ಬೆಂಗಳೂರು:ನಾಯಕ ನಟ ಉಪೇಂದ್ರರ ಹೊಸ - ಪ್ರಜಾ(ಕೀ)ಯಬ್

Source: shabbir | By Arshad Koppa | Published on 14th August 2017, 8:04 AM | State News | Guest Editorial |

ಶುಕ್ರವಾರದಂದು ಕನ್ನಡದ ನಾಯಕ ನಟ ಉಪೇಂದ್ರರವರು ಹೊಸ ಪ್ರಜಾ(ಕೀ)ಯ ಪಕ್ಷವನ್ನು ಕಟ್ಟುವ ಬಗ್ಗೆ ಮಾದ್ಯಮ ಮಿತ್ರರಿಗೆ ವಿವರಿಸಿದ ವೀಡಿಯೋ ಯೂ ಟೂಬ್‍ನಲ್ಲಿ ನೋಡಿದೆ. ಅವರ ಆಡಿಯೋ ಕ್ಲಿಪಿಂಗ್ ಕೇಳಿಸಿಕೊಂಡೆ ಬದಲಾವಣೆಯ ಮಾರ್ಗ ಸಂದೇಶದಂತೆ ನನಗೆ ಕಂಡಿತು.

ಉಪೇಂದ್ರ ಬಯಸುವ ಪಾರದರ್ಶಕ ಆಡಳಿತ ನಮ್ಮೆಲ್ಲರಿಗೂ ಅಗತ್ಯವಿದೆ ಎಂಬುದು ನನ್ನ ಆಶಯ. ಅಂದರೆ ಒಂದು ಟಿ.ವಿ. ಮಾದ್ಯಮದವರು ಸಂಬಳಕ್ಕೆ ಆಯ್ಕೆ ಮಾಡಿಕೊಳ್ಳುವ ವರದಿಗಾರ ಪ್ರತಿನಿತ್ಯ ಎಲ್ಲೆಲ್ಲೇ ಏನೇನು ನಡೆಯುತ್ತದೆ ಎಂಬುದನ್ನು ಲೈವ್ ಆಗಿ ನಮ್ಮ ಮುಂದೆ ತರುತ್ತಾನೆ. ಅದೇ ರೀತಿ ನಮ್ಮಿಂದ ಆಯ್ಕೆಯಾದ ಒಬ್ಬ ಜನಪ್ರತಿನಿದಿ ಪ್ರತಿನಿತ್ಯ ಏನೇನೂ ಕೆಲಸ ಮಾಡಿಸುತ್ತಾನೆ ಎಂಬುದನ್ನು ನೇರವಾಗಿ ಜನರೆಲ್ಲಾ ನೋಡಬೇಕಾಗಿದೆ. ಇಂತಹ ಪಾರದರ್ಶಕ ಕೆಲಸ ನಮ್ಮ ಸರ್ಕಾರ ಯಾಕೆ ಸಾಕಾರಗೊಳಿಸಿಲ್ಲವೆಂದು ಸತ್ಯವಾದ ವಿಚಾರ.
ಒಬ್ಬ ಶಾಸಕ ಪ್ರತಿವರ್ಷ 2 ಕೋಟಿ ಅನುದಾವನ್ನು ಪಡೆಯುತ್ತಾನೆ. ಆದರೆ ಶಾಸಕರು ಎಲ್ಲೆಲ್ಲೇ ಏನೇನು ಕೆಲಸಕ್ಕೆ ಎಷ್ಟು ಹಣ ಬಳಕೆ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕಾದರೆ ನಾನು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ ಇಂತಹ ವ್ಯವಸ್ಥೆಯನ್ನು ನಾವು ನಾಶ ಮಾಡಲೇಬೇಕಾಗಿದೆ.  ನಾವೆಲ್ಲರೂ ಆ ವ್ಯವಸ್ಥೆಯನ್ನೇ ಸರಿ ಮಾರ್ಗವೆಂದು ಪಾಲಿಸುವುದು ಸಹ ಸರಿಯಲ್ಲ. ಬದಲಾವಣೆ ಅಗತ್ಯವಿದೆ ಆ ನಿಟ್ಟಿನಲ್ಲಿ ಉಪೇಂದ್ರರವರ ಹೆಜ್ಜೆ ಪ್ರಶಂಶನೀಯ.
ಉಪೇಂದ್ರರ ಒಂದು ರೂಪಾಯಿ ಹಾಕಲ್ಲ.. ಒಂದು ರೂಪಾಯಿ ತೆಗೆಯಲ್ಲಾ ಕಾನ್ಸೆಪ್ಟ್ ಪ್ರಸಕ್ತ ಕಷ್ಠವೆನಿಸುವುದು ನಿಜ. ಯಾಕೆಂದರೆ ನಾನು ಹಣವಿಲ್ಲದಿದ್ದರೇ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯವೆಂದು ನಂಬಿದ್ದೇವೆ. ಆ ರೀತಿ ಆಯ್ಕೆಯಾದ ಒಬ್ಬ ವ್ಯಕ್ತಿ ಯಾರಾದರೂ ತೊಡಗಿಸಿದ ಹಣಕ್ಕೆ ದುಪ್ಪಟ್ಟು ದುಡಿಯುವ ಯೋಚನೆಗೆ ಮುಂದಾಗುತ್ತಾನೆಯೇ ಹೊರತು ಸರ್ಕಾರ ನೀಡುವ ಸಂಬಳಕ್ಕೆ ಅಲ್ಲವೇ ಅಲ್ಲ ಎಂಬುದೂ ನಿಜ.
ಪ್ರಚಾರದ ವಿಚಾರವಾಗಿ ಮೊದಲು ಒಬ್ಬ ಜನಪ್ರತಿನಿದಿ ಬೃಹತ್ ಸಭೆಗಳನ್ನು ಸೇರಿಸಲು ಜನರನ್ನು ಒಟ್ಟುಗೂಡಿಸಿ, ಬೃಹದಾಕಾರದ ಪೆಂಡಾಲ್ ಹಾಕಿ ವೇದಿಕೆ ಸಿದ್ದಗೊಳಿಸಿ ಪ್ರಚಾರ ಮಡುತ್ತಿದ್ದ, ಅದನ್ನು ಟಿ.ವಿ.ಮುಂದೆ ಕುಳಿತು ಅದನ್ನೇ ನೋಡುತ್ತೇವೆ. ಈಗಲೂ ಅದೇ ಪದ್ದತಿ ಮುಂದುವರೆದಿದೆ ಯಾಕೆ? ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ಪೇಸ್‍ಬುಕ್, ವಾಟ್ಸ್‍ಅಫ್, ಟ್ವಿಟ್ಟರ್, ಟಿ.ವಿ. ಮಾಧ್ಯಮ, ಬಹಳ ಮುಖ್ಯವಾದ ಮೊಬೈಲ್ ಪೋನ್‍ಗಳಲ್ಲಿ ಪ್ರಚಾರ ಸುಲಭಸಾಧ್ಯವೆಂದಾದರೂ ಅದೇ ಸಭೆಗಳನ್ನು ಸೇರಿಸುವುದಾದರೂ ಯಾಕೆ? ಅಷ್ಟೊಂದು ಹಣ ಖರ್ಚು ಮಾಡಿ ಪ್ರಚಾರ ಮಾಡುವುದಾದರೂ ಯಾಕೆ? ಎಂಬುದು  ನಾವೆಲ್ಲರೂ ಯೋಚಿಸಲೇಬೇಕಾದ ವಿಚಾರ.
ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಪ್ರಧಾನ ಮಂತ್ರಿಯವರೆಗೂ ಎಲ್ಲರೂ ಸಂಬಳ ಪಡೆಯುವವರೆ? ಆದರೆ ಅದು ಕಾಯಕವೆಂದು ಕೆಲಸ ನಿರ್ವಹಿಸುವವರು ಬಹಳ ವಿರಳ. ಬಹು ಮಂದಿ ತಾವು ಅಧಿಕಾರವನ್ನು ವ್ಯಾಪಾರವನ್ನಾಗಿಸಿಕೊಂಡಿದ್ದಾರೆ. ದುಡ್ಡು ಹಾಕಿ ದುಪ್ಪಟ್ಟು ಹಣ ಸಂಪಾದನೆಯ ಮಾರ್ಗವನ್ನಾಗಿಸಿದ್ದಾರೆ.  ನಮಗೆ ನಾಯಕ ಬೇಡ, ಸೇವಕನೂ ಬೇಡ, ಪ್ರತಿ ತಿಂಗಳು ಸಂಬಳ ಪಡೆದು ಕೆಲಸ ನಿರ್ವಹಿಸುವ ಒಬ್ಬ ಕಾರ್ಮಿಕ ಅಗತ್ಯವಿದೆ ಎಂಬುದಕ್ಕೆ ನನ್ನ ಸಹಮತವಿದೆ.
ಬೇರೆ ಪಕ್ಷವನ್ನು ಪ್ರತಿನಿಧಿಸುವ ಯೋಚನೆ ಅವರು ಕೈಬಿಟ್ಟಿದ್ದೂ ಸಹ ಈ ಮೇಲ್ಕಂಡ ಕಾರಣಗಳಿಗೆ. ಯಾಕೆಂದರೆ ಈಗಿರುವ ಎಲ್ಲಾ ಪಕ್ಷಗಳು ಕೆಲಸ ಮಾಡಿಲ್ಲವೆಂದಲ್ಲ, ಒಳ್ಳೆಯ ಜನಪ್ರತಿನಿಧಿಗಳು ಇಲ್ಲವೆಂಬ ಕಾರಣಕ್ಕೂ ಅಲ್ಲ. ಸಿದ್ದರಾಮ್ಯ, ಕುಮಾರಸ್ವಾಮಿ, ನರೇಂದ್ರ ಮೋದಿಯಂತಹ ವ್ಯಕ್ತಿಗಳು, ಅವರ ಪಕ್ಷಗಳು ಸರಿಯಿಲ್ಲವೆಂತಲೂ ಅಲ್ಲ. ಚುನಾವಣೆಗೆ ನಿಲ್ಲಬೇಕೆಂದರೆ ಹಣಬಲ, ಜಾತಿಬಲ, ಸಮಾಜ ಮುಖಿ ಕೆಲಸಗಳನ್ನು ಮಾಡಿದವರೇ ನಿಲ್ಲಬೇಕು ಮತ್ತು ಗೆಲ್ಲುವ ಕುದುರೆಗೆ ಓಟು ಹಾಕಬೇಕು ಎಂಬುದು ನಾನು ನೀವೆಲ್ಲರೂ ಪಾಲಿಸಿಕೊಂಡು ಬಂದಿರುವ ಮಾರ್ಗವಾಗಿದೆ. ಆದರೀಗ ಉಪೇಂದ್ರ ಬೇರೆ ಮಾರ್ಗವೊಂದನ್ನು ಹಿಡಿದಿದ್ದಾರೆ. ಸೋಲು ಗೆಲುವು ನಿರ್ಧರಿಸಬೇಕಾದುದ್ದು ಪ್ರಜೆ ಅಂದರೆ ಮತದಾರ. ಆ ಪ್ರಕ್ರಿಯೇ ಮತದಾನನಿಗೆ ಬಿಡಬೇಕು. ಉಪೇಂದ್ರರವರ ಮಾರ್ಗ ಸಾಧ್ಯವಿಲ್ಲವೆಂದು ಹೇಳುವುದು ಮಾತ್ರ ತಪ್ಪು ಎಂಬುದು ನನ್ನ ಅನಿಸಿಕೆ.

ನಾರಾಯಣವಿಭೂ
ಕೋಲಾರ
ಮೊ.:9742203988 


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...