ಚಿನ್ನಾಭರಣ ನೋಡುತ್ತಿದ್ದ ಕ್ಲೀನರ್‌ನನ್ನು ಮೂದಲಿಸಿದರು...ಬಳಿಕ ಏನಾಯಿತು ನೋಡಿ

Source: S O News service | By sub editor | Published on 5th December 2016, 5:43 PM | Gulf News | Don't Miss |

ರಿಯಾದ್: ಇಲ್ಲಿಯ ಕ್ಲೀನರ್‌ನೋರ್ವನ ಅದೃಷ್ಟ ಏಕಾಏಕಿ ಖುಲಾಯಿಸಿದೆ. ಜ್ಯುವೆಲ್ಲರಿ ಅಂಗಡಿಯ ಶೋಕೇಸ್‌ನಲ್ಲಿದ್ದ ಚಿನ್ನಾಭಣಗಳನ್ನು ಈ ಕ್ಲೀನರ್ ನೋಡುತ್ತಿದ್ದ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿ ಗೇಲಿ ಮಾಡಲಾಗಿತ್ತು. ಈಗ ಈ ಕ್ಲೀನರ್ ಚಿನ್ನಾಭರಣಗಳ ಸೆಟ್ ಅನ್ನೇ ಉಡುಗೊರೆಯಾಗಿ ಪಡೆದುಕೊಂಡಿದ್ದಾನೆ.

 

ಈ ಚಿತ್ರವನ್ನು ಪೋಸ್ಟ್ ಮಾಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರನೋರ್ವ‘ ಈ ಮನುಷ್ಯ ಕಸದ ರಾಶಿಯನ್ನು ನೋಡಲಷ್ಟೇ ಅರ್ಹನಾಗಿದ್ದಾನೆ ’ಎಂದು ಲೇವಡಿ ಮಾಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಇನ್ನೊಬ್ಬ ಬಳಕೆದಾರ, ತಾನು ಈ ವ್ಯಕ್ತಿಗೆ ಚಿನ್ನದ ಆಭರಣಗಳ ಸೆಟ್ ನೀಡಲು ಬಯಸಿದ್ದೇನೆ. ಹೀಗಾಗಿ ತನಗೆ ಆತನ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದು ಕೋರಿದ್ದ. ಕ್ಲೀನರ್‌ನ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕ್ಲೀನರ್‌ಗೆ ಚಿನ್ನದ ಅಭರಣಗಳ ಸೆಟ್ ಕೊಡಿಸುವ ಬಗ್ಗೆ ಹಲವಾರು ಸೌದಿ ಬಳಕೆದಾರರು ಮುಂದಾಗಿದ್ದರು.

ಇಷ್ಟಾದ ಬಳಿಕ ಈ ಕ್ಲೀನರ್ ಚಿನ್ನದ ಆಭರಣಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೊ ಶೇರ್ ಆಗಿದೆ. ಕ್ಲೀನರ್‌ಗೆ ಇನ್ನಷ್ಟು ಉಡುಗೊರೆಗಳನ್ನು ತಾವು ಕಳುಹಿಸುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿರುವ ಸೌದಿಗಳು ಹೇಳಿದ್ದಾರೆ. 2000 ಸೌದಿ ರಿಯಾಲ್‌ಗಳನ್ನು ತಾನು ಉಡುಗೊರೆಯಾಗಿ ನೀಡಲಿದ್ದೇನೆ ಎಂದು ಓರ್ವ ಬಳಕೆದಾರ ಪ್ರಕಟಿಸಿದ್ದಾನೆ.

ಕೃಪೆ:ವಾರ್ತಾಭಾರತಿ

Read These Next

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...