ಶಿಕಾರಿಪುರ: ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲಿ : ಶ್ರೀ ರಂಭಾಪುರಿ ಜಗದ್ಗುರುಗಳು 

Source: balanagoudra | By Arshad Koppa | Published on 14th July 2017, 11:21 AM | State News | Guest Editorial |

ಶಿಕಾರಿಪುರ ಜುಲೈ 12.    
    ಅತಿಯಾದ ವೈಚಾರಿಕತೆಯಿಂದ ಮನುಷ್ಯನಲ್ಲಿ ನಾಸ್ತಿಕ ಪ್ರವೃತ್ತಿ ಬೆಳೆಯುತ್ತಿವೆ. ಪರಸ್ಪರ ವಿಶ್ವಾಸ ನಂಬಿಕೆಗಳು ಇಲ್ಲದಂತಾಗಿದ್ದು ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಮತ್ತೊಮ್ಮೆ ಈ ನಾಡಿನ ಧರ್ಮ ಪೀಠಗಳು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯ ಕೈಗೊಳ್ಳುವ ಅವಶ್ಯಕತೆಯಿದೆ 
ಎಂದು ಶ್ರೀಮದ್ ರಂಭಾಪುರಿ ಜಗದ್ಗುರು ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
    ಅವರು ನಗರದ ಸಾಂಸ್ಕøತಿಕ ಭವನದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
    ಬೆಳೆಯ ಸುರಕ್ಷತೆಗೆ ಕಳೆಯನ್ನು ಕೀಳುವಂತೆ ಆತ್ಮೋನ್ನತಿಗಾಗಿ ದುರ್ಗುಣಗಳನ್ನು ನಿವಾರಿಸಿಕೊಳ್ಳುತ್ತಿರಬೇಕು. ಕಾಲ ಕಾಲಕ್ಕೆ ಎಲೆಗಳು ಉದುರಿದರೂ ಮರದ ಬೇರು ಭದ್ರವಾಗಿರುತ್ತವೆ. ಮನುಷ್ಯನ ಅಭಿಪ್ರಾಯಗಳು ಬದಲಾದರೂ ಮೂಲ ತತ್ವ ಸಿದ್ಧಾಂತಗಳು ಸ್ಥಿರವಾಗಿರುತ್ತವೆ. ಹುಟ್ಟು ಸಾವು ನಿನ್ನ ಕೈಯಲ್ಲಿ ಇಲ್ಲ. ಆದರೆ ಬದುಕು ಮಾತ್ರ ನಿನ್ನ ಕೈಯಲ್ಲಿಯೇ ಇದೆ. ತಾನು ಎಲ್ಲರಿಗಾಗಿ ಅನ್ನುವುದೇ ನಿಜವಾದ ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮ. ನದಿ ಎಷ್ಟೇ ದೂರ ಹರಿದು ಹೋದರೂ ತಾನು ಹುಟ್ಟಿದ ಸಂಬಂಧವನ್ನು ಕಳೆದುಕೊಳ್ಳುವುದಿಲ್ಲ. ಅದರಂತೆ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲ ಸಂಬಂಧವನ್ನು ಕಳೆದುಕೊಳ್ಳಬಾರದು. ದೇಶಕ್ಕೊಂದು ಸಂವಿಧಾನ ಇರುವಂತೆ ವೀರಶೈವ ಧರ್ಮಕ್ಕೊಂದು ಸಂಹಿತೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳನ್ನು ಕೊಟ್ಟ ಮೊದಲ ಕೀರ್ತಿ ಗುರು ಪರಂಪರೆಗೆ ಸಲ್ಲುತ್ತದೆ ಎಂದರು. 
    ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಬಿ.ವೈ. ರಾಘವೇಂದ್ರ ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳವರ ಎರಡು ದಿನದ ಇಷ್ಟಲಿಂಗ ಮಹಾಪೂಜೆ-ಧರ್ಮ ಸಮಾರಂಭಗಳು ನಗರದ ಜನತೆಗೆ ನೆಮ್ಮದಿ ಶಾಂತಿ ತಂದಿವೆ. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದಾಗ ಉನ್ನತಿ ಸಾಧ್ಯ ಎಂದರು.
     ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿಸೇವೆ ಸಲ್ಲಿಸಿದರು. ತೊಗರ್ಸಿ ಮಳೇಹಿರೇಮಠ, ಮಳಲಿ, ಕಡೇನಂದಿಹಳ್ಳಿ, ತೊಗರ್ಸಿ ಪಂಚವಣ ್ಣಗೆಮಠ, ದಿಂಡದಹಳ್ಳಿ, ಕಾಳೇನಹಳ್ಳಿ, ಶಿರಾಳಕೊಪ್ಪ, ಕಣಸೋಗಿ, ಶಿಕಾರಿಪುರ ಮಠಗಳ ಶ್ರೀಗಳು ಉಪಸ್ಥಿತರಿದ್ದರು.
     ಹೆಚ್.ಟಿ. ಬಳಿಗಾರ, ಟಿ.ವಿ.ಈಶ್ವರಯ್ಯ, ಪಂಚಾಕ್ಷರಯ್ಯ, ಕೆ.ಜಿ.ಶಿವಪ್ಪಯ್ಯ, ಬಿ.ಡಿ.ಭೂಕಾಂತ, ಸಕ್ರಿ ವಿಜಯಣ್ಣ, ಶೇಖರಪ್ಪ, ಕೆ.ಬಿ. ಪ್ರಭುಸ್ವಾಮಿ, ಚನ್ನಯ್ಯ, ಪಟ್ಟದಸ್ವಾಮಿ, ಬಿ.ಹೆಚ್. ನಾಗರಾಜ, ಜಿ. ಬಸವನಗೌಡರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 
    ಚಂದ್ರಶೇಖರ ಮಠದ ಸ್ವಾಗತಿಸಿದರು. ಅಂಗಡಿ ಜಗದೀಶ್ ನಿರೂಪಿಸಿದರು. ಭಾಗ್ಯಶ್ರೀ ರತ್ನಾಕರ ಸುಪ್ರಿಯಾ ಮಠದ ಸಂಗೀತ ಸೇವೆ ಸಲ್ಲಿಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...