ಕುವೈತ್: ಸೋಶಿಯಲ್ ಫೋರಮ್ ನೆರವು; ತವರಿಗೆ ಮರಳಿದ ಇಬ್ಬರು ಭಾರತೀಯರು

Source: isf kwt | By Arshad Koppa | Published on 6th November 2016, 1:45 PM | Gulf News | Don't Miss |

ಕುವೈತ್, ನ ೪: ಇಂಡಿಯನ್ ಸೋಶಿಯಲ್ ಫೋರಮ್ (ಐಎಸ್ಎಫ್) ಕುವೈತ್ ನ ಸಕಾಲಿಕ ಮಧ್ಯಪ್ರವೇಶದಿಂದ ಸಂಕಷ್ಟದಲ್ಲಿದ್ದ ಇಬ್ಬರು ಅನಿವಾಸಿ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಬೆಂಗಳೂರಿನ ಇಬ್ರಾಹೀಮ್ ಮತ್ತು ತಮಿಳುನಾಡಿನ ಜಯಶಂಕರ್ ಎಂಬವರು ಕುವೈತ್ ಗೆ ಉದ್ಯೋಗ ಅರಸಿಕೊಂಡು ಬಂದಿದ್ದು, ವೀಸಾ ಏಜೆಂಟರ ವಂಚನೆಗೆ ಬಲಿಯಾಗಿ ಸುಮಾರು 20 ತಿಂಗಳ ಕಾಲ ಅಪರಿಚಿತ ಮರಳುನಾಡಿನಲ್ಲಿ ದಿಕ್ಕುತೋಚದೆ ಕಂಗಾಲಾಗಿದ್ದರು. ವಿಷಯವನ್ನು ಅರಿತ ಇಂಡಿಯನ್ ಸೋಶಿಯಲ್ ಫೋರಮ್ ಈ ಇಬ್ಬರು ಭಾರತೀಯರನ್ನು ಸಂಕಷ್ಟದಿಂದ ಪಾರುಮಾಡಿ, ಸ್ವದೇಶಕ್ಕೆ ವಾಪಾಸು ಕಳುಹಿಸಿಕೊಡುವಲ್ಲಿ  ಯಶಸ್ವಿಯಾಗಿದೆ. ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರ ನೋವುಗಳಿಗೆ ಸ್ಪಂದಿಸುತ್ತಿರುವ ಸೋಶಿಯಲ್ ಫೋರಮ್, ವಿದೇಶ ಉದ್ಯೋಗ ಅರಸಿಕೊಂಡು ಬರುವ ಭಾರತೀಯರು ಸಾಕಷ್ಟು ಮುಂಜಾಗ್ರತೆ ವಹಿಸಿಕೊಂಡು ವೀಸಾ ಏಜೆಂಟರ ವಂಚನೆಗೆ ಬಲಿಯಾಗದಂತೆ ಎಚ್ಚರವಹಿಸಬೇಕಾಗಿ ಕೇಳಿಕೊಂಡಿದೆ.


ಘಟನೆಯ ವಿವರ:ಸೌದಿ ಅರೇಬಿಯಾದಲ್ಲಿ ಪೈಂಟಿಂಗ್ ಕಾಂಟ್ರಾಕ್ಟರ್ ಆಗಿ ಸ್ವಂತ ಉದ್ಯಮ ನಡೆಸುತ್ತಿದ್ದ ಬೆಂಗಳೂರು ಆರ್ ಟಿ ನಗರ ಮೂಲದ 48ರ ಹರೆಯದ ಇಬ್ರಾಹಿಂ ಮಹಮ್ಮದ್ ಯಾಸೀನ್  ಹಾಗೂ ತಮಿಳು ನಾಡಿನ ಮಲ್ಲಾಪುರಮ್ ಎಂಬಲ್ಲಿನ 38 ರ ಹರೆಯದ ಜಯಶಂಕರ್ ಮಣಿಕ್ಕಂ ಎಂಬವರೇ ಕುವೈತ್ ನಲ್ಲಿ ಉತ್ತಮ ಕೆಲಸ, ಜೊತೆಗೆ ಸ್ವಂತ ಉದ್ಯಮ ಸ್ಥಾಪಿಸಲು ಹೆಚ್ಚಿನ ಅವಕಾಶ ಎಂಬ ವೀಸಾ ಏಜೆಂಟ್ ನ ಆಮಿಷಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ಕಳೆದುಕೊಂಡು ಸಂಕಸ್ಟದಲ್ಲಿ ಸಿಲುಕಿದ ಇಬ್ಬರು ಸಂತ್ರಸ್ತರು. 
ಇಬ್ರಾಹಿಂ ಮತ್ತು ಜಯಶಂಕರ್ ವಿವಿಧ ಕನಸುಗಳೊಂದಿಗೆ ಉತ್ತಮ ಅವಕಾಶಗಳನ್ನರಸಿಕೊಂಡು 2015 ಫೆಬ್ರವರಿ ತಿಂಗಳಲ್ಲಿ ಕುವೈತ್ ಗೆ ಬಂದಿಳಿದದ್ದೇ ಇಲ್ಲಿನ ಕಾರ್ ರೆಂಟಲ್ ಕಂಪೆನಿಯೊಂದರಲ್ಲಿ 70 ದಿನಾರ್ ಸಂಬಳಕ್ಕೆ ಡ್ರೈವರ್ ಆಗಿ ದುಡಿಯಲು ನಿರ್ಭಂದಿಸಲ್ಪಟ್ಟಿದ್ದರು. ನಿರಂತರ 3 ತಿಂಗಳ ಕಾಲ ದುಡಿದರೂ ಸಂಬಳ ಸಿಗದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಅವರಿಗೆ ಕಂಪೆನಿಯು ಪಾಸ್ ಪೋರ್ಟ್ ನೀಡದೆ ಸತಾಯಿಸುತ್ತಿತ್ತು. ಇದರಿಂದಾಗಿ ಕೆಲಸವೂ ಇಲ್ಲದೆ ಊರಿಗೆ ಮರಳಲೂ ಆಗದೆ ತಮ್ಮ ದೈನಂದಿನ ಅಗತ್ಯಗಳಿಗಾಗಿ ಇತರರೊಂದಿಗೆ ಕೈಯಾಚಿಸಬೇಕಾದ ಅನಿವಾರ್ಯತೆಗೊಳಗಾಗಿದ್ದರು. 
ಈ ಮಧ್ಯೆ ಕೆಲ ದಿನಗಳ ಹಿಂದೆ ಇಬ್ರಾಹಿಂನ ಆರೋಗ್ಯವು ತೀರಾ ಹದಗೆಟ್ಟಿದ್ದು ಈ ಅವಧಿಯಲ್ಲಿ ಸೋಶಿಯಲ್ ಫೋರಮ್ ಸದಸ್ಯರು ಭೇಟಿಯಾಗಿ ಅಗತ್ಯ ನೆರವು ಸಾಂತ್ವನ ನೀಡುತ್ತಿದ್ದರು.   
ಈ ಮೊದಲು ಇಬ್ರಾಹಿಂ ನೆರವಿಗಾಗಿ ಅವರ ಕುಟುಂಬಸ್ಥರು ಕರ್ನಾಟಕ ಸರ್ಕಾರದ ಎನ್ ಆರ್ ಐ ಫೋರಂನ ಮೊರೆ ಹೋಗಿದ್ದರು. ಇದೀಗ 20 ತಿಂಗಳುಗಳ ನಂತರ ಐಎಸ್ಎಫ್ ಹಾಗೂ ಎನ್ ಆರ್ ಐ ಫೋರಂನ ನಿರಂತರ ಹಾಗೂ ಪರಿಣಾಮಕಾರಿ ಮಧ್ಯಪ್ರವೇಶದಿಂದ ಈ ಇಬ್ಬರೂ ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದಾರೆ.
 

Read These Next

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು