ಖತರ್‌ನಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ಭಾರತದ ರಾಯಭಾರಿ ಕಚೇರಿ ಖಂಡನೆ

Source: VB | Published on 30th September 2021, 8:30 PM | National News | Gulf News |

ಹೊಸದಿಲ್ಲಿ: ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡುವ ಅರೇಬಿಕ್ ಟ್ವಿಟರ್ ಹ್ಯಾಶ್ ಟ್ಯಾಗ್ ಬಗ್ಗೆ ಸುಮಾರು 1 ವರ್ಷದ ಬಳಿಕ ಎಚ್ಚರಿಕೆ ನೀಡಿರುವ ಖತರ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿ, ಇದು ಭಾರತದ ವಿರುದ್ದದ ಸುಳ್ಳುಪ್ರಚಾರವಾಗಿದೆ ಎಂದು ಪ್ರತಿಕ್ರಿಯಿಸಿದೆ.

ಸಾಮಾಜಿಕ ಮಾಧ್ಯಮದ ಮೂಲಕ ಭಾರತದ ಬಗ್ಗೆ ಸುಳ್ಳು ಸುದ್ದಿ ಪ್ರಚಾರ ಮಾಡಿ ದ್ವೇಷ ಮತ್ತು ಅಸಾಮರಸ್ಯ ಹರಡುವ ದುರುದ್ದೇಶಪೂರಿತ ಪ್ರಯತ್ನ ನಡೆಯುತ್ತಿದೆ ಎಂದು ಖತ‌ನಲ್ಲಿನ ಭಾರತೀಯ ದೂತಾವಾಸ ಮಂಗಳವಾರ ಟ್ವಿಟ್ ಮಾಡಿದೆ. ಇಂತಹ ಸುಳ್ಳು ಸುದ್ದಿ, ಪ್ರಚಾರ, ತಿರುಚಿದ ವೀಡಿಯೊಗಳನ್ನು ನಂಬಿ ಮೋಸಹೋಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಎಲ್ಲಾ ಭಾರತೀಯ ಪ್ರಜೆಗಳೂ ಏಕತೆ ಮತ್ತು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಟ್ವಿಟ್‌ನಲ್ಲಿ ತಿಳಿಸಲಾಗಿದೆ. ಸುಮಾರು 15 ನಿಮಿಷದ ಬಳಿಕ ಇದೇ ಟೀಟ್ ಅನ್ನು ಅರೇಬಿಕ್‌ನಲ್ಲೂ ಮಾಡಲಾಗಿದೆ.

ಬಾಯ್ಕಾಟ್ ಇಂಡಿಯನ್ ಪ್ರಾಡಕ್ಟ್ (ಭಾರತೀಯ ಉತ್ಪ ನ್ನಗಳನ್ನು ಬಹಿಷ್ಕರಿಸಿ) ಎಂಬ ಟ್ವಿಟರ್ ಟ್ರೆಂಡ್ ಖತರ್‌ನಲ್ಲಿ ಅಗ್ರ ಟ್ವಿಟರ್ ಟ್ರೆಂಡ್‌ಗಳಲ್ಲಿ ಒಂದಾಗಿದೆ. ಧಾರ್ಮಿಕ

ಮತಭೇದದ ಬೀಜ ಬಿತ್ತುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆಯಿಂದ ಇರುವಂತೆ 2020ರಲ್ಲಿ ಕೊಲ್ಲಿರಾಷ್ಟ್ರಗಳಲ್ಲಿನ ಹಲವು ಭಾರತೀಯ ನಿಯೋಗಗಳು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ರವಾನಿಸಿದ್ದವು. ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಕೆಲವು ಭಾರತೀಯರು ಇಸ್ಲಾಮೊಫೋಬಿಕ್ (ಇಸ್ಲಾಂ ಅಥವಾ ಮುಸ್ಲಿಮರ ವಿರುದ್ಧ ಪೂರ್ವಾಗ್ರಹ ಪೀಡಿತ ಭಾವನೆ) ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದ ಪ್ರಕರಣಗಳನ್ನು ಅರಬ್‌ನ ಟ್ವಿಟರ್ ಬಳಕೆದ ಉಲ್ಲೇಖಿಸಿದ ಬಳಿಕ ಸಾಮಾಜಿಕ ಮಾಧ್ಯಮ 5 ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಿಲ್ಲಿಯಲ್ಲಿ ನಡೆದಿದ್ದ ತಲ್ಲೀಗಿ ಜಮಾಅತ್ ಅಧಿವೇಶನವನ್ನು ಕೊರೋನ ಹರಡುವ ಹಾಟ್‌ಸ್ಪಾಟ್ ಎಂದು ಭಾರತ ಸರಕಾರ ಹಾಗೂ ಮಾಧ್ಯಮದ ಒಂದು ವಿಭಾಗ ಬಣ್ಣಿಸಿರುವುದನ್ನು ಖಂಡಿಸಿ ಕೊಲ್ಲಿ ರಾಷ್ಟ್ರಗಳಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಸ್ಸಾಮಿನ ದರಾಂಗ್‌ನಲ್ಲಿ ಜನರನ್ನು ತೆರವುಗೊಳಿಸುವ ಸಂದರ್ಭ ಪೊಲೀಸರು ಗುಂಡುಹಾರಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿ ರುವ ಪ್ರಕರಣದ ವೀಡಿಯೊ ವೈರಲ್ ಆಗಿತ್ತು.

Read These Next

ಜಿದ್ದಾದಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ಮೊದಲ 3 ಸ್ಥಾನಗಳನ್ನು ಗೆದ್ದುಕೊಂಡ ಭಟ್ಕಳದ ಮಹಿಳೆಯರು

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ಸವಿ ನೆನಪಿಗಾಗಿ ಅರಬ್ ರಾಷ್ಟ್ರ ಸೌದಿ ಅರೇಬಿಯಾ ಜಿದ್ದಾದಲ್ಲಿ ನಡೆದ ಭಾರತೀಯ ಮಹಿಳೆಯರು ...

ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ.

ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ...