ಕೋಲಾರ: ರಾಷ್ಟ್ರೀಯ ಮೌಲ್ಯಗಳನ್ನು ಕಾಪಾಡಿ : ಬಿಇಒ ರಘುನಾಥರೆಡ್ಡಿ

Source: shabbir | By Arshad Koppa | Published on 16th August 2017, 7:42 AM | State News | Guest Editorial |

ಕೋಲಾರ ಆ. 15: ರಾಷ್ಟ್ರೀಯ ಏಕತೆ, ಸಮಗ್ರತೆ, ಸಹೋದರತ್ವ ಸಾರುವ ದೃಷ್ಠಿಯಲ್ಲಿ ರಾಷ್ಟ್ರೀಯ ಮೌಲ್ಯಗಳನ್ನು ಕಾಪಾಡುವಂತಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಭಾರತೀಯರು ಎಂಬ ಮನೋಭಾವ ನಮ್ಮಲ್ಲಿ ಮೂಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.
    ನಗರದ ಭಾರತ ಸೇವಾದಳ ಜಿಲ್ಲಾ ಕಾರ್ಯಾಲಯದಲ್ಲಿಂದು 71ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
    ತ್ಯಾಗ ಬಲಿದಾನಗಳಿಂದ ಪಡೆದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕು. ಹಿರಿಯರ ತ್ಯಾಗ ಬಲಿದಾನ ನೆನಪಿಸಿಕೊಂಡರೆ ಸಾಲದು, ಅವರ ಕನಸುಗಳನ್ನು ನನಸು ಮಾಡುವತ್ತ ಚಿಂತನ ಮಂಥನಗಳಾಗಬೇಕು. ಸರ್ಕಾರಿ ಆದೇಶದಂತೆ ಮುಂದಿನ ದಿನಗಳಲ್ಲಿ ಪ್ರತಿ ಶಾಲೆಯಲ್ಲೂ ಭಾರತ ಸೇವಾದಳದ ಘಟಕವನ್ನು ಸ್ಥಾಪಿಸಲಾಗುವುದೆಂದು ತಿಳಿಸಿದರು.
    ವಿಚಿದ್ರಕಾರಿ ಶಕ್ತಿಗಳ ದಮನಕ್ಕೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಭಾರತೀಯ ಸೈನಿಕನಂತಾಗಬೇಕು. ದೇಶಾಭಿಮಾನ ಬೆಳೆಸಿಕೊಂಡಾಗ ಮಾತ್ರ ದೇಶಪ್ರೇಮ, ದೇಶಭಕ್ತಿ ಮೂಡುತ್ತದೆ ಎಂದರು.
    ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್. ಗಣೇಶ್ ಅಧ್ಯಕ್ಷತೆ ವಹಿಸಿದ್ದು, ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಿ.ಕೆ. ವೆಂಕಟನಾರಾಯಣ್, ಉಪಾದ್ಯಕ್ಷ ಜಿ. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಸುಧಾಕರ್, ಖಜಾಂಚಿ ರವಿಕುಮಾರ್, ಜಿಲ್ಲಾ ಸಮಿತಿ ಸದಸ್ಯರಾದ ಡಿ. ಮುನೇಶ್, ರಾಜೇಶ್‍ಸಿಂಗ್, ತಾಲ್ಲೂಕು ಅಧ್ಯಕ್ಷ ವೈ. ಶಿವಕುಮಾರ್, ಕಾರ್ಯದರ್ಶಿ ಶ್ರೀರಾಮ್,  ಉಪಾಧ್ಯಕ್ಷ ಸಂಪತ್‍ಕುಮಾರ್, ಕೋಶಾಧ್ಯಕ್ಷ ಜಿ. ದೀಪು, ಸದಸ್ಯರಾದ ಸಿ. ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಅಧೀಕ್ಷಕ ಮುನಿಸ್ವಾಮಿಗೌಡ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್, ಸಂಪನ್ಮೂಲವ್ಯಕ್ತಿ ವಿ.ಮಂಜುನಾಥ್, ಜಿಲ್ಲಾ ಸಮಿತಿ ಸದಸ್ಯ ಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.
    ವಂದೇ ಮಾತರಂ ರಾಷ್ಟ್ರಗೀತೆ ಧ್ವಜವಂದನೆ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಮಾದ್ಯಮಿಕ, ಉರ್ದು, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರುಗಳು, ಸಹ ಶಿಕ್ಷಕರು, ವಿದ್ಯಾರ್ಥಿ ಭಾಗವಹಿಸಿದ್ದರು.

                                (ಜಿ.ಶ್ರೀನಿವಾಸ್)
   ಕೋಲಾರ

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...