ಕೋಲಾರ: ಸರ್ಕಾರದಿಂದ ಬರುವ ಹೆಣ್ಣು ಮಕ್ಕಳಿಗೆ ಮತ್ತು ಗರ್ಭಿಣಿಯರಿಗಾಗಿ ಬರುವ ಆಹಾರ ಕಾಳಸಂತೆಗೆ-ಮನವಿ ಸಲ್ಲಿಕೆ

Source: shabbir | By Arshad Koppa | Published on 24th August 2017, 8:39 PM | State News | Guest Editorial |

ಕೋಲಾರ,ಆ.24:  ಸರ್ಕಾರದಿಂದ ಬರುವ ಹೆಣ್ಣು ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಬರುವ ಆಹಾರ ಪಧಾರ್ಥಗಳು ಕಾಳ ಸಂತೆಗೆ ರವಾನೆಯಾಗಿ ಬಡ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗದೆ ಲೂಟಿಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸರ್ಕಾರದಿಂದ ಬರುವ ಹೆಣ್ಣು  ಮಕ್ಕಳ ಆಹಾರ ಪಧಾರ್ಥಗಳನ್ನು ಸಮರ್ಪಕವಾಗಿ ವಿತರಿಸಿ. ಹೆಣ್ಣು ಮಕ್ಕಳಿಗೆ ಅಪೌಷ್ಠಿಕತೆ ಕಾಡದಂತೆ ಮತ್ತು ಸಾವುಗಳಾಗದಂತೆ  ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರಿ ಉಪನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
    ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಸರ್ಕಾರದಿಂದ ಮಹಿಳಾ ಕಲ್ಯಾಣ ಇಲಾಖೆಗೆ 13ವರ್ಷದವರೆಗಿನ ಹೆಣ್ಣು ಮಕ್ಕಳಿಗೆ ಮತ್ತು ಗರ್ಭಿಣ ಯರಿಗೆ ಮತ್ತು ಭಾಣಂತಿಯರಿಗೆ ಪ್ರತಿ ತಿಂಗಳು ವಿತರಿಸಲು  ಪ್ರತಿ ವರ್ಷವು ಕೋಟ್ಯಾಂತರ ರೂ ಆಹಾರ ಪದಾರ್ಥಗಳು ಸರಬರಾಜು ಆಗುತ್ತಿವೆ. ಸರಬರಾಜಾದ ಆಹಾರ ಪದಾರ್ಥಗಳಿಗೂ ಸರ್ಮಕವಾಗಿ ಸರ್ಕಾರಕ್ಕೆ ಲೆಕ್ಕವನ್ನು ಪುಸ್ತಕದಲ್ಲಿ ನೀಡುವ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಈ ಆಹಾರ ಪದಾರ್ಥಗಳು ಮಹಿಳೆಯರ ಕೈಗೆ ಸೇರುತ್ತಿಲ್ಲ. ಇವು ಗುತ್ತಿಗೆದಾರರ ಮತ್ತು ಅಧಿಕಾರಿಗಳ ಕಳ್ಳಲೆಕ್ಕಗಳಿಂದ ಕಾಳಸಂತೆಗೆ ಬಹಿರಂಗವಾಗಿಯೇ ರವಾನೆಯಾಗಿ ಮಾರಾಟವಾಗಿ ಇಂದು ಗ್ರಾಮೀಣ ಮಹಿಳೆಯರು ಅಪೌಷ್ಠಿಕತೆಯಿಂದ ನರಳಲು ಈ ಅಧಿಕಾರಗಳ ಆಹಾರ ದಾನ್ಯಗಳ ಲೂಟಿಯೇ ಕಾರಣವಾಗಿದೆಂದು ಆರೋಪಿಸಿದರು.
    ಪ್ರತಿ ಗ್ರಾಮದಲ್ಲಿ ಅಂಗನವಾಡಿಗಳ ಮೂಲಕ ಈ ಹೆಣ್ಣು ಮಕ್ಕಳ ಆಹಾರ ಪದಾರ್ಥಗಳನ್ನು ತಿಂಗಳು ತಿಂಗಳು ನೀಡಬೇಕು. ಅಧಿಕಾರಿಗಳ ಲೆಕ್ಕದಲ್ಲಿ ಒಂದು ಹಳ್ಳಿಗೆ 50-70ಮಂದಿ ಈ ಪಲಾನುಭವಿಗಳಿದ್ದಾರೆಂದು ಸರ್ಕಾರಕ್ಕೆ ಲೆಕ್ಕ ಕೊಡುತ್ತಾರೆ.ಆದರೆ ಹಳ್ಳಿಗಳಲ್ಲಿ 5-10ಮಂದಿಗೆ ಈ ಆಹಾರ ಧಾನ್ಯಗಳು ಸೇರದೆ ಕಾಳಸಂತೆಯಲ್ಲಿ ಮಾರಾಟವಾಗುವಾಗ ಸುಮಾರು ಬಾರಿ ಸಿಕ್ಕಿ ಬಿದ್ದ ಉದಾಹರಣೆಗಳಿವೆ. ಈ ಬಗ್ಗೆ ಸುಮಾರು ಬಾರಿ ಇಲಾಖೆ ಗಮನಕ್ಕೆ ತಂದರೂ ಈ ಆಕ್ರಮಗಳು ನಿಲ್ಲದೆ, ಹೆಣ್ಣು ಮಕ್ಕಳಲ್ಲಿ ಅಪೌಷ್ಠಿಕತೆ ಕಾಡಿ ಮಹಿಳೆಯರು ಮತ್ತು ಹುಟ್ಟುವ ಮಕ್ಕಳು ಸಾಯಲು ಇಲಾಖೆಯ ಈ ಲೂಟಿಯೇ ಕಾರಣವಾಗಿದ್ದು, ಈ ಆಹಾರ ಪದಾರ್ಥಗಳ ಲೂಟಿಗೆ ಕಡಿವಾಣ ಹಾಕಿ ಹೆಣ್ಣು ಮಕ್ಕಳ ಮತ್ತು ಶಿಶುಗಳ ಜೀವಹಾನಿಯನ್ನು ತಪ್ಪಿಸಬೇಕೆಂದು ಆಗ್ರಹಿಸಲಾಯಿತು.
    ಮನವಿ ಸ್ವೀಕರಿಸಿದ ಉಪನಿರ್ದೇಶಕರು ಆಹಾರ ಪದಾರ್ಥಗಳ ವಿತರಣೆಯಲ್ಲಿ ಸಣ್ಣ ಪುಟ್ಟ ಲೋಪಗಳಾಗುತ್ತಿದ್ದು, ಕೇಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡು ಆಹಾರ ಪದಾರ್ಥಗಳನ್ನು ಮಹಿಳೆಯರಿಗೆ ಸೇರಿಸದೇ ದುರುಪಯೋಗವಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಈ ನಿಯೋಗದಲ್ಲಿ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಕೋರಂಗಡಹಳ್ಲಿ ಮಂಜು, ಕೆಂಬೋಡಿ ಕೃಷ್ಣೇಗೌಡ, ಈಕಂಬಳ್ಳಿ ಮಂಜುನಾಥ್ ಇದ್ದರು.


ಕೆ.ಶ್ರೀನಿವಾಸಗೌಡ
 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...