ಭಯೋತ್ಪಾದಕ ಆರೋಪದಡಿ ಬಂಧಿತ ಭಟ್ಕಳದ ಸಿದ್ದಿಬಾಪ ನಿರಪರಾಧಿ; ಬಿಡುಗಡೆಗೆ ಆದೇಶಿಸಿದ ನ್ಯಾಯಾಲಯ

Source: S O News | By I.G. Bhatkali | Published on 2nd April 2023, 6:23 PM | Coastal News | State News | National News |

ಭಟ್ಕಳ: ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸದಸ್ಯನಾಗಿದ್ದು, ೨೦೦೭ರಿಂದ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪ ಅವರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ  ಬಿಡುಗಡೆಯ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ಅಬ್ದುಲ್ ವಾಹಿದ್ ಅವರ ವಕೀಲ ಎಂಎಸ್ ಖಾನ್, ಈ ಕುರಿತಂತೆ  ಸಾಹಿಲ್ ಆನ್‌ಲೈನ್ ಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯವು ಆರೋಪಿ ಅಬ್ದುಲ್ ವಾಹಿದ್ ಸಿದ್ದಿಬಾಪರನ್ನು ಎಲ್ಲಾ ಆರೋಪಗಳಿಂದ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

Delhi court acquitts Bhatkal youth after seven years

ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ನೀಡುವ ಸಂಘಟನೆಯಾದ ಜಮಿಯತ್ ಉಲಮಾ ಹಿಂದ್ ಕಾನೂನು ನೆರವು ಸಮಿತಿಯ ಮುಖ್ಯಸ್ಥ ಗುಲ್ಜಾರ್ ಅಜ್ಮಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡುತ್ತಾ, ಏಳು ವರ್ಷಗಳ ಹಿಂದೆ ಆರೋಪಿಯನ್ನು ಭುಯೋತ್ಪಾದಕ ಚಟುವಟಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು, ಈಗ ನ್ಯಾಯಾಲಯ ಅವರನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳೀಸಿದೆ ಎಂದು ಮಾಹಿತಿ ನೀಡಿದ್ದಾರೆ. 

ಅಬ್ದುಲ್ ವಾಹಿದ್ ಸಿದ್ದಿಬಾಪಾ ಅವರನ್ನು ಮೇ ೨೦, ೨೦೧೬ ರಂದು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್.ಐ.ಎ ಬಂಧಿಸಿತ್ತು. ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸೀನ್ ಭಟ್ಕಳ್ ಅವರ ಸಂಬಂಧಿ ಎಂದು ಆರೋಪಿಸಲಾಗಿತ್ತು. ದುಬೈನಲ್ಲಿ ನೆಲೆಸಿರುವಾಗ ಅಬ್ದುಲ್ ವಾಹಿದ್ ಅವರು ನಿಷೇಧಿತ ಸಂಘಟನೆಗೆ ಸೇರುವಂತೆ ಜನರ ಮನವೊಲಿಸುತ್ತಿದ್ದರು ಎಂಬ  ಆರೋಪವನ್ನೂ ಹೊರಿಸಲಾಗಿತ್ತು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದುಬೈನಲ್ಲಿ ಹಣ ಸಂಗ್ರಹಿಸಿದ್ದ ಆರೋಪವೂ ಅವರ ಮೇಲಿತ್ತು. ಆದರೆ ಪಟಿಯಾಲ ಹೌಸ್ ಸೆಷನ್ ಕೋರ್ಟ್ ಅವರ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿದೆ ಮತ್ತು ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.

ಅಬ್ದುಲ್ ವಾಹಿದ್ ಬಂಧನದ ಮೊದಲ ದಿನದಿಂದ ಪ್ರಕರಣವನ್ನು ನಿರ್ವಹಿಸುತ್ತಿದ್ದ ಜಮೀಯತುಲ್ ಉಲಮಾದ ವಕೀಲ ಎಂ.ಎಸ್.ಖಾನ್, ತನ್ನ ಕಕ್ಷಿದಾರನು ಸಂಪೂರ್ಣವಾಗಿ ನಿರಪರಾಧಿ ಮತ್ತು ಸುಳ್ಳು ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾನೆ ಎಂಬುದು ತಿಳಿದಿತ್ತು.  ಈಗ ಆತ ನಿರಪರಾಧಿ ಎಂದು ಸಾಬೀತಾಗಿರುವುದು ಸಂತೋಷವಾಗಿದೆ ಎಂದು ಹೇಳಿದರು.  ನ್ಯಾಯಾಲಯವು ಅಬ್ದುಲ್ ವಾಹಿದ್ ಬಿಡುಗಡೆಗೆ ಆದೇಶಿಸಿದ್ದು, ಸೋಮವಾರ ಜೈಲಿನಿಂದ ಹೊರಬರಲಿದ್ದಾರೆ ಎಂದು  ನ್ಯಾಯಾವಾದಿ ಎಂ.ಎಸ್.ಖಾನ್ ಹೇಳಿದ್ದಾರೆ.

Read These Next

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ

ಕಾರವಾರ :ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ...

ಮಳೆಗಾಲದಲ್ಲಿ ಮುನ್ನೆಚ್ಚರಿಕೆ; ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಲು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ

ಮಳೆಗಾಲದಲ್ಲಿ ಕಂಡು ಬರಬಹುದಾದ ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಮತ್ತಿತರ ರೋಗಗಳ ಲಕ್ಷಣಗಳು, ಅವುಗಳ ಹರಡುವಿಕೆ ಹಾಗೂ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...

ಹುಬ್ಬಳ್ಳಿ-ಧಾರವಾಡ ಕೊಲೆ ಪ್ರಕರಣಗಳು ವರದಿ ಸಲ್ಲಿಸಲು ಎಡಿಜಿಪಿಗೆ ಸೂಚನೆ; ಪರಮೇಶ್ವ‌ರ್

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪದೇ ಪದೇ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ...

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆ; ಆರೋಪಿ ಪರಾರಿ | ಹುಬ್ಬಳ್ಳಿಯಲ್ಲಿ ನಡೆದ ಎರಡನೇ ಬರ್ಬರ ಕೃತ್ಯ

ಹುಬ್ಬಳ್ಳಿಯ ನೇಹಾ ಹಿರೇಮಠ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮೀನಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಪ್ರೀತಿ ನಿರಾಕರಿಸಿದ ಕಾರಣಕ್ಕೆ ...

ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಬೇಕಿದೆ: ದಿಲ್ಲಿ ಸಿಎಂ

ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಶುಕ್ರವಾರ ತಿಹಾರ್ ಜೈಲಿನಿಂದ ...

ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...