ವಾಷಿಂಗ್ಟನ್: ಮುಸ್ಲಿಮರೇ ಇಲ್ಲದ ಜಗತ್ತು ಹೇಗಿರುತ್ತಿತ್ತು ?

Source: S O News service | By sub editor | Published on 23rd July 2016, 10:43 PM | Global News | Special Report | Don't Miss |

 

ಕೃಪೆ: vbnewsonline

ವಾಷಿಂಗ್ಟನ್: ಐಸಿಸ್, ಅಲ್- ಖೈದಾ, ಬೊಕೊ ಹರಾಮ್ ಮತ್ತಿತರ ಉಗ್ರ ಸಂಘಟನೆಗಳು ನಡೆಸಿದ ಭಯೋತ್ಪಾದಕ ಕೃತ್ಯಗಳಿಂದಾಗಿ ಇಡೀ ವಿಶ್ವದಲ್ಲಿ ಇಸ್ಲಮೊಫೊಬಿಯಾ ಅಲೆ ವ್ಯಾಪಕವಾಗಿ ಬೀಸುತ್ತಿದೆ.

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅ್ಯರ್ಥಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಮಂದಿ ಮುಖಂಡರು ಇಡೀ ಸಮುದಾಯವನ್ನು ಹೊರಗಟ್ಟುವಂತೆ ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಟಂಬ್ಲರ್‌ನಲ್ಲಿ ಬಳಕೆದಾರರೊಬ್ಬರು, ಮುಸ್ಲಿಮರಿಲ್ಲದೇ ವಿಶ್ವ ಹೇಗೆ ಕಾಣಿಸಬಹುದು ಎಂದು ಪ್ರಶ್ನಿಸಿದರು. ಪ್ರಚೋದಕ ಅವಳಿ ಗೋಪುರಗಳ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಇದಕ್ಕೆ ಬಂದ ಉತ್ತರಗಳು ಅದ್ಭುತ, ಅದು ನಿಮ್ಮ ಮಾನವೀಯತೆ ಬಗೆಗಿನ ನಂಬಿಕೆಯನ್ನು ಪುನರುತ್ಥಾನಗೊಳಿಸುತ್ತದೆ ಎನ್ನುವುದಾಗಿತ್ತು.

ಹೌದು, ಮುಸ್ಲಿಮರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಿ. ಸಾಧ್ಯವೇ?

ಮುಸ್ಲಿಮರಿಲ್ಲದಿದ್ದರೆ ಈ ಕೆಳಗಿನ ಯಾವುದೂ ನಿಮಗೆ ಇರುತ್ತಿರಲಿಲ್ಲ.

ಕಾಫಿ, ಕ್ಯಾಮೆರಾ, ಪ್ರಾಯೋಗಿಕ ಭೌತಶಾಸ್ತ್ರ, ಚೆಸ್, ಸೋಪು, ಶ್ಯಾಂಪೂ, ಸುಗಂಧ ದ್ರವ್ಯ/ ಸ್ಪಿರಿಟ್, ನೀರಾವರಿ, ಕ್ರಾಂಕ್ ಶಾಪ್ಟ್, ವೇಗನ್, ಕಂಬಶ್ಚನ್ ಇಂಜಿನ್, ವಾಲ್ವ್, ಪಿಸ್ಟನ್, ಬೀಗ, ವಾಸ್ತುಶಿಲ್ಪಅನುಶೋಧನೆಗಳು, ಶಸ್ತ್ರಚಿಕಿತ್ಸಾ ಸಾಧನಗಳು, ಅನಸ್ತೇಶಿಯಾ, ಗಾಳಿ ವಿದ್ಯುತ್ ಯಂತ್ರ, ಸಿಡುಬು ಚಿಕಿತ್ಸೆ, ಪೌಂಟೇನ್ ಪೆನ್, ಸಂಖ್ಯಾ ಪದ್ಧತಿ, ಅಂಕ ಗಣಿತ, ಟ್ರಿಗ್ನಾಮೆಟ್ರಿ, ಆಧುನಿಕ ಕ್ರಿಪ್ಟಾಲಜಿ, 3 ಕೋರ್ಸ್ ಊಟ, ಕ್ರಿಸ್ಟಲ್ ಗ್ಲಾಸ್, ಕಂಬಳಿ, ಚೆಕ್, ಉದ್ಯಾನವನ, ವಿಶ್ವವಿದ್ಯಾನಿಲಯ, ಆಪ್ಟಿಕ್ಸ್, ಸಂಗೀತ, ಟೂಥ್‌ಬ್ರಷ್, ಆಸ್ಪತ್ರೆ, ಸ್ನಾನ, ಕಾಂಪಸ್, ಲಘು ಪಾನೀಯ, ಪೆಂಡ್ಯುಲಂ, ಬ್ರೈಲ್, ಸೌಂದರ್ಯಸಾಧನ, ಪ್ಲಾಸ್ಟಿಕ್ ಸರ್ಜರಿ, ಕಾಗದ ಹಾಗೂ ಬಟ್ಟೆ ಉತ್ಪಾದನೆ.

ಬೆಳಕು ನಮ್ಮ ಕಣ್ಣುಗಳನ್ನು ಪ್ರವೇಶಿಸುತ್ತದೆ ಎನ್ನುವುದನ್ನು ಕಂಡುಹಿಡಿದದ್ದು ಮುಸ್ಲಿಮರು. ಇದಕ್ಕೂ ಮುನ್ನ ಗ್ರೀಕರು, ನಾವು ಬೆಳಕನ್ನು ಹೊರಸೂಸುತ್ತೇವೆ ಎಂದು ಬೋಧಿಸುತ್ತಿದ್ದರು. ಇದರಿಂದ ಕ್ಯಾಮೆರಾ ಶೋಧಿಸಲಾಯಿತು.

ವಿಮಾನ ಶೋಧಿಸಿದ ಹೆಗ್ಗಳಿಕೆ ರೈಟ್ ಸಹೋದರರದ್ದಾದರೂ, ಮೊಟ್ಟಮೊದಲು ಹಾರಲು ಯತ್ನಿಸಿದ ವ್ಯಕ್ತಿ ಮುಸ್ಲಿಂ. ಆಧುನಿಕ ರಸಾಯನಶಾಸ್ತ್ರದ ಜನಕ ಜಬೀರ್ ಬಿನ್ ಹಯ್ಯಿನ್. ಅಲ್-ಜರಝಾರಿ ಎಂಬ ವ್ಯಕ್ತಿ ಆಧುನಿಕ ರೋಬೊಟಿಕ್ಸ್ ಜನಕ. ಹೆನ್ರಿ ವಿಎಸ್ ಕ್ಯಾಸಲ್‌ಗೆ ವಾಸ್ತುಶಿಲ್ಪಿ ಒಬ್ಬ ಮುಸ್ಲಿಂ. ಕಣ್ಣಿನಿಂದ ಕ್ಯಾಟರ್ಯಾಕ್ಟ್ ಪೊರೆ ಹರಿಯಲು ಸೂಜಿ ಕಂಡು ಹಿಡಿದದ್ದು ಮುಸ್ಲಿಂ. ಇದು ಇಂದಿಗೂ ಬಳಕೆಯಲ್ಲಿದೆ. ಪಟ್ಟಿ ಹೀಗೆಯೇ ಮುಂದುವರಿಯುತ್ತದೆ...

ಯಾರೊ ಕೆಲವರು ಅಜ್ಞಾನಿಗಳು ಮತ್ತು ಮತೀಯವಾದಿಗಳ ಕೃತ್ಯಕ್ಕೆ ಇಡೀ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ತಿಮ್ಮೋತಿ ಮೆಕ್ವೀಗ್ ಕೃತ್ಯಕ್ಕೆ (ಒಕ್ಲಹಾಮಾ ಬಾಂಬ್), ನಾರ್ವೆ ಹತ್ಯಾಕಾಂಡದ ಆಂಡ್ರಿಸ್ ಬ್ರೆವಿಕ್ ಕೃತ್ಯಕ್ಕೆ ಯಾರೂ ಇಡೀ ಕ್ರೈಸ್ತ ಸಮುದಾಯವನ್ನು ಅಥವಾ ಬಿಳಿಯರನ್ನು ಬೆಟ್ಟು ಮಾಡುವುದಿಲ್ಲ. ಅಂತೆಯೇ 150 ಕೋಟಿ ಮುಸ್ಲಿಮರು ಕೂಡಾ ಇಂಥ ಕೃತ್ಯಕ್ಕೆ ಯಾವ ರೀತಿಯಲ್ಲೂ ಹೊಣೆಗಾರರಲ್ಲ.

Courtesy : blogs.timesofindia.indiatimes.com

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...