ಭಟ್ಕಳ: ನಮ್ಮ ದೇಶದಲ್ಲಿ ಮುಸ್ಲಿಮ್ ಸಮುದಯ ಅತಿ ಹೆಚ್ಚು ಅನ್ಯಾಯಕ್ಕೊಳಗಾಗುತ್ತಿದೆ-ಅಶ್ರಫ್ ಬ್ಯಾರಿ

Source: S O News service | By sub editor | Published on 30th July 2016, 11:26 PM | Coastal News | State News | Global News | Don't Miss |

ತಂಝೀಮ್ ನಿಂದ ಬೃಹತ್ ಮುಸ್ಲಿಮ್ ಐಕ್ಯತಾ ಸಮಾವೇಶ

ಭಟ್ಕಳ: ಮುಸ್ಲಿಮ್ ಸಮುದಾಯ ದೇಶದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾದ ಸಮುದಾಯವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ದ.ಕ.ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್ ಬ್ಯಾರಿ ಹೇಳಿದರು.
ಅವರು ಶನಿವಾರ ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆ ಆಯೋಜಿಸಿದ್ದ  ಕರಾವಳಿ ಜಿಲ್ಲೆಗಳ ಮುಸ್ಲಿಮ್ ಸಮುದಾಯದ ಈದ್ ಮಿನ್ ಹಾಗೂ ಏಕತಾ ಸಮಾವೇಶವನ್ನುದ್ಧೇಶಿಸಿ ಮಾತನಡುತ್ತಿದ್ದರು.
ಕರಾವಳಿ ಜಿಲ್ಲೆಗಳ ಮುಸ್ಲಿಮರು ಅತ್ಯಂತ ಹೆಚ್ಚು ಅನ್ಯಾಯಗೊಳಗಾಗುತ್ತಿದ್ದು ಉತ್ತರಕನ್ನಡ, ಉಡುಪಿ ಹಾಗೂ. ದ.ಕ ಜಿಲ್ಲೆಯ ಮುಸ್ಲಿಮ್ ಮುಖಂಡರನ್ನು ಒಂದೇ ವೇದಿಕೆಯಡಿ ತರುವ ತಂಝೀಮ್ ನ ಪ್ರಯತ್ನ ನಿಜಕ್ಕೂ ಹೆಚ್ಚು ಪ್ರಶಂಸನೀಯವಾದುದು ಎಂದ ಅವರು ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಬೇಕಾಗಿದೆ ಎಂದರು. 
ಮಂಗಳೂರು ಜಮಾ‌ಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಮುಸ್ಲಿಮ್ ಸಮುದಾಯ ಸೋತು ಹೋಗುವ, ಭರವಸೆ ಕಳೆದುಕೊಳ್ಳುವ, ಹತಾಶರಾಗುವ ಸಮುದಾಯವಲ್ಲ. ನಮ್ಮಲ್ಲಿನ ಭಿನ್ನತೆಗಳನ್ನು ಬದಿಗೊತ್ತಿ ಸಮುದಾಯಕ್ಕಾಗಿ ಶ್ರಮಿಸಬೆಕಾಗಿದೆ. ಪವಿತ್ರ ಕುರ್‌ಆನ್ ಹಾಗೂ ಪ್ರವಾದಿ ಮುಹಮ್ಮದ್ ಪೈಗಂಬರರ ಸಂದೇಶಗಳನ್ನು ಪಾಲಿಸುತ್ತ ನಾವು ಭಿನ್ನ ಭಿನ್ನರಾಗದೆ ಸಮುದಾಯವನ್ನು ಮುನ್ನೆಡೆಸಬೇಕು, ನಾವು ಬೇರೆ ಬೇರೆ ಸಂಘಟನೆಗಳಲ್ಲಿ ಹರಿದುಹಂಚಿ ಹಂಚಿಹೋಗಿದ್ದು ಇದು ಮುಸ್ಲಿಮರ ದುರಂತವಾಗಿದೆ ಎಂದರು. 
ಭಟ್ಕಳ ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ನದ್ವಿ ಮಾತನಾಡಿ ಮುಸ್ಲಿಮ್ ಸಮುದಾಯ ಒಂದು ಉಮ್ಮತ್ ಎಂಬ ನೆಲೆಯಲ್ಲಿ ನಾವೆಲ್ಲ ಪರಸ್ಪರನ್ನು ಗೌರವಿಸುತ್ತ ಇತರರನ್ನು ಅರ್ಥ ಮಾಡಿಕೊಳ್ಳುತ್ತ ಒಗ್ಗಟ್ಟಾಗಿ ಬದುಕಬೇಕು ಎಂದು ಕರೆ ನೀಡಿದರು. 
ಮಜ್ಲಿಸೆ ಇಸ್ಲಾಹ್ ತಂಝೀಮ್ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮಝಮ್ಮಿಲ್ ಕಾಝಿಯಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಸೈಯ್ಯದ್ ಖಲಿಲುರ್ರಹ್ಮಾನ್ ಎಸ್.ಎಂ, ಮಂಗಳೂರು ಶಾಸಕ ಬಿ.ಎ ಮೊಹಿದ್ದೀನ್ ಬಾವಾ, ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಖ್ಸೂದ್ ಆಹ್ಮದ್, ಸುನ್ನಿ ಮುಖಂಡ ಹೈದರ್ ಮಂಗಳೂರು, ಶಾಫಿ ಬೆಳ್ಳಾರೆ ಮುಂತಾದವರು ಮಾತನಾಡಿದರು. 
ವೇದಿಕೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಎಲ್ಲ ತಾಲೂಕು ಜಮಾ‌ಅತ್ ನ ಹೊಣೆಗಾರು ಸೇರಿದಂತೆ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಹಿಂ ಜುಕಾಕೋ, ಫಾರೂಖ್ ಬಾವಾ, ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೇಯ ಪ್ರಾಂಶುಪಾ ಮೌಲಾನ ಮಖ್ಬೂಲ್ ಆಹ್ಮದ್ ನದ್ವಿ, ಮತ್ತಿತರರು ಉಪಸ್ಥಿತಿದ್ದರು. 
ಮೌಲಾನ ನೇಮತುಲ್ಲಾ ಅಸ್ಕರಿಯವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಪ್ರಸ್ತಾವಿಕವಾಗಿ ಮಾತನಾಡಿ ತಂಝಿ ಂ ಸಂಸ್ಥಯನ್ನು ಪರಿಚಯಿಸಿದರು. ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸ್ವಾಗತಿಸಿದರು. ಅತಿಖುರ್ರಹ್ಮಾನ್ ಶಾಬಂದ್ರಿ ಕಾರ್ಯಕ್ರಮ ನಿರೂಪಿಸಿದರು. 

Read These Next

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...

ತಾಲಿಬಾನ್ ನಾಯಕ ಮುಲ್ಲಾ ಫಝ್ಲುಲ್ಲಾಹ ನ ಬಂಧನಕ್ಕೆ 32 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ

ವಾಶಿಂಗ್ಟನ್: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ ನಾಯಕ, ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಮೌಲಾನಾ ಫಝ್ಲುಲ್ಲಾನ ...