ಟೇಸ್ಟಾ ಸೆಟಲ್ವಾಡ್ ಬಂಧನಕ್ಕೆ ವಿರೋಧ; ದೇಶಾದ್ಯಂತ ಪ್ರತಿಭಟನೆ; ರಾಜ್ಯದ ವಿವಿಧೆಡೆ ಧರಣಿ

Source: Vb | By I.G. Bhatkali | Published on 27th June 2022, 8:16 AM | National News |

ಹೊಸದಿಲ್ಲಿ: 2002ರ ಗೋಧ್ರಾ ದಂಗೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧದ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ಝಕಿಯಾ ಜಾಫ್ರಿಯವರ ಬೆಂಬಲಕ್ಕೆ ನಿಂತಿದ್ದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾಡ್ ಅವರನ್ನು ಬಂಧಿಸಿದ್ದಕ್ಕಾಗಿ ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಕೀಲರು ಗುಜರಾತ್ ಪೊಲೀಸರು ಮತ್ತು ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸಿದ್ದಾರೆ.

ಸೆಟಲ್ವಾಡ್ ಬಂಧನವನ್ನು ಖಂಡಿಸಿ ಶನಿವಾರ ಹೇಳಿಕೆಯನ್ನು ಹೊರಡಿಸಿರುವ ಆಮೈ ಸ್ಟಿ ಇ೦ಟರ್ ನ್ಯಾಷನಲ್ ಇಂಡಿಯಾ, 'ಭಾರತೀಯ ಅಧಿಕಾರಿಗಳು ಸೆಟಲ್ವಾಡ್ರನ್ನು ಬಂಧಿಸಿರುವುದು ಮಾನವ ಹಕ್ಕುಗಳ ದಾಖಲೆಯನ್ನು ಪ್ರಶ್ನಿಸುವವರ ವಿರುದ್ದದ ನೇರ ಪ್ರತೀಕಾರ ಕ್ರಮವಾಗಿದೆ. ಇದು ನಾಗರಿಕ ಸಮಾಜಕ್ಕೆ ಬೆದರಿಕೆಯ ಸಂದೇಶವನ್ನು ರವಾನಿಸಿದೆ ಮತ್ತು ದೇಶದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವನ್ನು ಇನ್ನಷ್ಟು ಕುಗ್ಗಿಸಿದೆ. ಮಾನವ ಹಕ್ಕುಗಳ ಕಾರ್ಯಕರ್ತರನ್ನು ಅವರ ಶಾಸನಬದ್ಧ ಮಾನವ ಹಕ್ಕುಗಳ ಕೆಲಸಕ್ಕಾಗಿ ಗುರಿಯಾಗಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಭಾರತೀಯ ಅಧಿಕಾರಿ ಗಳು ಸೆಟಲ್ವಾಡ್‌ರನ್ನು ತಕ್ಷಣ ಬಿಡುಗಡೆ ಗೊಳಿಸಬೇಕು ಮತ್ತು ಭಾರತೀಯ ನಾಗರಿಕ ಸಮಾಜ ಹಾಗೂ ಮಾನವ ಹಕ್ಕುಗಳ ಸಮರ್ಥಕರಿಗೆ ಕಿರುಕುಳವನ್ನು ನಿಲ್ಲಿಸಬೇಕು ಎಂದು ಹೇಳಿದೆ.

ಗುಜರಾತ್ ಎಟಿಎಸ್‌ ನಿಂದ ಸೆಟಲ್ವಾಡ್ ಬಂಧನವನ್ನು ಖಂಡಿಸಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳೆಯರ ಸಂಘ (ಎಐಡಿಡಬ್ಲ್ಯುಎವು, 'ಗುಜರಾತ್ ಹತ್ಯಾಕಾಂಡದಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯದ ದುರದೃಷ್ಟಕರ ನಿರ್ಧಾರದ ಬೆನ್ನಲ್ಲೇ ಗುಜರಾತ್ ಪೊಲೀಸರು ಜಾಫ್ರಿಯವರ ಬೆಂಬಲಕ್ಕೆ ಬಂಡೆಯಂತೆ ನಿಂತಿದ್ದ ಸೆಟಲ್ವಾಡ್‌ರನ್ನು ಬಂಧಿಸಿದ್ದಾರೆ.

ಇದಕ್ಕಾಗಿ ಮತ್ತು ಅವರ ಅನುಕರಣೀಯ ಧೈರ್ಯದ ಇತರ ಕಾರ್ಯಗಳಿಗಾಗಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿದೆ. ಅವರ ವಿರುದ್ಧದ ಪ್ರಕರಣವನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಮತ್ತು ಕಿರುಕುಳವನ್ನು ನಿಲ್ಲಿಸಬೇಕು ಎಂದು ಅದು ಆಗ್ರಹಿಸಿದೆ.

'ಭಾರತಕ್ಕೆ ಝಕಿಯಾ ಜಾಫ್ರಿಯವರ ಧೈರ್ಯ ಮತ್ತು ಧೈರ್ಯವನ್ನು ಹೊಂದಿರುವ ಹೆಚ್ಚಿನ ಪ್ರಜೆಗಳ ಮತ್ತು ಸೆಟಲ್ವಾಡ್ ಅವರಂತಹ ಇನ್ನಷ್ಟು ಮಾನವ ಹಕ್ಕುಗಳ ಹೋರಾಟಗಾರರ ಅಗತ್ಯವಿದೆ. ನಾವು ಅವರ ಜೊತೆಯಲ್ಲಿದ್ದೇವೆ ' ಎಂದು ಲೆಫ್ಟ್‌ವರ್ಡ್ ಬುಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತ್ಯೇಕವಾಗಿ ಹಲವಾರು ವಕೀಲರು ಸಹ ಝಕಿಯಾ ಜಾಫ್ರಿಯವರ ಅರ್ಜಿಯನ್ನು ವಜಾಗೊಳಿಸುವಾಗ ಪ್ರಕ್ರಿಯೆಯ ಇಂತಹ ದುರುಪಯೋಗದಲ್ಲಿ ಪಾಲ್ಗೊಂಡಿರುವ ಎಲ್ಲರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವ ಅಗತ್ಯವಿದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವನ್ನು ಖಂಡಿಸಿದ್ದಾರೆ.

'ಜಾಗತಿಕ ನ್ಯಾಯಶಾಸ್ತ್ರಕ್ಕೆ ಭಾರತೀಯ ಸರ್ವೋಚ್ಚ ನ್ಯಾಯಾಲಯದ ಕೊಡುಗೆಯೆಂದರೆ ವ್ಯಕ್ತಿಯನ್ನು ಬಂಧಿಸುವಂತೆ ಸರಕಾರಕ್ಕೆ ಸೂಚಿಸುವ ಮೂಲಕ ವ್ಯಕ್ತಿ ವಿರುದ್ಧ ಸರಕಾರ ಪ್ರಕರಣವನ್ನು ಇತ್ಯರ್ಥಗೊಳಿಸುವುದು. ಇದೊಂದು ಗಮನಾರ್ಹ ಸಾಂವಿಧಾನಿಕ ನವೀನತೆಯಾಗಿದೆ 'ಎಂದು ಸಾಂವಿಧಾನಿಕ ವಕೀಲ ಮತ್ತು ಕಾನೂನು ತಜ್ಞ ಗೌತಮ್ ಭಾಟಿಯಾ ಟ್ವಿಟಿಸಿದ್ದಾರೆ.

2002ರ ಗುಜರಾತ್ ದಂಗೆಗಳ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ 64 ಜನರಿಗೆ ವಿಶೇಷ ತನಿಖಾ ತಂಡವು ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸರ್ವೋಚ್ಚನ್ಯಾಯಾಲಯವು ವಜಾಗೊಳಿಸಿತ್ತು. ಅದರ ಬೆನ್ನಲ್ಲೇ ಶನಿವಾರ ಗುಜರಾತ್‌ ಎಟಿಎಸ್ ಸೆಟಲ್ವಾಡ್‌ರನ್ನು ಮುಂಬೈನ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಂಡು ಅಹ್ಮದಾಬಾದ್‌ಗೆ ಕರೆದೊಯ್ದಿತ್ತು. ರವಿವಾರ ಸೆಟಲ್ವಾಡ್‌ರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಮುನ್ನ ಅಹ್ಮದಾಬಾದ್‌ನ ಎಸ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿದವು.

ಗುಜರಾತಿನ ಇಬ್ಬರು ಐಪಿಎಸ್‌ ಅಧಿಕಾರಿಗಳಾದ ಸಂಜೀವ ಭಟ್ ಮತ್ತು ಆರ್.ಬಿ.ಶ್ರೀಕುಮಾರ ಅವರು ಸೆಟಲ್ವಾಡ್ ಅವರೊಂದಿಗೆ ಆರೋಪಿಗಳಾಗಿದ್ದಾರೆ. ಬೇರೊಂದು ಪ್ರಕರಣದಲ್ಲಿ ಭಟ್ ಈಗಾಗಲೇ ಜೈಲಿನಲ್ಲಿದ್ದರೆ ಶ್ರೀಕುಮಾರ್ ಅವರನ್ನು ಶನಿವಾರ ಗಾಂಧಿನಗರದ ಅವರ ನಿವಾಸದಿಂದ ಬಂಧಿಸಲಾಗಿದೆ.

ರಾಜ್ಯದ ವಿವಿಧೆಡೆ ಧರಣಿ
ಬೆಂಗಳೂರು: ಸಾಮಾಜಿಕ ಕಾರ್ಯಕರ್ತೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಶ್ರೀಕುಮಾರ್ ಅವರನ್ನು ಬಂಧಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ರಾಜ್ಯದ ವಿವಿಧೆಡೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಧರಣಿ, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ರಾಜಧಾನಿ ಬೆಂಗಳೂರು,

ಕಲಬುರಗಿ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಚಿಂತಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆ ಸಲ್ಲದು, ಹಲವು ಜನಪರ ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ. ಆದರೆ, ಟೇಸ್ಟಾ ಸೆಟಲ್ವಾಡ್ ಅವರನ್ನು ಉಳಿಸಿ ಕೊಳ್ಳಲೇಬೇಕು ಎಂದು ಘೋಷಣೆ ಕೂಗಿದರು.

ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್‌ ಚಿಟ್ ಕೊಟ್ಟ ಬೆನ್ನಲ್ಲೇ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಮತ್ತು ಅವರ ಬಳಗ ಸೇಡಿನ ರಾಜಕಾರಣ ಪ್ರಾರಂಭಿಸಿದೆ. ಸುಳ್ಳು ಆರೋಪದ ಮೇಲೆ ಟೀಸ್ಪಾ ಸೆಟಲ್ವಾಡ್ ಅವರನ್ನು ವಿಚಾರಣೆ ಹೆಸರಲ್ಲಿ ಕಸ್ಟಡಿಗೆ ತೆಗೆದುಕೊಂಡಿರುವುದು ಸರ್ವಾಧಿಕಾರಿ ದಬ್ಬಾಳಿಕೆ ಎಂದು ಹೋರಾಟಗಾರರು ಟೀಕಿಸಿದರು.

ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯನುದ್ದೇಶಿಸಿ ಮಾತನಾಡಿದ ಹೋರಾಟಗಾರ್ತಿ ಕೆ.ನೀಲಾ, 2002ರಲ್ಲಿ ಗುಜರಾತ್ ನಲ್ಲಿ ನಡೆದ ಕೋಮು ಹಿಂಸಾಚಾರದ ನರಮೇಧದಲ್ಲಿ ಆಗಿನ ಸರಕಾರದ ಪಾತ್ರ ಇದ್ದುದನ್ನು ಸತತವಾಗಿ ಬಹಿರಂಗಪಡಿಸುತ್ತಲೇ ಇರುವ ಟೀಸ್ಟಾ ಸೆಟಲ್ದಾಡ್ ವಿರುದ್ಧ ಫ್ಯಾಶಿಸ್ಟ್ ಸರಕಾರ ನಡೆಸಿರುವ ದಾಳಿ ಅತ್ಯಂತ ಹೇಯವಾದ ಕೃತ್ಯ ಎಂದು ಕಟು ಶಬ್ದಗಳಲ್ಲಿ ಖಂಡಿಸಿದರು.

ಈಗಿನ ಕೇಂದ್ರದ ಬಿಜೆಪಿ ಸರಕಾರ ದ್ದೇಷದ, ಸೇಡಿನ ರಾಜಕೀಯವನ್ನು ದೇಶದ ತುಂಬೆಲ್ಲ ಹರಡಿಸುತ್ತಿದೆ. ಅದನ್ನು ಜನಮಾನಸದಲ್ಲಿ ಕಸಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದ ಅವರು, ಟೀಸ್ಟಾ ಸೆಟಲ್ವಾಡ್ ಹಾಗೂ ಶ್ರೀಕುಮಾರ್ ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಬೆಂಗಳೂರಿನ ಪುರಭವನದ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ್ತಿ ಗೌರಮ್ಯಾ, ವಿಚಾರಣೆ ನೆಪದಲ್ಲಿ ಟೀಸ್ಟಾ ಅವರನ್ನು ಕರೆದೊಯ್ದು ಏಕಾಏಕಿ ಬಂಧಿಸಲಾಗಿದೆ. ಅಲ್ಲದೆ, ಈಗಿನ ಕೇಂದ್ರ ಸರಕಾರ ಜನಪರ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಬಂಧಿಸುತ್ತಿದೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ, ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡ ಆರ್.ಮೋಹನ್ ರಾಜ್, ಜನಶಕ್ತಿಯ ಗೌರಿ, ಎಸ್‌ಎಫ್‌ಐ ವಾಸುದೇವರೆಡ್ಡಿ, ನರಸಿಂಹಮೂರ್ತಿ, ಪ್ರಭಾ ಬೆಳವಂಗಲ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read These Next

ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...