ಶಿಡ್ಲಘಟ್ಟ: ಮಳೆರಾಯನ ದರ್ಶನಕ್ಕಾಗಿ ದೇವರಮಳ್ಳೂರು ಗ್ರಾಮದಲ್ಲಿ ಕತ್ತೆಗಳ ಮದುವೆ 

Source: tamim | By Arshad Koppa | Published on 16th August 2017, 8:23 AM | State News | Guest Editorial |

ಶಿಡ್ಲಘಟ್ಟ,ಆಗಸ್ಟ್15: ಅಲ್ಲಿ ಜನವೋ ಜನ ಮನೆಮಾಡಿದ ಸಡಗರ ಸಂಭ್ರಮ......ಊಟ ತಿಂಡಿ ಉಪಚಾರ......ಮಂತ್ರಗಳನ್ನು ಭೋದನೆ ಮಾಡುತ್ತಿದ್ದ ಪುರೋಹಿತರು....ಊರೂರಿನ ಜನ ಅತಿಥಿಗಳು.
    ಇದೇನು ಮಧುವೆ ಸಂಭ್ರಮವೇ? ಎಂಬ ನಿಮ್ಮ ಆಲೋಚನಾ ಲೆಹರಿಗೆ ಸ್ವಲ್ಪ ಬ್ರೇಕ್ ಹಾಕಿ ಹೌದು ಅಲ್ಲಿ ವಧು-ವರನ ವಿವಾಹವಲ್ಲ ತಾಲೂಕಿನಲ್ಲಿ ಭೀಕರವಾಗಿ ಬರಗಾಲ ತಲೆದೂರಿರುವ ಹಿನ್ನೆಲೆಯಲ್ಲಿ ಮಳೆರಾಯನ ದರ್ಶನಕ್ಕಾಗಿ ದೇವರಮಳ್ಳೂರು ಗ್ರಾಮದಲ್ಲಿ ಕತ್ತೆಗಳ ಮಧುವೆ ಮಾಡಿಸುವ ಮೂಲಕ ಗಮನಸೆಳೆದರು.
    ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಸರಕಾರ ಕೆಲವೊಂದು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿರುವುದು ಸರಿಯಷ್ಠೆ ಆದರೇ ಎಂದೆಂದೂ ಕಂಡರಿಯದ ಬರಗಾಲದಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುವುದು ದುರಂತವೇ ಸರಿ.


    ಸಾಮಾನ್ಯವಾಗಿ ಜನಸಾಮಾನ್ಯರ ವಿವಾಹದ ಮಾದರಿಯಲ್ಲಿ ಅಲ್ಲಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಹೆಣ್ಣು ಕತ್ತೆ ಮತ್ತು ಗಂಡು ಕತ್ತೆಗಳ ಪರವಾಗಿ ತಲಾ ಇಬ್ಬರು ಸಂಬಂಧಿಕರು ನಿಂತು ಶಾಸ್ತ್ರೋಕ್ತಾಪ್ರಕಾರವಾಗಿ ಕತ್ತೆಗಳ ವಿವಾಹವನ್ನು ನೆರವೇರಿಸಲಾಯಿತು ಬಹುತೇಕ ಗ್ರಾಮಸ್ಥರು ಕತ್ತೆಗಳ ವಿವಾಹಕ್ಕೆ ಸಾಕ್ಷಿಯಾಗಿ ವಧು ವರರನ್ನು ಅಕ್ಷತೆ ಹಾಕಿ ಆರ್ಶೀವದಿಸಿದರು ವಿಹಾನದ ನಂತರ ಕತ್ತೆಗಳ ಮೆರವಣಿಗೆ ನಡೆಸಿದ ಬಳಿಕ ನೆರದಿದ್ದ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು ಒಟ್ಟಾರೇ ಜನ ಸಾಮಾನ್ಯ ಮಧುವೆಗಳಿಗಿಂತಲೂ ಏನು ಕಮ್ಮಿ ಇಲ್ಲವೆಂದು ವಿಹಾವನ್ನು ನೆರವೇರಿಸಿ ಗಮನಸೆಳೆದರು.
    ಪ್ರಾಚೀನ ದೇವಾಲಯಗಳ ತವರೂರೆಂದು ಖ್ಯಾತಿ ಹೊಂದಿರುವ ದೇವರಮಳ್ಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಮಳೆರಾಯನಿಗಾಗಿ ಪೂಜಾ ಕಾರ್ಯಕ್ರಮವನ್ನು ರೂಡಿಸಿಕೊಂಡು ಕತ್ತೆಗಳ ವಿವಾಹ ಮಾಡುತ್ತಾ ಗಮನಸೆಳೆಯುತ್ತಿದ್ದಾರೆ ಗ್ರಾಮದ ಶ್ರೀ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಮೊದಲ ದಿನ ಮಣ್ಣಿನ ಮಳೆರಾಯನ ವಿಗ್ರಹ ಇಟ್ಟು ಪೂಜೆ ಸಲ್ಲಿಸಿ ಬಾರೋ ಬಾರೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಮೂಲ ಜನಪದ ಶೈಲಿಯ ಹಾಡುಗಳನ್ನು ಹಾಡುವುವರೊಂದಿಗೆ ಮಹಿಳೆಯರು ಸೇರಿ ಪೂಜೆ ಮಾಡುತ್ತಾರೆ ನಂತರ ಸ್ಥಳದಲ್ಲೇ ರಾಗಿರೊಟೆ ತಯಾರಿಸಿ ಪ್ರಸಾದವೆಂದು ಸ್ವೀಕರಿಸಿ ಅಲ್ಲಿಯೇ ಸ್ವಲ್ಪ ತಿಂದು ನಂತರ ಉಳಿದ ರೊಟ್ಟಿಯನ್ನು ನಿರಂತರವಾಗಿ ಕೆರೆಯಲ್ಲಿ ಸಮರ್ಪಣೆ ಮಾಡಿ ಪೂಜೆ ಸಲ್ಲಿಸುವ ಕಾಯಕ ಮಾಡಿಕೊಂಡಿದ್ದಾರೆ.
    8 ದಿನಗಳ ಕಾಲ ಮಳೆರಾಯನ ಪ್ರಾರ್ಥನೆ ಮಾಡಿ ನಂತರ 9 ದಿನದಂದು ಮಳೆರಾಯನ ಮೂರ್ತಿಯನ್ನು ವಧುವಿನ ಉಡುಪು ಧರಿಸುವ ಬಾಲಕನೆ ತಲೆ ಮೇಲೆ ಇಟ್ಟು ಗ್ರಾಮದಲ್ಲಿರುವ ಪ್ರತಿಯೊಂದು ಮನೆ-ಮನೆಗೆ ಸಂಚರಿಸಿ ಪ್ರತಿಯೊಂದು ಮನೆಯಿಂದ ಮಳೆರಾಯನ ಮೇಲೆ ನೀರು ಹಾಕಿಸಿ ಪೂಜೆ ಸ್ವೀಕರಿಸಿ ಮೆರವಣಿಗೆಯ ಮೂಲಕ ಕೆರೆಗೆ ತೆರಳುವುದು ಸಂಪ್ರದಾಯ ಮಾಡಿಕೊಂಡಿದ್ದಾರೆ, ಕೆರೆಯ ಅಂಗಳದಲ್ಲಿ ವಿಶೇಷ ಪೂಜಾ ಪುನಸ್ಕಾರದೊಂದಿಗೆ ಮಳೆರಾಯನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸುವುದನ್ನು ಗ್ರಾಮಸ್ಥರು ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ.
 

Read These Next

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...