ಭಟ್ಕಳ: ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಿದ ಯುವಕರು

Source: sonews | By Staff Correspondent | Published on 20th February 2019, 6:04 PM | Coastal News | Don't Miss |

•    ಆಳಬಾವಿಯಲ್ಲಿ ಜೀವದ ಹಂಗು ತೊರೆದು ಮುಸ್ಲಿಮ ಯುವಕರಿಂದ ಮಹಿಳೆಯ ರಕ್ಷಣೆ

ಭಟ್ಕಳ: ಇಲ್ಲಿನ ಡೋಂಗರ್ ಪಳ್ಳಿಯ ಬಳಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಆಳಬಾವಿಯಲ್ಲಿ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು ಸ್ಥಳಿಯ ಮುಸ್ಲಿಮ್ ಯುವಕರು ತಮ್ಮ ಜೀವದ ಹಂಗು ತೊರೆದು ಬಾವಿಯಲ್ಲಿ ಜೀವಂತವಾಗಿದ್ದ ಮಹಿಳೆಯನ್ನು ರಕ್ಷಿಸಿ ಬದುಕಿಸಿಕೊಂಡ ಘಟನೆ ಬುಧವಾರ ನಡೆದಿದೆ.

ಅಪರ್ಣಾ ನಾಗರಾಜ್ ಶೇಠ್(39) ಎಂಬ ಮಹಿಳೆ ಇಂದು ಪೂರ್ವಾಹ್ನ 11 ಗಂಟೆ ಸುಮಾರು ಮುಸ್ಲಿಮ ಬಹುಳ್ಯ ಪ್ರದೇಶದಲ್ಲಿರುವ ಬಾವಿಯೊಂದರಲ್ಲಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಕಟ್ಟಡ ಕಾರ್ಮಿಕರು ಇದನ್ನು ಗಮನಿಸಿ ಅಕ್ಕಪಕ್ಕದಲ್ಲಿರುವ ಯುವಕರನ್ನು ಕೂಗಿ ಕರೆದಿದ್ದಾರೆ. ಕ್ಷಣಾರ್ಧದಲ್ಲೆ ಮಗ್ದೂಮ್ ಕಾಲೋನಿ, ಡೋಂಗರ್ ಪಳ್ಳಿ, ಸೋನಾರ್ ಕೇರಿ, ಆಸಾರಕೇರಿಯ ಯುವಕರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಆಳಬಾವಿಯಲ್ಲಿ ಇಳಿದು ಮಹಿಳೆಯನ್ನು ರಕ್ಷಿಸುವುದು ಅಸಾಧ್ಯವೆಂದನಿಸಿ ಬಹಳಷ್ಟು ಯುವಕರು ಹಿಂದೆ ಸರಿದರು. ಆದರೆ ಇಬ್ರಾಹಿಂ ಬಾವಲ ಎಂಬ ಯುವಕ ತಾನು ಮಹಿಳೆಯನ್ನು ರಕ್ಷಿಸುತ್ತೇನೆ ಎಂದು ಪೊಲೀಸರ ಅನುಮತಿಯೊಂದಿಗೆ ಆಳಬಾವಿಗೆ ಇಳಿದು ಮಹಿಳೆಯನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಮಹಿಳೆಯನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.

ಹಿಂದೂ ಮಹಿಳೆಯೋಬ್ಬರು ಮುಸ್ಲಿಮ್ ಬಹುಳ್ಯ ಪ್ರದೇಶದಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದೇಯಾದಲ್ಲಿ ಭಟ್ಕಳದಲ್ಲಿ ಕೋಮುವಾದಿ ಸಂಘಟನೆಗಳು ಇದನ್ನೆ ಕೋಮುಗಲಭೆಗೆ ಬಳಿಸಿಕೊಳ್ಳುವ ಸಾಧ್ಯತೆಗಳಿದ್ದು ದೇವರ ದಯದಿಂದ ಆ ಮಹಿಳೆಯನ್ನು ಮುಸ್ಲಿಮ ಯುವಕರು ಬದುಕುಳಿಸಿಕೊಂಡಿದ್ದಾರೆ ಎಂದು ಸ್ಥಳಿಯ ಹಿರಿಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...