ಜಿದ್ದಾದಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ಮೊದಲ 3 ಸ್ಥಾನಗಳನ್ನು ಗೆದ್ದುಕೊಂಡ ಭಟ್ಕಳದ ಮಹಿಳೆಯರು

Source: S O News | By I.G. Bhatkali | Published on 2nd November 2021, 6:58 PM | Coastal News | Gulf News | Don't Miss |

ಭಟ್ಕಳ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ಸವಿ ನೆನಪಿಗಾಗಿ ಅರಬ್ ರಾಷ್ಟ್ರ ಸೌದಿ ಅರೇಬಿಯಾ ಜಿದ್ದಾದಲ್ಲಿ ನಡೆದ ಭಾರತೀಯ ಮಹಿಳೆಯರು ಅಡುಗೆ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ಮೂವರು ಮಹಿಳೆಯರ ಮೊದಲ 3 ಸ್ಥಾನಗಳನ್ನು ಪಡೆದಿದ್ದಾರೆ.

ತಾಲೂಕಿನ ಬಾಸಿಮಾ ಮೋತಿಶಮ್ ಅಬ್ದುಲ್ ಮಲ್ಲೀಕ್ ಇವರು ಶಾವಿಗೆ ಹಾಗೂ ಹಾಲಿನ ಕೆನೆಯಿಂದ ತಯಾರಿಸಿದ ಅಂಗೂರ್ ರಸ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರೆ, ಇಲ್ಲಿನ ಅನ್‌ಆಮ್ ತಂದೆ ರೆಹಾನ್ ಕೊಬಟ್ಟೆ ಇವರು ಕ್ಯಾರೆಟ್ ಮತ್ತು ಬಾದಾಮ ಹಾಲಿನಿಂದ ತಯಾರಿಸಿದ ವೈಟ್ ಚಾಕಲೇಟ್ ಪಾನಿಪುರಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಮುಂತಝಾ ಉಬೈದುಲ್ಲಾ ಆಸ್ಕಿರಿ ಇವರು ಸಿಂಯಾಳ ಮತ್ತು ಸೀತಾಫಲ ಹಣ್ಣನ್ನು ಬಳಸಿಕೊಂಡು ಟೆಂಡರ್‌ ಕೊಕೋನಟ್ ಎಂಡ್ ಸೀತಾಫಲ್ ಮೆಥೇ ತಯಾರಿಸಿ ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಜಿದ್ದಾದ ಭಾರತೀಯ ರಾಯಭಾರ ಕಚೇರಿ ಆವರಣದಲ್ಲಿ ಇಂಡಿಯನ್ ಫ್ರಟೆರ್ನಿಟಿ ಫೋರಮ್ ವತಿಯಿಂದ ಫೂಡ್ ಎಕ್ಸಿಬಿಶನ್ ಎಂಡ್ ಡೆಸರ್ಟ ಕಾಂಟೆಸ್ಟ್' ಹೆಸರಿನಲ್ಲಿ ಯೋಜಿಸಲಾದ ಈ ಸ್ಪರ್ಧೆಯಲ್ಲಿ ಭಟ್ಕಳದ 8 ಮಹಿಳೆಯರು ಸೇರಿದಂತೆ ದೇಶದ ವಿವಿಧೆಡೆಯ 40 ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಟ್ಕಳ ಮಹಿಳೆಯರ ಈ ಸಾಧನೆಗೆ ಇಲ್ಲಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...