ಕಾಡು ಹಂದಿ ಬೇಟೆ: 11 ಆರೋಪಿಗಳ ಬಂಧನ

Source: ಕಾಡು ಹಂದಿ ಬೇಟೆ: 11 ಆರೋಪಿಗಳ ಬಂಧನ | Published on 27th June 2019, 9:07 PM | Coastal News | Don't Miss |

ಭಟ್ಕಳ:ಕಾಡು ಹಂದಿ ಬೇಟೆಯಾಡಲು ಬಂದ 11 ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ ಘಟನೆ ಬುಧವಾರ ಇಲ್ಲಿನ ಪುರಸಭೆಯ ಘನತಾಜ್ಯ ವಿಲೇವಾರಿ ಘಟಕದ ಬಳಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸೊಸೈಟಿಕರನ ನಿವಾಸಿಗಳಾದ ಪರಶುರಾಮ ಗುಳಪ್ಪೆ, ಚಂದ್ರಪ್ಪ ಬಂಗಾರಪ್ಪ, ರಮೇಶ ಬಾಳಪ್ಪ, ಬಂಗಾರಿ ಚಂದ್ರಪ್ಪ, ಸೂರಿ ಚಂದ್ರಪ್ಪ, ಅಶೋಕ ರಾಮಪ್ಪ, ನಾಗರಾಜ ಬಸವಂತಪ್ಪ, ಕುಮಾರ ಯಲ್ಲಪ್ಪ, ಹನುಮಂತ ರಮೇಶ ನಾಯ್ಕ, ಚಂದ್ರಪ್ಪ ಬಂಧಿತರು. ತಲೆಮರೆಸಿಕೊಂಡ ಯುವರಾಜ, ಸುಭಾಶ, ನಾಗಪ್ಪ, ಯಲ್ಲಪ್ಪ ಪತ್ತೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ. ಇವರು ಸೋಮವಾರ ರಾತ್ರಿ ಪುರಸಭೆಯ ಘನತಾಜ್ಯ ವಿಲೇವಾರಿ ಘಟಕದ ಪಕ್ಕದ ಗುಡ್ಡದಲ್ಲಿ ಕಾಡು ಹಂದಿಗಾಗಿ ಬಲೆ ಬೀಸಿದ್ದರು. ಇದರ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಡಿಎಫ್​ಒ ಗಣಪತಿ, ಎಸಿಎಫ್ ಬಾಲಚಂದ್ರ ಮಾರ್ಗದರ್ಶನದಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ಶಂಕರಗೌಡ ಅಲಗೋಡ, ಉಪವಲಯ ಅರಣ್ಯಾಧಿಕಾರಿಗಳಾದ ರವಿ ಎಸ್., ಮಲ್ಲಿಕಾರ್ಜುನ, ಗಣಪತಿ ನಾಯ್ಕ, ರಾಮಾ ನಾಯ್ಕ, ಪ್ರಮೋದ, ಶಿವಾನಂದ, ಮೇಘರಾಜ, ಶೇಷು ಶಿವಾನಂದ ಅವರ ತಂಡ ಮಂಗಳವಾರ ಬೆಳಗಿನ ಜಾವದವರೆಗೂ ಕಾರ್ಯಚರಣೆ ನಡೆಸಿದೆ. ಟಾಟಾ ಏಸ್ ಮತ್ತು 2 ಕಾಡು ಹಂದಿಗಳನ್ನು ವಶಕ್ಕೆ ಪಡೆಯಲಾಗಿದೆ. ಜೀವಂತವಿದ್ದ ಒಂದು ಕಾಡು ಹಂದಿಯನ್ನು ಕಾಡಿನಲ್ಲಿ ಬಿಟ್ಟಿದ್ದು ಮೃತ ಒಂದು ಹಂದಿಯ ಮರಣೋತ್ತರ ಪರೀಕ್ಷೆ ನಡೆಸಿ ಶವಸಂಸ್ಕಾರ ಮಾಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...