ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ - ಕರ್ನಾಟಕ ರಾಜ್ಯೋತ್ಸವ ಮತ್ತು ದ. ರಾ. ಬೇಂದ್ರೆ ಪ್ರಶಸ್ತಿ ಸಮಾರಂಭ

Source: ganesh rai | By Arshad Koppa | Published on 4th November 2016, 12:24 PM | Gulf News | Don't Miss |

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ 1981 ರಲ್ಲಿ ಸ್ಥಾಪನೆಯಾಗಿ ವೈವಿಧ್ಯಮಯ ಕನ್ನಡ ಭಾಷೆ, ಕಲೆ ಸಂಸ್ಕೃತಿಯನ್ನು ವೈಭವೀಕರಿಸಿಕೊಂಡು ಬರುತಿರುವ ಅಬುಧಾಬಿ ಕರ್ನಾಟಕ ಸಂಘ ಪ್ರತಿವರ್ಷದಂತೆ ಈ ಬಾರಿಯೂ 61ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದೆ. 2016 ನವೆಂಬರ್ 4ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.00 ರಿಂದ ಸಂಜೆಯವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅಬುಧಾಬಿಯಲ್ಲಿರುವ ಇಂಡಿಯಾ ಸೊಶಿಯಲ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿದೆ.

ಡಾ. ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ
ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಬುಧಾಬಿ ಕರ್ನಾಟಕ ಸಂಘದ ಬಳಗದಲ್ಲಿರುವ ವಿವಿಧ ವಯೋಮಿತಿಯ ಪ್ರತಿಭೆಗಳ ಸಮೂಹ ಗಾಯನ, ಸಮೂಹ ಜಾನಪದ ನೃತ್ಯ, ಹಾಸ್ಯ ಪ್ರಹಸನಗಳ ಆಕರ್ಷಕ ಪ್ರದರ್ಶನ ಸರ್ವರ ಮನಸೆಳೆಯಲಿದೆ.
 
ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿ ಶ್ರೀ ಬಿ. ಕೆ. ಗಣೇಶ್ ರೈಯವರ ಮಡಿಲಿಗೆ
ಅಬುಧಾಬಿ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ನೀಡಲಾಗುವ ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಈ ಬಾರಿ ಯು.ಎ.ಇ. ಯಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಿತ್ರಶಿಲ್ಪ ಕಲಾವಿದ, ಸಾಹಿತಿ, ಸಮಾಜ ಸೇವಕರಾದ, ಕ್ರಿಯಾತ್ಮಕ ಕಲಾನಿರ್ದೆಶಕ ಶ್ರೀ ಬಿ. ಕೆ. ಗಣೇಶ್ ರೈ ಯವರಿಗೆ ನೀಡಿ ಗೌರವಿಸಲಾಗುವುದು.

ಯು.ಎ.ಇ. ಮಟ್ಟದ ಸಮೂಹ ಗಾಯನ ಸ್ಪರ್ಧೆ
ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿ ವರ್ಷ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದು ಈ ಬಾರಿ ಯು.ಎ.ಇ. ಮಟ್ಟದಲ್ಲಿ ಸಮೂಹ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಯು.ಎ.ಇ. ಯ ವಿವಿಧ ಭಾಗಗಳಿಂದ ಆಗಮಿಸಲಿರುವ ಗಾಯನ ಪ್ರತಿಭೆಗಳ ಕಂಠಸಿರಿಯು ಅಬುಧಾಭಿ ಕರ್ನಾಟಕ ಸಂಘದ ಸಾಂಸ್ಕೃತಿಕ ವೇದಿಕೆಯಲ್ಲಿ ಮೊಳಗಲಿದೆ. ಅತ್ಯಂತ ಪೈಪೋಟಿಯಲ್ಲಿ ನಡೆಯಲಿರುವ ಸ್ಪರ್ಧೆ ಕನ್ನಡಿಗರ ಅಭಿಮಾನವನ್ನು ಜಾಗೃತಿಗೊಳಿಸಲಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಯು.ಎ.ಇ. ಯಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿ, ಹಾಗೂ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಕಳೆದ ಮೂರುವರೆ ದಶಕಗಳಿಂದ ಕನ್ನಡಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತಿರುವ ಅಬುಧಾಬಿ ಕರ್ನಾಟಕ ಸಂಘದ ಈ ಬಾರಿಯ ಸಮಾರಂಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಆಗಮಿಸಿ ಯಶಸ್ವಿಗೊಳಿಸಲು ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ವಿನಂತಿಸಿಕೊಂಡು ಕಾರ್ಯಕಾರಿ ಸಮಿತಿಯ ಪರವಾಗಿ ಮಾಧ್ಯಗಳ ಮೂಲಕ ಆಹ್ವಾನಿಸಿದ್ದಾರೆ.

ಮಾಧ್ಯಮ ಪ್ರಕಟಣೆ :

ಹೆಚ್ಚಿನ ವಿವರಗಳಿಗೆ ಮತ್ತು ಪ್ರವೇಶ ಪತ್ರಗಳಿಗಾಗಿ ಸಂಪರ್ಕಿಸಿ:

Sarvotham Shetty  : 050-6125

Manohar Thonse  : 050-5212 079

Yogish Prabhu  : 050-6613 735

Sudhir Shetty : 050-6427 903

Ravindra Rai  : 050-6176 149

Syed Siraj Ahmed : 050-6221 809

Pradip Kirodian        : 050-4953 432

Bennet D'Mello  : 050-6429 616

Loyolla Pinto  : 050-8189 788

Umesh Rao  : 055-7566 385

Melwyn Fernandes  : 055-4057 569

Vijay Rao  : 055-5528 307

Altaf M S : 050-5683 776

Abdulla Madhumoole : 050-4451092

Read These Next

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು