ಕೋಲಾರ:ನೆಲಮೂಲ ಸಂಸ್ಕೃತಿಯನ್ನು ಉಳಿಸಲು ಕರೆ - ಶರಣಪ್ಪ ಗಬ್ಬೂರು

Source: shabbir | By Arshad Koppa | Published on 30th August 2017, 8:34 AM | State News | Special Report |

ಕೋಲಾರ ಆ.29: ಪ್ರಾಥಮಿಕ ಶಾಲೆಯ ಹಂತದಿಂದ ಉನ್ನತ ಶಿಕ್ಷಣ  ಹಂತದವರೆಗೂ ವೃತ್ತಿ ಶಿಕ್ಷಣ ಇದ್ದು, ಅದನ್ನು ಉಪಯೋಗಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದು ವೃತ್ತಿ ಶಿಕ್ಷಕರಾದ ಜಿ.ಟಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
    ಅವರು ಇಂದು ಉನ್ನತೀಕರಿಸಿದ ಮಾದ್ಯಮ ಶಾಲೆ ಕ್ಯಾಸಂಬಳ್ಳಿಯ ಶಾಲೆಯಲ್ಲಿ ವೃತ್ತಿ ಶಿಕ್ಷಣ ಜಾನಪದ ಸೊಗಡು ಕಾರ್ಯಕ್ರಮದಲ್ಲಿ  ಶಾಲಾ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
    ವೃತ್ತಿಪರ ಶಿಕ್ಷಣವನ್ನು ವಿದ್ಯಾರ್ಥಿಗಳು ಮನೆಯ ಮುಖಾಂತರವೇ ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಇರುವಂತಹ ಸೌಲಭ್ಯಗಳನ್ನು ಪಡೆದುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದರು. ಸರ್ಕಾರದ ಅನೇಕ ಯೋಜನೆಗಳಲ್ಲಿ ಬ್ಯಾಂಕ್‍ಗಳ ಮೂಲಕ ವೈದ್ಯಕೀಯ, ಶಿಕ್ಷಣ, ಇಂಜಿನಿಯರ್ ಶಿಕ್ಷಣದಲ್ಲಿಯೂ ಕೂಡ ಇದು ತುಂಬಾ ಅವಶ್ಯಕತೆಯಿದ್ದು, ಮಕ್ಕಳು ಇದನ್ನೂ ಕೂಡ ಸದುಪಯೋಗಪಡಿಸಿಕೊಳ್ಳಬೇಕೆಂದು, ಹಾಗೆಯೇ ವಿದ್ಯಾರ್ಥಿಗಳ ಮುಂದೆ ಸೋಪು, ಪ್ಲವರ್ ಡಿಟರ್‍ಜೆಂಟ್, ಪೇಸ್ಟ್, ಪೇಪರ್ ಕಟ್ಟಿಂಗ್‍ಗಳ ಮೂಲಕ ಅನೇಕ ರೇಖಾಚಿತ್ರಗಳನ್ನು ಹೇಗೆ ತಯಾರಿಸಬೇಕೆಂದು ಪ್ರಯೋಗಿಕವಾಗಿ ತಿಳಿಸಿಕೊಟ್ಟರು.
    ಕವಿ ಶರಣಪ್ಪ ಮಾತನಾಡಿ ಜನಪದ ಸೊಗಡನ್ನು ಕುರಿತು ಉಪನ್ಯಾಸ ನೀಡುತ್ತ ಈ ಗಡಿನಾಡಲ್ಲಿ ಜಾನಪದ ಸೊಗಡು ಕಣ್ಮರೆಯಾಗುತ್ತಿರುವುದು ಕಲೆಗಳನ್ನು ಉಳಿಸಿಕೊಳ್ಳಲು ಯುವಕರು ಮುಂದಾಗಬೇಕೆಂದು ಕಲಾಭಿಮಾನಿಗಳು ಸಂಸ್ಕøತಿಕ ಪರಂಪರೆಗೆ ಹೆಚ್ಚು ಒತ್ತು ನೀಡಬೇಕು ಅಂದಾಗ ಮಾತ್ರ ನಮ್ಮ ಜನಪದ ಕಲೆಗಳು ಉಳಿಯಲು ಸಾಧ್ಯವೆಂದರು. ಜಾನಪದ ಸೊಗಡಿನ ಕಲೆಗಳಾದ ಬೊಂಬೆಕುಣ ತ, ಕೀಲುಕುದುರೆ, ವೀರಗಾಸೆ, ನಂದಿಧ್ವಜ, ಕರಡಿಕುಣ ತ, ಡೋಲು, ಜಾನಪದ ನೃತ್ಯ, ಕೋಲಟ ಹೀಗೆ ಇನ್ನೂ ಹಲವಾರು ಜನಪದ ಕಲೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಇಂತಹ ಕಲೆಗಳ ಆಧುನಿಕತೆಗೆ ಸಿಲುಕಿ ವಿನಾಶದ ಅಂಚಿನಲ್ಲಿ ಸಾಗುತ್ತಿದೆ ಎಂದು ವಿಚಾರ ವ್ಯಕ್ತಪಡಿಸುತ್ತಾ ಇಂದಿನ ಯುವ ಜನಾಂಗ ಈ ನೆಲಮೂಲ ಸಂಸ್ಕøತಿಯನ್ನು ಉಳಿಸಿಕೊಳ್ಳಲು ಪ್ರಮಾಣ ಕ ಪ್ರಯತ್ನ ಮಾಡಬೇಕೆಂದರು.


    ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀನಿವಾಸ್ ರವರು ಶಾಲಾ ಹಂತದಲ್ಲಿ ಇಂತಹ ಜ್ಞಾನ, ಶಿಕ್ಷಣ, ಮಕ್ಕಳಿಗೆ ಅವಶ್ಯಕ ಹಾಗಾಗಿ ಇಂತಹ ತರಬೇತಿಗಳು ಅನಿವಾರ್ಯವೆಂದರು. ಇವುಗಳು ಪೂರ್ವಿಕರ ಕೊಡುಗೆ ಅದನ್ನು ಹೃದಯದಲ್ಲಿ ಕಾಪಾಡಬೇಕು. ಬಹಳಷ್ಟು ಕಲಾವಿದರು ಇದರ ಕಡೆ ಹೆಚ್ಚು ಗಮನಹರಿಸಬೇಕೆಂದು ತಿಳಿಸಿದರು. ಪ್ರಸ್ತುತ ಸಂದರ್ಭದಲ್ಲಿ ಅನೇಕ ಕಲೆಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕೆಂದರು. 
    ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ಪೋಷಕರು ಭಾಗವಹಿಸಿದ್ದರು.


                                    (ಶರಣಪ್ಪ ಗಬ್ಬೂರ್)
                                       ಕೋಲಾರ.
ಮೊ.:9902416040


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...