ಕೋಲಾರ:ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

Source: shabbir | By Arshad Koppa | Published on 15th June 2017, 7:00 AM | State News | Special Report | Guest Editorial |

ಕೋಲಾರ,ಜೂ13: ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ರೈತರು ತರುವ ತರಕಾರಿಗೆ  100 ಕೆ.ಜಿ.ಗೆ 5- 8 ಕೆಜಿಯಂತೆ ಕಡಿತಗೊಳಿಸಿ ರೈತನಿಗೆ ನಷ್ಟ ಉಂಟುಮಾಡುತ್ತಿರುವ ಮತ್ತು ಹಳೆ ಬಸ್ ನಿಲ್ದಾಣದ ಹೂ ಮಾರುಕಟ್ಟೆಯಲ್ಲಿ  100 ಕೆ.ಜಿ.ಗೆ 8 ಕೆ.ಜಿ ಕಡಿತಗೊಳಿಸಿ ರೈತನಿಗೆ ವಂಚಿಸುವ ಮತ್ತು ರಸೀದಿ ನೀಡದೇ ಬಿಳಿ ಚೀಟಿಯಲ್ಲಿ ರಸೀದಿ ನೀಡಿ ಕಾನೂನುನ್ನು ಉಲ್ಲಂಘಿಸುತ್ತಿರುವ  ಎ,ಪಿ,ಎಂಸಿ ಕಾರ್ಯದರ್ಶಿ ರವಿಕುಮಾರ್‍ರವರನ್ನು  ಅಮಾನತ್ತು ಮಾಡಬೇಕೆಂದು ಡಿಸಿ ರವರನ್ನು ಆಗ್ರಹಿಸಿ ರೈತ ಸಂಘದಿಂದ  ಕಪ್ಪುಬಟ್ಟೆ ಧರಿಸಿ ಧರಣ  ನಡೆಸಿ ಜಿಲ್ಲಾಡಳಿತದ ರೈತ ವಿರೋಧಿ ದೋರಣೆಯನ್ನು ಖಂಡಿಸಲಾಯಿತು 


ಅಪರ ಜಿಲ್ಲಾಧಿಕಾರಿ ಮತ್ತು ಡಿವೈಎಸ್‍ಪಿ ಅಬ್ದುಲ್‍ಸತ್ತಾರ್ ಜೊತೆ  ಬಿಗಿ ಬಂದೋಬಸ್ತ್‍ನಲ್ಲಿ  ಸ್ಥಳಕ್ಕೆ ಬಂದ ಕಾರ್ಯದರ್ಶಿ ರವಿಕುಮಾರ್ ರವರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮೊನ್ನೆ ಮಾರುಕಟ್ಟೆಯಲ್ಲಿ ನಡೆದ ದಾಂಧೆಲೆಗೆ ಎಪಿಎಂಸಿ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದ ಅಚಾತುರ್ಯದಿಂದ ನಡೆದಿದ್ದು, ಈ ಘಟನೆಗೆ ನಾನು ಕ್ಷಮೆಯಾಚಿಸುತ್ತಿದ್ದು, ಈ ಘಟನೆಗೆ ಕಾರಣರಾದರವರ ವಿರುದ್ದ ಜಿಲ್ಲಾಡಳಿತಕ್ಕೆ ವರಧಿ ಸಲ್ಲಿಸಿದ್ದು, ಇನ್ನು ಮುಂದೆ ಇಂತಹ ಅನಾಹುತಗಳು ಹಾಗುವುದಿಲ್ಲವೆಂದು ರೈತ ಸಂಘ ಮತ್ತು ರೈತರಲ್ಲಿ ಕ್ಷಮೆಯಾಚಿಸಿದರು.

ಮಂಗಳವಾರದ ವರೆಗೂ ನನಗೆ ಸಮಯಾವಕಾಶ ಕೊಡಿ ತೂಕದ ಮೋಸ ಬಿಳಿ ಚೀಟಿ, ಜಾಕ್‍ಪಾಟ್, ಕಮೀಷನ್ ದಂಧೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಮಾಡಿ ಮಾರುಕಟ್ಟೆಯ ರೈತರ ಶೋಷಣೆ ತಪ್ಪಿಸಿ ಆರ್‍ಎಂಸಿ ಕಾನೂನು ಉಲ್ಲಂಘನೆ ಮಾಡುವವರ ವಿರುದ್ದ ಕ್ರಿಮಿನಲ್ ಮೊಕ್ಕದಮೆ ದಾಖಲಿಸುತ್ತೇನೆ. ನನಗೆ ಕಡೆ ಅವಕಾಶ ನೀಡಿ ಎಂದು ಅಪರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿನಂತಿಸಿಕೊಂಡರು.

ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ ಸಭೆ ನೆಪದಲ್ಲಿ ಹರಾಜು ಸ್ಥಗಿತಗೊಳಿಸಿದ ಕಾರ್ಯದರ್ಶಿ ರವಿಕುಮಾರ್‍ರವರನ್ನು ಅಮಾನತ್ತುಗೊಳಿಸಿ  ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಎ,ಪಿ,ಎಂ,ಸಿ ಕಾಯಿದೆಯ ಶೇ1ರಷ್ಟು ಪಾಲಿಸದ ದಲ್ಲಾಳರ ಪರವಾನಗಿ ರದ್ದು ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ತರಕಾರಿ ಮತ್ತು ಹೂವಿನಲ್ಲಿ 100 ಕೆಜಿಗೆ 5-8 ಕೆಜಿಯಂತೆ ಕಡಿತಗೊಳಿಸುವ ಕ್ರಮವನ್ನು ಕೂಡಲೇ ನಿಲ್ಲಿಸಿ ಚಿಕ್ಕಬಳ್ಳಾಪುರ  ಮಾರುಕಟ್ಟೆಯಂತೆ  100ಕೆಜಿಗೆ 2.5 ಕೆಜಿಯಷ್ಟು ಮಾತ್ರ ಕಡಿತಗೊಳಿಸುವಂತೆ ಆದೇಶಿಸಬೇಕು.ಮತ್ತು ಮೀಟರ್ ಬಡ್ಡಿಯವರಿಗಿಂತ ಹೀನಾಯವಾಗಿ ನೂರಕ್ಕೆ 10 ಕಮಿಷನ್ ದಂಧೆಯನ್ನು ನಿಲ್ಲಿಸಿ, ಚಿಕ್ಕಬಳ್ಳಾಪುರದಲ್ಲಿರುವಂತೆ 3 ರೂಪಾಯಿ ಕಮಿಷನ್ ಪಡೆಯುವಂತೆ ಸೂಚಿಸಬೇಕು. ಎ.ಪಿ.ಎಂ.ಸಿ ನಿಯಮದಂತೆ ಬಿಳಿ ಚೀಟಿ ನೀಡದೆ, ಎ,ಪಿ,ಎಂ,ಸಿ ನಿಗಧಿ ಪಡಿಸಿರುವ ರಸೀದಿಯನ್ನೇ ಕಡ್ಡಾಯವಾಗಿ ನೀಡಲು ಆದೇಶಿಸಬೇಕು. ರಸೀದಿ ನೀಡದ ಮಂಡಿಗಳ ಪರವಾನಗಿಯನ್ನು  ರದ್ದುಗೊಳಿಸಬೇಕು.ಮತ್ತು ನಾಯಿ ಕೊಡೆಗಳಂತೆ ಮಾರುಕಟ್ಟೆಯಲ್ಲಿ  ತಲೆ ಎತ್ತಿರುವ ಅನದೀಕೃತ ವ್ಯಾಪಾರವನ್ನು ಸಂಪೂರ್ಣ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಎ.ಪಿ.ಎಂ.ಸಿ ಯಲ್ಲೇ ಸಮರ್ಪಕವಾದ ಕಸ ನಿರ್ವಹಣೆ ಮಾಡದೇ ಗಬ್ಬುನಾರುತ್ತಿದ್ದು, ಕಸ ವಿಲೇವಾರಿಗೆ ಕೊಟ್ಟಿರುವ ಟೆಂಡರ್‍ನ್ನು ರದ್ದುಗೊಳಿಸಿ, ಸಮರ್ಪಕವಾಗಿ ನಿರ್ವಹಿಸುವವರೆಗೆ ಟೆಂಡರ್ ನೀಡಿ ಮಾರುಕಟ್ಟೆ ಕಸದ ವ್ಯವಸ್ಥೆ ಸರಿಪಡಿಸಬೇಕು.  ಹೂ ಮಾರುಕಟ್ಟೆಯಲ್ಲಿ ಹೂವನ್ನು ದಿನದಲ್ಲಿ 2ಬಾರಿ ರೈತನ ಮುಂದೆ ಹರಾಜು ಮಾಡಿ ಬೆಲೆ ನಿಗದಿ ಪಡಿಸುವ ವ್ಯವಸ್ಥೆ ಮಾಡಬೇಕು. ಮೌಖಿಕ ಹರಾಜನ್ನು ನಿಲ್ಲಸಬೇಕು. ಎಲ್ಲಾ ಕಂಪ್ಯೂಟರ್ ಯಂತ್ರಗಳನ್ನು ಮೂರು ತಿಂಗಳಿಗೊಮ್ಮೆ ತೂಕ ಮತ್ತು ಅಳತೆ ಇಲಾಖೆಯಿಂದ ಪರೀಕ್ಷೀಸಿ ತೂಕದಲ್ಲಿ ಮೋಸವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಎ.ಪಿ.ಎಂ.ಸಿ ಯ ಆವರಣದಲ್ಲಿ ತರಕಾರಿ ಮತ್ತು ಟೊಮೋಟೊಗೆ ಬೇರೆ ಬೇರೆ ಸ್ಥಳಾವಕಾಶ ಕಲ್ಪಿಸಿ, ಮಾರುಕಟ್ಟೆಯಲ್ಲಿ ಗೊಂದಲವಾಗದಂತೆ ಕ್ರಮ ಕೈಗೊಳ್ಳಬೇಕು. ಮಂಡಿಗೆ ಬರುವ ತರಕಾರಿ ಲೆಕ್ಕವೇ ಬೇರೆ ಎ,ಪಿ,ಎಂ,ಸಿಗೆ ಕೊಡುತ್ತಿರುವ ಕಳ್ಳ ಲೆಕ್ಕದಿಂದ ಎ,ಪಿ,ಎಂ,ಸಿಗೆ ಆಗುತ್ತಿರುವ ಆದಾಯ ಸೋರಿಕೆಯನ್ನು ತಡೆಗಟ್ಟಬೇಕು. ಮಾರುಕಟ್ಟೆಯಲ್ಲಿ ಟ್ರಾಪಿಕ್ ಜಾಮ್‍ನಿಂದ ತರಕಾರಿ ವಹಿವಾಟಿಗೆ ತೊಂದೆರೆಯಾಗದಂತೆ ಕ್ರಮ ಕೈಗೊಂಡು ರೈತರ ಷೋಷಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ಇಲ್ಲವೇ ಸರಿಪಡಿಸಲು ಸಾಧ್ಯವಿಲ್ಲ ಎಂಬ ಆದೇಶ ಹೊರಡಿಸಿ  ರೈತರ ಶೋಷಣೆಗೆ ಬೆಂಗಾಲಾಗಿ ನಿಲ್ಲುತ್ತೇವೆಂದು ಸೂಚಿಸಿ ಜಿಲ್ಲಾಡಳಿತ ಪುಣ್ಯಕಟ್ಟಿಕೊಳ್ಳಿ ಎಂದು ಆಗ್ರಹಿಸಲಾಯಿತು.  
ಈ ಹೋರಾಟದಲ್ಲಿ  ಎ. ನಳಿನಿ, ಮರಗಲ್ ಶ್ರೀನಿವಾಸ್, ಹುಲ್ಕೂರು ಹರಿಕುಮಾರ್ ರಘುನಾಥ್‍ರೆಡ್ಡಿ,  ಆನಂದ್‍ಸಾಗರ್, ರಂಜೀತ್‍ಕುಮಾರ್, ಪಾರುಕ್‍ಪಾಷಾ, ಹೆಬ್ಬಿಣ  ಆನಂದರೆಡ್ಡಿ, ಎಂ ಹೊಸಹಳ್ಳಿ ವೆಂಕಟೇಶ್, ವಿಜಯಪಾಲ್, ಗಣೇಶ್, ನಂದಕುಮಾರ್,  ವೇಮಗಲ್ ಗಣೇಶ್, ಅಮರನಾರಾಯಣಸ್ವಾಮಿ, ಯಲುವಳ್ಳಿ ಪ್ರಭಾಕರ್, ತೆರ್ನಹಳ್ಳಿ ವೆಂಕಟಸ್ವಾಮಿ, ವೇಮಗಲ್ ಕುಮಾರ್, ಮಾವೆ ಪ್ರಕಾಶ್, ವಕ್ಕಲೇರಿ ಹನುಮಯ್ಯ, ಮಂಜುನಾಥ್, ಹರ್ಷ, ಈಕಾಂಬಹಳ್ಳಿ ಮಂಜು, ನರಸಾಪುರ ಪುರುಷೋತ್ತಮ್,  ಮುಂತಾದವರು ಹಾಜರಿದ್ದರು.
 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...