ಉಕ್ರೇನ್‌ನ ಬಂಕರ್‌, ಮೆಟ್ರೊ ಸ್ಟೇಷನ್‌ಗಳಲ್ಲಿ 15 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು

Source: Vb | By I.G. Bhatkali | Published on 27th February 2022, 7:20 AM | National News | Global News |

ಕೊಚ್ಚಿ: ರಶ್ಯದ ಸೇನೆ ಉಕ್ರೇನ್‌ನ ರಾಜಧಾನಿ ಕೀವ್ ಗೆ ಹತ್ತಿರವಾಗುತ್ತಿರುವ ಹಾಗೂ ಖಾರ್ಕಿವ್, ಡಿಸ್ನಿ, ಒಡೆಸ್ಸಾ ಹಾಗೂ ಸುಮಿ ಸೇರಿದಂತೆ ವಿವಿಧ ಸ್ಥಳಗಳ ಮೇಲಿನ ದಾಳಿಯನ್ನು ಮುಂದುವರಿಸುತ್ತಿರುವ ನಡುವೆ 15 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಬಂಕರ್ ಹಾಗೂ ಮೆಟ್ರೊಸ್ಟೇಷನ್‌ನಲ್ಲಿ ಸಿಲುಕಿಕೊಂ ಡಿದ್ದು, ಸದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಲು ಕಾಯುತ್ತಿದ್ದಾರೆ.

“ನಿನ್ನೆ ಬೆಳಗ್ಗೆ 5 ಗಂಟೆಗೆ ಸಂಭವಿಸಿದ ಸ್ಫೋಟದ ಶಬ್ದದಿಂದ ನನಗೆ ಎಚ್ಚರವಾಯಿತು. ಅದು ವಿಮಾನ ಎಂದು ನಾನು ಭಾವಿಸಿದ್ದೆ ಆದರೆ, ಅದು ಕ್ಷಿಪಣಿಯಾಗಿತ್ತು' ಎಂದು ಲಕ್ಷ್ಮೀದೇವಿ ಅವರು ಹೇಳಿದ್ದಾರೆ.

ಈಶಾನ್ಯ ಉಕ್ರೇನ್‌ನ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾನಿಲಯದ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿರುವ ಲಕ್ಷ್ಮೀದೇವಿ ಕೇರಳದ ಕಣ್ಣೂರಿನವರು.

ದಾಳಿಯ ಬಳಿಕ ತಮ್ಮ ವಸತಿ ಸಂಕೀರ್ಣ ಅಥವಾ ಹಾಸ್ಟೆಲ್ ಗಳಿಂದ ಹೊರಬರುವಂತೆ ಹಾಗೂ ಬಂಕರ್, ನೆಲಮಾಳಿಗೆ ಅಥವಾ ಮೆಟ್ರೊಸ್ಟೇಷನ್‌ಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. ಉಷ್ಣಾಂಶ ಸುಮಾರು 2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾದ ಹೊರತಾಗಿಯೂ ತುಂಬಿದಸಬ್‌ವೇಯ ನಿಲ್ದಾಣದಲ್ಲಿ ಇವರು ರಾತ್ರಿಗಳನ್ನು ಧೈರ್ಯದಿಂದ ಕಳೆದಿದ್ದಾರೆ. ದೇವಿ, ಕೇರಳದ ಇತರ ಕೆಲವು ವಿದ್ಯಾರ್ಥಿಗಳು ಹಾಗೂ ಕೆಲವು ಉಕ್ರೇನ್ ಪ್ರಜೆಗಳು ಸೇರಿದಂತೆ 9 ಮಂದಿಯ ಗುಂಪು ಬಹಳ ಸೀಮಿತ ಆಹಾರ, ನೀರು ಹಾಗೂ ಇತರ ಸೌಲಭ್ಯಗಳೊಂದಿಗೆ ಬಂಕರ್‌ಗೆ ತೆರಳಿತ್ತು.

ಕಡಿಮೆ ಬೆಳಕಿರುವ ಬಂಕರ್‌ನಲ್ಲಿ ಜಾಗ ಹಂಚಿಕೊಳ್ಳುವ ಸಂದರ್ಭ ಅಗತ್ಯದ ವಸ್ತುಗಳನ್ನು ಜೊತೆಯಲ್ಲಿ ಇರಿಸಿಕೊಂಡಿದ್ದೆವು ಎಂದು ಹೇಳಿದ ದೇವಿ, ಗುಂಪು ಭೀತಿಗೊಂಡಿತ್ತು. ಆದರೆ, ಅದು ತಮ್ಮ ವಸತಿ ಸಂಕೀರ್ಣಕ್ಕೆ ಭೇಟಿ ನೀಡಲು ಅಥವಾ ಹೊರಗೆ ಅಪಾಯ ಇರುವ ಹೊರತಾಗಿಯೂ ದಿನಸಿ ಖರೀದಿಸಲು ಕೆಲವೊಮ್ಮೆ ಹೊರಬರಲು ಪ್ರಯತ್ನಿಸಿತು ಎಂದಿದ್ದಾರೆ.

ನಾನು 30 ನಿಮಿಷಗಳ ಹಿಂದೆ ಕೊನೆಯ ಸ್ಫೋಟದ ಶಬ್ದ ಕೇಳಿದೆ. ಪ್ರತಿಯೊಬ್ಬರು ಭೀತಿಗೆ ಒಳಗಾಗಿದ್ದರು. ನಾವು ಯಾವಾಗಲೂ ಯುದ್ಧದ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ನಮಗೇ ಈ ಅಪಾಯ ಎದುರಾಗುತ್ತದೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ ಎಂದು ಲಕ್ಷ್ಮೀ ದೇವಿ ಹೇಳಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...