ಬೆಂಗಳೂರು: ಟ್ರಿಪಲ್ ವೆಸೆಲ್ ಕರೊನರಿ ಅರ್ಟಿರಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ ನಾರಾಯಣ ಆಸ್ಪತ್ರೆ

Source: so english | By Arshad Koppa | Published on 16th September 2017, 9:13 AM | State News | Special Report |

ಬೆಂಗಳೂರು, ಸೆಪ್ಟೆಂಬರ್ 15, 2017: ಎರಡು ಗಂಭೀರ ಸ್ವರೂಪದ ರೋಗಗಳಿಂದ ನರಳುತ್ತಿದ್ದ ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಮೊದಲ ಆರೋಗ್ಯ ಸೇವಾ ಸಂಸ್ಥೆಯಾಗಿ ನಾರಾಯಣ  ಹೆಲ್ತ್ ಸಿಟಿ ಹೊರಹೊಮ್ಮಿದೆ. ನರೇಶ್ ಬಾಲಾ ಹೆಸರಿನ ರೋಗಿಯ ಗಂಭೀರ ಸ್ವರೂಪದ ಅಕ್ಯೂಟ್ ಮೇಲ್ಯಾಡ್ ಲ್ಯುಕೆಮಿಯಾ (ಎಎಂಎಲ್) ಮತ್ತು ಟ್ರಿಪಲ್ ಕರೊನರಿ ಅರ್ಟಿರಿ ಡಿಸೀಸ್ (ಟಿವಿಸಿಎಡಿ)ನಿಂದ ಬಳಲುತ್ತಿದ್ದು, ಬೋನ್ ಮಾರೊ ಕಸಿ (ಬಿಎಂಟಿ) ಚಿಕಿತ್ಸೆ ಮೂಲಕ ಹಾಗೂ ಕರೊನರಿ ಅರ್ಟಿರಿ ಬೈಪಾಸ್ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.
 
48 ವರ್ಷ ವಯಸ್ಸಿನ ನರೇಶ್ ಬಾಲಾ ಅವರು ತಪಾಸಣೆಗೆ ಒಳಪಟ್ಟಾಗ ಎಎಂಎಲ್ ಇರುವುದು 2012ರಲ್ಲಿ ತಿಳಿದುಬಂದಿತ್ತು. ಕಿಮೊಥೆರಪಿ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಟಿವಿಸಿಎಡಿ ಇರುವುದು ಬಳಿಕ ತಿಳಿದುಬಂದಿತು. ಪರಿಸ್ಥಿತಿ ಸುಧಾರಿಸದ ಕಾರಣ ಡಾ. ಶರತ್ ದಾಮೋದರ್ ನೆರವು ಕೋರಿದರು. ಸವಿವರವಾದ ತಪಾಸಣೆ ಬಳಿಕ ವೈದ್ಯರ ತಂಡ ಕಿಮೊಥೆರಪಿ ಜೊತೆಗೆ  ಬೋನ್‍ಮಾರೊ ಕಸಿ ಚಿಕಿತ್ಸೆ ನೆರವೇರಿಸಿತು. ನರೇಶ್ ಹೃದಯ ಸಂಬಂಧಿತ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಅವರಿಗೆ ಗುಣಪಡಿಸಲು ಬಿಎಂಟಿ ಏಕಮಾತ್ರ ಆಯ್ಕೆಯಾಗಿತ್ತು. ಡಾ. ಶರತ್ ದಾಮೋದರ ಅವರಿದ್ದ ತಂಡ ಇದನ್ನು ಒಂದು ಸವಾಲಾಗಿ ತೆಗೆದುಕೊಂಡಿತು.


 
ಒಮ್ಮೆ ಹೃದಯರೋಗ ತಂಡವು ಚಿಕಿತ್ಸೆ ನೆರವೇರಿಸಬಹುದು ಎಂಬ ಭರವಸೆ ನೀಡಿದ ಹಿಂದೆಯೇ ಹೊಂದಿಕೆಯಾಗುವ ಎಚ್‍ಎಲ್‍ಎಗಾಗಿ ಹುಡುಕಾಟ ಆರಂಭವಾಯಿತು. ಬಳಿಕ ಆಗಸ್ಟ್ 2012ರಲ್ಲಿ ಬೋನ್‍ಮಾರೊ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು. ಅದೃಷ್ಟವಶಾತ್ ನರೇಶ್ ಅವರಿಗೆ ಅವರ ಸಹೋದರನ ಎಚ್‍ಎಲ್‍ಎ ಹೊಂದಾಣಿಕೆಯಾಯಿತು. ನರೇಶ್ ಅವರು ಆಗಸ್ಟ್ 2012ರಲ್ಲಿ ಪೂರ್ಣ ಗುಣಮುಖರಾಗಿದ್ದು, ಅದೇ ತಿಂಗಳು ಬಿಡುಗಡೆ ಮಾಡಲಾಯಿತು
 
ಅವರು ಎಎಂಎಲ್‍ನಿಂದ ಚೇತರಿಸಿಕೊಂಡಿದ್ದು, ಮುಂದಿನ 2-3 ವರ್ಷಗಳಲ್ಲಿ ಹೃದಯ ವೈಫಲ್ಯದ ಸಮಸ್ಯೆ ಎದುರಿಸುತ್ತಾ ಬಂದರು. ಅವರಿಗೆ ರೋಗನಿರೋಧ ಔಷಧಿಗಳನ್ನು ನೀಡಲಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಯಿತು. ಅವರ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳಲು ಆರಂಭಿಸಿತು. ಇದರಿಂದಾಗಿ ಅವರಿಗೆ ಬೈಪಾಸ್ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅನಿವಾರ್ಯವಾಯಿತು.
 
ಈ ಪ್ರಕರಣ ಕುರಿತು ವಿವರಿಸಿದ ನಾರಾಯಣ ಹೆಲ್ತ್ ಹಾಸ್ಪಿಟಲ್‍ನ ಮಜುಂದಾರ್ ಶಾ ಮೆಡಿಕಲ್ ಸೆಂಟರ್‍ನ ಬೋನ್‍ಮಾರೋ ಕಸಿ ಘಟಕದ ಮುಖ್ಯಸ್ಥ, ಹಿರಿಯ ಕನ್ಸಲ್ಟಂಟ್ ಹೆಮಾಟಾಲಾಜಿಸ್ಟ್ ಡಾ. ಶರತ್ ದಾಮೋದರ್ ಅವರು, `ರಕ್ತದ ಕ್ಯಾನ್ಸರ್ ಮತ್ತು ಟಿವಿಸಿಎಡಿ ಒಂದೇ ಬಾರಿಗೆ ಆವರಿಸಿಕೊಳ್ಳುವುದು ಗಂಭೀರ ಸ್ವರೂಪದ ಪರಿಸ್ಥಿತಿ. ಬೋನ್ ಮಾರೊ ಚಿಕಿತ್ಸೆಗೆ ಹೆಚ್ಚಿನ ಕಾಳಜಿ ಅಗತ್ಯ ಜೊತೆಗೆ ಹೃದಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಆಗದಂತೆಯೂ ನೋಡಿಕೊಳ್ಳಬೇಕಾಗಿದೆ. ಸಿಎಬಿಜಿ ಹೆಚ್ಚಿನ ಸೋಂಕು ಆಗಲು ಇದಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ರೋಗನಿರೋಧಕ ಔಷಧವೂ ಕಾರಣವಾಗಿತ್ತು. ಎರಡೂ ಪರಿಸ್ಥಿತಿಯನ್ನು ಗಮನಿಸಿದರೆ ಸ್ವಲ್ಪ ಏರುಪೇರಾದರೂ ಸಾವು ಸಂಭವಿಸುವ ಅಪಾಯವಿತ್ತು’ ಎಂದು ಹೇಳಿದರು.
 
`ನಾವು ನರೇಶ್ ಅವರ ಜೀವ ಉಳಿಸಿದೆವು ಎಂದು ತಿಳಿಸಲು ಸಂತಸ ಪಡುತ್ತೇವೆ. ಭಾರತದಲ್ಲಿ ಇಂಥ ಚಿಕಿತ್ಸೆ ನೆರವೇರಿಸಿದ ಮೊದಲ ಆಸ್ಪತ್ರೆ ಎನ್‍ಎಚ್ ಆಗಿದೆ. ಎರಡು ಗಂಭೀರ ಸ್ವರೂಪದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಚಿಕಿತ್ಸೆಯಾಗಿದೆ’ ಎಂದು ಡಾ. ಶರತ್ ದಾಮೋದರ್ ತಿಳಿಸಿದರು.
 
ಸರ್ಜರಿಯನ್ನು ಯಶಸ್ವಿಯಾಗಿ ಯಾವುದೇ ತೊಡಕುಗಳಿಲ್ಲದೆ ನೆರವೇರಿಸಿದ್ದು, ನರೇಶ್ ಅವರಿಗೆ ಕ್ಯಾನ್ಸರ್‍ಗೆ ಚಿಕಿತ್ಸೆಯನ್ನಷ್ಟೇ ಅಲ್ಲ; ಟಿವಿಸಿಎಡಿಗೂ ಚಿಕಿತ್ಸೆ ನೆರವೇರಿಸಲಾಯಿತು. ಅವರೀಗ ಕಳೆದ ಐದು ವರ್ಷದಿಂದ ಸಹಜ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದರು.
 
ಹೃದ್ರೋಗ ಶಸ್ತ್ರಚಿಕಿತ್ಸೆ ಸೀನಿಯರ್ ಕನ್ಸಲ್ಟಂಟ್ ಡಾ.ರಮೇಶ್ ಶೇಷಾದ್ರಿ ಅವರು, `ನರೇಶ್ ಬಾಲಾ, ಅವರು ಬಿಎಂಟಿ ಸಮಸ್ಯೆಗೂ ಮೊದಲು ಗಂಭೀರ ಸ್ವರೂಪದ ಕರೊನರಿ ಅರ್ಟಿರಿ ರೋಗದಿಂದ ಬಳಲುತ್ತಿದ್ದು, ಎಲ್‍ವಿ ಡೈಸ್‍ಫಂಕ್ಷನ್ ಇತ್ತು. ಅವರು ಸಿಸಿಎಫ್‍ನಿಂದ ಇದ್ದು, ಗಂಭೀರ ಸ್ವರೂಪದ ಕ್ರಾನಿಕ್ ಕಿಡ್ನಿ ಡಿಸೀಸ್ ಇತ್ತು. ಅವರು ರೋಗನಿರೋಧಕ ಔಷಧ ಸೇವಿಸುತ್ತಿದ್ದರು. ಮೇಲೆ ತಿಳಿಸಿದ ಅಂಶಗಳಿಂದಾಗಿ. ಈ ಎಲ್ಲ ಅಂಶಗಳು ಗಂಭೀರ ಸ್ವರೂಪದ ಸಿಎಬಿಜಿ ಸಮಸ್ಯೆಗೆ ಎದುರಾಗುತಿದ್ದವು. ಸಿಎಬಿಜಿ ಚಿಕಿತ್ಸೆಯಿಂದ ಯಾವುದೇ ತೊಡಕಿಗೆ ಒಳಗಾ ಗದೇ, ಕಳೆದ ಒಂದು ವರ್ಷದಿಂದ ಚೇತರಿಕೆ ಕಾಣುತ್ತಿದ್ದಾರೆ ಎಂದು ಹೇಳಿದರು.
 
ಇದರ ಯಶಸ್ಸು ನರೇಶ್ ಬಾಲಾ ಮತ್ತು ಅವರ ಪತ್ನಿಗೆ ಸಲ್ಲಬೇಕು. ಇಡೀ ಚಿಕಿತ್ಸೆಯ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಡಾ. ಶೇಷಾದ್ರಿ ಹೇಳಿದರು.
 
ಎ.ಎಂಎಲ್ ಎಂಬುದು ಒಂದು ರೀತಿಯ ರಕ್ತದ ಕ್ಯಾನ್ಸರ್ ಆಗಿದ್ದು, ರಕ್ತ ಮತ್ತು ಬೋನ್ ಮಾರೊ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಸ್ಥಿತಿಯಲ್ಲಿ ಕ್ಯಾನ್ಸರ್ ಮೈಲ್ಯಾಡ್ ಕಣದಲ್ಲಿ ಕಾಣಿಸಲು ಆರಂಭವಾಗಲಿದೆ. ಟಿವಿಸಿಎಡಿ ಇನ್ನೊಂದು ಕಡೆ ಗಂಭೀರ ಸ್ವರೂಪದ ಹೃದ್ರೋಗ ಸಮಸ್ಯೆಯಾಗಿದ್ದು, ಇಲ್ಲಿ  ಹೃದಯಕ್ಕೆ ರಕ್ತ ಪೂರೈಸುವ ಕಣಗಳು ಬ್ಲಾಕ್ ಆಗಲಿವೆ. ಬ್ಲಾಕ್ ಆಗಲು ಕೊಬ್ಬು ಶೇಖರವಾಗುವ ಮೂಲಕ ಮೂಡುವ ಪ್ಲೇಕ್ ಕಾರಣವಾಗಲಿದೆ. ಇದು, ಹೃದಯ ನಾಳದಲ್ಲಿ ದೊಡ್ಡದಾಗುತ್ತಾ ಹೋದಂತೆ ಸಮಸ್ಯೆ ಹೆಚ್ಚಲಿದೆ. ನಿರ್ಲಕ್ಷಿಸಿದರೆ ದಿಢೀರ್ ಎಂದು ಹೃದಯಾಘಾತವೂ ಕಾಡಬಹುದು.
 
ಜೀವರಕ್ಷಣೆಗಾಗಿ ಸಂತಸ ವ್ಯಕ್ತಪಡಿಸಿದ ನರೇಶ್ ಬಾಲಾ ಅವರು, ನಾನು ರೋಗದಿಂದ ಗುಣಮುಖನಾಗುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ. ನನಗೆ ಬಹು ಹಂತದ ಸಮಸ್ಯೆ ಇದ್ದು, ಹೆಚ್ಚುವರಿ ಚಿಕಿತ್ಸೆಯು ವಿಭಿನ್ನ ವಿಭಾಗಗಳ ಸಹಯೋಗದಲ್ಲಿ ಅಗತ್ಯವಿದೆ ಎಂದು ಹೇಳಲಾಗಿತ್ತು. ನನ್ನ ಪ್ರಕರಣದಲ್ಲಿ ರಕ್ತ, ಹೃದ್ರೋಗ, ಮೂತ್ರಪಿಂಡ, ಯಕೃತ್ತು ಸಂಬಂಧಿತ ಸಮಸ್ಯೆಗಳಿದ್ದವು. ನಾರಾಯಣ ಹೆಲ್ತ್‍ನ ವೈದ್ಯರು ಇದನ್ನು ಅರಿತಿದ್ದು, ಪರಸ್ಪರ ಹೊಂದಾಣಿಕೆಯಿಂದ ಚಿಕಿತ್ಸೆ ನೆರವೇರಿಸಿದರು. ಇದಕ್ಕಾಗಿ ನಾನು ನಾರಾಯಣ ಹೆಲ್ತ್‍ಗೆ ಆಭಾರಿಯಾಗಿದ್ದೇನೆ’ ಎಂದು ಅಭಿಪ್ರಾಯಪಟ್ಟರು.
 
ನಾರಾಯಣ ಹೆಲ್ತ್ ಕುರಿತು:
ವಿಶ್ವದಲ್ಲಿ ದೊರೆಯುವ ಸೂಪರ್ ಸ್ಪೆಷಾಲಿಟಿ  ಸೌಲಭ್ಯಗಳ ಜೊತೆಗೆ ನಾರಾಯಣ ಹೆಲ್ತ್ ಈಗ ಎಲ್ಲ ಚಿಕಿತ್ಸೆಯ ಅಂತಿಮ ತಾಣವಾಗಿದೆ. ಡಾ. ದೇವಿಶೆಟ್ಟಿ ಅವರು ಬೆಂಗಳೂರಿನಲ್ಲಿ 2000ರಲ್ಲಿ 225 ಹಾಸಿಗೆಗಳ ಸಾಮಥ್ರ್ಯದೊಂದಿಗೆ ಇದನ್ನು ಆರಂಭಿಸಲಾಗಿದ್ದು, ಈಗ 23 ನೆಟ್‍ವರ್ಕ್ ಆಸ್ಪತ್ರೆಗಳು, 7 ಹೃದ್ರೋಗ ಕೇಂದ್ರಗಳು ಇರುತತವೆ. ಕೇಮನ್ ಉಪಖಂಡದಲ್ಲಿ ಆಸ್ಪತ್ರೆಯನ್ನು ಹೊಂದಿದೆ. ಎಲ್ಲ ಕೇಂದ್ರಗಳಿಂದ 5,900 ಹಾಸಿಗೆಗಳಿದ್ದು, ಈಗ ಸಾಮಥ್ರ್ಯ 7,100 ಹಾಸಿಗೆಗಳಿಗೆ ಏರಿದೆ. ವಿವರಗಳಿಗೆ ಸಂಪರ್ಕಿಸಿ: www.narayanahealth.org
 
ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಕುರಿತು:
ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇದೆ. ಇಲ್ಲಿ ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್ (ಎನ್‍ಐಸಿಎಸ್), ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ಗಳು ಹೃದ್ರೋಗ ಮತ್ತು ಹೃದ್ರೋಗ ಶಸ್ತ್ರಚಿಕಿತ್ಸೆಗೆ ಪೂರಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ  ಆರೈಕೆ ಮಾಡುವ ಮಜುಂದಾರ್ ಶಾ ಮೆಡಿಕಲ್ ಸೆಂಟರ್ ಕೂಡಾ ಇದ್ದು, ಭಾರತದ ಅತಿದೊಡ್ಡ ಬೋನ್ ಮಾರೊ ಕಸಿ ಘಟಕವು ಕೂಡಾ ಇಲ್ಲಿಯೇ ಇದೆ. ಎನ್‍ಎಚ್ ಹೆಲ್ತ್ ಸಿಟಿಯಲ್ಲಿ ಸ್ಟೆಮ್ ಸೆಲ್ ಬ್ಯಾಂಕ್ ಕೂಡಾ ಇದೆ.
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರೇಣು ಪ್ರವೀಣ್ | ಆ್ಯಡ್‍ಫ್ಯಾಕ್ಟರ್ಸ್ ಪಿಆರ್ | 9742279654
ರಾಗಿಣಿ | ಆ್ಯಡ್‍ಫ್ಯಾಕ್ಟರ್ಸ್ ಪಿಆರ್ |  9513339906
ವಸಂತ ಕುಮಾರ್ | ಆ್ಯಡ್‍ಫ್ಯಾಕ್ಟರ್ಸ್ ಪಿಆರ್ | 9880938950
ಜೆಸ್ಸಿಕಾ ಸಿಂಥಿಯಾ | ಆ್ಯಡ್‍ಫ್ಯಾಕ್ಟರ್ಸ್ ಪಿಆರ್ | 9818273882

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...