ಶಿಡ್ಲಘಟ್ಟ:ಆಹಾರ ಉಗ್ರಾಣದಲ್ಲಿ ಗೋಧಿಯಲ್ಲಿ ಹುಳ-ತಾಲೂಕು ಕಛೇರಿಗೆ ಮುತ್ತಿಗೆ, ಗೋದಾಮಿಗೆ ಬೀಗ.   

Source: tamim | By Arshad Koppa | Published on 3rd October 2016, 8:03 AM | State News | Incidents |

ಬಿಜೆಪಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯಕರ್ತರ ಪ್ರತಿಭಟನೆ 

ಶಿಡ್ಲಘಟ್ಟ,ಸೆಪ್ಟೆಂಬರ್28: ನಗರದಲ್ಲಿರುವ ಕರ್ನಾಟಕ ರಾಜ್ಯ ಆಹಾರ ನಿಗಮದ ಗೋಧಾಮಿನಲ್ಲಿ ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಯಗಳಿಗೆ ಸರಬರಾಜು ಮಾಡುವ ಗೋಧಿಯಲ್ಲಿ ಹುಳು ಹುಪ್ಪಟೆ ಬಿದ್ದಿದ್ದು ಆಹಾರ ಮತ್ತು ಬಿಸಿಎಂ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಮಾನವ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯಕರ್ತರು ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
     ನಗರದಲ್ಲಿರುವ ರಾಜ್ಯ ಆಹಾದ ನಿಗಮದ ಗೋಧಾಮಿನಲ್ಲಿ ಸಾರ್ವಜನಿಕ ವ್ಯವಸ್ಥೆಯಡಿ ಹಾಗೂ ಹಾಸ್ಟೆಲ್‍ಗಳಿಗೆ ವಿತರಿಸಲು ದಾಸ್ತಾನು ಮಾಡಿದ್ದ ಅಕ್ಕಿ ಗೋಧಿ ಇನ್ನಿತರೆ ಆಹಾರ ಪದಾರ್ಥಗಳಿಗೆ ಹುಳು ಹುಪ್ಪಟೆಗಳು ಬಿದ್ದಿದೆ ಇದನ್ನು ಪತ್ತೆ ಹಚ್ಚಿದ ಬಿಜೆಪಿ ಮತ್ತು ಮಾನವ ಹಕ್ಕು ಜಾಗೃತಿ ಸಮಿತಿಯ ಕಾರ್ಯಕರ್ತರು ಗೋಧಾಮಿಗೆ ಆಗಮಿಸಿ ಅಕ್ಕಿ ಗೋಧಿಗೆ ಹುಳು ಹುಪ್ಪಟೆಗಳು ಬಿದ್ದಿದ್ದು ತಿನ್ನಲು ಯೋಗ್ಯಕ್ಕೆ ಬಾರದಂತಾಗಿದೆ ನೀವೇನು ಮಾಡುತ್ತಿದ್ದೀರಿ ಎಂದು ಗೋದಾಮಿನ ಅಧಿಕಾರಿ ಶ್ರೀನಿವಾಸ್‍ರನ್ನು ತರಾಟೆಗೆ ತೆಗೆದುಕೊಂಡರು.
    ಸುಮಾರು 15 ಟನ್ ಗೋಧಿಯನ್ನು ಕಳೆದ ಒಂದು ವರ್ಷದಿಂದ ವಿತರಿಸದೆ ದಾಸ್ತಾನು ಮಾಡಲಾಗಿದ್ದು ಅದಕ್ಕೆ ಹುಳುಗಳು ಬಿದ್ದಿವೆ. ಹುಳುಗಳು ಬಿದ್ದಿರುವ ಅಕ್ಕಿ ಗೋಧಿಯನ್ನು ವಾಪಸ್ ಕಳುಹಿಸಿ ಬೇರೆ ಅಕ್ಕಿಯನ್ನು ತರಿಸಿಕೊಳ್ಳುವುದಾಗಿ ಅಧಿಕಾರಿ ಸಮಜಾಯಿಷಿ ನೀಡಿದರು.
ತಿನ್ನಲು ಯೋಗ್ಯವಲ್ಲದ ಅಕ್ಕಿ ಗೋಧಿಯನ್ನು ವಾಪಸ್ ಕಳುಹಿಸಿ ಚನ್ನಾಗಿರುವ ಅಕ್ಕಿಯನ್ನು ತರಿಸಿಕೊಳ್ಳಲು ವರ್ಷಗಟ್ಟಲೆ ಸಮಯ ಬೇಕಾ ಎಂದು ಅಧಿಕಾರಿಯನ್ನು ಪ್ರಶ್ನಿಸಿದ ಪ್ರತಿಭಟನಾಕಾರರು ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಈ ಗೋಧಾಮಿಗೆ ಯಾರೂ ಬರಬೇಡಿ ಎಂದು ಎಲ್ಲ ಅಧಿಕಾರಿ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಬೀಗ ಜಡಿದರು.


    ನಂತರ ತಾಲೂಕು ಕಛೇರಿಗೆ ಬಂದು ದಿಡೀರ್ ಬಾಗಿಲು ಮುಚ್ಚುವ ಮೂಲಕ ಮುತ್ತಿಗೆ ಹಾಕಿ ಆಹಾರ ಇಲಾಖೆಯ ಅಧಿಕಾರಿಗಳು ವಿರುಧ್ಧ ಘೋಷಣೆಗಳನ್ನು ಕೂಗಿದರು ಬಡವರಿಗೆ ಸೇರಿಬೇಕಾದ ಆಹಾರಧಾನ್ಯಗಳಿಗೆ ಹುಳ ಬಿದ್ದಿದೆ ಆದರೂ ಸಹ ತಾಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು ಇದೇ ವೇಳೆಯಲ್ಲಿ ತಾಲೂಕು ಕಛೇರಿಯ ಮುಖ್ಯಾದ್ವಾರವನ್ನು ಮುಚ್ಚಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು ಮತ್ತು ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.
    ನಾವು ಹೋರಾಟ ಮಾಡುತ್ತಿರುವುವುದು ನಮಗೋಸ್ಕರವೇ? ಅಧಿಕಾರಿಗಳ ಭ್ರಷ್ಟಚಾರವನ್ನು ಪ್ರಶ್ನಿಸುವ ಅಧಿಕಾರ ನಿಮಗೆ ಇಲ್ಲವೇ? ನಮ್ಮೊಂದಿಗೆ ಕೈಜೋಡಿಸದೆ ಬಾಗಿಲು ತೆರೆದು ಹೊರಹೊಗಲು ನಾಚಿಕೆಯಾಗುವುದಿಲ್ಲವೇ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಇದೇ ವೇಳೆಯಲ್ಲಿ ನಗರ ಪೋಲಿಸ್‍ಠಾಣೆಯ ಪಿ.ಎಸ್.ಐ ನವೀನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆ ಮಾಡಿ ಹೋರಾಟವನ್ನು ಮಾಡಬೇಡಿ ಬಾಗಿಲು ತೆರೆದು ಸಾರ್ವಜನಿಕರು ಹೋಗಿ ಬರಲು ಅನುವು ಮಾಡಿಕೊಟ್ಟರು.
    ನಂತರ ತಹಶೀಲ್ದಾರ್ ಕೆ.ಎಂ.ಮನೋರಮಾ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಗೋದಾಮಿನಲ್ಲಿರುವುದು ಆಹಾರ ಇಲಾಖೆಗೆ ಸೇರಿದ ಗೋಧಿ ಅಲ್ಲ ಅದು ಬಿಸಿಎಂ ಇಲಾಖೆಗೆ ಸೇರಿದ್ದು ಆದರೂ ಸಹ ಅದನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಈ ಸಂಬಂಧ ಮಾಹಿತಿ ನೀಡುವಂತೆ ಬಿಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಪಡಿತರಚೀಟಿಗಾಗಿ ವಿತರಣೆ ಮಾಡಲು ತಂದಿರುವ ಗೋಧಿ ಅಲ್ಲವೆಂದು ಸ್ಪಷ್ಟಪಡಿಸಿ ಪ್ರತಿಭಟನಾಕಾರರನ್ನು ವಾಪಸ್ಸು ಕಳುಹಿಸಿದರು.
    ಆಹಾರ ಗೋದಾಮಿನಲ್ಲಿರುವ ಗೋಧಿಗೆ ಹುಳಬಿದ್ದಿರುವ ಕುರಿತು ದೂರು ನೀಡಿದರು ಸಹ ಅಧಿಕಾರಿಗಳು ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರೆ ಅಧಿಕಾರಿಗಳ ನಡೆಯನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
    ನಂತರ ಗೋದಾಮಿನ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಜಿಲ್ಲಾ ಕಚೇರಿಯ ಹಿರಿಯ ಅಧಿಕಾರಿ ನಾರಾಯಣಸ್ವಾಮಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರೊಂದಿಗೆ ಮಾತನಾಡಿ ಕೂಡಲೆ ಮುಗ್ಗಿ ಹೋಗಿರುವ, ಹುಳು ಹುಪ್ಪಟೆ ಬಿದ್ದಿರುವ ಅಕ್ಕಿ ಗೋಧಿಯನ್ನು ಬೇರೆ ಕಡೆ ಸಾಗಿಸಿ ಬೇರೆ ಆಹಾರ ಪದಾರ್ಥಗಳನ್ನು ತರಿಸಿಕೊಡುವ, ಗೋಧಾಮನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಭರವಸೆ ನೀಡಿದರು.


    ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯ ಬೈರಾರೆಡ್ಡಿ, ಜಿಲ್ಲಾ ಭಾಜಪ ಮುಖಂಡ ಚಿಕ್ಕದಾಸರಹಳ್ಳಿ ದಾಮೋದರ್, ಮಂಜುಳಮ್ಮ, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಸವಿತಾಚಂದ್ರು, ನಟರಾಜ್, ವೇಣು, ದೀಪು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Read These Next

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...