ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ
ಭಟ್ಕಳ: ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ಒದ್ದಾಡುತ್ತಿರುವ ಸರಕಾರದ ಮತ್ತೊಂದು ನಿರ್ಲಕ್ಷ್ಯತನ, ರಾಜ್ಯದ ಸಾವಿರಾರು ಡಯಾಲಿಸೀಸ್ ರೋಗಿಗಳನ್ನು ಆತಂಕಕ್ಕೆ ನೂಕಿದೆ.
ಕಳೆದ 3-4 ವರ್ಷಗಳಿಂದ ಉತ್ತರಕನ್ನಡವೂ ಸೇರಿದಂತೆ ರಾಜ್ಯದ 23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಸೇವೆ ಆರಂಭಿಸಿದ್ದ ಬಿ.ಆರ್.ಶೆಟ್ಟಿ ಫೌಂಡೇಶನ್, ಇದೀಗ ಸರಕಾರದ ನೆರವು ಸಿಗದ ಕಾರಣ ಮೇ.15ರಿಂದಲೇ ತನ್ನ ಸೇವೆಯಿಂದ ಹಿಂದಕ್ಕೆ ಸರಿಯುವುದಾಗಿ ಸರಕಾರಕ್ಕೆ ಪತ್ರ ಬರೆದಿದೆ. ಇದರಿಂದ ಸರಕಾರಿ ಆಸ್ಪತ್ರೆಯಲ್ಲಿನ
ಕಳೆದ 3 ವರ್ಷಗಳ ಡಯಾಸೀಸ್ ಕೆಲಸದ ರು.28ಕೋ. ಹಣ ಇನ್ನೂ ಬಾಕಿ ಇದೆ. ನಮಗೆ ಇನ್ನು ಡಯಾಲಿಸೀಸ್ ಕೇಂದ್ರ ನಡೆಸಲು ಆಗುತ್ತಿಲ್ಲ. ಈ ಬಗ್ಗೆ ಕಳೆದ ಏ.21ರಂದೇ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಇಲ್ಲಿಯವರೆಗೂ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. - ಕುಶಾಲ್ ಶೆಟ್ಟಿ, ಬಿ.ಆರ್.ಶೆಟ್ಟಿ ಫೌಂಡೇಶನ್‍ನ ಪ್ರಧಾನ ವ್ಯವಸ್ಥಾಪಕರು |
ಡಯಾಲಿಸೀಸ್ ಸೇವೆ ತೂಗುಯ್ಯಾಲೆಯಲ್ಲಿ ಸಿಲುಕಿದಂತಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕಾರ್ಯಕ್ಕೆ ಬಳಸಲಾಗುವ ವಸ್ತುಗಳು ಇನ್ನು 2-3 ದಿನಗಳಲ್ಲಿ ಮುಗಿದು ಹೋಗಲಿದ್ದು, ಅಲ್ಲಿಯವರೆಗೆ ಮಾತ್ರ ಡಯಾಲಿಸೀಸ್ ನಡೆಸುವುದಾಗಿ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಸರಕಾರ ಮೌನ ಮುಂದುವರೆದರೆ ಮುಂದೇನು ಎನ್ನುವ ಪ್ರಶ್ನೆ ಡಯಾಲಿಸೀಸ್ ರೋಗಿಗಳನ್ನು ಕಾಡಲಾರಂಭಿಸಿದೆ.
ಏನಿದು ಡಯಾಲಿಸೀಸ್ ಆತಂಕ?
ರಾಜ್ಯದ ಡಯಾಲಿಸೀಸ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿಯೇ
ನಮಗೆ ಕಳೆದ 2 ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ. ಡಯಾಲಿಸೀಸ್ ಕೇಂದ್ರದಲ್ಲಿ ವಸ್ತುಗಳು ಇರುವ ತನಕ ಮುಂದುವರೆಸುತ್ತೇವೆ, ನಂತರ ನಿಲ್ಲಿಸದೇ ಬೇರೆ ಮಾರ್ಗ ಇಲ್ಲ. - ಡಯಾಲಿಸೀಸ್ ಸೆಂಟರ್‍ನ ಓರ್ವ ಸಿಬ್ಬಂದಿ |
ಡಯಾಲಿಸೀಸ್ ಸೇವೆ ಆರಂಭಿಸಲು 2017 ಏಪ್ರಿಲ್‍ನಲ್ಲಿ ಅಂದಿನ ಸರಕಾರ ತೀರ್ಮಾನಿಸಿ ಟೆಂಡರ್ ಕರೆದಿತ್ತು. ಅದರಂತೆ ರಾಜ್ಯದ 23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಡಯಾಲಿಸೀಸ್ ಸೇವೆಯ ಹೊಣೆಗಾರಿಯನ್ನು ಬಿ.ಆರ್.ಶೆಟ್ಟಿ ಫೌಂಡೇಶನ್ ಪಡೆದುಕೊಂಡಿತ್ತು. ಇದಕ್ಕಾಗಿ ಫೌಂಡೇಶನ್ ಸರಿಸುಮಾರು 700 ಸಿಬ್ಬಂದಿಗಳನ್ನು ನಿಯೋಜಿಸಿ ಕೆಲಸ ಆರಂಭಿಸಿತ್ತು. ಪ್ರಸಕ್ತವಾಗಿ 3000ಕ್ಕೂ ಅಧಿಕ ಕಿಡ್ನಿ ಸಂಬಂಧಿ ರೋಗಿಗಳು ಇವರದ್ದೇ ಕೇಂದ್ರಗಳಲ್ಲಿ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದಾರೆ.
ಆದರೆ ಫೌಂಡೇಶನ್ ಪ್ರಮುಖರು ಹೇಳುವ ಪ್ರಕಾರ ಕಳೆದ 3 ವರ್ಷಗಳಿಂದ ಸರಕಾರ ಡಯಾಲಿಸೀಸ್ ಕೆಲಸಕ್ಕೆ ಹಣವನ್ನೇ ನೀಡಿಲ್ಲ. 3 ವರ್ಷಗಳ ಬಾಕಿಯೇ ರು.28 ಕೋ. ದಾಟಿದೆ, ಸಿಬ್ಬಂದಿಗಳ ಮಾಸಿಕ ಸಂಬಳವೇ ರು.1ಕೋ. ತಲುಪಿದ್ದು, ಸರಕಾರದ ನೆರವು ಇಲ್ಲದೇ ಇದ್ದರೆ ತನಗೆ ಡಯಾಲಿಸೀಸ್ ಸೆಂಟರ್‍ನ್ನು ನಡೆಸುವುದೇ ಕಷ್ಟ ಎಂದು ಸಂಸ್ಥೆ ಹೇಳಿಕೊಂಡಿದೆ. ( ಅಲ್ಲದೇ ಸಿಬ್ಬಂದಿಗಳಿಗೆ ಕಳೆದ 2 ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ ಎಂಬ ಮಾಹಿತಿ ಇದೆ) ಸೇವೆ ಸ್ಥಗಿತಗೊಳಿಸುವುದಾಗಿ ಸಂಸ್ಥೆ ಕಳೆದ ಏ.21ರಂದೇ ಸರಕಾರಕ್ಕೆ ಪತ್ರ ಬರೆದುಕೊಂಡಿದ್ದರೂ, ಸರಕಾರ ಆ ಬಗ್ಗೆ ಬೆನ್ನು ಹಾಕಿ ಕುಳಿತಿದೆ.
ಮಾತ್ರವಲ್ಲ, ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸರಕಾರದ ವತಿಯಿಂದಲೇ ಮುನ್ನಡೆಸುವ ಬಗ್ಗೆಯೂ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಏಕಾಏಕಿ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಸೇವೆ ನಿಂತು ಹೋದರೆ ಖಾಸಗಿ ಆಸ್ಪತ್ರೆಗಳ ದುಬಾರಿ ಡಯಾಲಿಸೀಸ್ ಪಡೆಯಲಾಗದ ಬಡ ರೋಗಿಗಳು ಏನು ಮಾಡಬೇಕು ಎನ್ನುವುದಕ್ಕೆ ಉತ್ತರ ಸಿಗುತ್ತಿಲ್ಲ.