ಕೋಲಾರ: ಆಗಸ್ಟ್ 27 ರಂದು ಡಿಜಿಟಲ್ ನರ್ವ್ ಸೆಂಟರ್ ಉದ್ಘಾಟನಾ ಸಮಾರಂಭ

Source: shabbir | By Arshad Koppa | Published on 27th August 2017, 9:14 AM | State News | Guest Editorial |

ಕೋಲಾರ, ಆಗಸ್ಟ್ 26:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡಿಜಿಟಲ್ ನರ್ವ್ ಸೆಂಟರ್ ಉದ್ಘಾಟನಾ ಸಮಾರಂಭವನ್ನು ಆಗಸ್ಟ್ 27 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಅವರು ಉದ್ಘಾಟಿಸಲಿದ್ದು  ಶಾಸಕರಾದ ಆರ್.ವರ್ತೂರು ಪ್ರಕಾಶ್ ರವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಡಾ|| ಕೆ.ಹೆಚ್. ಮುನಿಯಪ್ಪ ಅವರು ಘನ ಉಪಸ್ಥಿತಿ ವಹಿಸುವರು.   ವಿಶೇಷ ಆಹ್ವಾನಿತರಾಗಿ ಟಾಟಾ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಆರ್.ವೆಂಕಟರಾಮನನ್ ಅವರು ಭಾಗವಹಿಸುವರು.  


ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷತೆ ಗೀತಮ್ಮ ಜಿ.ಆನಂದರೆಡ್ಡಿ,  ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ., ಡಾ|| ಜಿ.ಮಂಜುನಾಥ್,  ಕೆ.ಎಸ್.ಮಂಜುನಾಥಗೌಡ,  ವೈ.ರಾಮಕ್ಕ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವೀರಯ್ಯ, ತೂಪಲ್ಲಿ ಆರ್.ಚೌಡರೆಡ್ಡಿ,  ಸಿ.ಆರ್. ಮನೋಹರ್, ರಮೇಶ್ ಬಾಬು,  ನಗರಸಭೆ ಅಧ್ಯಕ್ಷರಾದ ಮಹಾಲಕ್ಷ್ಮಿ ಪ್ರಸಾದ್,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ,  ಬೆಂಗಳೂರಿನ ಆಕುಕ ಸೇವೆಗಳು ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್,  ಆಯುಕ್ತ ಮನೋಜ್ ಕುಮಾರ್ ಮೀನಾ,  ಅಭಿಯಾನ ನಿರ್ದೇಶಕ ಡಾ|| ರತನ್ ಕೇಲ್ಕರ್, ಎಲ್ಲಾ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ನಗರಸಭೆ ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

        


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
 

Read These Next

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಕೊಳವೆಬಾವಿ ಲೋಕಾರ್ಪಣೆ ನೀರಿನ ಸದ್ಬಳಕೆಗೆ ಶಾಸಕ ಕೆ.ಶ್ರೀನಿವಾಸಗೌಡರ ಕರೆ 

ಕೋಲಾರ: ಕೋಲಾರ ನಗರದ 26ನೇ ವಾರ್ಡಿಗೆ ಸೇರಿದ ಸಂತೇ ಮೈದಾನ ಶಿವಗಿರಿ ನಗರದಲ್ಲಿ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ನಿರ್ಮಿಸಿರುವ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...