ಕೋಲಾರ:ಕುರಿಗಳ ಸಮೇತ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ 

Source: shabbir | By Arshad Koppa | Published on 27th May 2017, 10:18 AM | State News | Special Report |

ಕೋಲಾರ ಮೇ25:  ಮುಳಬಾಗಲು ತಾಲ್ಲೂಕು ಟಿ. ಕುರುಬರ ಹಳ್ಳಿ ಗ್ರಾಮದ ಸರ್ವೇ ನಂ. 36 ಪಿ2ರ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ತುಳಸಿರಾಮಶಟ್ಟಿಗೆ 2 ಎಕರೆ 20 ಗುಂಟೆ ಮಂಜೂರು ಮಾಡಿರುವ ಜಮೀನನ್ನು ರದ್ಧುಗೊಳಿಸಿ ಸುಳ್ಳು ದೂರು ದಾಖಲಿಸಿರುವ ನಂಗಲಿ ಪೋಲೀಸ್ ಉಪನೀರೀಕ್ಷಕರನ್ನು ಅಮಾನತ್ ಮಾಡಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಕುರಿಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಒತ್ತಾಯಿಸಿ. 
 ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ ಟಿ. ಕುರುಬರಹಳ್ಳಿ ಸರ್ವೇ ನಂ. 36 ಪಿ.2ರಲ್ಲಿ 33 ಎಕರೆ ಗೋಮಾಳದ ಹುಲ್ಲುಗಾವಲು ಪೂರ್ವಿಕರ ಕಾಲದಿಂದ ಜಾನುವಾರುಗಳು ಮೇಯಲು ಜಾಗ ಉಳಿಸಿಕೊಂಡಿದ್ದು, ಈ ಜಮೀನಿನ ತಂಟೆಗೆ ಯಾರೂ ಹೋಗದೆ ದನಕರುಗಳ ಮೇವಿಗೆ ಬಿಟ್ಟಿದ್ದರು. ಗಡ್ಡೂರು ಗ್ರಾಂ.ಪಂ. ನೌಕರ ತುಳಸಿರಾಮಶಟ್ಟಿ ಅಕ್ರಮವಾಗಿ 2ಎಕರೆ ಜಮೀನು ಮಂಜೂರು ಮಾಡಿಸಿಕೊಂಡು ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದು, ಮತ್ತು ಬ್ಯಾಂಕಿನಲ್ಲಿ ಈ ಜಮೀನಿನ ಮೇಲೆ ತಕ್ಷಣವೇ 5ಲಕ್ಷ ಸಾಲ ಪಡೆದಿದ್ದು, ಇದು ಜಮೀನು ಕಬಳಿಸುವ ದೊಡ್ಡ ದಂಧೆಯಾಗಿದೆ. ಇದಕ್ಕೆ ಕೆಲವು ಕಂದಾಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.  ಸುಮಾರು ದೂರು ಕೊಟ್ಟರು ಗೋಮಾಳ ಉಳಿಸಿಕೊಳ್ಳಲು ಮುಂದಾಗದ ಕಂದಾಯ ಇಲಾಖೆ ಜಮೀನು ಕಬಳಿಸಲು ಈ ವ್ಯಕ್ತಿಗೆ ಸಂಪೂರ್ಣ ಸಹಕಾರ ನೀಡಿ ದನಕರುಗಳ ಮೇವಿನ ಜಾಗವನ್ನು ಹಣಕ್ಕಾಗಿ ಕಂದಾಯ ಇಲಾಖೆ ಮಾರಿಕೊಂಡಿದೆ. ಇದರಲ್ಲಿ ಬೆಲೆಬಾಳುವ ಮರಗಳನ್ನು ಆಕ್ರಮ ಕಾಟಾವು ಮಾಢಿದ ಈ ವ್ಯಕ್ತಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.


ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಮಾತನಾಡಿ ಜಮೀನು ಮಂಜೂರು ಮಾಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿದವರು ಯಾರು? ಮಂಜೂರು ಪತ್ರ ಅಸಲಿಯೋ ನಕಲಿಯೋ ಸಂಪೂರ್ಣ ತನಿಖೆಯಾಗಬೇಕು, ಹೆಂಡತಿಯ ರಾಜಕೀಯ ಪ್ರಭಾವದಿಂದ ಬಡವರ ಮೇಲೆ ದೌರ್ಜನ್ಯ ವೆಸಗುವ ವ್ಯಕ್ತಿ ವಿರುದ್ದ ಕ್ರಮ ಕೈಗೊಂಡು ಈ ಗೋಮಾಳ ಜಮೀನನ್ನು ಯಥಾಸ್ಥಿತಿ ಉಳಿಸಿಕೊಡಬೇಕು ಸುಳ್ಳು ದೂರು ದಾಖಲಿಸಿ ಬಡವರಿಗೆ ತೊಂದರೆ ನೀಡುತ್ತಿರುವ ನಂಗಲಿ ಸಬ್‍ಇನ್ಸಪೆಕ್ಟರ್ ವಿರುದ್ದ ಕ್ರಮ ಕೈಗೊಂಡು ಅಮಾನತ್ ಮಾಡಬೇಕೆಂದು ಆಗ್ರಹಿಸುತ್ತೇವೆ. ಕೂಡಲೆ ಈ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ಯತಾಸ್ಥಿತಿ ಗೋಮಾಳವನ್ನು ಉಳಿಸಿಕೊಡಬೇಕು ಇಲ್ಲವಾದಲ್ಲಿ ಜಿಲ್ಲಾಡಳಿತಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆಂದು  ರೈತ ಸಂಘದಿಂದ ಎಚ್ಚರಿಸಲಾಯಿತು.
ವiನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಜಮೀನು ಮಂಜೂರಾತಿಯನ್ನು  ರದ್ದುಗೊಳಿಸಿ ಸಂಬಂಧಪಟ್ಟ ಕಂದಾಯ ಅಧಿಕರಿಗಳ ವಿರುದ್ದ 3 ದಿನದೊಳಗಾಗಿ ಕ್ರಮ ಕೈಗೊಂಡು ಈ ಜಾಗವನ್ನು ಗ್ರಾಮಸ್ಥರು ದನಕರುಗಳು ಮೇಯಿಸುವುದಿಕ್ಕೆ ಶಾಶ್ವತವಾಗಿ ಹುಲ್ಲುಗಾವಲಾಗಿ ಉಳಿಸಿಕೊಡುತ್ತೇನೆಂದು ಮತ್ತು  ನಂಗಲಿ ಪೊಲೀಸ್ ಉಪನಿರೀಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಎಸ್‍ಪಿ ರವರಿಗೆ ಕೂಡಲೆ ಸೂಚಿಸುತ್ತೇನೆಂದು ತಿಳಿಸಿದರು.  
 
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸ್‍ಗೌಡ,  (ಟಿ. ಕುರುಬರಳ್ಳಿ ಗ್ರಾಮಸ್ಥರು) ನಾರಾಯಣರೆಡ್ಡಿ, ರಾಮಕೃಷ್ಣಪ್ಪ, ಗಣೇಶ್.ಎಂ, ಚಂದ್ರಪ್ಪ.ಸಿ, ನಾಗಪ್ಪ,ಬಿ,ಜಿ ಮುನಿವೆಂಕಟಪ್ಪ ಲಕ್ಷಮ್ಮ,ಕೃಷ್ಣಪ್ಪ, ಮುನಿವೆಂಕಟಮ್ಮ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಸಾಗರ್, ರಂಜೀತ್‍ಕುಮಾರ್, ಕಲಾವತಮ್ಮ, ರಾಮಕ್ಕ, ಶ್ಯಾಮಲಮ್ಮ, ಸರಸ್ವತಮ್ಮ, ಕದಿರಮ್ಮ, ಮಾಲತಿ, ಸುಲೋಚನ, ಚಿಕ್ಕಪಾಪಮ್ಮ, ವೆಂಕಟರತ್ನಮ್ಮ, ದೊಡ್ಡಲಕ್ಷಮ್ಮ, ಲಕ್ಷೀದೇವಮ್ಮ, ಯಶೋಧಮ್ಮ, ಸುಧಮ್ಮ, ಪಾರ್ವತಮ್ಮ ಮಂಗಮ್ಮ, ಚಂಗಮ್ಮ, ಆಂಜಮ್ಮ ಮುನಿವೆಂಕಟಮ್ಮ, ನಾಗಪ್ಪ,  ಚೆನ್ನರಾಯಪ್ಪ, ಕೃಷ್ಣಮೂರ್ತಿ, ವೆಂಕಟರಾಯಪ್ಪ, ರಾಮಕೃಷ್ಣಪ್ಪ,  ಚೆಂಗಲರಾಯಪ್ಪ, ಕದಿರಪ್ಪ, ಚಿನ್ನಪ್ಪ, ಮುನಿಯಮ್ಮ, ಪಾರ್ವತಮ್ಮ ವೆಂಕಟಮ್ಮ, ಸೀತಮ್ಮ, ಚೌಡಮ್ಮ, ನಾರಾಯಣಪ್ಪ, ಮಂಜುನಾಥ್, ವೆಂಕಟೇಶಪ್ಪ, ಶ್ರೀರಾಮಪ್ಪ, ರಾಮಕೃಷ್ಣಪ್ಪ, ನರಸಿಂಹಪ್ಪ, ರಾಮಚಂದ್ರಪ್ಪ,  ಸುಬ್ರಮಣ , ಗಂಗಾಧರ, ತಿಪ್ಪಣ್ಣ, ರೆಡ್ಡಪ್ಪ, ಗಣೇಶ್ ವೆಂಕಟೇಶ್‍ರೆಡ್ಡಿ, ಚನ್ನಕೇಶವ, ಪಾಪಲುರೆಡ್ಡಿ, ಲಕ್ಷಮ್ಮ, ಚಂದ್ರಪ್ಪ ಮುಂತಾದವರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...