ಅಪ್ರಾಪ್ತ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ; ನ್ಯಾಶನಲ್ ಪಬ್ಲಿಕ್ ಸ್ಕೂಲ್ ಶಿಕ್ಷಕ ಬಂಧನ; ಇಬ್ಬರು ಪರಾರಿ

Source: S O News service | By sub editor | Published on 4th March 2017, 12:23 AM | Coastal News | State News | Incidents | Don't Miss |

ಭಟ್ಕಳ: ಇಲ್ಲಿನ ಬಂದರ್ ರಸ್ತೆಯ ಎರಡನೆ ಕ್ರಾಸ್ ನಲ್ಲಿರುವ ನ್ಯಾಶನಲ್ ಪಬ್ಲಿಕ್ ಹೈಸ್ಕೂಲ್ ನಲ್ಲಿ ಎಸ್‌ಎಸ್‌ಎಲ್ಸಿ ಬಾಹ್ಯ ಪರೀಕ್ಷೆಗೆ ಕುಳಿತ ವಿದ್ಯಾರ್ಥಿನಿಯ ಮೇಲೆ ಶಾಲಾ ಪ್ರಾಂಶುಪಾಲ ಶಕೀಲ್ ಮುಲ್ಲಾ, ಶಿಕ್ಷಕ ನದೀಮ್ ಮುಲ್ಲಾ ಹಾಗೂ ಕಾರುಚಾಲಕ ಮೂವರು ಸೇರಿ ಅತ್ಯಾಚಾರ ಹಾಗೂ ಲೈಂಗೀಕ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಲಾಗಿದ್ದು ಈ ಪ್ರಕಣ ಕುರಿತಂತೆ ಶಿಕ್ಷಕ ನದೀಮ್ ಮುಲ್ಲಾ(೪೪)ಎಂಬಾತನನ್ನು ನಗರಠಾಣಾ ಪೊಲೀಸರು ಬಂಧಿಸಿದ್ದು ಪ್ರಾಂಶುಪಾಲ ಶಕೀಲ್ ಮುಲ್ಲಾ ಹಾಗೂ ಕಾರು ಚಾಲಕ(ಹೆಸರು ತಿಳಿದುಬಂದಿಲ್ಲ) ಪರಾರಿಯಾಗಿದ್ದಾರೆ. ಈರ್ವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ಘಟನೆಯ ವಿವರ: ಬಂದರ್ ರಸ್ತೆಯಲ್ಲಿರುವ ಶಕಿಲ್ ಮುಲ್ಲಾ ಸಹೋದರರ ನ್ಯಾಶನಲ್ ಪಬ್ಲಿಕ್ ಹೈಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ. ಬಾಹ್ಯ ಪರೀಕ್ಷೆಗೆ ಸಂಬಂಧ ಉಡುಪಿ ಜಿಲ್ಲೆಯ ಬೈಂದೂರಿನ ವಿದ್ಯಾರ್ಥಿಯೋರ್ವಳು ಸಂಪರ್ಕಿಸಿದ್ದು ಈ ಸಂಬಂಧ ಕೆಲ ದಾಖಲೆಗಳು ಒದಗಿಸಲು ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿಯನ್ನು ಶಾಲೆಗೆ ಕರೆಸಿಕೊಂಡಿದ್ದು ಇಬ್ಬರು ಮರಳಿ ಬೈಂದೂರಿಗೆ ಹೋಗಲು ಸಿದ್ದತೆಯಲ್ಲಿದ್ದಾಗ ತಾಯಿಗೆ ಮತ್ತೆ ಫೂನ್ ಮೂಲಕ ಇನ್ನೂ ಕೆಲಸ ಬಾಕಿಯಿದೆ ನಿಮ್ಮ ಮಗಳನ್ನು ಶಾಲೆಗೆ ಕಳುಹಿಸಿಕೊಡಿ ಎಂದು ತಿಳಿಸಿದ್ದು ಅದರಂತೆ ತಾಯಿ ವಿದ್ಯಾರ್ಥಿನಿಯನ್ನು ಶಾಲೆಗೆ ಕಳುಹಿಸಿ ತಾನು ಬೈಂದೂರಿಗೆ ಹೋಗಿದ್ದಾರೆ. 

ಇತ್ತ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಬೇರೊಂದು ಸ್ಥಳಕ್ಕೆ ಕಾರಿನಲ್ಲಿ ಕರೆದುಕೊಂಡು ಹೋದ ಶಕಿಲ್ ಮುಲ್ಲಾ ಹಾಗೂ ಆತನ ಸಹೋದರ ನದೀಮ್ ಮುಲ್ಲಾ ಮತ್ತು ಚಾಲಕ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಇದರ ನಂತರ ಆಕೆಯನ್ನು ಬೈಂದೂರು ಕಡೆಗೆ ಹೋಗುವ  ಟೆಂಪೋ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ. ಮನೆಗೆ ತೆರಳಿದ ವಿದ್ಯಾರ್ಥಿನಿ ತನ್ನ ತಾಯಿಗೆ ವಿಷಯವನ್ನು ತಿಳಿಸಿದ್ದು ತಾಯಿ ಹಾಗೂ ಮಗಳು ಇಬ್ಬರೂ ಕೂಡಿ ಭಟ್ಕಳ ನಗರಠಾಣೆಗೆ ದೂರನ್ನು ನೀಡಿದ್ದಾರೆ. 

ದೂರನ್ನು ದಾಖಲಿಸಿಕೊಂಡು ವಿದ್ಯಾರ್ಥಿನಿಯ ವಿಚಾರಣೆಗೈದ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿ ಆರೋಪಿಗಳನ್ನು ಹಿಡಿಯಲು ಜಾಲ ಬೀಸಿದ್ದಾರೆ. ಇದನ್ನು ಅರಿತ ಶಕಿಲ್ ಮುಲ್ಲಾ ಹಾಗೂ ಕಾರು ಚಾಲಕ ಪರಾರಿಯಾಗಿದ್ದಾರೆ. ಆದರೆ  ಶುಕ್ರವಾರ ಮಧ್ಯಾಹ್ನದಿಂದ ಬಂಧನದ ಭಯದಿಂದ ಶಾಲೆಯಲ್ಲಿ  ಅವಿತುಕೊಂಡಿದ್ದ ನದೀಮ್ ಮುಲ್ಲಾ ನನ್ನು ಪೊಲೀಸರು ನ್ಯಾಯಾಲುದ ಅನುಮತಿಯೊಂದಿಗೆ ಶಾಲಾ ಕೊಠಡಿಯ ಬಾಗಿಲನ್ನು ಒಡೆಯಲು ಯತ್ನಿಸಿದಾಗ ಒಳಗೆ ಅವಿತುಕೊಂಡಿದ್ದ  ನದೀಮ್ ಬಾಗಿಲು ಮುರಿಯಬೇಡಿ ಎಂದು ಬೇಡಿಕೊಂಡು ಹೊರಬರುತ್ತಿದ್ದಂತೆ ಪೊಲೀಸರು ಆತನ್ನು ಬಂಧಿಸಿದ್ದಾರೆ. 

ಸ್ಥಳದಲ್ಲಿದ್ದ  ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ನದೀಮ್  ಇದು ನನ್ನ ಮೇಲೆ ನಡೆದ ಷಡ್ಯಂತವಾಗಿದ್ದು ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದೊಂದು ಸುಳ್ಳುವರದಿಯಾಗಿದ್ದು ನನ್ನ ಬಳಿ ಎಲ್ಲ ದಾಖಲೆಗಳಿವೆ. ಸಿಸಿ ಟಿವಿ ಫೋಟೇಜ್ ಗಳಿವೆ. ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಎಸಗಿಲ್ಲ. ಇದಕ್ಕೂ ಮೊದಲು ನನ್ನನ್ನು ಟಾರ್ಗೇಟ್ ಮಾಡಿ ಇಂತಹದ್ದೇ ಮೂರು ಪ್ರಕರಣಗಳು ದಾಖಲಿಸಿದ್ದರು. ಆದರೆ ಅದೆಲ್ಲ ಸುಳ್ಳು ಸಾಬೀತಾಗಿವೆ ಎಂದಿದ್ದಾರೆ. 

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...