ಭಟ್ಕಳದ 30 ಜನ ಕೊರೋನಾ ಸೋಂಕಿತರಲ್ಲಿ 9ಮಂದಿ ಆಸ್ಪತ್ರೆಯಿಂದ ಬಿಡುಗೊಳ್ಳುವ ಸಾಧ್ಯತೆ

Source: sonews | By Staff Correspondent | Published on 21st May 2020, 9:30 PM | Coastal News | Don't Miss |

•    ಕ್ವಾರೆಂಟೈನ್ ನಿಂದ 50ಕ್ಕೆ ಅಧಿಕ ಮಂದಿಗೆ ಮುಕ್ತಿ

ಭಟ್ಕಳ: ಕೊರೋನಾ ಸೋಂಕಿನೊಂದಿಗೆ ಕಾರವಾರದ ಕ್ರೀಮ್ಸ್(ಸರಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಮೂವತ್ತು ಜನರಲ್ಲಿ ಕೆಲವರ ವರದಿ ನೆಗೆಟಿವ್ ಬಂದಿರುವ ಕಾರಣ ಅವರನ್ನು ಶುಕ್ರವಾರ ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಲಭ್ಯ ಮಾಹಿತಿ ಪ್ರಕಾರ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಮೂವತ್ತು ಮಂದಿ ಕೊರೋನಾ ಸೋಂಕಿತರಲ್ಲಿ ಬಹಳಷ್ಟು ಜನರ 14 ದಿನಗಳ ಅವಧಿ ಪೂರ್ಣಗೊಂಡಿದ್ದು ಅಲ್ಲದೆ ಅವರ ಗಂಟಲು ದ್ರವ ಮಾದರಿಯ ವರದಿಯು ಎರಡೆರಡು ಬಾರಿ ಪರೀಕ್ಷೆಗೊಳಪಡಿಸಿದ್ದು ಫಲಿತಾಂಶ ನೆಗೆಟಿವ್ ಆಗಿದ್ದು ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಭಟ್ಕಳದ ಎಲ್ಲ ಮೂವತ್ತು ಮಂದಿ ಸೋಂಕಿತರು ಆರೋಗ್ಯದಿಂದಿದ್ದು ಈ ಹಿನ್ನೆಲೆಯಲ್ಲಿ 9ಜನರನ್ನು ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತಿದ್ದು ಉಳಿದವರಿಗೆ 2-3 ದಿನಗಳಲ್ಲಿ ಬಿಡುಗಡೆಗೊಳಿಸುತ್ತಾರೆ ಎನ್ನಲಾಗಿದೆ.  

ಭಟ್ಕಳದ 50ಕ್ಕೆ ಅಧಿಕ ಜನರಿಗೆ ಕ್ವಾರೆಂಟೈನ್‍ನಿಂದ ಸಿಕ್ಕಿತು ಮುಕ್ತಿ: ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದಾಗಿ ಭಟ್ಕಳದ 18ರ ಯುವತಿಯಲ್ಲಿ ಕೊರೋನಾ ಪಾಸಿಟಿವ್ ಆಗಿದ್ದು ಆ ಯುವತಿಯ ಪ್ರಾಥಮಿಕ ಮತ್ತು ದ್ವಿತೀಯಾ ಸಂಪರ್ಕದಲ್ಲಿದ್ದ 194 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದು ಅದರಲ್ಲಿ 30 ಮಂದಿಗೆ ಸೋಂಕು ಇದೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರನ್ನು ಹೊರತು ಪಡೆಸಿ ಉಳಿದವರನ್ನು ಭಟ್ಕಳದಲ್ಲಿ ಸರ್ಕಾರಿ ಕ್ವಾರೆಂಟೈನ್ ನಲ್ಲಿಡಲಾಗಿತ್ತು. ಅದರಲ್ಲಿ ಸುಮಾರು 50ಕ್ಕಿಂತ ಅಧಿಕ ಮಂದಿ 14ದಿನಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮತ್ತು ಅವರ ವರದಿ ನೆಗೆಟಿವ್ ಬಂದಿರುವುದರಿಂದ ಗುರುವಾರ ಅವರನ್ನು ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿದೆ. ಮೂಲಗಳ ಪ್ರಕಾರ ಉಳಿದವರ ವರದಿಯು ಶುಕ್ರವಾರದೊಳಗೆ ಬರುತ್ತಿದ್ದು ಅವರನ್ನು ಕೂಡ ಮನೆಗಳಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. 

Read These Next

ಉಡುಪಿ: ಸಂಪೂರ್ಣ ಲಾಕ್ಡೌನ್

ಉಡುಪಿ: ಸಂಡೆ ಲಾಕ್ಡೌನ್ ಗೆ ಉಡುಪಿ ಜಿಲ್ಲೆ ಅಕ್ಷರಶಃ ಸ್ಥಬ್ಧಗೊಂಡಿದೆ. ಕೊರೋನ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ...

ದ.ಕ. ಜಿಲ್ಲೆಯ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿತ;ಮಣ್ಣಿನಡಿ ಇಬ್ಬರು ಸಿಲುಕಿರುವ ಶಂಕೆ

ಬಂಟ್ವಾಳ: ತಾಲೂಕಿನ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ವೊಂದು ಕುಸಿದು ಬಿದ್ದಿದ್ದು ಇದರಿಂದಾಗಿ ಎರಡು ಮನೆಗಳು ...

ಭಟ್ಕಳ: ವುಮೆನ್ಸ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತ ಆರೈಕೆ; ೬೪ ಮಂದಿ ಸೋಂಕಿತರ ಸ್ಥಳಾಂತರ

ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ...

ದ.ಕ. ಜಿಲ್ಲೆಯ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿತ;ಮಣ್ಣಿನಡಿ ಇಬ್ಬರು ಸಿಲುಕಿರುವ ಶಂಕೆ

ಬಂಟ್ವಾಳ: ತಾಲೂಕಿನ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ವೊಂದು ಕುಸಿದು ಬಿದ್ದಿದ್ದು ಇದರಿಂದಾಗಿ ಎರಡು ಮನೆಗಳು ...

ಭಟ್ಕಳ: ವುಮೆನ್ಸ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತ ಆರೈಕೆ; ೬೪ ಮಂದಿ ಸೋಂಕಿತರ ಸ್ಥಳಾಂತರ

ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ...