ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ ‘ಮಾನವೀಯತೆಗಾಗಿ’ ಸೈಕಲ್ ಓಟ ಸ್ಪರ್ಧೆ

Source: sonews | By Staff Correspondent | Published on 8th December 2018, 5:54 PM | Coastal News | State News | Don't Miss |

ಭಟ್ಕಳ: ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಗಾಗಿ ‘ಮಾನವೀಯತೆಗಾಗಿ ಸೈಕಲ್ ರೇಸ್ ಸ್ಪರ್ಧೆ-2018’ ನ್ನು ಶನಿವಾರ ಬೆಳಿಗ್ಗೆ 9ಗಂಟೆಗೆ ಆಯೋಜಿಸಲಾಗಿತ್ತು. 

ಸೈಕಲ್ ರೇಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ, ಮಾನವೀತೆಯಗಾಗಿ ಸೈಕಲ್ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಮಾನವೀಯ ಗುಣಗಳನ್ನು ಬಿತ್ತಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು. 

ಪ್ರಸ್ತಾವಿಕವಾಗಿ ಮಾತನಾಡಿದ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ ಮಾತನಾಡಿ, ನಾವು ಮನುಷ್ಯರೆಂಬ ನೆಲೆಯಲ್ಲಿ ಮನುಷ್ಯ ಮನುಷ್ಯರನ್ನು ಪ್ರೀತಿಸುವ, ಗೌರವಿಸುವ, ಮನುಷ್ಯರನ್ನು ಆದರಿಸುವ ಸಮಾಜ ನಿರ್ಮಾಣದ ಗುರಿ ನಮ್ಮದಾಗಿದ್ದು ವಿದ್ಯಾರ್ಥಿ ದೆಸೆಯಿಂದಲೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. 
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ನಾಯ್ಕ, ಅಬ್ದುಸ್ಸುಭಾನ್ ನದ್ವಿ, ಅಬ್ದುಲ್ಲಾ ಖಲಿಫಾ, ಶಾಝಿರ್ ಹುಸೇನ್, ಮಂಜುನಾಥ್ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಸೈಕಲ್ ಸ್ಪರ್ಧೆಯ ವಿಜೇತರು:

ಪ್ರೌಢಶಾಲೆ ವಿಭಾಗ: ಪ್ರಥಮ ಸ್ಥಾನ  ಮುಹಮ್ಮದ್ ತಿಬಿಯಾನ್ ಆರ್.ಎಸ್, ದ್ವಿತೀಯ ಫಾರ್ಖಲಿತ್ ರಿದಾ ಮಾನ್ವಿ, ತೃತೀಯ ಮುಸಾಬ್ ಇಕ್ಕೇರಿ ಪಡೆದುಕೊಂಡರು.

ಪ್ರಾಥಮಿಕ ವಿಭಾಗ: ಪ್ರಥಮ ಸ್ಥಾನ ಸಲ್‍ಸಬೀಲ್ ಕೋಬಟ್ಟೆ,  ದ್ವಿತೀಯಾ ಸ್ಥಾನ ಮುಹಮ್ಮದ್ ಉನೈಸ್ ಸಿದ್ದೀಖಾ ಹಾಗೂ ತೃತೀಯ ಸ್ಥಾನ ಹಸನ್ ತಲ್ಹಾ ಸಿದ್ದಿಬಾಪ ಪಡೆದುಕೊಂಡಿದ್ದಾರೆ. 

ಜಾಲಿ ರಸ್ತೆಯಿಂದ ಬಹರೇನ್ ಬೀಚ್ ವರೆಗೆ ಸುಮಾರು 2ಕಿ.ಮೀ.ರಸ್ತೆಯಲ್ಲಿ ಸೈಕಲ್ ಸ್ಪರ್ಧೆ ನಡೆಯಿತು. 
 

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...