ಜಗದ್ವಿಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನ ರಾಬೆ ಹಸನಿ ನದ್ವಿ ನಿಧನ

Source: SOnews | By Staff Correspondent | Published on 13th April 2023, 11:31 PM | National News |

ಲಕ್ನೋ: ಜಗದ್ವಿಖ್ಯಾತ ಇಸ್ಲಾಮಿಕ್‌ ವಿದ್ವಾಂಸ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನ ರಬೆ ಹಸನಿ ನದ್ವಿ ಅಲ್ಪಕಾಲದ ಅಸೌಖ್ಯದಿಂದ ಎಪ್ರಿಲ್‌ 13, ಗುರುವಾರ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾರತದ ಮುಸ್ಲಿಂ ಸಮುದಾಯದ ಅತ್ಯಂತ ಗೌರವಾನ್ವಿತ ವಿದ್ವಾಂಸರಾಗಿದ್ದ ಅವರು ಇಸ್ಲಾಮಿಕ್‌ ಶಿಕ್ಷಣ ಹಾಗೂ ಅಂತರ-ಧರ್ಮೀಯ ಸೌಹಾರ್ದತೆಗೆ ಮಹತ್ವದ ಕೊಡುಗೆ ನೀಡಿದ್ದರು.

ಉತ್ತರ ಪ್ರದೇಶ ರಾಯ್‌ಬರೇಲಿ ಜಿಲ್ಲೆಯಲ್ಲಿ 1929ರಲ್ಲಿ ಜನಿಸಿದ್ದ ಮೌಲಾನ ರಬೆ ನದ್ವಿ, ಲಕ್ನೋದ ಖ್ಯಾತ ಇಸ್ಲಾಮಿಕ್‌ ವಿದ್ಯಾಸಂಸ್ಥೆ ನದ್ವತುಲ್‌ ಉಲಮದಲ್ಲಿ ಇಸ್ಲಾಮಿಕ್‌ ಅಧ್ಯಯನದ ಶಿಕ್ಷಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಮುಂದೆ 2011 ರಲ್ಲಿ ಅವರನ್ನು ಆ ಸಂಸ್ಥೆಯ ಚಾನ್ಸಲರ್‌ ಆಗಿ ನೇಮಿಸಲಾಗಿತ್ತು ಹಾಗೂ ತಮ್ಮ ಜೀವನದ ಕೊನೆಯವರೆಗೆ ಆ ಹುದ್ದೆಯಲ್ಲಿ ಅವರು ಮುಂದುವರೆದಿದ್ದರು.

ಇಸ್ಲಾಮಿಕ್‌ ಸಿದ್ಧಾಂತ ಹಾಗೂ ಪವಿತ್ರ ಕುರಾನ್‌ ಕುರಿತ ಕೃತಿ ಸಹಿತ ಹಲವಾರು ಕೃತಿಗಳನ್ನು ಬರೆದಿದ್ದ ಮೌಲಾನ ಅವರು ಖ್ಯಾತ ಲೇಖಕರೂ ಆಗಿದ್ದರು. ಧಾರ್ಮಿಕ ಸೌಹಾರ್ದತೆಗೆ ಒತ್ತು ನೀಡುತ್ತಿದ್ದ ಅವರು ವಿವಿಧ ಧರ್ಮಗಳ ನಡುವಿನ ಬಾಂಧವ್ಯ ವೃದ್ಧಿಸುವ ಉದ್ದೇಶ ಹೊಂದಿದ್ದ ಹಲವಾರು ಸಮ್ಮೇಳನಗಳು ಮತ್ತು ವಿಚಾರಸಂಕಿರಣಗಳಲ್ಲೂ ಭಾಗವಹಿಸಿದ್ದರು.

ಮೌಲಾನ ನದ್ವಿ ಅವರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷರಾಗುವ ಮೊದಲು ಅದರ ಪ್ರಧಾನ ಕಾರ್ಯದರ್ಶಿಯಾಗಿ  ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು ಹಾಗೂ ಭಾರತದಲ್ಲಿ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಂಡಳೀಯ ಪ್ರಯತ್ನಗಳ ಹಿಂದೆ ಅವರ ಶ್ರಮವೂ ಸಾಕಷ್ಟಿತ್ತು.

ಅವರು ಆಲ್‌ ಇಂಡಿಯಾ ಮುಸ್ಲಿಂ ಮಜ್ಲಿಸ್-ಎ-ಮುಶಾವರತ್‌ ಸಹಿತ ಹಲವು ಸಂಘಟನೆಗಳ ಸಕ್ರಿಯ ಸದಸ್ಯರಾಗಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...