ಬಿಜೆಪಿಯ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಬಿಜೆಪಿ ಪರ ನಿಲ್ಲುತ್ತಿರುವುದು ಬಹಿರಂಗಗೊಳ್ಳುತ್ತಿರುವುದು ಆಶ್ಚರ್ಯಕರವಾಗಿದೆ. ಬಿಜೆಪಿ ನೇತೃತ್ವದ ಸರಕಾರವನ್ನು ಉಳಿಸಲು ವಿವಿಧ ಕಸರತ್ತುಗಳನ್ನು ಮಾಡಲಾಗುತ್ತಿದೆ. ವಾಸ್ತವದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಲು ಸಿದ್ದವಿಲ್ಲ. ಅಲ್ಲಿಯ ಚುನಾವಣೆಯನ್ನು  ಮುಂದೂಡಲು ಪ್ರಧಾನಿ ನರೇಂದ್ರ ಮೋದಿಯವರು ಆಯೋಗಕ್ಕೆ ಪ್ರಭಾವ ಬಳಸಿದ್ದಾರೆ. ಗುಜರಾತಿನ ಜನರು ಮೋದಿ ಮತ್ತು ಅಲ್ಲಿಯ ಬಿಜೆಪಿ ಸರಕಾರದ ವಿರುದ್ಧವಾಗಿದ್ದಾರೆ. ದಲಿತರು, ಪಟೇಲರು ಹಾಗೂ ರೈತರು ಬಿಜೆಪಿಯ ಪರವಾಗಿಲ್ಲದಿರುವುದರಿಂದ ಅಲ್ಲಿ ಬಿಜೆಪಿ ತನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಅದಕ್ಕೆ ಈಗಾಗಲೆ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ಅದಕ್ಕಾಗಿ ಬಿಜೆಪಿ ಚುನಾವಣೆಯ ಮುಂದೂಡಿಕೆಯನ್ನು ಬಯಸುತ್ತಿದೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎ.ಸಯೀದ್‍ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಧನ್ಯವಾದಗಳೊಂದಿಗೆ,

ಇಕ್ಬಾಲ್ ಬೆಳ್ಳಾರೆ
ಜಿಲ್ಲಾ ಮಾದ್ಯಮ ಸಂಯೋಜಕರು
ಎಸ್.ಡಿ.ಪಿ.ಐ ದ.ಕ
ಮೊ: 9611695453

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...