ಅಂಜುಮನ್ ಶಿಕ್ಷಣ ಸಂಸ್ಥೆಯ ಸುಪುತ್ರಿ ಶಿರಾಲಿಯ ಡಾ. ಅನಿಸಾ ಶೇಖ್ ಗೆ ದಂತ ವೈದ್ಯಕೀಯದಲ್ಲಿ ಪುರಸ್ಕಾರ

Source: sonews | By Staff Correspondent | Published on 12th November 2019, 11:40 PM | Coastal News | Special Report | Don't Miss |

•    ಮಂಗಳೂರು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಬೆಸ್ಟ್ ಸ್ಟೂಡೆಂಟ್ ಅವಾರ್ಡ್

ಭಟ್ಕಳ: ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ‘ದುಖ್ತರ್-ಎ-ಅಂಜುಮನ್(ಅಂಜುಮನ್ ಸುಪುತ್ರಿ) ಪ್ರಶಸ್ತಿ ಪುರಸ್ಕೃತೆ ಹಾಗೂ ರಾಬಿತಾ ಅವಾರ್ಡ ಪುರಸ್ಕೃತೆ ಶಿರಾಲಿಯ ಡಾ.ಅನೀಸಾ ಶೇಖ್ ವೈದ್ಯಕೀಯ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆಗೈದು ಮಂಗಳುರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಉನ್ನತ ಅಂಕಗಳನ್ನು ಪಡೆದು ಉತ್ತೀರ್ಣಗೊಳ್ಳುವ ಮೂಲಕ ಸಂಸ್ಥೆಯ ಬೆಸ್ಟ್ ಸ್ಟೂಡೆಂಟ್ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

ಭಟ್ಕಳ ತಾಲೂಕಿನ ಶಿರಾಲಿಯ ಶೇಖ್ ಝೈನುಲ್ ಆಬಿದೀನ್ ಮತ್ತು ಸಫೂರಾ ಶೇಖ್ ದಂಪತಿಗಳ ಪುತ್ರಿಯಾಗಿರುವ ಡಾ.ಅನಿಸಾ ಶೇಖ್ ಮಂಗಳೂರಿನ ಎ.ಜೆ. ಆಡಿಟೋರಿಯಂ ನಲ್ಲಿ ಆಯೋಜಿಸಿದ್ದ ಎಜೆ ಇನ್ಸ್‍ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನ 13ನೆ ಘಟಿಕೋತ್ಸವದಲ್ಲಿ ‘ಒರಲ್ ಸರ್ಜರಿ’ (Oral surgery) ವಿಭಾಗದಲ್ಲಿ ಉನ್ನತ ಶ್ರೇಣಿ ಪಡೆದುಕೊಂಡು ಖ್ಯಾತ ಸರ್ಜನ್ ಡಾ.ನಂದೀಶ್ ಶೆಟ್ಟಿಯಿಂದ ‘ಕವಿತಾ ಮೆಮೋರಿಯಲ್ ಅವಾರ್ಡ’ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಡಾ.ಅನಿಸಾ ರನ್ನು ಕಾಲೇಜಿನ ‘ಬೆಸ್ಟ್ ಸ್ಟೂಡೆಂಟ್’ ಶಿರ್ಷಿಕೆಯನ್ನು ನೀಡಿ ಪುರಸ್ಕಾರವನ್ನು ಪ್ರದಾನಿಸಲಾಗಿದೆ. 

“ವೈದ್ಯ ವೃತ್ತಿ ಹಣಗಳಿಕೆಗಾಗಿ ಇರದೆ ಬಡ ರೋಗಿಗಳನ್ನು ಕಡಿಮೆ ಖರ್ಚಿನಲ್ಲಿ ಆರೋಗ್ಯ ನೀಡುವುದಾಗಿದೆ. ಶಿಕ್ಷಣವು ಒಂದು ಶಕ್ತಿಯಾಗಿದ್ದು ಅದು ಖಡ್ಗಕ್ಕಿಂತಲೂಶಕ್ತಿಯುತವಾಗಿದೆ’

ಡಾ.ಅನಿಸಾ ಶೇಖ್

ಡಾ.ಅನಿಸಾ ಶೇಖ್ ಭಟ್ಕಳದ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯಿಂದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದು ನಂತರ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ನೊಂದಿಗೆ ಮಂಗಳೂರಿನ ಎ.ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ದಂತ ವೈದ್ಯಕೀಯದಲ್ಲಿ ಪ್ರವೇಶ ಪಡೆದುಕೊಂಡು ಅದ್ಯಯನ ಮಾಡುತ್ತಿದ್ದರು. ಜರ್ನಲ್ ಪೈಥಾಲೋಜಿ ಮತ್ತು ಮೈಕ್ರೋ ಬಯೋಲೊಜಿ, ಡಂಟಲ್ ಮೆಟಿರಿಯಲ್, ಒರಲ್ & ಮ್ಯಾಕ್ಸಿ ಲೋಫೆಶಿಯಲ್ ಸರ್ಜಜಿ, ಒರಲ್ & ಮೆಡಿಸಿನ್ & ರೇಡಿಯೋಲಜಿ, ಪಿಡಿಯಾಸ್ಟಿಕ್ ಡೆಂಟಸ್ಟ್ರಿ ವಿಭಾಗದಲ್ಲಿ ಉನ್ನತ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದು ಅವರ ಅಭೂತಪೂರ್ವ ಸಾಧನೆಗಾಗಿ ಸಂಸ್ಥೆಯು ಪುರಸ್ಕಾರವನ್ನು ನೀಡಿದೆ.

ಡಾ.ಅನಿಸಾ ಶೇಖ್ ಈಗಾಗಲೆ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಉನ್ನತ ಶೈಕ್ಷಣಿಕ ಸಾಧನೆ ಕುರಿತಂತೆ ಮಾಧ್ಯಮದೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದು, “ವೈದ್ಯ ವೃತ್ತಿ ಹಣಗಳಿಕೆಗಾಗಿ ಇರದೆ ಬಡ ರೋಗಿಗಳನ್ನು ಕಡಿಮೆ ಖರ್ಚಿನಲ್ಲಿ ಆರೋಗ್ಯ ನೀಡುವುದಾಗಿದೆ. ಶಿಕ್ಷಣವು ಒಂದು ಶಕ್ತಿಯಾಗಿದ್ದು ಅದು ಖಡ್ಗಕ್ಕಿಂತಲೂ ಶಕ್ತಿಯುತವಾಗಿದೆ’ ಎಂದರು. ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯದ ಕುರಿತಂತೆ ಹೇಳಿದ ಅವರು, ತುಂಬೆ ಸಮೋಹದ ಯುಎಇ ಯ ಗಲ್ಫ ಮೆಡಿಕಲ್ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನು (ಎಂ.ಡಿ.ಎಸ್) ಮಾಡುವುದಾಗಿ ತಿಳಿಸಿದ್ದಾರೆ. 

ಅಂಜುಮನ್ ಅಲುಮ್ನಿ ವಿದ್ಯಾರ್ಥಿನೀಯ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಕಾರ್ಯದರ್ಶಿ ಮೊಹಸಿನ್ ಶಾಬಂದ್ರಿ ಸೇರಿದಂತೆ ಅಂಜುಮನ್ ಸಂಸ್ಥೆಯ ಪದಾಧಿಕಾರಿ ಅಭಿನಂದಿಸಿ ಶ್ಲಾಘಿಸಿದ್ದಾರೆ. 
 

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...

ನಿರಾಶಾವಾದಿ ರಾಜಕಾರಣದ ಹುಟ್ಟು

ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂಥಾ ...

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...